ಕೇರಳ: ಪ್ಲಸ್ಟು, ವಿ.ಎಚ್.ಎಸ್.ಇ. ಪರೀಕ್ಷೆಯ ಫಲಿತಾಂಶ ನಾಳೆ ಪ್ರಕಟ
ತಿರುವನಂತಪುರಂ,ಮೇ 14: ಕೇರಳದ ಎರಡನೆ ವರ್ಷದ ಹೈಯರ್ ಸೆಕಂಡರಿ , ವೆಕೇಶನಲ್ ಹೈಯರ್ ಸೆಕಂಡರಿ ಪರೀಕ್ಷೆಯ ಫಲಿತಾಂಶ ನಾಳೆ, ಸೋಮವಾರ ಪ್ರಕಟಗೊಳ್ಳಲಿದೆ. ಪಿಆರ್ ಚೇಂಬರ್ನಲ್ಲಿ ನಾಳೆ ಮಧ್ಯಾಹ್ನ ಎರಡುಗಂಟೆಗೆ ವಿದ್ಯಾಭ್ಯಾಸ ಸಚಿವ ಸಿ. ರವೀಂದ್ರನಾಥ್ ಫಲಿತಾಂಶವನ್ನು ಪ್ರಕಟಿಸಲಿರುವರು. ಈ ಬಾರಿ 4,42,434 ವಿದ್ಯಾರ್ಥಿಗಳು ಎರಡನೆ ವರ್ಷದ ಹೈಯರ್ ಸೆಕಂಡರಿ ಪರೀಕ್ಷೆ ಬರೆದಿದ್ದಾರೆ. 29444 ಮಂದಿ ಎರಡನೆ ವರ್ಷದ ವಿಎಚ್ಎಸ್ಇ ಪರೀಕ್ಷೆ ಬರೆದಿದ್ದಾರೆ. ಹೈಯರ್ ಸೆಕಂಡರಿ ಪರೀಕ್ಷಾ ಫಲಿತಾಂಶಗಳು ಈ ಕೆಳಗಿನ ವೆಬ್ಸೈಟ್ಗಳಲ್ಲಿ ಲಭಿಸಲಿದೆ.
www.kerala.gov.in, www.dhsekerala.gov.in, www.keralaresults.nic.in, www.results.itschool.gov.in, www.cdit.org., www.examresults.kerala.gov.in, www.prd.kerala.gov.in, www.results.nic.in, www.educationkerala.gov.in
ವಿಎಚ್ಎಸ್ಇ ಫಲಿತಾಂಶ www.results.kerala.nic.in, www.keralaresults.nic.in, www.prd.kerala.gov.in, www.itmission.kerala.gov.in, www.results.itschool.gov.in, www.results.kerala.gov.in, www.vhse.kerala.gov.in ವೆಬ್ಸೈಟ್ಗಳಲ್ಲಿ ಲಭಿಸಲಿದೆ.