'ಮಿರ್ಝಾಪುರ್' ಖ್ಯಾತಿಯ ನಟ ಶಹನವಾಝ್ ಪ್ರಧಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕುಸಿದು ಬಿದ್ದು ಮೃತ್ಯು
ಮುಂಬೈ: 'ಮಿರ್ಝಾಪುರ್’ ಹಾಗೂ 'ರಯೀಸ್' ಚಿತ್ರದ ನಟನೆಯಿಂದ ಚಿರಪರಿಚಿತರಾಗಿದ್ದ ಶಹನವಾಝ್ ಪ್ರಧಾನ್ (Shahnawaz Pradhan) ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ನಟ ಯಶ್ಪಾಲ್ ಶರ್ಮಾ ಹೇಳಿದ್ದಾರೆ.
ಶುಕ್ರವಾರ ಸಂಜೆ ಮುಂಬೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 56 ವರ್ಷ ವಯಸ್ಸಿನ ಶಹನವಾಝ್ ಪ್ರಧಾನ್ ರಿಗೆ ತೀವ್ರ ಎದೆನೋವು, ಪ್ರಜ್ಞಾಹೀನತೆ ಕಾಣಿಸಿಕೊಂಡಿದ್ದು ತಕ್ಷಣವೇ ಅವರನ್ನು ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರಿಗೆ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯಶ್ಪಾಲ್ ಶರ್ಮಾ ಅವರು ಘಟನೆಯ ವಿವರಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
"ಇಂದು ನಾನು ಮುಂಬೈನಲ್ಲಿ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದೇನೆ ... ಎಲ್ಲವೂ ಅದ್ಭುತವಾಗಿತ್ತು ... ನೂರಾರು ಕಲಾವಿದರು ಹಾಜರಿದ್ದರು. ಆದರೆ ಪ್ರಶಸ್ತಿ ಸ್ವೀಕರಿಸಿದ ಸ್ವಲ್ಪ ಸಮಯದ ನಂತರ ನಮ್ಮ ಪ್ರೀತಿಯ ಕಲಾವಿದ ಶಹನವಾಝ್ ರಿಗೆ ಹೃದಯಾಘಾತವಾಗಿದೆ. ಶಹನವಾಝ್ ರನ್ನು ಹತ್ತಿರದ ಕೋಕಿಲಾಬೆನ್ ಆಸ್ಪತ್ರೆಗೆ ಕರೆದೊಯ್ದರೂ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ,.. ಅವರ ಆತ್ಮಕ್ಕೆ ಶಾಂತಿ ಹಾಗೂ ಕುಟುಂಬಕ್ಕೆ ಧೈರ್ಯ ಸಿಗಲಿ " ಎಂದು ಯಶ್ಪಾಲ್ ಶರ್ಮಾ ಬರೆದಿದ್ದಾರೆ.
ಶನವಾಝ್ ಪ್ರಧಾನ್ ಅವರು MS ಧೋನಿ: ದಿ ಅನ್ಟೋಲ್ಡ್ ಸ್ಟೋರಿ, ಖುದಾ ಹಾಫಿಝ್, ರಯೀಸ್ ಹಾಗೂ ಫ್ಯಾಂಟಮ್ ಚಿತ್ರಗಳಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದಾರೆ. ವೆಬ್ ಸರಣಿ ದಿ ಫ್ಯಾಮಿಲಿ ಮ್ಯಾನ್ ಹಾಗೂ ಹೋಸ್ಟೇಜಸ್ ನಟಿಸಿದ್ದರು.
ಪ್ರಧಾನ ವಿಡಿಯೋ ಸರಣಿ 'ಮಿರ್ಝಾಪುರ್'ದಲ್ಲಿ ಪ್ರಧಾನ್ ಅವರೊಂದಿಗೆ ಕೆಲಸ ಮಾಡಿದ ರಾಜೇಶ್ ತೈಲಂಗ್ ಅವರು ಟ್ವಿಟರ್ ಪೋಸ್ಟ್ನಲ್ಲಿ ನಟನಿಗೆ ಗೌರವ ಸಲ್ಲಿಸಿದ್ದಾರೆ.