ಸ್ಕ್ರೂಡ್ರೈವರ್ ಬಳಸಿ ATM ಯಂತ್ರ ಕಳವುಗೈಯಲೆತ್ನಿಸಿದ ವ್ಯಕ್ತಿಯ ವೀಡಿಯೊ ವೈರಲ್
ನರಸಾಪುರ: ಹಲವು ಆಧುನಿಕ ರೀತಿಯ ಸೌಲಭ್ಯಗಳನ್ನು ಬಳಸಿ ಬ್ಯಾಂಕ್ ಎಟಿಎಂ ಕೊಳ್ಳೆಹೊಡೆದ ಅನೇಕ ಘಟನೆಗಳನ್ನು ನಾವು ಕೇಳಿದ್ದೇವೆ. ಆದರೆ, ಇಲ್ಲೋರ್ವ ಖದೀಮ ಸ್ಕ್ರೂಡ್ರೈವರ್ ಬಳಸಿ ಎಟಿಎಂ ಕೊಳ್ಳೆಹೊಡೆಯಲು ಪ್ರಯತ್ನಿಸಿದ ವೀಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಮುಖಕ್ಕೆ ಪ್ಲಾಸ್ಟಿಕ್ ಕವರ್ ಧರಿಸಿದ್ದ ವ್ಯಕ್ತಿ ಸ್ಕ್ರೂಡ್ರೈವರ್ ಬಳಸಿ ಎಟಿಎಂಅನ್ನು ಬಿಚ್ಚುತ್ತಿರುವ ವೇಳೆ ದಾರಿಹೋಕನೊಬ್ಬ ಈ ವೀಡಿಯೊ ರೆಕಾರ್ಡ್ ಮಾಡಿದ್ದಾನೆ ಎನ್ನಲಾಗಿದೆ. ತೆಲಂಗಾಣದಲ್ಲಿ ನರಸಾಪುರದಲ್ಲಿ ಈ ಘಟನೆ ನಡೆದಿದೆ. ಈ ವೀಡಿಯೊ ಸದ್ಯ ಸಾಮಾಜಿಕ ತಾಣ ಬಳಕೆದಾರರಲ್ಲಿ ಆಕ್ರೋಶಕ್ಕೆ ಬದಲು ಹಾಸ್ಯಕ್ಕೆ ಗುರಿಯಾಗಿದೆ.
మెదక్ - నర్సాపూర్ పట్టణంలో స్క్రూ డ్రైవర్తో యాక్సిస్ బ్యాంక్ ఏటీఎం చోరీ చేయబోయి దొరికిపోయిన దొంగ.#Medak #ATM #Telangana pic.twitter.com/5NtsLl6soy
— Telugu Scribe (@TeluguScribe) February 25, 2023
Next Story