ಫೈಝಲ್ ಹತ್ಯೆ ಪ್ರಕರಣದ ಆರೋಪಿಯ ಕೊಲೆ ಯತ್ನ
ವಳ್ಳಿಕುನ್ನ್,ಆ.3: ಕೊಂಡಿಞಿ ಫೈಝಲ್ ಕೊಲೆ ಪ್ರಕರಣದ ಆರೋಪಿಗೆ ಕಾರು ಢಿಕ್ಕಿ ಹೊಡೆಸಿ ಕೊಲೆ ಗೈಯಲು ಯತ್ನಿಸಿದ ಘಟನೆ ನಡೆದಿದೆ. 14ನೆ ಆರೋಪಿ ಪಳ್ಳಿಪ್ಪಡಿ ಎಂಬಲ್ಲಿನ ಟಿ. ಲಿಜೀಶ್ನ ಕೊಲೆಯತ್ನ ನಡೆದಿದೆ. ಬುಧವಾರ ಮಧ್ಯಾಹ್ನದ ಬಳಿಕ ಕುಟ್ಟುಮುಚ್ಚಿ ಎಂಬಲ್ಲಿಗೆ ಸಮೀಪದ ಕೊಡಕ್ಕಾಡ್ ಆಲಿನ್ಚುವಡ್ ರಬರ್ ಎಸ್ಟೇಟ್ ರಸ್ತೆಯಲ್ಲಿ ಘಟನೆ ನಡೆದಿದೆ.
ಪರಪ್ಪನಂಗಾಡಿಯಿಂದ ಕುಟ್ಟುಮುಚ್ಚಿಗೆ ಸಂಬಂಧಿಕರ ಮನೆಗೆ ಬಂದಿದ್ದ ಲಿಜೀಶ್ನ ಬೈಕನ್ನು ಕಾರಿನಲ್ಲಿ ಹಿಂಬಾಲಿಸಿದ ತಂಡ ಢಿಕ್ಕಿಹೊಡೆದಿದೆ. ಬೈಕ್ನಿಂದ ಎಸೆಯಲ್ಪಟ್ಟ ಈತನ ಮೇಲೆ ಕಾರು ಹರಿಸಲು ಪ್ರಯತ್ನಿಸಲಾಗಿದೆ. ಘಟನೆಯ ನಂತರ ಮಹಾರಾಷ್ಟ್ರ ರಿಜಿಸ್ಟ್ರೇಶನ್ನ ಕಾರು ಪರಾರಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗಾಯಗೊಂಡ ಲಿಜೀಶ್(27)ನನ್ನು ತಿರೂರ್ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಢಿಕ್ಕಿಹೊಡೆದ ಕಾರಿನ ಭಾಗವೊಂದು ಪರಪ್ಪನಂಗಾಡಿ ಪೊಲೀಸರಿಗೆ ಸಿಕ್ಕಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕಾರಿನಲ್ಲಿ ನಾಲ್ಕುಮಂದಿ ಇದ್ದರು ಎನ್ನಲಾಗಿದ್ದು, ಸಮೀಪದ ಅಂಗಡಿಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಮುಂದಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.