Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಕ್ಷರ ಮಾತೆಯ ಶಿಕ್ಷಣಕ್ರಾಂತಿ ಮತ್ತು...

ಅಕ್ಷರ ಮಾತೆಯ ಶಿಕ್ಷಣಕ್ರಾಂತಿ ಮತ್ತು ಸಮಕಾಲೀನ ಚಿಂತನೆ

ಆರತಿ ಎಂ.ಎಸ್.ಆರತಿ ಎಂ.ಎಸ್.4 Jan 2023 10:18 AM IST
share
ಅಕ್ಷರ ಮಾತೆಯ ಶಿಕ್ಷಣಕ್ರಾಂತಿ ಮತ್ತು ಸಮಕಾಲೀನ ಚಿಂತನೆ

ಅಕ್ಷರದವ್ವ, ದೇಶದ ಮೊದಲ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ ಮಹಾರಾಷ್ಟ್ರದ ಸತಾರದಲ್ಲಿ ಜನವರಿ 3, 1831ರಂದು ಜನಿಸಿದವರು. ಸ್ವಾತಂತ್ರ್ಯ ಪೂರ್ವದ ಕಾಲಘಟ್ಟದಲ್ಲಿ ಸ್ಥಾಪಿತ ಪರಂಪರೆಯನ್ನು ಮುರಿದು ದಮನಿತ ಹೆಣ್ಣುಮಕ್ಕಳ ಬಾಳಿಗೆ ಕ್ರಾಂತಿ ಜ್ಯೋತಿಯಾಗಿ ಬಂದವರು ಸಾವಿತ್ರಿಬಾಯಿ ಫುಲೆ. ಅಸಮಾನ ವ್ಯವಸ್ಥೆಯ ಸಂಪೂರ್ಣ ಅರಿವನ್ನು ತಮ್ಮೆಳಗೆ ಇರಿಸಿಕೊಂಡು, ನಂಬಿಕೆ, ಜೀವನ ಕ್ರಮ ಇವೆಲ್ಲವನ್ನು ನಿರ್ವಹಿಸುತ್ತಿದ್ದ ಕ್ರೂರವಾದ ಮನಸ್ಥಿತಿಯನ್ನು ಪ್ರಶ್ನಿಸುತ್ತಾ, ಅಂತಹ ಮೌಢ್ಯತೆಯ ವಿರುದ್ಧ ಹೆಜ್ಜೆ ಹೆಜ್ಜೆಗೂ ಹೋರಾಟ ಮಾಡುತ್ತಾ ನಮ್ಮ ಬದುಕು ನಮ್ಮ ಹಕ್ಕು ಎಂದು ಸಾರುತ್ತಾ ಸಮಾಜವನ್ನು ಎಚ್ಚರಿಸುವ ಮಾನವೀಯ ಕಾರ್ಯವನ್ನು ಮಾಡಿದಂತಹ ಆದರ್ಶ ಮಹಿಳೆ ಸಾವಿತ್ರಿ ಬಾಯಿಯವರು. ಅವರ ಬದುಕು, ಚಿಂತನೆಗಳು ನಮ್ಮ ಸಮಾಜಕ್ಕೆ ಸಾರ್ವಕಾಲಿಕ ಆದರ್ಶವಾಗಿ ನಿಲ್ಲುವಂತಹದ್ದು.

ಅವರು ಅಸಮಾನ ಸಮಾಜದ ಸಂಕೋಲೆಗಳಿಂದ ವಿಮೋಚನೆಯನ್ನು ಹೊಂದಲು ಶಿಕ್ಷಣ ಒಂದೇ ಮಹತ್ವದ ಸಾಧನ ಎಂದು ಅರಿತುಕೊಂಡು ತನ್ನ ಪತಿ ಜ್ಯೋತಿಬಾ ಫುಲೆ ಅವರನ್ನು ಗುರುವಾಗಿ ಸ್ವೀಕರಿಸಿ ಶಿಕ್ಷಣ ಪಡೆದು ಸಾಮಾಜಿಕ ಅನ್ಯಾಯ, ಅಸಮಾನತೆಯನ್ನು ಜೀವನದುದ್ದಕ್ಕೂ ವಿರೋಧಿಸುತ್ತಾ ಸಾಗಿದರು. ಶಿಕ್ಷಣದ ಅವಕಾಶಕ್ಕಾಗಿ ಮತ್ತು ಸ್ತ್ರೀ ವಿಮೋಚನೆಗಾಗಿ ತಮ್ಮ ವಿಚಾರಧಾರೆಗಳನ್ನು ಇಡೀ ದೇಶಕ್ಕೆ ಮಾದರಿಯಾಗುವಂತೆ ಪಸರಿಸಿದವರು ಅಕ್ಷರದ ಮಾತೆ ಸಾವಿತ್ರಿಬಾಯಿ ಫುಲೆ ಎಂದರೆ ಅತಿಶಯೋಕ್ತಿಯಾಗಲಾರದು. ಇವರ ಹೋರಾಟದ ಬದುಕು ಮತ್ತು ಚಿಂತನಾದರ್ಶಗಳನ್ನು ಆಧುನಿಕ ಕಾಲಘಟ್ಟದ ಯುವಸಮುದಾಯ ಮಾರ್ಗದರ್ಶಿಯನ್ನಾಗಿಸಬೇಕಾಗಿದೆ.

ನಮ್ಮ ಸಮಾಜದಲ್ಲಿ ಶಿಕ್ಷಣ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿದ್ದ ಸಮಯದಲ್ಲಿ, ಅದರಲ್ಲೂ ಮಹಿಳಾ ಶಿಕ್ಷಣದೆಡೆಗೆ ಗಮನಿಸಿದಾಗ ಅದು ಸುಲಭದ ಮಾತಾಗಿರಲಿಲ್ಲ. ಹೆಣ್ಣು ಮಕ್ಕಳ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಹೊಸ ಕ್ರಾಂತಿಗೆ ಅನುವುಮಾಡಿದಾಗ ಸಾವಿತ್ರಿ ಬಾಯಿಯವರಿಗೆ ಪ್ರತಿರೋಧಗಳೇ ಎದುರಾದವು. ಅವೆಲ್ಲವನ್ನು ಸವಾಲಾಗಿ ಸ್ವೀಕರಿಸಿ ಹೆಣ್ಣು ಮಕ್ಕಳ ಶಿಕ್ಷಣದ ಸುಧಾರಣೆಗಾಗಿ ತಮ್ಮನ್ನು ಅರ್ಪಿಸಿಕೊಂಡರು.

ಕಾಲ ಸರಿದಂತೆ ವ್ಯವಸ್ಥೆಗಳು ಬದಲಾಗಿ, ಇಂದು ಸಂವಿಧಾನ ಶಿಕ್ಷಣದ ಹಕ್ಕುಗಳನ್ನು ಕೊಟ್ಟಿದೆ. ಅದರಂತೆ ಹಿಂದೆ ಮಹಿಳೆಯರಿಗೆ ನಿರಾಕರಿಸಲ್ಪಟ್ಟ ಶಿಕ್ಷಣದ ಹಕ್ಕು ದೊರೆತಿದೆ. ಶಿಕ್ಷಣವನ್ನು ಪಡೆದ ಪ್ರತಿಯೊಬ್ಬ ಮಹಿಳೆಯೂ ಇಂದು ವೈಯಕ್ತಿಕವಾಗಿ, ಬೌದ್ಧಿಕ ಹಾಗೂ ವೈಚಾರಿಕವಾಗಿ ವಿಕಾಸವನ್ನು ಹೊಂದುತ್ತಿದ್ದಾಳೆ. ಆದರೆ ಆಧುನಿಕ ಭಾರತೀಯ ಸಮಾಜದಲ್ಲಿ ಇಂದಿಗೂ ಅಸಂಖ್ಯಾತ ಹೆಣ್ಣು ಮಕ್ಕಳು ಈ ಅವಕಾಶದಿಂದ ವಂಚಿತರಾಗಿದ್ದಾರೆ. ರೂಢಿಗತ ನಂಬಿಕೆ, ಪುರುಷಪ್ರಧಾನ ಕಟ್ಟುಪಾಡುಗಳ ಒತ್ತಾಯದ ಅನುಸರಣೆಯಿಂದಾಗಿ ಅವರ ಸಾಮಾಜಿಕ ಬದುಕಿನ ಮೇಲೆ ಪರಿಣಾಮ ಬೀರುತ್ತಿರುವುದು ವಿಷಾದವೇ ಸರಿ.

ಸಾವಿತ್ರಿಬಾಯಿ ಫುಲೆ ಅವರ ಸಾಮಾಜಿಕ ಬದುಕಿನನುಭವವು ಶಿಕ್ಷಣದ ಮೌಲ್ಯವನ್ನು ಅರಿಯುವಂತೆ ಮಾಡಿ ಆ ಮೂಲಕ ಪರಿವರ್ತನೆಯ ಹಾದಿಯನ್ನು ಸಮಾಜಕ್ಕೆ ತೋರುವಂತೆ ಮಾಡಿದೆ. ಅವರ ಪ್ರಕಾರ ಶಿಕ್ಷಣ ಎಂಬುದು ಕೇವಲ ಅಕ್ಷರ ಮಾತ್ರ ಅಲ್ಲ, ಸಾಮಾಜಿಕ, ಸಾಂಸ್ಕೃತಿಕ ಬದಲಾವಣೆಯ ಜೊತೆಗೆ ದಮನಿಸಲ್ಪಟ್ಟ ಮನಸ್ಸುಗಳಿಗೆ ಹೊಸ ಚಿಂತನೆಗಳನ್ನು ನೀಡುವ ಶಕ್ತಿಯೂ ಹೌದು ಎಂದು ಅಭಿಪ್ರಾಯಿಸುವ ಅವರು ಪ್ರಪಂಚವನ್ನು ತೆರೆದ ಕಣ್ಣಿನಿಂದ ನೋಡುವ ಸಾಮರ್ಥ್ಯವನ್ನು ಶಿಕ್ಷಣದಿಂದ ಕಂಡುಕೊಂಡರು. ಅಸಮಾನ ಸಾಮಾಜಿಕ ವ್ಯವಸ್ಥೆಯಲ್ಲಿ ಅನೇಕ ಪ್ರತಿರೋಧಗಳ ನಡುವೆಯೂ ಶಿಕ್ಷಣದ ಆಂದೋಲನವನ್ನು ಪ್ರಾರಂಭಿಸುತ್ತಾರೆ.

1847ರಲ್ಲಿ ಪುಣೆಯಲ್ಲಿ ಪತಿ ಜ್ಯೋತಿಬಾ ಫುಲೆ ಅವರ ನೆರವಿನಿಂದ ಶಿಕ್ಷಣ ತರಬೇತಿಯನ್ನು ಪಡೆದು ಶಿಕ್ಷಕ ವೃತ್ತಿಯನ್ನು ಶುರು ಮಾಡಿದರು. ಜಾತಿ ಕಟ್ಟುಪಾಡುಗಳ ನಿರ್ಬಂಧದ ನಡುವೆಯೂ ಫುಲೆ ದಂಪತಿ ಶಾಲೆಯನ್ನು ಆರಂಭಿಸಿ 9ಜನ ವಿದ್ಯಾರ್ಥಿನಿಯರನ್ನು ದಾಖಲಿಸಿಕೊಂಡು ಶಿಕ್ಷಣವನ್ನು ನೀಡುತ್ತಾರೆ. ಸಾವಿತ್ರಿಬಾಯಿ ಫುಲೆ ಅವರು ಹೆಣ್ಣುಮಕ್ಕಳನ್ನು ಶಾಲೆಗೆ ಕಳಿಸುವಂತೆ ಪ್ರೇರೇಪಿಸುತ್ತಾ ಶಿಕ್ಷಕಿಯಾಗಿ ಅವಿರತ ಶ್ರಮಿಸುವುದನ್ನು ನೋಡಿ ಬ್ರಿಟಿಷ್ ಸರಕಾರವು ಗೌರವಿಸುತ್ತದೆ. ಇವರ ಅಕ್ಷರ ಕ್ರಾಂತಿಯಿಂದಾಗಿ ಮಹಿಳಾ ಸಮಾಜವು ಸಬಲೀಕರಣಹೊಂದಲು ಸಾಧ್ಯವಾಯಿತು. ಅಂದು ಸಾವಿತ್ರಿಬಾಯಿ ಫುಲೆ ಅವರು ಸಾಮಾಜಿಕ ಸಂಕೋಲೆಗಳಿಂದ ಮುಕ್ತಿಯನ್ನು ಹೊಂದಲು ಶಿಕ್ಷಣ ಮಾರ್ಗವನ್ನು ತೋರಿಸಿಕೊಟ್ಟರು. ಆದರೆ ಇಂದು ಆಧುನಿಕ ಶಿಕ್ಷಣ ಪಡೆಯುತ್ತಿದ್ದರೂ ಸಾಮಾಜಿಕ ಸಂಕೋಲೆಗಳಿಂದ ವಿಮೋಚನೆಯನ್ನು ಹೊಂದಲು ಅಸಾಧ್ಯವಾಗಿರುವುದು ಬಹುದೊಡ್ಡ ವಿಪರ್ಯಾಸ.

ಇಂದು ಸಮಾಜದ ಮುಖ್ಯವಾಹಿನಿಯಲ್ಲಿ ಮಹಿಳೆ ತೊಡಗಿರುವ ರೀತಿ ಗಮನಿಸಿದರೆ ತೃಪ್ತಿ ಎನಿಸುವಷ್ಟು ಬದಲಾವಣೆ ಆಗಿದೆಯಾದರೂ, ಅವರ ವ್ಯಕ್ತಿತ್ವವು ಗುಣಾತ್ಮಕವಾಗಿ ರೂಪುಗೊಳ್ಳಲು ಅನೇಕ ಸಾಮಾಜಿಕ ನಿರ್ಬಂಧಗಳು ಕಾರಣವಾಗುತ್ತಿವೆ. ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆ ತೊಡಗಿಸಿಕೊಂಡಿರುವ ರೀತಿಯನ್ನು ಗಮನಿಸಿದರೆ, ಆಕೆಯ ಮೇಲೆ ಬೌದ್ಧಿಕವಾಗಿ ಹಾಗೂ ಭೌತಿಕವಾಗಿ ದೌರ್ಜನ್ಯಗಳು ಇಂದಿಗೂ ನಡೆಯುತ್ತಲೇ ಇವೆ. ಎಳೆಯ ಮಗುವಿನಿಂದ ಆರಂಭಿಸಿ ವೃದ್ಧರವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಹಿಂಸೆಗೆ ದೂಡಲಾಗುತ್ತಿದೆ.

ಇದಕ್ಕೆಲ್ಲಾ ಕಾರಣವನ್ನು ಹುಡುಕುತ್ತಾ ಹೋದರೆ 21ನೇ ಶತಮಾನದಲ್ಲಿ ಬದುಕುತ್ತಿರುವ ನಾವು ಶಿಕ್ಷಣದ ಮೌಲ್ಯವನ್ನು ಅರಿಯುವಲ್ಲಿ ಸೋಲುತ್ತಿದ್ದೇವೆ ಎಂಬಂತೆ ಭಾಸವಾಗುತ್ತಿದೆ. ಯಾವುದೇ ಕ್ಷೇತ್ರದಲ್ಲಾಗಲಿ ಏಕಸಾಮ್ಯತೆಯು ಬೇರೂರಿದಷ್ಟೂ ಬಹುತ್ವ ಮೌಲ್ಯಗಳು ನಿರಾಕರಿಸಲ್ಪಡುತ್ತದೆ. ಇದಕ್ಕೆ ಶಿಕ್ಷಣ ಕ್ಷೇತ್ರವೂ ಹೊರತಲ್ಲ. ಇಂದು ನಾವೆಲ್ಲ ಪಡೆಯುತ್ತಿರುವ ಶಿಕ್ಷಣದ ಮೌಲ್ಯವನ್ನು ಪ್ರತಿಯೊಬ್ಬ ಭಾರತೀಯನೂ ಅರಿಯಬೇಕಾಗಿದೆ. ಅಂದು ನಡೆಸಿರುವ ಸಾವಿತ್ರಿಬಾಯಿ ಫುಲೆ ಅವರ ಅಕ್ಷರಕ್ರಾಂತಿಯು ಇಂದು ಅಂಬೇಡ್ಕರ್ ಅವರು ರೂಪಿಸಿರುವ ಭಾರತೀಯ ಸಂವಿಧಾನದಲ್ಲಿ ಪ್ರಮುಖ ಹಕ್ಕು ಆಗಿ ರೂಪುತಳೆಯಿತು. ನಮ್ಮ ಶೈಕ್ಷಣಿಕ ಹಕ್ಕುಗಳನ್ನು ಪಡೆದುಕೊಂಡು ಬಹುತ್ವದ ಮೌಲ್ಯಗಳನ್ನು ಉಳಿಸುತ್ತಾ ಪ್ರಬುದ್ಧ ಭಾರತವನ್ನು ಮುನ್ನಡೆಸುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಬೇಕಾಗಿದೆ.

share
ಆರತಿ ಎಂ.ಎಸ್.
ಆರತಿ ಎಂ.ಎಸ್.
Next Story
X