ಲಿಂಕ್ ಬಳಸಿ ಪ್ಯಾನ್ ಕಾರ್ಡ್ ಜೋಡಿಸದಿದ್ದರೆ SBI ಖಾತೆ ಸ್ಥಗಿತವಾಗುತ್ತದೆಯೆ?: ಪಿಐಬಿ ಫ್ಯಾಕ್ಟ್ ಚೆಕ್ ಹೇಳಿದ್ದೇನು?
ಹೊಸದಿಲ್ಲಿ: ತಾನು ಒದಗಿಸಿರುವ ಕೊಂಡಿಯನ್ನು ಬಳಸಿ ಎಸ್ಬಿಐ ಖಾತೆದಾರರು ತಮ್ಮ ಪ್ಯಾನ್ ಕಾರ್ಡ್ ವಿವರವನ್ನು ಜೋಡಿಸಬೇಕು ಎಂಬ ಎಸ್ಎಂಎಸ್ ವೈರಲ್ ಆಗಿದ್ದು, ಈ ನಕಲಿ ಕೊಂಡಿಗೆ ಬಲಿಯಾಗದಂತೆ ಎಸ್ಬಿಐ ಗ್ರಾಹಕರಿಗೆ ಸರ್ಕಾರಿ ಪತ್ರಿಕಾ ಮಾಹಿತಿ ದಳ (ಪಿಐಬಿ) ಎಚ್ಚರಿಕೆ ನೀಡಿದೆ.
ಸದ್ಯ ವೈರಲ್ ಆಗಿರುವ ಎಸ್ಎಂಎಸ್ನಲ್ಲಿ, "ಪ್ರಿಯ ಗ್ರಾಹಕರೆ, ನಿಮ್ಮ ಎಸ್ಬಿಐ ಖಾತೆಯನ್ನು ಇಂದು ಸ್ಥಗಿತಗೊಳಿಸಲಾಗಿದೆ. ಇಂದೇ ಸಂಪರ್ಕಿಸಿ, ನಿಮ್ಮ ಪ್ಯಾನ್ ಕಾರ್ಡ್ ವಿವರಗಳನ್ನು ಜೋಡಿಸಿ" ಎಂದು ಹೇಳಿ ಅದಕ್ಕಾಗಿ ಕೊಂಡಿಯೊಂದನ್ನು ನೀಡಲಾಗಿದೆ. ಈ ಕುರಿತು ಮುನ್ನೆಚ್ಚರಿಕೆ ನೀಡಿರುವ ಪತ್ರಿಕಾ ಮಾಹಿತಿ ದಳವು, ಇಂತಹ ಇಮೇಲ್ ಅಥವಾ ಎಸ್ಎಂಎಸ್ಗಳಿಗೆ ಸ್ಪಂದಿಸದಂತೆ ಜನರಿಗೆ ಸೂಚಿಸಿದೆ ಎಂದು latestly.com ವರದಿ ಮಾಡಿದೆ.
Next Story