ಸರಕಾರವನ್ನು ಟೀಕಿಸಿ ಪೋಸ್ಟ್ ಮಾಡಿದ ಶಿಕ್ಷಕ ಅಮಾನತು!
ಜಮ್ಮು: ಸರಕಾರವನ್ನು ಟೀಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಆರೋಪದಲ್ಲಿ ಜಮ್ಮು ಮತ್ತು ಕಾಶ್ಮೀರದ ಸರಕಾರಿ ಶಾಲೆ ಶಿಕ್ಷಕರೊಬ್ಬರನ್ನು ಅಮಾನತು ಮಾಡಲಾಗಿದೆ.
ರಾಮ್ಬನ್ ಜಿಲ್ಲೆಯ ಶಾಲಾ ಶಿಕ್ಷಕ ಜೋಗಿಂದರ್ ಸಿಂಗ್ ಅಮಾನತುಗೊಂಡ ಶಿಕ್ಷಕ. ಕೇಂದ್ರಾಡಳಿತ ಪ್ರದೇಶದ ನೀತಿಗಳ ಬಗ್ಗೆ ಫೇಸ್ಬುಕ್ ಪೇಜ್ನಲ್ಲಿ ಟೀಕಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸರ್ಕಾರಿ ನೌಕರರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವಕ್ಕೆ ನಿರ್ಬಂಧ ಹೇರಿ ಸರಕಾರ ಆದೇಶಿಸಿದ ಬೆನ್ನಲ್ಲೇ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಸರ್ಕಾರಿ ನೀತಿಗಳನ್ನು ಟೀಕಿಸುವುದಕ್ಕೆ ಸಂಬಂಧಿಸಿದಂತೆ ಸರಕಾರ ನೀಡಿದ ನಿರ್ದೇಶನವನ್ನು ಪಾಲಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. ಸರ್ಕಾರಿ ನೀತಿಗಳನ್ನು ಜಾಲತಾಣಗಳಲ್ಲಿ ಟೀಕಿಸದಂತೆ ಎಲ್ಲ ಸರ್ಕಾರಿ ನೌಕರರಿಗೆ ಕಳೆದ ವಾರ ಮುಖ್ಯ ಕಾರ್ಯದರ್ಶಿ ಅರುಣ್ ಕುಮಾರ್ ಮೆಹ್ತಾ ಎಚ್ಚರಿಕೆ ನೀಡಿದ್ದರು.
Next Story