Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಇದು ಖಾದಿಗೆ ಮಾಡಿದ ಅವಮಾನವಲ್ಲವೇ?

ಇದು ಖಾದಿಗೆ ಮಾಡಿದ ಅವಮಾನವಲ್ಲವೇ?

-ಮಂಜುನಾಥ ಬಿ.ಆರ್., ಮೈಸೂರು-ಮಂಜುನಾಥ ಬಿ.ಆರ್., ಮೈಸೂರು5 Aug 2022 12:06 AM IST
share
ಇದು ಖಾದಿಗೆ ಮಾಡಿದ ಅವಮಾನವಲ್ಲವೇ?

75ನೇ ಸ್ವಾತಂತ್ರ್ಯೋತ್ಸವದ ಆಚರಣೆಯ ಸನ್ನದಿನಲ್ಲಿ ಖಾದಿ ಗ್ರಾಮೋದ್ಯೋಗಕ್ಕೆ ಕೇಂದ್ರ ಸರಕಾರ ದೊಡ್ಡ ಹೊಡೆತವನ್ನೇ ನೀಡಿದೆ. ಎಲ್ಲಾ ಕ್ಷೇತ್ರಗಳಲ್ಲೂ, ಎಲ್ಲಾ ಉತ್ಪನ್ನಗಳಲ್ಲೂ ದೇಶಿ ಮತ್ತು ವಿದೇಶಿ ಬಂಡವಾಳಶಾಹಿಗಳ ಆಶೋತ್ತರಗಳಿಗೆ ಮಣೆಹಾಕುತ್ತಿರುವ ಕೇಂದ್ರ ಸರಕಾರ ಇದೀಗ ತ್ರಿವರ್ಣ ಧ್ವಜದ ಉತ್ಪಾದನೆಯಲ್ಲೂ ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಟ್ಟಿದೆ. ಭಾರತದ ಧ್ವಜ ಸಂಹಿತೆ 2002 ಮತ್ತು 1971ರ ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯ್ದೆಯನ್ನು ಜುಲೈ 20, 2022ರ ಆದೇಶದ ಮೂಲಕ ಹೊಸದಾಗಿ ತಿದ್ದುಪಡಿ ಮಾಡಲಾಗಿದೆ. ಈ ಹಿಂದೆ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ತ್ರಿವರ್ಣ ಧ್ವಜವನ್ನು ಹಾರಿಸಲು ಸಮ್ಮತಿಸಲಾಗಿತ್ತು. ಆದರೆ ಈಗ ಧ್ವಜವನ್ನು ತೆರೆದ ಸ್ಥಳಗಳಲ್ಲಿ, ‘ಹರ್ ಘರ್ ತಿರಂಗ’ ಅಭಿಯಾನದೊಂದಿಗೆ ಆಗಸ್ಟ್ 13ರಿಂದ 15ರವರೆಗೆ ದೇಶದ ಪ್ರತೀ ಮನೆಯ ಮೇಲೂ ಹಗಲು-ರಾತ್ರಿ ಪೂರ್ತಿ ಧ್ವಜ ಹಾರಿಸುವ ಬದಲಾವಣೆಯನ್ನು ಮಾಡಲಾಗಿದೆ. ಈ ಮೊದಲು ಯಂತ್ರದಿಂದ ಧ್ವಜ ತಯಾರಿಸುವುದನ್ನು ಮತ್ತು ಧ್ವಜ ತಯಾರಿಕೆಯಲ್ಲಿ ಪಾಲಿಸ್ಟರ್ ಬಳಕೆಯನ್ನು ನಿಷೇಧಿಸಲಾಗಿತ್ತು. ಆದರೆ ಈಗ ಪಾಲಿಸ್ಟರ್ ಉತ್ಪನ್ನಕ್ಕೆ ಮತ್ತು ಯಂತ್ರಗಳಿಂದ ತಯಾರಿಸಿದ ಧ್ವಜಗಳಿಗೆ ಮಾನ್ಯತೆ ನೀಡಲಾಗಿದೆ.

ಧ್ವಜ ಸಂಹಿತೆಗೆ ಹೊಸದಾಗಿ ತಂದಿರುವ ತಿದ್ದುಪಡಿ ಉದ್ದೇಶ ಇದೀಗ ಎಲ್ಲರಿಗೂ ಅರ್ಥವಾಗಬೇಕಿದೆ. ಎಲ್ಲವನ್ನೂ ತನ್ನ ಸ್ವಂತ ಲಾಭಕ್ಕಿಟ್ಟು ನೋಡುತ್ತಿರುವ ಕೇಂದ್ರ ಸರಕಾರದ ಮನಸ್ಥಿತಿಯು ವ್ಯಾವಹಾರಿಕ ಕುತಂತ್ರತನ ಇದು. ಈ ದೃಷ್ಟಿ ಗಾಂಧಿ ಕನಸಿನ ಕೂಸಾದ ಗ್ರಾಮಸ್ವರಾಜ್ಯ ಮತ್ತು ಗುಡಿ ಕೈಗಾರಿಕೆಗಳಿಗೆ ಉತ್ತೇಜನ ಹಾಗೂ ದೇಶಿ ಉತ್ಪನ್ನದ ಬಳಕೆಗೆ ವಿರುದ್ಧ ನಿಲುವಾಗಿದೆ. ದೇಶದಲ್ಲಿ ರಾಷ್ಟ್ರಧ್ವಜ ಸಿದ್ಧಪಡಿಸುವ ಏಕೈಕ ಸಂಸ್ಥೆ ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯಾಗಿದೆ. ಮಾನ್ಯತೆ ಪಡೆದ ದೇಶದ ಏಕೈಕ ರಾಷ್ಟ್ರಧ್ವಜ ತಯಾರಿಕಾ ಸಂಸ್ಥೆ ಇದಾಗಿದ್ದು ಕರ್ನಾಟಕದಲ್ಲಿರುವುದು ಕನ್ನಡಿಗರ ಹೆಮ್ಮೆಯ ಸಂಗತಿ. ಹೀಗಿರುವಾಗ ಕೇಂದ್ರ ಸರಕಾರ ಈ ಬಾರಿ ಯಾರು ಬೇಕಾದರೂ, ಯಾವ ಬಟ್ಟೆಯಲ್ಲಿ ಬೇಕಾದರೂ ರಾಷ್ಟ್ರ ಧ್ವಜವನ್ನು ಸಿದ್ಧಗೊಳಿಸಬಹುದು ಎಂದು ಕಾನೂನು ತಿದ್ದುಪಡಿ ಮಾಡಿರುವುದು ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಬೆಳವಣಿಗೆಯನ್ನು ನಾಶಪಡಿಸಿದೆ. 75ರ ಸಂಭ್ರಮಕ್ಕೆ ದೇಶವೇ ಸಂತೋಷ ಮತ್ತು ಕೂತೂಹಲದಲ್ಲಿ ಇರುವಾಗಲೇ ಧ್ವಜ ತಯಾರಿಕಾ ಘಟಕಕ್ಕೆ ಸಿಡಿಲು ಬಡಿದಂತಾಗಿದ್ದು; ಸರಕಾರದ ಈ ನಿರ್ಧಾರದಿಂದ ಖಾದಿ ಗ್ರಾಮೋದ್ಯೋಗ ಸಂಸ್ಥೆಯು ಅಕ್ಷರಶಃ ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಲಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ಒದಗಿಸಿದ್ದ ಗ್ರಾಮೋದ್ಯೋಗ ಸಂಸ್ಥೆ ಇದೀಗ ಮುಚ್ಚುವ ಆತಂಕ ಎದುರಿಸುತ್ತಿದೆ. ಇದರೊಂದಿಗೆ ಸಾವಿರಾರು ಜನರು ನಿರುದ್ಯೋಗಿಗಳಾಗುವ ಭಯದಲ್ಲಿದ್ದಾರೆ.

ಸರಕಾರದ ಮಾತು ನಂಬಿ ನಾವು ಧ್ವಜ ತಯಾರಿಸಿದ್ದೇವೆ. ಪ್ರತಿ ವರ್ಷ ಜುಲೈ ತಿಂಗಳಲ್ಲಿ 70 ರಿಂದ 80 ಲಕ್ಷ ರೂಪಾಯಿ ಧ್ವಜ ಮಾರಾಟ ಮಾಡುತ್ತಿದ್ದೆವು. ಆದರೆ ಈ ವರ್ಷ ಕೇವಲ 12 ಲಕ್ಷ ರೂಪಾಯಿ ಧ್ವಜ ಮಾರಾಟವಾಗಿದೆ. ಆದರೆ ಕೋಟ್ಯಂತರ ರೂಪಾಯಿ ಮೌಲ್ಯದ ಧ್ವಜಗಳ ಸಂಗ್ರಹ ಇದ್ದಲ್ಲಿಯೇ ಇದೆ. ಅವುಗಳ ಮಾರಾಟ ಹೇಗೆಂಬುದು ತೋಚದಂತಾಗಿದೆ ಎಂದು ಬೆಂಗೇರಿ ಖಾದಿ ಸಂಸ್ಥೆಯು ಸುದ್ದಿ ಮಾಧ್ಯಮವೊಂದರಲ್ಲಿ ತಮ್ಮ ದುಸ್ಥಿತಿಯನ್ನು ವ್ಯಕ್ತಪಡಿಸಿರುವುದು ವಿಷಾದನೀಯ. ಭಾರತ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಬ್ರಿಟಿಷರನ್ನು ಭಾರತದಿಂದ ಬಹಿಷ್ಕಾರ ಹಾಕಲು ಬಳಸಿದ ಮಹಾತಂತ್ರಗಳಲ್ಲಿ ಖಾದಿ ಉದ್ಯಮ ಅಥವಾ ಸ್ವದೇಶಿ ಉತ್ಪನ್ನದ ಬಳಕೆ ಮಹತ್ವದ್ದು. ಆದರೆ ಇದೀಗ ವಿದೇಶಿ ಉತ್ಪನ್ನಗಳಿಗೆ ಮಣೆಹಾಕಿ ಖಾದಿ ಉದ್ಯಮವನ್ನು ನಿರ್ಲಕ್ಷಿಸಿ ಅದೇ ವಿದೇಶಿಗರನ್ನು ವ್ಯಾಪಾರದ ದೃಷ್ಟಿಯಿಂದ ಭಾರತಕ್ಕೆ ಮರಳಿ ಕರೆತರುತ್ತಿರುವ ಉದ್ದೇಶ ‘ಆಝಾದಿ ಕಾ ಅಮೃತ ಮಹೋತ್ಸವ’ದ ವೇಳೆಯಲ್ಲಿ ಪ್ರಮಾದವಾಗಿ ಜರುಗುತ್ತಿದೆ. ಈ ಪಾಲಿಸ್ಟರ್ ಬಟ್ಟೆಯಲ್ಲಿ ತ್ರಿವರ್ಣ ಧ್ವಜ ತಯಾರಿಸಲು ಮತ್ತು ಧ್ವಜ ತಯಾರಿಕೆಯಲ್ಲಿ ಯಂತ್ರಗಳ ಬಳಕೆಗೆ ಕೇಂದ್ರ ಸರಕಾರ ಮೇಕ್ ಇನ್ ಚೈನಾ ಕಂಪೆನಿಗಳಿಗೆ ಅವಕಾಶ ಮಾಡಿ ಕೊಡಲು ಹೊರಟಿರುವುದು ರಾಷ್ಟ್ರೀಯ ಗೌರವಕ್ಕೆ ಸಂಪೂರ್ಣ ವಿರುದ್ಧವಾಗಿದೆ. ನಮ್ಮ ರಾಷ್ಟ್ರ ಧ್ವಜವನ್ನು ನಮ್ಮ ದೇಶದಲ್ಲಿ ಉತ್ಪಾದಿಸದೇ ಬೇರೆಲ್ಲೋ ಉತ್ಪಾದಿಸುತ್ತಿರುವುದು ನಮ್ಮನ್ನು ಹೆತ್ತ ತಂದೆ-ತಾಯಿಗಳನ್ನು ಎಲ್ಲೋ ಅನಾಥ ಆಶ್ರಮದಲ್ಲಿಟ್ಟು ನೋಡಿಕೊಂಡಂತಾಗುತ್ತದೆ. ಇದರಿಂದ ತ್ರಿವರ್ಣ ಧ್ವಜಕ್ಕೆ ಈ ಬಾರಿ 75ನೇ ಸ್ವಾತಂತ್ರ್ಯೋತ್ಸವದ ಮಹಾ ಸುಗಳಿಗೆಯಲ್ಲಿ ಆಗುತ್ತಿರುವ ಭಾರೀ ಅವಮಾನ ಎಂದೇ ಪರಿಗಣಿಸಬಹುದು.
 

share
-ಮಂಜುನಾಥ ಬಿ.ಆರ್., ಮೈಸೂರು
-ಮಂಜುನಾಥ ಬಿ.ಆರ್., ಮೈಸೂರು
Next Story
X