Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಜಾನುವಾರು ಮಾರಾಟಕ್ಕೂ ಆನ್‌ಲೈನ್‌...

ಜಾನುವಾರು ಮಾರಾಟಕ್ಕೂ ಆನ್‌ಲೈನ್‌ ವೇದಿಕೆ: 500 ಕೋಟಿ ರೂ. ಸಂಸ್ಥೆಯ ಮಾಲಕರಾದ ವಿದ್ಯಾರ್ಥಿಗಳು

11 April 2023 12:36 PM IST
share
ಜಾನುವಾರು ಮಾರಾಟಕ್ಕೂ ಆನ್‌ಲೈನ್‌ ವೇದಿಕೆ: 500 ಕೋಟಿ ರೂ. ಸಂಸ್ಥೆಯ ಮಾಲಕರಾದ ವಿದ್ಯಾರ್ಥಿಗಳು

ಹೊಸದಿಲ್ಲಿ: ಐಐಟಿಯ ಇಬ್ಬರು ವಿದ್ಯಾರ್ಥಿನಿಯರು ಜಾನುವಾರುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ʼಅನಿಮಲ್‌ʼ ಎಂಬ ಹೊಸ ಆನ್‌ಲೈನ್‌ ಪೋರ್ಟಲ್‌ ಪ್ರಾರಂಭಿಸಿ, ಯಶಸ್ಸು ಸಾಧಿಸಿದ್ದಾರೆ. ಈ  ಪ್ಲಾಟ್‌ಫಾರ್ಮ್‌ನ ಆದಾಯವು 2022 ರ ಆರ್ಥಿಕ ವರ್ಷದಲ್ಲಿ ಕ್ಕೆ ₹7.4 ಕೋಟಿ ಗಳಿಸಿದ್ದು, ಈಗ ಕಂಪೆನಿಯ ಮೌಲ್ಯವು, 565 ಕೋಟಿ ರುಪಾಯಿಗೆ ಏರಿದೆ ಎಂದು ಸ್ಟಾರ್ಟ್‌ಅಪ್ ಪೀಡಿಯಾ ವರದಿ ಮಾಡಿದೆ.

ಲಿಂಕ್ಡ್‌ಇನ್ ಪೋಸ್ಟ್ ಪ್ರಕಾರ, ಬೆಂಗಳೂರು ಮೂಲದ ಈ (ಸ್ಟಾರ್ಟಪ್) ನವೋದ್ಯಮವನ್ನು 2019 ರಲ್ಲಿ ಸ್ಥಾಪಿಸಲಾಗಿದೆ. ಅನಿಮಲ್‌ನ ಸಂಸ್ಥಾಪಕರಾದ ಅನುರಾಗ್ ಬಿಸೋಯ್, ಕೀರ್ತಿ ಜಾಂಗ್ರಾ, ಲಿಬಿನ್ ವಿ ಬಾಬು, ಮತ್ತು ನೀತು ವೈ ಅವರು ಜಾನುವಾರು ಸಾಕುವ ರೈತರ ಜೀವನವನ್ನು ಉನ್ನತೀಕರಿಸುವ ಉದ್ದೇಶದಿಂದ ಈ ಉದ್ಯಮವನ್ನು ಆರಂಭಿಸಿದ್ದಾರೆ. ಜಾನುವಾರು ವ್ಯಾಪಾರ ಮತ್ತು ಹೈನುಗಾರಿಕೆ ಖರೀದಿ ಮತ್ತು ಮಾರಾಟಕ್ಕೆ ರೈತರಿಗೆ ಉತ್ತಮ ವೇದಿಕೆ ಒದಗಿಸಿದ ಈ ತಾಣವು ಸಾಕಷ್ಟು ಜನಪ್ರಿಯತೆ ಪಡೆದಿದೆ.

 2021ರ ಆರ್ಥಿಕ ವರ್ಷದಲ್ಲಿ ₹ 5 ಲಕ್ಷದಿಂದ ಆರಂಭಗೊಂಡ ಉದ್ಯಮವು, 2022 ರ ಆರ್ಥಿಕ ವರ್ಷದಲ್ಲಿ 148 ಪಟ್ಟು ಹೆಚ್ಚಾಗಿ ₹ 7.4 ಕೋಟಿಗೆ ವಹಿವಾಟು ಮಾಡಿಕೊಂಡಿದೆ. ಈ ಡಿಜಿಟಲ್ ಪ್ಲಾಟ್‌ಫಾರ್ಮ್ ನಲ್ಲಿ ಜಾನುವಾರುಗಳ ಮಾರಾಟ, ಕೊಳ್ಳುವಿಕೆ ಮಾತ್ರವಲ್ಲದೆ ಪ್ರಾಣಿಗಳ ಆರೋಗ್ಯ ಸೇವೆಗಳನ್ನು ಸಹ ಒದಗಿಸಲಾಗುತ್ತಿದೆ.

ಪ್ರಮುಖ ಹೂಡಿಕೆದಾರರಾದ Beenext, Sequoia, Nexus Ventures ನಿಂದ ಸುಮಾರು ₹170 ಕೋಟಿ ಹಣವನ್ನು ಸಂಗ್ರಹಿಸುವಲ್ಲಿ ಅನಿಮಲ್ ಯಶಸ್ವಿಯಾಗಿದೆ.  

2022 ರಲ್ಲಿ ಕಂಪನಿಯು ತನ್ನ ಆದಾಯದ 90% ಅನ್ನು ಜಾನುವಾರು ವ್ಯಾಪಾರದಿಂದ ಮಾಡಿದ್ದರೆ, ಉಳಿದ 10% ಆದಾಯವನ್ನು ಆರೋಗ್ಯ ರಕ್ಷಣೆ, ಕೃತಕ ಗರ್ಭಧಾರಣೆ ಮತ್ತು ಮಾರುಕಟ್ಟೆ ಆಯೋಗದಿಂದ ಮಾಡಿಕೊಂಡಿದೆ.

ವಿಪರ್ಯಾಸವೆಂದರೆ, ಬೆಂಗಳೂರಿನಲ್ಲಿ ಶುರುವಾಗಿರುವ ಈ ಸ್ಟಾರ್ಟ್‌ಅಪ್‌ ಉದ್ಯಮದ ಅಪ್ಲಿಕೇಶನ್‌ನಲ್ಲಿ ಕನ್ನಡದ ಸೇವೆ ಇನ್ನೂ ಆರಂಭಗೊಂಡಿಲ್ಲ. ಬಹುತೇಕ ಹಿಂದಿ ಬೆಲ್ಟ್‌ ಗ್ರಾಹಕರನ್ನು ಕೇಂದ್ರೀಕರಿಸಿ ಅಪ್ಲಿಕೇಶನ್‌ ಅನ್ನು ನಿರ್ಮಿಸಿದಂತೆ ಕಾಣುತ್ತಿದ್ದು, ಡೌನ್‌ಲೋಡ್‌ ಮಾಡಿಕೊಂಡಾಗ ಹಿಂದಿಯಲ್ಲೇ ಸೇವೆಯನ್ನು ನೀಡಲಾರಂಭಿಸುತ್ತದೆ, ನಂತರ ಬೇರೆ ಭಾಷೆಗೆ ಬದಲಾಯಿಸಿಕೊಳ್ಳಬಹುದು. ಸದ್ಯ, ಹಿಂದಿ, ಇಂಗ್ಲಿಷ್‌, ಗುಜರಾತಿ, ತೆಲುಗು ಮತ್ತು ಮರಾಠಿ ಭಾಷೆಯಲ್ಲಿ ಸೇವೆ ಲಭ್ಯವಿದೆ. ಗ್ರಾಮೀಣ ಭಾಗದ ಜನರೇ ಗ್ರಾಹಕರಾಗಿರುವುದರಿಂದ ಇನ್ನಷ್ಟು ಸ್ಥಳೀಯ ಭಾಷೆಗಳಲ್ಲಿ ಸೇವೆ ವಿಸ್ತರಿಸಕೊಳ್ಳಬಹುದೆಂಬ ನಿರೀಕ್ಷೆಯಿದೆ.

share
Next Story
X