ಲಿಯೊನೆಲ್ ಮೆಸ್ಸಿಯ ಪತ್ನಿ ಕುಟುಂಬಕ್ಕೆ ಸೇರಿದ ಸೂಪರ್ ಮಾರ್ಕೆಟ್ ನಲ್ಲಿ ಗುಂಡಿನ ದಾಳಿ, ಬೆದರಿಕೆ
ರೊಸಾರಿಯೊ( ಅರ್ಜೆಂಟೀನ): ಇಬ್ಬರು ದುಷ್ಮರ್ಮಿಗಳು ಏಳು ಬಾರಿ ಬ್ಯಾಲನ್ ಡಿ'ಓರ್ ವಿಜೇತ ಲಿಯೊನೆಲ್ ಮೆಸ್ಸಿ(Lionel Messi) ಅವರ ಪತ್ನಿಯ ಕುಟುಂಬಕ್ಕೆ ಸೇರಿದ ಮುಚ್ಚಿದ ಸೂಪರ್ ಮಾರ್ಕೆಟ್ನಲ್ಲಿ ರಾತ್ರಿಯ ವೇಳೆ ಗುಂಡು ಹಾರಿಸಿದ್ದಾರೆ. ಮೆಸ್ಸಿಯನ್ನು ಗುರಿಯಾಗಿಸಿಕೊಂಡು ಬೆದರಿಕೆಯ ಸಂದೇಶ ನೀಡಿದ್ದಾರೆ.
"ಮೆಸ್ಸಿ, ನಾವು ನಿನಗಾಗಿ ಕಾಯುತ್ತಿದ್ದೇವೆ. ಜಾವ್ಕಿನ್ ಒಬ್ಬ ನಾರ್ಕೊ, ಅವನು ನಿನ್ನನ್ನು ರಕ್ಷಿಸುವುದಿಲ್ಲ," ಎಂದು ಕೈಬರಹದ ಬೆದರಿಕೆ ಸಂದೇಶವನ್ನು ಬಿಟ್ಟುಹೋಗಿರುವ ದುಷ್ಕರ್ಮಿಗಳು ಗುರುವಾರ ಬೆಳಗ್ಗೆ ಸೂಪರ್ ಮಾರುಕಟ್ಟೆಯ ಮುಂಭಾಗಕ್ಕೆ 14 ಗುಂಡುಗಳನ್ನು ಹೊಡೆದಿದ್ದಾರೆ.
ಪಾಬ್ಲೊ ಜಾವ್ಕಿನ್ ಅವರು ಮೆಸ್ಸಿಯ ತವರು ರೊಸಾರಿಯೊದ ಮೇಯರ್ ಆಗಿದ್ದಾರೆ, ಬ್ಯೂನಸ್ ಐರಿಸ್ನಿಂದ ವಾಯುವ್ಯಕ್ಕೆ 320 ಕಿಲೋಮೀಟರ್ ದೂರದಲ್ಲಿ ಸೂಪರ್ ಮಾರ್ಕೆಟ್ ಇದೆ,
ಫುಟ್ಬಾಲ್ ಸೂಪರ್ಸ್ಟಾರ್ ಮೆಸ್ಸಿಯ ಪತ್ನಿ ಆಂಟೊನೆಲಾ ರೊಕುಝೊ ಅವರ ಕುಟುಂಬಕ್ಕೆ ಸೂಪರ್ಮಾರ್ಕೆಟ್ ಸೇರಿದೆ ಎಂದು ಜಾವ್ಕಿನ್ ದೃಢಪಡಿಸಿದರು. ‘’ನಗರದಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸುವುದು" ದಾಳಿಯ ಗುರಿಯಾಗಿದೆ ಎಂದು ಹೇಳಿದರು.
ಇಬ್ಬರು ವ್ಯಕ್ತಿಗಳು ಬೈಕ್ನಲ್ಲಿ ಬಂದಿರುವುದನ್ನು ಪ್ರತ್ಯಕ್ಷದರ್ಶಿಗಳು ದೃಢಪಡಿಸಿದರು. ಅವರಲ್ಲಿ ಒಬ್ಬರು ಇಳಿದು ಗುಂಡು ಹಾರಿಸಿ, ನೋಟು ಬೀಳಿಸಿದ. ಬಳಿಕ ಇಬ್ಬರೂ ಓಡಿಹೋಗಿದ್ದಾರೆ..