ಬಿ. ವಿಜಯ್ ಕುಮಾರ್
ಉಳ್ಳಾಲ: ಕೋಟೆಕಾರು ಸಂಕೋಲಿಗೆ ನಿವಾಸಿ ಮಾಜಿ ಯೋಧ ಬಿ.ವಿಜಯ್ ಕುಮಾರ್ (68) ಅವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ಸೋಮವಾರ ಮೃತರಾದರು.
ಭಾರತೀಯ ಸೇನೆಯಲ್ಲಿ 16 ವರುಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು ನಂತರ ಸಿಂಡಿಕೇಟ್ ಬ್ಯಾಂಕ್ನ ಭದ್ರತಾ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು. ಅವರು ಸೇನೆಯಲ್ಲಿ ಉತ್ತಮ ಕುಸ್ತಿ ಮತ್ತು ಕಬಡ್ಡಿ ಪಟುವಾಗಿದ್ದರು.
ಮೃತರು ಪತ್ನಿ ,ಪುತ್ರ, ಇಬ್ಬರು ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story