Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದೊರೆಸ್ವಾಮಿ ಅವರನ್ನು 'ಪಾಕ್ ಏಜೆಂಟ್'...

ದೊರೆಸ್ವಾಮಿ ಅವರನ್ನು 'ಪಾಕ್ ಏಜೆಂಟ್' ಎನ್ನುವುದಕ್ಕೆ ಇವರ ನಾಲಿಗೆ ಹೇಗೆ ಹೊರಳಿತು?

ಸಚಿವ ಸುರೇಶ್ ಕುಮಾರ್ ರಿಗೆ ದೇವನೂರ ಮಹಾದೇವ ಪತ್ರ

ವಾರ್ತಾಭಾರತಿವಾರ್ತಾಭಾರತಿ2 March 2020 2:03 PM IST
share
ದೊರೆಸ್ವಾಮಿ ಅವರನ್ನು ಪಾಕ್ ಏಜೆಂಟ್ ಎನ್ನುವುದಕ್ಕೆ ಇವರ ನಾಲಿಗೆ ಹೇಗೆ ಹೊರಳಿತು?

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿಯವರ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ನೀಡಿರುವ ವಿವಾದಾತ್ಮಕ ಹೇಳಿಕೆಗಳು ಭಾರೀ ವಿವಾದವನ್ನು ಸೃಷ್ಟಿಸಿದೆ. ಈ ನಡುವೆ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವ ಸುರೇಶ್ ಕುಮಾರ್ ಅವರು 'ಆಡಬಾರದ ಮಾತನ್ನಾಡಿದರೆ ಕೇಳಬಾರದ ಮಾತು ಕೇಳಬೇಕಾಗುತ್ತದೆ' ಎಂದಿದ್ದರು. ಈ ಹೇಳಿಕೆ ಬಗ್ಗೆ ಸಾಹಿತಿ ದೇವನೂರ ಮಹಾದೇವ ಅವರು ಸುರೇಶ್ ಕುಮಾರ್ ರಿಗೆ ಬರೆದ ಪತ್ರ ಈ  ಕೆಳಗಿದೆ.

ಮಾನ್ಯ ಶಿಕ್ಷಣ ಸಚಿವರಾದ ಎಸ್.ಸುರೇಶ್ ಕುಮಾರ್ ಅವರಿಗೆ

ವಂದನೆಗಳು

ನಿಮ್ಮ ಇ-ಮೇಲ್ ಐಡಿ  nimmasuresh (ನಿಮ್ಮ ಸುರೇಶ್) ಎಂದಿದೆ. ನೀವು ನಮ್ಮ ಸುರೇಶ್ ಅಂದುಕೊಂಡಿದ್ದರಿಂದಲೇ ತಮಗೆ ಈ ಪತ್ರ ಬರೆಯುತ್ತಿದ್ದೇನೆ. ನಿಮ್ಮ ಹೇಳಿಕೆ, "ಆಡಬಾರದ ಮಾತನ್ನಾಡಿದರೆ ಕೇಳಬಾರದ ಮಾತು ಕೇಳಬೇಕಾಗುತ್ತದೆ ''-ನೋಡಿ ನನಗೆ ಶಾಕ್ ಆಯಿತು.

ಶ್ರೀ ಎಚ್.ಎಸ್.ದೊರೆಸ್ವಾಮಿಯವರು ಕಳೆದ ಚುನಾವಣೆಯ ಹಿಂದಿನ ದಿನ ಯಾರಿಗೆ ಮತನೀಡಬೇಕೆಂದು ಕರೆ ನೀಡುತ್ತಾ, ಮೋದಿಯವರ ವೈಫಲ್ಯಗಳನ್ನು ಹಾಗೂ ಸರ್ವಾಧಿಕಾರಿ ಪ್ರವೃತ್ತಿಯನ್ನು ವಿವರಿಸುತ್ತಾ, "ಆತ ಮಾತು ಕೊಟ್ಟಿದ್ದನ್ನು ಉಳಿಸಿಕೊಂಡಿಲ್ಲ. ಯಾವ ಕೆಲಸ ಮಾಡಿಲ್ಲ. ಕರ್ನಾಟಕವನ್ನು ತೆಗೆದುಕೊಂಡು ಬಿಟ್ರೆ ಇಡೀ ದೇಶವನ್ನು ತಗೋಬಹುದು ಎನ್ನುವ ಆಲೋಚನೆ ಇದೆ. ಆದ್ದರಿಂದ ಈಗ ನಾವು ಆತನನ್ನು ಮುಗಿಸಬೇಕು. ಆತನನ್ನು ಸೋಲಿಸಬೇಕು'' ಎಂದು ಹೇಳುತ್ತಾರೆ. ಇದರ ಅರ್ಥ ಸಾಯಿಸಬೇಕು ಎಂದಾಗುವುದೇ? ಅವರ ಮಾತುಗಳಲ್ಲಿ ಎತ್ತಿದ ಸಮಸ್ಯೆಗಳತ್ತ ಕಣ್ಣೆತ್ತೂ ನೋಡುವ ಧೈರ್ಯವಿಲ್ಲದೆ, ಅದನ್ನು ಅಪಾರ್ಥ ಮಾಡಿ, ನೂರು ವರ್ಷಕ್ಕೂ ಮಿಗಿಲಾಗಿ ಅಹಿಂಸೆಯ ವ್ರತ ಪಾಲಿಸಿಕೊಂಡು, ಯಾವುದೋ ಯುಗದ ಮನುಷ್ಯನೊಬ್ಬ ನಮ್ಮ ನಡುವೆ ಬದುಕಿರುವ ಸೋಜಿಗ ಕಾಣದೆ ಸದೆಬಡಿಯುವುದಾದರೆ ನಾವು ಲಿಲ್ಲಿ ಪುಟ್ಟರಂತಾಗಿಬಿಡುತ್ತೇವೆ.

ಸ್ಪಷ್ಟತೆಗಾಗಿ ಒಂದು ಉದಾಹರಣೆ ನೋಡೋಣ: ಇಂದಿನ ಓಲೈಕೆ, ಅವಕಾಶವಾದಿ ರಾಜಕಾರಣದಲ್ಲಿ ಇದೇ ಶ್ರೀ ಬಸವನಗೌಡ ಯತ್ನಾಳ್, ಶ್ರೀ ಈಶ್ವರಪ್ಪ ಅಥವಾ ಮತ್ತಾರೋ ಮೋದಿಯವರ ವಿರೋಧಿಗಳಾಗಿದ್ದರೆ ಅವರು ತಮ್ಮ ಸ್ವಭಾವಕ್ಕೆ ತಕ್ಕಂತೆ ಏನು ಹೇಳುತ್ತಿದ್ದರು? ಮೋದಿಯವರ ತಲೆಗೆ ಹತ್ತಿಪ್ಪತ್ತು ಕೋಟಿ ಫತ್ವಾ ಹೊರಡಿಸುತ್ತಿದ್ದರೇನೋ! ಇಂಥವರು ದೊರೆಸ್ವಾಮಿ ಅವರನ್ನು "ನಕಲಿ ಸ್ವಾತಂತ್ರ್ಯ ಹೋರಾಟಗಾರ'' ಎನ್ನುತ್ತಾರೆ ! ಅಂದರೆ, ರಾಜಕಾರಣವೆಂಬುದು  ಅದೇನು ಜಾದೂ, ಕಣ್ಕಟ್ಟು ವಿದ್ಯೆಯೇ? ಅಸಲಿಯನ್ನು ನಕಲಿ ಮಾಡುವುದಕ್ಕೆ, ನಕಲಿಯನ್ನು ಅಸಲಿ ಮಾಡುವುದಕ್ಕೆ? ದೊರೆಸ್ವಾಮಿ ಅವರನ್ನು "ಪಾಕ್ ಏಜೆಂಟ್ ''ಎನ್ನುವುದಕ್ಕೆ ಇವರ ನಾಲಿಗೆ ಹೇಗೆ ಹೊರಳಿತು? ಇಂದಿನ ನಮ್ಮ ಬಹುತೇಕ ರಾಜಕಾರಣಿಗಳಲ್ಲಿ ಕೆಲವರಿಗೆ ನಾಲಿಗೆ ಇಲ್ಲ. ಇನ್ನೂ ಕೆಲವರಿಗೆ ನಾಕಾರು ನಾಲಿಗೆಗಳು. ಇಲ್ಲಿದ್ದಾಗ ಮಾತನಾಡಲು ಒಂದು, ಇನ್ನೊಂದು ಕಡೆ ಹೋದಾಗ ಮತ್ತೊಂದು, ನುಂಗಲು ಮಗದೊಂದು-ಹೀಗೆ.

ಇಂದು ಜನಪ್ರತಿನಿಧಿಗಳು ತಮ್ಮನ್ನು ಜನಪ್ರತಿನಿಧಿಗಳು ಅಂದುಕೊಂಡಿಲ್ಲ. ಶಾಸಕರು ಶಾಸಕ ಅಂದುಕೊಂಡಿಲ್ಲ. ಯಾರೂ ತಮ್ಮ ಸ್ಥಾನಕ್ಕೆ ಹೊಣೆಗಾರರಾಗಿಲ್ಲ. ಇದು ಇಂದಿನ ಸಮಸ್ಯೆಯಾಗಿದೆ. ಉದಾಹರಣೆಗೆ, ಶ್ರೀ ಯತ್ನಾಳ್ ಅವರ ವಿಜಯಪುರ ಜಿಲ್ಲೆಯಲ್ಲಿ ನಿರುದ್ಯೋಗ ತಾಂಡವವಾಡುತ್ತಾ ಅದು 'ಗುಳೆ ಜಿಲ್ಲೆ' ಎನ್ನಿಸಿಕೊಂಡುಬಿಟ್ಟಿದೆ. ಯತ್ನಾಳರನ್ನು ಆಯ್ಕೆ ಮಾಡಿದ 'ಮತದಾರ ಪ್ರಭುಗಳು' ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಕೆಲಸ ಅರಸುತ್ತಾ ಗೋವಾ, ಮಹಾರಾಷ್ಟ್ರದ ಕಡೆಗೆ ಗುಳೆ ಹೋಗುವುದು ದಿನೇದಿನೇ ಹೆಚ್ಚುತ್ತಿದೆ. ಅದೇ ವಿಜಯಪುರದಲ್ಲಿ ಒಂದು ದೊಡ್ಡದಾದ ಕೈಗಾರಿಕಾ ಪ್ರದೇಶವಿದೆ. ಆದರೆ, ಆ ಕೈಗಾರಿಕಾ ಪ್ರದೇಶವು ವಿದ್ಯುತ್ ಮತ್ತಿತರ ಮೂಲಸೌಲಭ್ಯಗಳಿಲ್ಲದೆ ನೊಣ ಹೊಡೆಯುತ್ತಿದೆ. ಇಂತಹ ಕಡೆ ಶಾಸಕನಾದವನು ಮಾತಾಡಲೂ ಪುರುಸೊತ್ತಿಲ್ಲದವನಂತೆ ಆ ಕೈಗಾರಿಕಾ ಕ್ಷೇತ್ರಕ್ಕೆ ವಿದ್ಯುತ್ ಮತ್ತಿತರ ಸೌಲಭ್ಯ ಕಲ್ಪಿಸಲು ಕಾರ್ಯಪ್ರವೃತ್ತನಾಗಿರಬೇಕಿತ್ತು. ಆದರೇನಾಗಿದೆ? ಜನಪ್ರತಿನಿಧಿಗಳು ಹೊಣೆಗೇಡಿಯಾಗಿದ್ದಾರೆ. ಜನಪ್ರತಿನಿಧಿಗಳನ್ನು ಎಚ್ಚರಿಸಬೇಕಿರುವ ಜನರು ಅವಜ್ಞೆಗೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವ ಪಕ್ಷದಲ್ಲೇ ಇರಲಿ ತಮ್ಮಂಥವರಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ತಪ್ಪಲ್ಲ ಎಂದುಕೊಂಡಿದ್ದೇನೆ.

ತುಂಬಾ ಹೆಚ್ಚಾಗಿ ಬರೆದುಬಿಟ್ಟೆ. ಕೊಳೆತ ಹಣ್ಣುಗಳ ಜೊತೆ ಒಳ್ಳೆಯ ಹಣ್ಣುಗಳು ಸೇರಿಕೊಂಡಾಗ ಅವೂ ಕೆಡಬಹುದೇ? ನಿಮ್ಮ ಹೇಳಿಕೆ ನೋಡಿದಾಗ ಈ ಪ್ರಶ್ನೆ ನನ್ನೊಳಗೆ ಸುಳಿದಾಡಿತು. ಅದಕ್ಕಾಗಿ ಈ ಪತ್ರ. ಕ್ಷಮೆ ಇರಲಿ.

-ನಿಮ್ಮ ವಿಶ್ವಾಸಿ

ದೇವನೂರ ಮಹಾದೇವ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X