Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಲೇಖನಗಳು
  4. ಕೊರೋನ ಕಾಲದ ‘ಸುಡು ವಾಸ್ತವ’

ಕೊರೋನ ಕಾಲದ ‘ಸುಡು ವಾಸ್ತವ’

ಪುಟಗಳ ನಡುವೆ...

- ಕಾರುಣ್ಯಾ- ಕಾರುಣ್ಯಾ26 May 2024 1:07 PM IST
share
ಕೊರೋನ ಕಾಲದ ‘ಸುಡು ವಾಸ್ತವ’

‘ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ’ ಎನ್ನುವಂತೆ ಭಾರತದಲ್ಲಿ ಕೊರೋನ, ಲಾಕ್ಡೌನ್ ಮುಗಿದು ಕೆಲವು ವರ್ಷಗಳು ಕಳೆದರೂ ಅದರ ತಲ್ಲಣಗಳಿಂದ ಜನರು ಇನ್ನೂ ಹೊರ ಬಂದಿಲ್ಲ. ಕೊರೋನ ಅಕ್ರಮಗಳು, ಲಸಿಕೆಯ ಅಸಲಿಯತ್ತುಗಳು ಎಲ್ಲವೂ ಒಂದೊಂದಾಗಿ ಹೊರ ಬರುತ್ತಿವೆ. ಆ ದಿನಗಳ ನೋವಿನಿಂದ ಸಾವಿರಾರು ಜನರು ಇನ್ನೂ ಹೊರ ಬಂದಿಲ್ಲ. ಆ ಕರಾಳ ಕಥನಗಳನ್ನು ಪುಸ್ತಕಗಳು ಹೇಳಿದಷ್ಟೂ ಮುಗಿಯುತ್ತಿಲ್ಲ. ಕೊರೋನ ಕಾಲಕ್ಕೆ ಸಂಬಂಧಿಸಿ ಜನಸಾಮಾನ್ಯರ ಬದುಕಿನ ನೋವು ದುಮ್ಮಾನಗಳ ಕುರಿತಂತೆ ಹಲವು ಕೃತಿಗಳು ಹೊರ ಬಂದಿವೆ. ಅವುಗಳಲ್ಲಿ ಪತ್ರಕರ್ತ ಡಾ. ಎಂ. ಎಸ್. ಮಣಿ ಅವರು ಬರೆದಿರುವ ‘ಸುಡು ಬಯಲು-ಸತ್ಯಾನ್ವೇಷಣೆಯ ಬೆನ್ನೇರಿ’ ಕೃತಿಯೂ ಒಂದು. ಕೊರೋನ ಕಾಲದಲ್ಲಿ ಸಮಾಜದ ನಡುವೆ ಓಡಾಡಿ ಅವರ ನೋವು ಸಂಕಟಗಳನ್ನು ಅರಿತು ದಾಖಲಿಸಿದ ಕೃತಿ ಇದಾಗಿದೆ ಎನ್ನುವುದು ಗಮನಾರ್ಹ.

‘‘ಸುಡು ಬಯಲು ಎಲ್ಲರೂ ಓದಲೇ ಬೇಕಾದ ಸಂಗ್ರಹ ಯೋಗ್ಯ ಕೃತಿ. ಕೊರೋನ ಕಾಲದ ಆತಂಕದ ಬದುಕಿನ ಹತ್ತಾರು ಮುಖಗಳನ್ನು ಪರಿಚಯಿಸುತ್ತದೆ. ಕೊರೋನ ಭೀತಿ, ಲಾಕ್ಡೌನ್ ಸೃಷ್ಟಿಸಿದ ನರಕ, ಮೆಡಿಕಲ್ ಮಾಫಿಯಾ, ಅಧಿಕಾರಿಗಳ ಭ್ರಷ್ಟತೆ, ಶಾಲೆಗಳ ಸ್ಥಿತಿಗತಿ, ದಿನಗೂಲಿ ನೌಕರರ, ಬೀದಿಬದಿ ವ್ಯಾಪಾರಿಗಳ ಸಂಕಷ್ಟ, ಮಸಣದ ಹೂಗಳ ಸಂಕಟ...ಹೀಗೆ ಹಲವು ಸಂಗತಿಗಳನ್ನು ಆರಿಸಿಕೊಂಡು ನಿರ್ಭೀತಿಯಿಂದ ಬರೆಯಲಾಗಿದೆ....’’ ಬೆನ್ನುಡಿಯಲ್ಲಿ ಹಿರಿಯ ಪತ್ರಕರ್ತ ಎಸ್. ನಾಗಣ್ಣ ಅಭಿಪ್ರಾಯಪಡುತ್ತಾರೆ.

ಈ ಕೃತಿಯಲ್ಲಿ ಒಟ್ಟು 72 ಲೇಖನಗಳಿವೆ. ಇಷ್ಟು ಲೇಖನಗಳೂ ಕೊರೋನ ಕಾಲದ ಬೇರೆ ಬೇರೆ ವಲಯಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿದೆ. ಅದರಲ್ಲಿ ಮುಖ್ಯವಾಗಿದ್ದು, ‘ಮೆಡಿಕಲ್ ಮಾಫಿಯಾದ ಕಪಿ ಮುಷ್ಠಿಯಲ್ಲಿ’ ಎನ್ನುವ ಎರಡು ಅಧ್ಯಾಯಗಳು. ಇದು ಕೊರೋನದ ಜೊತೆಗೆ ನೇರ ಸಂಬಂಧವನ್ನು ಹೊಂದಿಲ್ಲದಿದ್ದರೂ, ಕೊರೋನ ಕಾಲದಲ್ಲಿ ಹೇಗೆ ಈ ಮಾಫಿಯಾ ಕೂಡ ರೋಗವನ್ನು ಇನ್ನಷ್ಟು ಭೀಕರವಾಗಿಸಿತು ಎನ್ನುವುದನ್ನು ನಾವು ನೋಡಿದ್ದೇವೆ. ಈ ಅಧ್ಯಾಯದಿಂದ ಪ್ರಭಾವಿತರಾಗಿರುವ ನಾಡೋಜ ಬಿ.ಟಿ. ರುದ್ರೇಶ್ ಮುನ್ನುಡಿಯಲ್ಲಿ ತಮ್ಮ ಅಭಿಪ್ರಾಯವನ್ನು ಹೀಗೆ ದಾಖಲಿಸುತ್ತಾರೆ ‘‘ಈ ಮೆಡಿಕಲ್ ಮಾಫಿಯಾ ಕೊರೋನ ಬಂದ ಆನಂತರದಲ್ಲಿ ಮತ್ತಷ್ಟು ಗರಿ ಬಿಚ್ಚಿಕೊಂಡಿದೆ. ಈ ಮಾಫಿಯಾ ಬಗ್ಗೆ ನೀವು ನಿಖರವಾಗಿ ತಿಳಿದುಕೊಂಡು ಒಂದಿಷ್ಟು ಜಾಗೃತರಾಗಬೇಕೆಂದರೆ ಈ ಕೃತಿಯನ್ನು ಓದಲೇ ಬೇಕಾಗಿದೆ. ಇಂತಹ ಮೆಡಿಕಲ್ ಮಾಫಿಯಾ ಕಂಪೆನಿಗಳ ಪಾಲಿಗೆ ನಾವೆಲ್ಲ ಆರೋಗ್ಯವಂತರಾಗುವುದು ಬೇಕಾಗಿಲ್ಲ. ಆರೋಗ್ಯದ ಬಗ್ಗೆ ಪುಂಖಾನುಪುಂಖವಾಗಿ ಮಿಥ್ಯಗಳನ್ನು ಹರಡುತ್ತವೆ. ಅದನ್ನು ಸತ್ಯವೆಂದುಕೊಂಡವನು ಆರೋಗ್ಯ ಹದೆಗೆಡಿಸಿಕೊಂಡಷ್ಟು ಈ ಮಾಫಿಯಾ ಮಂದಿಗೆ ಲಾಭ. ಈ ಬಗ್ಗೆ ಜಾಗೃತಿ ಮೂಡಿಸುವಂತಹ ಒಂದಷ್ಟು ದೃಷ್ಟಾಂತಗಳನ್ನು ಮಣಿ ಈ ಪುಸ್ತಕದ ಮೂಲಕ ತೆರೆದಿಟ್ಟಿದ್ದಾರೆ....’’ ಇತ್ತೀಚೆಗೆ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಯು ಹೇಗೆ ಜನರನ್ನು ಆತಂಕಕ್ಕೆ ತಳ್ಳುತ್ತಿದೆ ಎನ್ನುವುದನ್ನು ನಾವು ನೋಡುತ್ತಿದ್ದೇವೆ.. ಮೆಡಿಕಲ್ ಮಾಫಿಯದ ಆಳ, ಒಳಸುಳಿಗಳು ಜಗತ್ತಿಗೆ ಈಗ ಅರ್ಥವಾಗುತ್ತಿದೆ.

‘ಕೊರೋನಕ್ಕಿಂತಲೂ ಮಾರಕವಾಯಿತು ಲಾಕ್ಡೌನ್’ ಎನ್ನುವ ಅಧ್ಯಾಯ ಮತ್ತು ಇದಕ್ಕೆ ಪೂರಕವಾಗಿರುವ ಲೇಖನಗಳು ಲಾಕ್ಡೌನ್ನಿಂದ ಸಂತ್ರಸ್ತಗೊಂಡ ಜನರಿಗಾಗಿ ಮಿಡಿಯುತ್ತವೆ. ‘ಕೋಮುವ್ಯಾಧಿಗೆ ಲಸಿಕೆ ಬೇಕಾಗಿದೆ’, ‘ಕುಲಕಸುಬಿಗೂ ಕಂಟಕ ತಂದಿತು ಕೊರೋನ’, ‘ಪತ್ರಕರ್ತರ ಸಂಕಷ್ಟ ಹೆಚ್ಚಿಸಿದ ಕೊರೋನ’, ‘ಮಸಣದ ಹೂಗಳ ಮೇಲೆ ಕೊರೋನ ಮುನಿಸು’, ‘ಬಾಡಿಗೆ ತಾಯಂದಿರ ಬದುಕಿಗೆ ಕೊಳ್ಳಿಯಿಟ್ಟ ಕೊರೋನ’ ಹೀಗೆ...ಕೊರೋನ ವೈರಸ್ನ ಬೇರೆ ಬೇರೆ ಸಾಮಾಜಿಕ ಆಯಾಮಗಳನ್ನು ಕೃತಿ ತೆರೆದಿಡುತ್ತದೆ. ಕೊರೋನ ಕಾಲಘಟ್ಟಕ್ಕೆ ಸಂಬಂಧಿಸಿ ಕೆಲವು ಸ್ವತಂತ್ರ ಲೇಖನಗಳು ಇವೆಯಾದರೂ, ಪರೋಕ್ಷವಾಗಿ ಕೊರೋನ ಕಾಲದ ನೋವು, ಸಂಕಟಗಳೊಂದಿಗೆ ಅವುಗಳು ಬೆಸೆದುಕೊಳ್ಳುತ್ತವೆ. ಈ ಕೃತಿ ಕೊರೋನವನ್ನು ಸಾಮಾಜಿಕ, ಆರ್ಥಿಕ, ವೈಜ್ಞಾನಿಕ...ಎಂದು ಹಲವು ನೆಲೆಗಳಲ್ಲಿ ವಿಶ್ಲೇಷಿಸುತ್ತದೆ ಮಾತ್ರವಲ್ಲ, ಸಂತ್ರಸ್ತ ಜನರಿಗಾಗಿ ಮಿಡಿಯುತ್ತದೆ.

ಈ ಕೃತಿಯನ್ನು ಐಎಚ್‌ಎಸ್ ಪ್ರಕಾಶನ ಬೆಂಗಳೂರು ಹೊರತಂದಿದೆ. 364 ಪುಟಗಳ ಈ ಕೃತಿಯ ಮುಖಬೆಲೆ 375 ರೂಪಾಯಿ. ಆಸಕ್ತರು 97411 57603 ದೂರವಾಣಿಯನ್ನು ಸಂಪರ್ಕಿಸಬಹುದು.

share
- ಕಾರುಣ್ಯಾ
- ಕಾರುಣ್ಯಾ
Next Story
X