ಸಂಸತ್ ಸ್ಥಾನದಿಂದ ಅನರ್ಹಗೊಂಡ ರಾಹುಲ್ ಗಾಂಧಿಗೆ ಸರ್ಕಾರಿ ಬಂಗಲೆ ತೆರವುಗೊಳಿಸಲು ನೋಟಿಸ್
ಹೊಸದಿಲ್ಲಿ: ಸಂಸತ್ ಸ್ಥಾನದಿಂದ ಅನರ್ಹಗೊಂಡಿರುವ ರಾಹುಲ್ ಗಾಂಧಿ ಅವರಿಗೆ ತಮ್ಮ ಸರ್ಕಾರಿ ಬಂಗಲೆಯನ್ನು ಒಂದು ತಿಂಗಳೊಳಗೆ ತೊರೆಯುವಂತೆ ಲೋಕಸಭೆ ವಸತಿ ಸಮಿತಿಯು ನೋಟಿಸ್ ಜಾರಿಗೊಳಿಸಿದೆ.
2004 ರಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ರಾಹುಲ್ ಗಾಂಧಿಗೆ ತುಘಲಕ್ ಲೇನ್ ನಲ್ಲಿರುವ ಬಂಗಲೆಯನ್ನು ನೀಡಲಾಗಿತ್ತು.
ಸಂಸದೀಯ ಸ್ಥಾನ ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಬಂಗಲೆ ತೆರವುಗೊಳಿಸಲು ಸೂಚಿಸಿದ್ದು, ಎಪ್ರಿಲ್ 22 ರೊಳಗೆ ಬಂಗಲೆ ತೆರವುಗೊಳಿಸಲು ಕೇಳಲಾಗಿದೆ
Next Story