Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪಂಡಿತರ ಕುರಿತು ಭಾಗ್ವತ್ ಹೇಳಿಕೆ ವಿವಾದದ...

ಪಂಡಿತರ ಕುರಿತು ಭಾಗ್ವತ್ ಹೇಳಿಕೆ ವಿವಾದದ ನಡುವೆ ಜಾತಿ ವ್ಯವಸ್ಥೆಯನ್ನು ಸಮರ್ಥಿಸಿದ ಪುರಿ ಶಂಕರಾಚಾರ್ಯ

13 Feb 2023 8:35 PM IST
share
ಪಂಡಿತರ ಕುರಿತು ಭಾಗ್ವತ್ ಹೇಳಿಕೆ ವಿವಾದದ ನಡುವೆ ಜಾತಿ ವ್ಯವಸ್ಥೆಯನ್ನು ಸಮರ್ಥಿಸಿದ ಪುರಿ ಶಂಕರಾಚಾರ್ಯ

ಹೊಸದಿಲ್ಲಿ,ಫೆ.13: ಜಾತಿ ವ್ಯವಸ್ಥೆಯನ್ನು ಪಂಡಿತರು ಸೃಷ್ಟಿಸಿದ್ದರು ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರ ಹೇಳಿಕೆಯು ಜಾತಿ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳಲು ಹಿಂದು ಧಾರ್ಮಿಕ ಮುಖಂಡರನ್ನು ಪ್ರೇರೇಪಿಸಿದೆ‌ ಎಂದು ವರದಿಯಾಗಿದೆ.

ಇತ್ತೀಚಿಗೆ ಭಕ್ತಿ ಕವಿ ಸಂತ ರವಿದಾಸರ ಜನ್ಮದಿನದ ಅಂಗವಾಗಿ ಮುಂಬೈನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂದರ್ಭ ಭಾಗ್ವತ್,ಜಾತಿ ವಿಭಜನೆಯ ವ್ಯವಸ್ಥೆಯನ್ನು ಪಂಡಿತರು ಸೃಷ್ಟಿಸಿದ್ದರು ಎಂದು ಹೇಳುವ ಮೂಲಕ ವಿವಾದವೊಂದನ್ನು ಸೃಷ್ಟಿಸಿದ್ದರು. ತುಳಸಿದಾಸರ ರಾಮಚರಿತ ಮಾನಸವು ಜಾತಿವಾದಿ ಪಠ್ಯವಾಗಿದೆ ಎಂದು ಹೇಳುವ ಮೂಲಕ ಎಫ್‌ಐಆರ್‌ನ್ನು ಮೈಮೇಲೆದುಕೊಂಡಿರುವ ಸಮಾಜವಾದಿ ಪಕ್ಷದ ಸ್ವಾಮಿ ಪ್ರಸಾದ್ ಮೌರ್ಯ ಅವರು ಭಾಗ್ವತ್ ಹೇಳಿಕೆಯನ್ನು ಅನುಮೋದಿಸಿದ್ದರು.

ಭಾಗ್ವತ್ ಹೇಳಿಕೆಯಿಂದಾಗಿ ಪೇಚಿಗೆ ಸಿಲುಕಿದ್ದ ಆರೆಸ್ಸೆಸ್ ನಂತರ ತನ್ನ ಮುಖ್ಯಸ್ಥರ ಮಾತು ಪಂಡಿತರನ್ನು ( ವಿದ್ವಾಂಸರನ್ನು) ಉಲ್ಲೇಖಿಸಿತ್ತೇ ಹೊರತು ಮೇಲ್ಜಾತಿಯ ಹಿಂದು (ಪಂಡಿತ ಸಮುದಾಯ)ಗಳನ್ನು ಉದ್ದೇಶಿಸಿರಲಿಲ್ಲ ಎಂದು ಸಮಜಾಯಿಷಿ ನೀಡಿತ್ತು.

ಭಾಗವತ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪುರಿ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿಯವರು ಜಾತಿ ವ್ಯವಸ್ಥೆಯನ್ನು ಸಮರ್ಥಿಸಿಕೊಂಡಿದ್ದಾರೆ ಮತ್ತು ಆರೆಸ್ಸೆಸ್ ಮುಖ್ಯಸ್ಥರನ್ನು ಟೀಕಿಸಿದ್ದಾರೆ.

‘ಮೊದಲ ಬ್ರಾಹ್ಮಣನ ಹೆಸರು ಬ್ರಹ್ಮಾಜಿ. ನೀವು ಧರ್ಮಗ್ರಂಥಗಳನ್ನು ಅಧ್ಯಯನ ಮಾಡಬೇಕು. ವಿಶ್ವದಲ್ಲಿಯ ಎಲ್ಲ ಜ್ಞಾನಗಳನ್ನು ಮತ್ತು ಕಲೆಗಳನ್ನು ಬ್ರಾಹ್ಮಣರು ಮಾತ್ರ ವಿವರಿಸಿದ್ದಾರೆ. ಶಿಕ್ಷಣ,ರಕ್ಷಣೆ ಮತ್ತು ಇತರ ಸೇವೆಗಳು ಯಾವಾಗಲೂ ಸಮತೋಲನದಲ್ಲಿರಬೇಕು. ನಾವು ಸನಾತನ ವ್ಯವಸ್ಥೆಯನ್ನು ಒಪ್ಪಿಕೊಳ್ಳದಿದ್ದರೆ ಆಗ ಅಲ್ಲಿ ಯಾವ ವ್ಯವಸ್ಥೆಯಿರಬೇಕು ’ಎಂದು ಸರಸ್ವತಿ ಪ್ರಶ್ನಿಸಿದರು.

ಆರೆಸ್ಸೆಸ್‌ಗೆ ಸ್ವಂತ ಜ್ಞಾನವಿಲ್ಲ ಎಂದ ಅವರು,‘ಜಾತಿ ವ್ಯವಸ್ಥೆಯನ್ನು ಪಂಡಿತರು ಸೃಷ್ಟಿಸಿದ್ದಾರೆ,ಮೂರ್ಖರಲ್ಲ. ಇಂದಿಗೂ ವಿಶ್ವದಲ್ಲಿಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಜನರು ಭಾರತದಲ್ಲಿಯ ಬ್ರಾಹ್ಮಣರ ಬಳಿಗೆ ಬರುತ್ತಾರೆ. ನಮ್ಮ ಬಳಿಗೆ ಬಂದಿರುವುದು ವಿಶ್ವಸಂಸ್ಥೆಯ ಎಲ್ಲ ಸಿಕ್ಕುಗಳನ್ನು ಬಿಡಿಸಿದೆ ’ಎಂದು ಸುದ್ದಿಗಾರರಿಗೆ ತಿಳಿಸಿದರು.

ಸನಾತನ ಸಮಾಜ ರಚನೆಯ ಅನುಪಸ್ಥಿತಿಯಲ್ಲಿ ಅಮೆರಿಕ ಮತ್ತು ಫ್ರಾನ್ಸ್‌ನಂತಹ ಪಾಶ್ಚಿಮಾತ್ಯ ದೇಶಗಳಲ್ಲಿ ಪರ್ಯಾಯ ಜಾತಿ ಶ್ರೇಣಿಯನ್ನು ಸೃಷ್ಟಿಸುವ ಅಗತ್ಯವಿದೆ ಎಂದೂ ಅವರು ಹೇಳಿದರು.

ಭಾಗ್ವತ್ ಹೇಳಿಕೆಗಳ ಕುರಿತು ಟೀಕೆಗಳು ಹೆಚ್ಚಿದಾಗ ಹಾನಿ ನಿಯಂತ್ರಣಕ್ಕೆ ಮುಂದಾಗಿದ್ದ ಆರೆಸ್ಸೆಸ್,ಮಾಧ್ಯಮಗಳು ಭಾಗವತ ಹೇಳಿಕೆಗಳನ್ನು ತಪ್ಪಾಗಿ ಉಲ್ಲೇಖಿಸಿವೆ. ಅವರು ‘ಪಂಡಿತರು ’ಎಂದು ಹೇಳಿದಾಗ ವಿದ್ವಾಂಸರನ್ನು ಉಲ್ಲೇಖಿಸಿದ್ದರೇ ಹೊರತು ಬ್ರಾಹ್ಮಣರನ್ನಲ್ಲ ಎಂದು ಸ್ಪಷ್ಟೀಕರಣವನ್ನು ನೀಡಿತ್ತು.

ಭಾಗ್ವತ್‌ ರ ಹೇಳಿಕೆಗಳು ಮತ್ತು ನಂತರದ ಆರೆಸ್ಸೆಸ್ ಸ್ಪಷ್ಟೀಕರಣಕ್ಕೆ ಪ್ರತಿಕ್ರಿಯಿಸಿದ ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು,ಭಾಗವತ ಇತ್ತೀಚಿಗೆ ‘ಅತಿಯಾದ ಬುದ್ಧಿವಂತಿಕೆಯನ್ನು ಗಳಿಸಿದ್ದಾರೆ ’ಎಂದು ವ್ಯಂಗ್ಯವಾಡಿದರು.

‘ನೀವು ಸಂಶೋಧನೆಯನ್ನು ಮಾಡಿದ್ದೀರಾ? ಶ್ರೀಕೃಷ್ಣನು ಚಾತುರ್ವರ್ಣಗಳನ್ನು ಸೃಷ್ಟಿಸಿದ್ದ ಎನ್ನುವುದನ್ನು ನಾವು ಭಗವದ್ಗೀತೆಯಲ್ಲಿ ಓದಿದ್ದೇವೆ. ಜಾತಿ ವ್ಯವಸ್ಥೆಯನ್ನು ದೇವರು ಸೃಷ್ಟಿಸಿರಲಿಲ್ಲ,ಅದನ್ನು ಪಂಡಿತರು ಮಾಡಿದ್ದರು ಎಂದು ಭಾಗ್ವತ್ ಹೇಳಿದ್ದಾರೆ.

ಪಂಡಿತರೆಂದರೆ ವಿದ್ವಾಂಸರು ಎಂದರ್ಥ, ಬ್ರಾಹ್ಮಣರೆಂದಲ್ಲ ಎಂದು ನಂತರ ಅವರು ಸಮಜಾಯಿಷಿ ನೀಡಿದ್ದಾರೆ. ವಿದ್ವಾಂಸರು ಏನಾದರೂ ಹೇಳಿದ್ದರೆ ನೀವೇಕೆ ಅದನ್ನು ನಿರಾಕರಿಸುತ್ತೀರಿ ’ ಎಂದು ಅವರು ಪ್ರಶ್ನಿಸಿದರು.

ತಮ್ಮ ಮುಸ್ಲಿಮ್ ವಿರೋಧಿ ಹೇಳಿಕೆಗಳಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರುವ ದಾಸ್ನಾ ದೇವಸ್ಥಾನದ ಮಹಂತ ಯತಿ ನರಸಿಂಹಾನಂದ ಮತ್ತು ತಪಸ್ವಿ ಛಾವನಿಯ ಮಹಂತ ಪರಮಹಂಸ ದಾಸರಂತಹ ಹಿಂದುತ್ವ ನಾಯಕರೂ ಬ್ರಾಹ್ಮಣ ವಿರೋಧಿ ಹೇಳಿಕೆಗಳಿಗಾಗಿ ಭಾಗ್ವತ್ ವಿರುದ್ಧ ದಾಳಿ ನಡೆಸಿದ್ದಾರೆ. 'ಆಗೊಮ್ಮೆ ಈಗೊಮ್ಮೆ ಕೆಲವು ದೇಶವಿರೋಧಿ ಶಕ್ತಿಗಳು ಹಿಂದುಗಳ ನಡುವೆ ಒಡಕನ್ನು ಹುಟ್ಟಿಸಲು ಪಿತೂರಿಗಳನ್ನು ನಡೆಸುತ್ತಿವೆ,ಆದರೆ ಕೆಲವು ಹಿಂದುಗಳಿಗೆ ಅವರ ಕುತಂತ್ರಗಳು ಅರ್ಥವಾಗುವುದಿಲ್ಲ' ಎಂದು ಪರಮಹಂಸ ದಾಸ ಟಿವಿ ಸಂದರ್ಶನವೊಂದರಲ್ಲಿ ಕುಟುಕಿದ್ದರು.

ಇದನ್ನು ಓದಿ:  ಕಳೆದ 5 ವರ್ಷಗಳಲ್ಲಿ ಗುಜರಾತ್‌ನಲ್ಲಿ ಅತ್ಯಧಿಕ ಪೊಲೀಸ್ ಕಸ್ಟಡಿ ಸಾವು: ಸಂಸತ್ತಿಗೆ ತಿಳಿಸಿದ ಕೇಂದ್ರ ಸರಕಾರ

share
Next Story
X