ಅಸ್ಸಾಂ: ಇನ್ನೊಂದು ಪ್ರಶ್ನೆಪತ್ರಿಕೆ ಸೋರಿಕೆ, ಎಲ್ಲ ಭಾಷಾ ವಿಷಯಗಳ ಪರೀಕ್ಷಾ ದಿನಾಂಕಗಳು ಮರುನಿಗದಿ
ಗುವಾಹಟಿ,ಮಾ.17: ಗುರುವಾರ ರಾಜ್ಯ ಶಿಕ್ಷಣ ಮಂಡಳಿಯ 10ನೇ ತರಗತಿ ಪರೀಕ್ಷೆಯ ಇನ್ನೊಂದು ಪ್ರಶ್ನೆಪತ್ರಿಕೆಯು ಸೋರಿಕೆಯಾದ ಹಿನ್ನೆಲೆಯಲ್ಲಿ ಅಸ್ಸಾಂ ಸರಕಾರವು ಇಂಗ್ಲಿಷ್ ಸೇರಿದಂತೆ ಎಲ್ಲ ಆಧುನಿಕ ಭಾರತೀಯ ಭಾಷಾ ವಿಷಯಗಳಲ್ಲಿ ಪರೀಕ್ಷೆ ದಿನಾಂಕಗಳನ್ನು ಮರುನಿಗದಿಗೊಳಿಸಿದೆ.
ಶನಿವಾರ ನಡೆಯಬೇಕಿದ್ದ ಅಸ್ಸಾಮಿ ಭಾಷೆಯ ಪ್ರಶ್ನೆಪತ್ರಿಕೆ ಗುರುವಾರ ಸೋರಿಕೆಯಾಗಿತ್ತು. ಸೋಮವಾರ ಇದೇ ತರಗತಿಯ ಸಾಮಾನ್ಯ ವಿಜ್ಞಾನ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು.
ಸಾಮಾನ್ಯ ವಿಜ್ಞಾನ ಪ್ರಶ್ನೆಪತ್ರಿಕೆಯ ಸೋರಿಕೆ ಬಳಿ ರಾಜ್ಯಾದ್ಯಂತ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸಿ ತನಿಖೆಗೆ ಆಗ್ರಹಿಸಿದ್ದವು. ಮಂಗಳವಾರ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದ ಪೊಲೀಸರು,22 ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದರು.
ಬಂಧಿತರಲ್ಲಿ ಗುವಾಹಟಿಯ ಸರಕಾರಿ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿ,ಓರ್ವ ಶಿಕ್ಷಕ ಮತ್ತು ನಾಲ್ಕನೇ ದರ್ಜೆಯ ಸಿಬ್ಬಂದಿ ಸೇರಿದ್ದಾರೆ.
Next Story