Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವೇದಗಳಲ್ಲಿ ದನ ಕೊಂದವರು ನರಕದಲ್ಲಿ...

ವೇದಗಳಲ್ಲಿ ದನ ಕೊಂದವರು ನರಕದಲ್ಲಿ ಬೇಯುತ್ತಾರೆಂದು ಹೇಳಿದೆ, ಸರಕಾರ ಗೋಹತ್ಯೆ ನಿಷೇಧಿಸಬೇಕು: ಅಲಹಾಬಾದ್‌ ಹೈಕೋರ್ಟ್‌

"ಗೋವನ್ನು ರಾಷ್ಟ್ರೀಯ ರಕ್ಷಿತ ಪ್ರಾಣಿ ಎಂದು ಘೋಷಿಸಬೇಕು"

4 March 2023 12:30 PM IST
share
ವೇದಗಳಲ್ಲಿ ದನ ಕೊಂದವರು ನರಕದಲ್ಲಿ ಬೇಯುತ್ತಾರೆಂದು ಹೇಳಿದೆ, ಸರಕಾರ ಗೋಹತ್ಯೆ ನಿಷೇಧಿಸಬೇಕು: ಅಲಹಾಬಾದ್‌ ಹೈಕೋರ್ಟ್‌
"ಗೋವನ್ನು ರಾಷ್ಟ್ರೀಯ ರಕ್ಷಿತ ಪ್ರಾಣಿ ಎಂದು ಘೋಷಿಸಬೇಕು"

ಅಲಹಾಬಾದ್: ಹಿಂದೂ ಧರ್ಮದಲ್ಲಿ ಗೋವುಗಳ ಪ್ರಾಮುಖ್ಯತೆ ಮತ್ತು ಗೋಹತ್ಯೆಯನ್ನು ನಿಲ್ಲಿಸುವ ಅಗತ್ಯವನ್ನು ಅಲಹಾಬಾದ್ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ದೇಶದಲ್ಲಿ ಗೋಹತ್ಯೆ ನಿಷೇಧಿಸಲು ಮತ್ತು ಅದನ್ನು 'ರಕ್ಷಿತ ರಾಷ್ಟ್ರ ಪ್ರಾಣಿ' ಎಂದು ಘೋಷಿಸಲು ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದೆ ಎಂದು livelaw ವರದಿ ಮಾಡಿದೆ.

"ಭಾರತವು ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಎಲ್ಲ ಧರ್ಮಗಳನ್ನು ಗೌರವಿಸಬೇಕು ಮತ್ತು ಹಿಂದೂ ಧರ್ಮದಲ್ಲೂ ನಾವು ಗೌರವವನ್ನು ಹೊಂದಿರಬೇಕು. ನಂಬಿಕೆಯ ಪ್ರಕಾರ ಗೋವು ದೈವಿಕ ಮತ್ತು ನೈಸರ್ಗಿಕ ಪ್ರಯೋಜನವನ್ನು ಪ್ರತಿನಿಧಿಸುತ್ತದೆ ಮತ್ತು ಆದ್ದರಿಂದ ಅದನ್ನು ರಕ್ಷಿಸಬೇಕು ಎಂದು ನ್ಯಾಯಮೂರ್ತಿ ಶಮೀಮ್ ಅಹ್ಮದ್ ಅವರ ಪೀಠವು ಅಭಿಪ್ರಾಯಪಟ್ಟಿದೆ. 

ಹಸುವಿನ ಆರಾಧನೆಯ ಮೂಲವು ವೇದಗಳ ಅವಧಿಯದ್ದಾಗಿದೆ. (2 ನೇ-ಸಹಸ್ರಮಾನ 7 ನೇ ಶತಮಾನ BCE) ಯಾರಾದರೂ ಹಸುಗಳನ್ನು ಕೊಲ್ಲುವ ಅಥವಾ ಇತರರನ್ನು ಕೊಲ್ಲಲು ಅನುಮತಿಸುವವರನ್ನು ಅವರ ದೇಹದ ಮೇಲೆ ಇರುವ ಒಂದೊಂದು ಕೂದಲಿನ ಲೆಕ್ಕದಲ್ಲಿನ ವರ್ಷಗಳ ಕಾಲ ನರಕದಲ್ಲಿ ಕಾಲಕಾಲ ಬೇಯುವವರಂತೆ ವೇದಗಳಲ್ಲಿ ಪರಿಗಣಿಸಲಾಗುತ್ತದೆ ಎಂದು ಪೀಠವು ಹೇಳಿದೆ.

ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲು ನಿರಾಕರಿಸಿದಾಗ ಈ ಅವಲೋಕನಗಳನ್ನು ನ್ಯಾಯಾಲಯವು ಮಾಡಿತು. ಅಬ್ದುಲ್ ಖಾಲಿಕ್ ಎಂಬಾತ ಗೋಹತ್ಯೆ ಮತ್ತು ಗೋವನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ಆರೋಪ ಎದುರಿಸುತ್ತಿದ್ದ.

ಹಿಂದೂ ಧರ್ಮದ ನಂಬಿಕೆಗಳನ್ನು ಉಲ್ಲೇಖಿಸಿದ ನ್ಯಾಯಾಲಯವು, "ಬ್ರಹ್ಮನು ಒಂದೇ ಸಮಯದಲ್ಲಿ ಪುರೋಹಿತರು ಮತ್ತು ಹಸುಗಳಿಗೆ ಜೀವವನ್ನು ನೀಡಿದನು. ಆದ್ದರಿಂದ ಪುರೋಹಿತರು ಧಾರ್ಮಿಕ ಗ್ರಂಥಗಳನ್ನು ಪಠಿಸಬಹುದು ಮತ್ತು ಹಸುಗಳು ಯಾಗ ಯಜ್ಞಾದಿಗಳಿಗೆ ಮತ್ತು ಧಾರ್ಮಿಕ ಕಾರ್ಯಗಳಿಗೆ ತುಪ್ಪವನ್ನು ನೀಡುತ್ತದೆ" ಎಂದು ಅವರು ಹೇಳಿದರು. ಸಮುದ್ರಮಂಥನದ ಸಮಯದಲ್ಲಿ ಅಥವಾ ದೇವರುಗಳು ಮತ್ತು ರಾಕ್ಷಸರು ಸಮುದ್ರದ ಮಹಾ ಮಂಥನದ ಸಮಯದಲ್ಲಿ ಕ್ಷೀರಸಾಗರದಿಂದ ಹಸುಗಳು ಹೊರಹೊಮ್ಮಿದವು ಮತ್ತು ಅದನ್ನು ಏಳು ಋಷಿಗಳಿಗೆ ಮತ್ತು ಕಾಲಾನಂತರದಲ್ಲಿ ಪ್ರಸ್ತುತಪಡಿಸಲಾಯಿತು ಎಂದು ಪೀಠವು ಗಮನಿಸಿತು.

"ಹಸುವಿನ ಕಾಲುಗಳು ನಾಲ್ಕು ವೇದಗಳನ್ನು ಸಂಕೇತಿಸುತ್ತವೆ; ಅವಳ ಹಾಲಿನ ಮೂಲವು ನಾಲ್ಕು ಪುರುಷಾರ್ಥವಾಗಿದೆ (ಅಥವಾ ಉದ್ದೇಶಗಳು, ಅಂದರೆ ಧರ್ಮ ಅಥವಾ ಸದಾಚಾರ, ಅರ್ಥ ಅಥವಾ ಭೌತಿಕ ಸಂಪತ್ತು, ಕಾಮ ಅಥವಾ ಬಯಕೆ ಮತ್ತು ಮೋಕ್ಷ); ಅವಳ ಕೊಂಬುಗಳು ದೇವತೆಗಳನ್ನು ಸಂಕೇತಿಸುತ್ತವೆ, ಆಕೆಯು ಸೂರ್ಯ ಮತ್ತು ಚಂದ್ರರ ಮುಖವನ್ನು ಹೊಂದಿದ್ದಾಳೆ ಮತ್ತು ಅವಳ ಭುಜಗಳು ಅಗ್ನಿದೇವನನ್ನು ಸೂಚಿಸುತ್ತದೆ ಎಂದು ವೇದಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ನ್ಯಾಯಾಲಯ ಗಮನಿಸಿತು.

ಮಹಾಭಾರತವನ್ನು ಉಲ್ಲೇಖಿಸಿ ಬಳಿಕ ಹಸುವು ಮಾನವರಿಗೆ ಜೀವಿತಾವಧಿಯಲ್ಲಿ ಹಾಲನ್ನು ನೀಡುವ ಮೂಲಕ ಬಾಡಿಗೆ ತಾಯಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದ ನ್ಯಾಯಾಲಯ ಅವಳು ನಿಜವಾಗಿಯೂ ಜಗತ್ತಿಗೆ ತಾಯಿಯಾಗಿದ್ದಾಳೆ ಎಂದು ಹೇಳಿತು.

ಗೋವುಗಳ ದಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಮತ್ತು ಶ್ರೀರಾಮನಿಗೆ ಅನೇಕ ಗೋವುಗಳನ್ನು ಉಡುಗೊರೆಯಾಗಿ ನೀಡಲಾಯಿತು ಎಂದು ಪುರಾಣಗಳು ಉಲ್ಲೇಖಿಸಿದೆ ಎಂದು ನ್ಯಾಯಾಲಯವು ಗಮನಿಸಿದೆ.

ಈ ಅವಲೋಕನಗಳ ಹಿನ್ನೆಲೆಯಲ್ಲಿ, ಆರೋಪಿ ಮೊಹಮ್ಮದ್ ಸಲ್ಲಿಸಿದ ಸೆಕ್ಷನ್ 482 CrPC ಮನವಿಯನ್ನು ನ್ಯಾಯಾಲಯವು ವಜಾಗೊಳಿಸಿದೆ. ಉತ್ತರ ಪ್ರದೇಶ ಗೋಹತ್ಯೆ ತಡೆ ಕಾಯ್ದೆ, 1955 ರ ಸೆಕ್ಷನ್ 3/5/8 ರ ಅಡಿಯಲ್ಲಿ ಅಬ್ದುಲ್ ಖಾಲಿಕ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

share
Next Story
X