ಕೋರ್ಟ್ ಆದೇಶವಿದೆ ಎಂದು ಬುಲ್ಡೋಝರ್ ಎದುರು ವ್ಯಕ್ತಿಯೊಬ್ಬರು ಪ್ರತಿಭಟಿಸುವ ವಿಡಿಯೋ ವೈರಲ್: ಸ್ಪಷ್ಟೀಕರಣ ನೀಡಿದ BMC
-

Photo: Twitter/@shuja_2006
ಮುಂಬೈ: ಇಲ್ಲಿನ ಸಾಂತಾಕ್ರುಝ್ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಬುಲ್ಡೋಝರ್ ಮೂಲಕ ಅಂಗಡಿಗಳನ್ನು ನೆಲಸಮಗೊಳಿಸುವ ವಿಡಿಯೋ ವೈರಲ್ ಆಗಿದೆ. ತನ್ನಲ್ಲಿ ಕೋರ್ಟ್ ಆದೇಶ ಪ್ರತಿ ಇದೆ, ಕೆಡವಬೇಡಿ ಎಂದು ಹಿರಿಯ ನಾಗರಿಕರೊಬ್ಬರು ಅಧಿಕಾರಿಗಳಲ್ಲಿ ಹೇಳಿ, ಬುಲ್ಡೋಝರ್ ತಡೆಯಲು ಪ್ರಯತ್ನಿಸಿದ್ದರಾದರೂ, ಅಧಿಕಾರಿಗಳು ವ್ಯಕ್ತಿಯ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನ ತೋರಲಿಲ್ಲ ಎಂದು ಆರೋಪಿಸಲಾಗಿದೆ.
ಘಟನೆಯ ವಿಡಿಯೋವನ್ನು ಟ್ವಿಟರಿನಲ್ಲಿ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, “ಹಿರಿಯ ನಾಗರಿಕ ತನ್ನಲ್ಲಿ ಕೋರ್ಟ್ ಆದೇಶ ಇದೆ ಎಂದು ಹೇಳುತ್ತಿದ್ದಾರೆ, ಆದರೆ, ನಾನು ಕೋರ್ಟ್ ಆದೇಶ ಒಪ್ಪುವುದಿಲ್ಲ ಎಂದು ಅಧಿಕಾರಿ ಹೇಳುತ್ತಿದ್ದಾರೆ” ಎಂದು ಬರೆದಿದ್ದಾರೆ.
“ಇದು ಮುಂಬೈಯ ಸಂತಾಕ್ರೂಝ್‌ನಲ್ಲಿ ನಡೆದಿದೆ, ಆ ಹಿರಿಯ ವ್ಯಕ್ತಿ ಹಾಜಿ ರಫತ್ ಹುಸೈನ್, ಹಾಗೂ ಆ ಮಹಿಳೆ ಬಿಎಂಸಿಯ ಅಧಿಕಾರಿ” ಎಂದು ಮತ್ತೊಂದು ಟ್ವೀಟ್‌ನಲ್ಲಿ ಅವರು ತಿಳಿಸಿದ್ದಾರೆ.
ಈ ಘಟನೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಬಿಎಂಸಿ ಸ್ಪಷ್ಟನೆ ನೀಡಿದ್ದು, “ಅಕ್ರಮವಾಗಿ ತಗಡು ಶೀಟಿನಲ್ಲಿ ನಿರ್ಮಿಸಿದ್ದ 6 ಅಂಗಡಿಗಳನ್ನು ಸಾಂತಕ್ರಾಝ್ ನಿಲ್ದಾಣದ ಬಳಿ ನಿರ್ಮಿಸಲಾಗಿದೆ, ಪೊಲೀಸ್ ಬಂದೋಬಸ್ತಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ಅಕ್ರಮ ಅಂಗಡಿಗಳಿಗೆ ಘನ ನ್ಯಾಯಾಲಯ ಯಾವುದೇ ತಡೆ ಆಜ್ಞೆ ನೀಡಿಲ್ಲ” ಎಂದು ಹೇಳಿದೆ.
The video is from Mumbai's Santacruz!
— Shuja (@shuja_2006) March 29, 2023
The senior citizen is Haji Rafat Hussain and that lady is a BMC officer
The action of demolition on those illegally kept 6 stalls was taken through H/West Ward authority with police protection on dtd.21.03.2023. No restraining legal orders from Hon'ble Court on those 6 illegal stalls.
— Ward HW BMC (@mybmcWardHW) March 29, 2023
The desperation for destruction of minority properties is clear from the arrogance of lady officer
— Raza Khan (@Raza_AKhan) March 29, 2023
She should be arrested for going against a court order....
— Nadeem Shah (@dadiyo64) March 29, 2023
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.