ಎಂಡೊ ಸಲ್ಫಾನ್: 200 ಕೋಟಿ ರೂ. ನಬಾರ್ಡ್ ಯೋಜನೆ ಕೇರಳ ಸರಕಾರದ ತಲೆಗೆ
ಕಾಸರಗೋಡು,ಆ.2: ಎಂಡೊ ಸಲ್ಫಾನ್ ಪೀಡಿತ ವಲಯಕ್ಕೆ ಜಾರಿಯಾದ ನಬಾರ್ಡ್ ಯೋಜನೆ ಹೊಣೆ ಕೇರಳ ಸರಕಾರದ ತಲೆಮೇಲೆ ಬಿದ್ದಿದೆ. ಎಂಡೊ ಸಲ್ಫಾನ್ ಪೀಡಿತ ವಲಯದ ಮೂಲಭೂತ ಸೌಕರ್ಯಗಳನ್ನು ಉತ್ತಮಪಡಿಸುವುದಕ್ಕಾಗಿ ನಬಾರ್ಡ್ ಅನುಮತಿಸಿದ 200 ಕೋಟಿ ರೂಪಾಯಿ ಮೊತ್ತದ ಯೋಜನೆಯಲ್ಲಿ ಈವರೆಗೆ ಶೇ.50ರಷ್ಟು ಹಣ ಮಾತ್ರ ಬಳಕೆಯಾಗಿದೆ. ಯೋಜನೆಯ ಅವಧಿ 2017 ಜೂನ್ಗೆ ಮುಕ್ತಾಯವಾಗಿದೆ.
ಆಸ್ಪತ್ರೆ, ಶಾಲೆ, ಶಾಲೆ ಕಟ್ಟಡಗಳು, ಕುಡಿಯು ನೀರಿನ ಯೋಜನೆಗಳು ಸಹಿತ 233 ಯೋಜನೆಗಳಲ್ಲಿ 113 ಯೋಜನೆಗಳು ಪೂರ್ತಿಯಾಗಿದೆ. ಮೂರು ತಿಂಗಳ ಹೆಚ್ಚುವರಿ ಸಮಯವನ್ನು ನಬಾರ್ಡ್ ನಿಗದಿಗೊಳಿಸಿದೆ. ಈ ಸಮಯಾವಧಿಯಲ್ಲಿ ಪೂರ್ತಿ ಮಾಡದಿದ್ದರೆ ಉಳಿದವರಿಗೆ ಹೊಸ ಎಸ್ಟಿಮೇಟ್ ನೀಡಬೇಕು.
ಅದಕ್ಕೆ ಅಗತ್ಯವಾದ ಹಣವನ್ನು ನಬಾರ್ಡ್ ಕೊಡುವುದಿಲ್ಲ. ರಾಜ್ಯ ಸರಕಾರವೇ ಅದನ್ನು ಭರಿಸಬೇಕಾಗುತ್ತದೆ. 2012ರಲ್ಲಿ ಸಂಸದ ಪಿ.ಕರುಣಾಕರನ್ರ ನೇತೃತ್ವದಲ್ಲಿ 200ಕೋಟಿ ರೂಪಾಯಿಯ ನಬಾರ್ಡ್ ಯೋಜನೆ ಎಂಡೋಸಲ್ಫಾನ್ ವಲಯಕ್ಕೆ ಲಭಿಸಿತ್ತು. ಕಡಿಮೆ ಬಡ್ಡಿಯಲ್ಲಿ ಐದುವರ್ಷದ ನಂತರ ಮರುಪಾವತಿ ಮಾಡಬೇಕು ಎನ್ನುವುದು ನಬಾರ್ಡ್ ಯೋಜನೆಯ ಶರ್ತವಾಗಿದೆ. ಎರಡು ಕೋಟಿ ರೋಪಾಯಿ ಮೇಲ್ಪಟ್ಟ ಯೋಜನೆಗೆ ರೂಪು ನೀಡಲು ಸಮರ್ಥರಾದ ಇಂಜಿನಿಯರ್ಗಳು ಕಾಸರಗೋಡು ಜಿಲ್ಲೆಯಲ್ಲಿಲ್ಲದ್ದರಿಂದ ಯೋಜನೆ ಜಾರಿಯಲ್ಲಿ ವಿಳಂಬವಾಗಿದೆ. ಪ್ರೋಜೆಕ್ಟ್ ಕೂಡಾ ಆಗದೆ 20 ಕೋಟಿ ರೂಪಾಯಿವೆಚ್ಚದ ಎಂಡೊ ಪೀಡಿತರ ಮರುವಸತಿ ಗ್ರಾಮ ಕೂಡಾ ಇನ್ನು ಮುಂದೆ ಕೇರಳ ಸರಕಾರದ ಹೊಣೆಯಲ್ಲಿ ಬರಲಿದೆ. ಪೂರ್ಣವಾದ ಶೇ.90ರಷ್ಟು ಯೋಜನೆಗಳ ವಿದ್ಯುದ್ದೀಕರಣದ ವಿಚಾರವನ್ನುಯೋಜನೆಯಲ್ಲಿ ತೋರಿಸದ್ದರಿಂದ ಅದು ಕೂಡಾ ಸರಕಾರವೇ ಮಾಡಬೇಕಾಗಿದೆ.