ಅಬುಧಾಬಿಯಿಂದ ಆಗಮಿಸಿದ ವ್ಯಕ್ತಿ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನದ ಗಟ್ಟಿಗಳ ಮೌಲ್ಯ ಎಷ್ಟು ಗೊತ್ತೇ?
ಮಲಪ್ಪುರಂ, ಮೇ 14: ಅಕ್ರಮವಾಗಿ ಚಿನ್ನದ ಗಟ್ಟಿಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಕೋಝಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದರು. ಆತನಿಂದ ವಶಪಡಿಸಿಕೊಂಡಿದ್ದ ಬಂಗಾರವನ್ನು ಕಂಡು ಪೊಲೀಸರೇ ಆಶ್ಚರ್ಯ ಪಡುವಂತಾಗಿತ್ತು. ಕಾರಣ ಬಂಧಿತ ವ್ಯಕ್ತಿ ಸಾಗಿಸುತ್ತಿದ್ದ ಚಿನ್ನದ ಗಟ್ಟಿಗಳ ಮೌಲ್ಯ ಬರೋಬ್ಬರಿ 92 ಲಕ್ಷ ರೂ.ಗಳು.
ಖಚಿತ ಮಾಹಿತಿಯ ಮೇರೆಗೆ ಅಬುಧಾಬಿಯಿಂದ ಆಗಮಿಸಿದ್ದ ಮುಸ್ತಫಾ ಎಂಬಾತನ ಬ್ಯಾಗನ್ನು ಪೊಲೀಸರು ಪರಿಶೀಲಿಸಿದ್ದು ಈ ಸಂದರ್ಭ ಚಿನ್ನದ ಗಟ್ಟಿಗಳು ಪತ್ತೆಯಾಗಿವೆ. ಎಲೆಕ್ಟ್ರಾನಿಕ್ ಹೈಡ್ರಾಲಿಕ್ ಜಾಕ್ ಹಾಗೂ ಸಣ್ಣ ಟ್ರಾನ್ಸ್ ಫಾರ್ಮರ್ ಒಳಗೆ ಅಡಗಿಸಿಟ್ಟಿದ್ದ ಸುಮಾರು 3.244 ಕೆ.ಜಿ. ಬಂಗಾರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Next Story