ವಿಶ್ವದಾದ್ಯಂತ 1000 ಕೋಟಿ ರೂ. ಗಳಿಕೆ ದಾಟಿದ ಶಾರೂಖ್ ಖಾನ್ ನಟನೆಯ ಪಠಾಣ್ ಸಿನಿಮಾ
ಗಳಿಕೆಯಲ್ಲಿ ಮುಂದಿರುವ ನಾಲ್ಕು ಸಿನಿಮಾಗಳು ಯಾವುದು ಗೊತ್ತೇ?
ಹೊಸದಿಲ್ಲಿ: ದೇಶದಾದ್ಯಂತ ಬಿಡುಗಡೆಗೂ ಮುನ್ನ ಹಲವಾರು ವಿಚಾರದಲ್ಲಿ ಸುದ್ದಿಯಾಗಿದ್ದು, ಬಲಪಂಥೀಯರಿಂದ ಬಹಿಷ್ಕಾರಕ್ಕೊಳಪಟ್ಟ ಶಾರೂಖ್ ಖಾನ್ ನಟನೆಯ ಪಠಾಣ್ ಚಿತ್ರವು ಇದೀಗ 1000ಕೋಟಿ ರೂ. ಗಳಿಕೆಯನ್ನು ದಾಟಿದೆ ಎಂದು ತಿಳಿದು ಬಂದಿದೆ. ವಿಶ್ವದಾದ್ಯಂತ ತೆರೆ ಕಂಡಿದ್ದ ಈ ಸಿನಿಮಾವು ಈ ದಾಖಲೆಯನ್ನು ನಿರ್ಮಿಸಿದೆ.
ಪಠಾಣ್ ಸಿನಿಮಾದ ಮೇಲಿನ ಸ್ಥಾನದಲ್ಲಿರುವ ಚಲನಚಿತ್ರಗಳೆಂದರೆ - ದಂಗಲ್ (ಜಾಗತಿಕವಾಗಿ ರೂ. 1914 ಕೋಟಿಗಳ ಸಂಗ್ರಹ), ಬಾಹುಬಲಿ 2: ದಿ ಕನ್ಕ್ಲೂಷನ್ (ವಿಶ್ವಾದ್ಯಂತ ರೂ. 1747 ಕೋಟಿ) ಕೆಜಿಎಫ್ ಚಾಪ್ಟರ್- 2 ( ರೂ. 1188 ಕೋಟಿ ಸಂಗ್ರಹ) ಮತ್ತು SS ರಾಜಮೌಳಿಯವರ RRR ಜಗತ್ತಿನಾದ್ಯಂತ 1174 ಕೋಟಿ ರೂ. ಗಳಿಸಿದೆ.
"ನನ್ನನ್ನು ಪ್ರೀತಿಸುವ ಲಕ್ಷಾಂತರ ಮತ್ತು ಕೋಟ್ಯಂತರ ಜನರನ್ನು ನಾನು ಹೊಂದಿದ್ದೇನೆ ಎಂಬ ವಿಚಾರದಲ್ಲಿ ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ. ನನಗೆ ದುಃಖವಾದಾಗ, ನಾನು ನನ್ನ ಬಾಲ್ಕನಿಗೆ ಹೋಗುತ್ತೇನೆ. ನನಗೆ ಸಂತೋಷವಾದಾಗ ನಾನು ನನ್ನ ಬಾಲ್ಕನಿಗೆ ಹೋಗುತ್ತೇನೆ. ದೇವರು ನನಗೆ ತುಂಬಾ ಆಶೀರ್ವದಿಸಿದ್ದಾನೆ, ಅವನು ನನಗೆ ಶಾಶ್ವತ ಬಾಲ್ಕನಿ ಟಿಕೆಟ್ ಕೊಟ್ಟಿದ್ದಾನೆ," ಎಂದು ನಟ ಹೇಳಿದರು.