ಹೊಸದಿಲ್ಲಿ: ಜನನಿಬಿಡ ರಸ್ತೆಯ ಮಧ್ಯೆ ಯುವತಿಗೆ ಹಲ್ಲೆ ನಡೆಸಿ ಕ್ಯಾಬ್ ನೊಳಗೆ ತಳ್ಳಿದ ವ್ಯಕ್ತಿ; ವಿಡಿಯೋ ವೈರಲ್
ಹೊಸದಿಲ್ಲಿ: ವಾಯವ್ಯ ದಿಲ್ಲಿಯ ಮಂಗೋಲ್ಪುರಿಯಲ್ಲಿ ಪುರುಷನೊಬ್ಬ ಯುವತಿ ಮೇಲೆ ಹಲ್ಲೆ ನಡೆಸಿ ಕ್ಯಾಬ್ ನೊಳಗೆ ಬಲವಂತವಾಗಿ ತಳ್ಳುತ್ತಿರುವ, ಆತನ ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ಇದನ್ನು ಅಸಹಾಯಕನಂತೆ ನೋಡುತ್ತಿರುವ 17 ಸೆಕೆಂಡ್ ಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ನೆಟ್ಟಿಗರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಬರಿಗಾಲಿನಲ್ಲಿದ್ದ ವ್ಯಕ್ತಿ, ಜನನಿಬಿಡ ರಸ್ತೆಯ ಮಧ್ಯದಲ್ಲಿ ಮಹಿಳೆಯನ್ನು ಥಳಿಸುವುದು ಕಂಡುಬಂದಿದೆ. ಥಳಿಸಿದ ನಂತರ ಬಲವಂತವಾಗಿ ಕ್ಯಾಬ್ಗೆ ತಳ್ಳುವುದು ಹಾಗೂ ಕ್ಯಾಬ್ನೊಳಗೆ ಪದೇ ಪದೇ ಗುದ್ದುವುದು, ಇನ್ನೊಬ್ಬ ವ್ಯಕ್ತಿ ಇದನ್ನು ನೋಡಿ ಸುಮ್ಮನೆ ಕುಳಿತಿರುವುದು ಕಂಡುಬಂದಿದೆ. ನಂತರ ಇಬ್ಬರೂ ಕ್ಯಾಬ್ನೊಳಗೆ ಪ್ರವೇಶಿಸಿ ಮುಂದೆ ಸಾಗಿದರು. ಕ್ಯಾಬ್ ಡ್ರೈವರ್ ಸೇರಿದಂತೆ ಯಾರೂ ಕೂಡ ಮಹಿಳೆಗೆ ಸಹಾಯ ಮಾಡಲು ಪ್ರಯತ್ನಿಸುತ್ತಿರುವುದು ಕಂಡುಬಂದಿಲ್ಲ.
ಪೊಲೀಸರು ವೀಡಿಯೊವನ್ನು ಗಮನದಲ್ಲಿಟ್ಟುಕೊಂಡು ಶನಿವಾರ ರಾತ್ರಿ ತನಿಖೆ ಆರಂಭಿಸಿದ್ದಾರೆ ಎಂದು ದಿಲ್ಲಿ ಪೊಲೀಸ್ ಹೊರ ಜಿಲ್ಲೆಯ ಡೆಪ್ಯುಟಿ ಕಮಿಷನರ್ ತಿಳಿಸಿದ್ದಾರೆ.
ಹರ್ಯಾಣದ ಗುರುಗ್ರಾಮ್ನಲ್ಲಿರುವ ಕ್ಯಾಬ್ನ ಮಾಲಿಕರ ನೋಂದಾಯಿತ ವಿಳಾಸಕ್ಕೆ ಪೊಲೀಸ್ ತಂಡವನ್ನು ಕಳುಹಿಸಲಾಗಿದೆ.
ಶನಿವಾರ ರಾತ್ರಿ 11:30 ಕ್ಕೆ ಗುರುಗ್ರಾಮ್ನ IFFCO ಚೌಕ್ನ ಸುತ್ತಲೂ ಕ್ಯಾಬ್ ಕೊನೆಯದಾಗಿ ಪತ್ತೆಯಾಗಿದೆ ಎಂದು ಪೊಲೀಸರು ಪರೀಕ್ಷಿಸಿದ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ.
ದಿಲ್ಲಿ ಪೊಲೀಸರು ಕ್ಯಾಬ್ ಹಾಗೂ ಚಾಲಕನನ್ನು ಪತ್ತೆಹಚ್ಚಿದ್ದಾರೆ ಮತ್ತು ಮೂವರು ಪ್ರಯಾಣಿಕರು ಎಲ್ಲಿ ಇಳಿದಿದ್ದಾರೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ರೋಹಿಣಿಯಿಂದ ವಿಕಾಸಪುರಿಗೆ ಉಬರ್ ಆಪ್ ಮೂಲಕ ವಾಹನವನ್ನು ಬುಕ್ ಮಾಡಲಾಗಿತ್ತು. ಮಾರ್ಗ ಮಧ್ಯೆ ಇಬ್ಬರ ನಡುವೆ ವಾಗ್ವಾದ ನಡೆದು ಅದು ದೈಹಿಕ ಹಲ್ಲೆಗೆ ಕಾರಣವಾಯಿತು ಎಂದು ತಿಳಿದುಬಂದಿದೆ.
Man in Delhi forces a woman into a cab, near Mangolpuri flyover. The vehicle and the driver have been traced.
— Vani Mehrotra (@vani_mehrotra) March 19, 2023
Two boys & a girl had booked Uber from Rohini to Vikaspuri. The girl wanted to leave following an argument, after which the boy pushes her back into the cab. #Delhi pic.twitter.com/s2rkfgnaqh