ಅನ್ವರ್ ಸಾದಿಕ್
ಮಂಗಳೂರು, ಜು.16: ನಗರ ಹೊರವಲಯದ ಕಸಬಾ ಬೆಂಗರೆಯ ನಿವಾಸಿ ಅನ್ವರ್ ಸಾದಿಕ್ (38) ಶುಕ್ರವಾರ ಬೆಳಗ್ಗೆ ನಗರದ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ ಮತ್ತು ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿಯ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ದುಬೈಯ ಬಹರ್ ಅಲ್ನೂರ್ ರೆಸ್ಟೋರೆಂಟ್ನಲ್ಲಿ ಸುಮಾರು 18 ವರ್ಷಗಳಿಂದ ಮ್ಯಾನೇಜರ್ ಆಗಿದ್ದ ಇವರು ಎರಡು ತಿಂಗಳ ಹಿಂದೆ ಊರಿಗೆ ಮರಳಿದ್ದರು. ಅನಾರೋಗ್ಯದಿಂದ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯಸಿರೆಳೆದಿದ್ದಾರೆ.
ಬೆಂಗರೆ ಕಾರ್ಪೊರೇಟರ್ ಮುನೀಬ್ ಬೆಂಗರೆ ಸಂತಾಪ ಸೂಚಿಸಿದ್ದಾರೆ.
Next Story