Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬುಲ್ಡೋಜರ್ ಭೀತಿಯಲ್ಲಿ ಹಲ್ದ್ವಾನಿಯ ...

ಬುಲ್ಡೋಜರ್ ಭೀತಿಯಲ್ಲಿ ಹಲ್ದ್ವಾನಿಯ ಸಾವಿರಾರು ಕುಟುಂಬಗಳು

ವಿನಯ್ ಕೆ.ವಿನಯ್ ಕೆ.5 Jan 2023 9:58 AM IST
share
ಬುಲ್ಡೋಜರ್ ಭೀತಿಯಲ್ಲಿ ಹಲ್ದ್ವಾನಿಯ  ಸಾವಿರಾರು ಕುಟುಂಬಗಳು

ಈ ಜನರು ಇಲ್ಲಿ ಇಂದು ನಿನ್ನೆ ಬಂದು ನೆಲೆಸಿದವರಲ್ಲ. ಏಳು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ನೆಲೆಸಿರುವ ಇಷ್ಟು ಕುಟುಂಬಗಳನ್ನು ಹೀಗೆ ದಿಢೀರನೇ ಒಕ್ಕಲೆಬ್ಬಿಸುವ ಕುರಿತು ಹಲವು ಜನಪರ ಸಂಘಟನೆಗಳು ತೀವ್ರ ಕಳವಳ ವ್ಯಕ್ತಪಡಿಸಿವೆ.

ಉತ್ತರಾಖಂಡ ರಾಜ್ಯದಲ್ಲಿ ಮುಸ್ಲಿಮ್ ಜನಸಂಖ್ಯೆ ಹೆಚ್ಚಿರುವ ಗಫೂರ್ ಬಸ್ತಿಯ ಹಲ್ದ್ವಾನಿಯಲ್ಲಿನ 4,000ಕ್ಕೂ ಹೆಚ್ಚು ಕುಟುಂಬಗಳ ಬದುಕು ಅಂಧಕಾರದಲ್ಲಿದೆ. ನಿರಾಶ್ರಿತರಾಗಿ ಬೀದಿಗೆ ಬೀಳುವ ಆತಂಕದಲ್ಲಿ ಆ ಕುಟುಂಬಗಳಿವೆ. ಸಾವಿರಾರು ಜನರು ತಮ್ಮ ಮನೆಗಳ ರಕ್ಷಣೆಗಾಗಿ ಬೀದಿಗಿಳಿದಿದ್ದಾರೆ.

ಕಳೆದ ವಾರ ಹಲ್ದ್ವಾನಿಯ ಬನ್‌ಭೂಲ್‌ಪುರದಲ್ಲಿ ಅತಿಕ್ರಮಣಗೊಂಡಿರುವ ರೈಲ್ವೇ ಭೂಮಿ ಮೇಲಿನ ನಿರ್ಮಾಣಗಳನ್ನು ಕೆಡವಲು ಉತ್ತರಾಖಂಡ ಹೈಕೋರ್ಟ್ ಆದೇಶ ನೀಡಿತ್ತು. ನ್ಯಾಯಾಧೀಶರಾದ ಶರದ್ ಶರ್ಮಾ ಮತ್ತು ಆರ್‌ಸಿ ಖುಲ್ಬೆ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಅಲ್ಲಿನ ನಿವಾಸಿಗಳಿಗೆ ಒಂದು ವಾರದ ನೋಟಿಸ್ ನೀಡಿ ನಂತರ ನಿರ್ಮಾಣಗಳನ್ನು ನೆಲಸಮಗೊಳಿಸಬೇಕು ಎಂದು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಿದೆ. ನಿವಾಸಿಗಳು ಮನೆ ತೆರವು ಮಾಡದಿದ್ದರೆ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವಂತೆಯೂ ನ್ಯಾಯಾಲಯ ಆದೇಶಿಸಿದೆ. ಅಂಥವರಿಂದ ವೆಚ್ಚವನ್ನು ವಸೂಲಿ ಮಾಡಬೇಕು ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ.

ಬನ್‌ಭೂಲ್‌ಪುರದಲ್ಲಿ 29 ಎಕರೆ ರೈಲ್ವೆ ಭೂಮಿಯಲ್ಲಿ ಹರಡಿರುವ ಈ ಪ್ರದೇಶದಲ್ಲಿ ದೇವಸ್ಥಾನ, ಮಸೀದಿಗಳು, ಶಾಲೆಗಳು, ವ್ಯಾಪಾರ ಸಂಸ್ಥೆಗಳು ಮತ್ತು ನಿವಾಸಗಳಿವೆ. ಹೈಕೋರ್ಟ್‌ನ ಈ ಆದೇಶವು ಬಹುತೇಕ 4,300ಕ್ಕೂ ಅಧಿಕ ಮುಸ್ಲಿಮ್ ಕುಟುಂಬಗಳ ಮೇಲೆ ಪರಿಣಾಮ ಬೀರಲಿದೆ. ಈ ಪ್ರದೇಶದಲ್ಲಿ ಬಹುಸಂಖ್ಯಾತರು ಇದ್ದಾರಾದರೂ ಅಲ್ಪಸಂಖ್ಯಾತ ನಿವಾಸಿಗಳ ಸಂಖ್ಯೆಯೇ ಹೆಚ್ಚು ಇದೆ. ತೆರವಿನಿಂದಾಗಿ ನಿರಾಶ್ರಿತರಾಗುವ, ಶಾಲೆಗೆ ಹೋಗುತ್ತಿರುವ ಮಕ್ಕಳ ಭವಿಷ್ಯಕ್ಕೂ ಕಂಟಕವಾಗುವ ಭಯವನ್ನು ಅವರೆಲ್ಲ ಎದುರಿಸುತ್ತಿದ್ದಾರೆ.

  ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಹಲ್ದ್ವಾನಿಯ ಕಾಂಗ್ರೆಸ್ ಶಾಸಕ ಸುಮಿತ್ ಹೃದಯೇಶ್ ನೇತೃತ್ವದಲ್ಲಿ ಪ್ರದೇಶದ ನಿವಾಸಿಗಳು ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ಜನವರಿ 5ರಂದು ವಿಚಾರಣೆ ನಡೆಸಲಿದೆ.

ಈ ಜನರು ಇಲ್ಲಿ ಇಂದು ನಿನ್ನೆ ಬಂದು ನೆಲೆಸಿದವರಲ್ಲ. ಏಳು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ನೆಲೆಸಿರುವ ಇಷ್ಟು ಕುಟುಂಬಗಳನ್ನು ಹೀಗೆ ದಿಢೀರನೇ ಒಕ್ಕಲೆಬ್ಬಿಸುವ ಕುರಿತು ಹಲವು ಜನಪರ ಸಂಘಟನೆಗಳು ತೀವ್ರ ಕಳವಳ ವ್ಯಕ್ತಪಡಿಸಿವೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಮೀಯತ್ ಉಲಮಾ-ಎ-ಹಿಂದ್ ಮುಖಂಡರು ಕುಟುಂಬಗಳ ಸಹಾಯಕ್ಕೆ ನಿಂತಿದ್ದಾರೆ.

 ಅಸದುದ್ದೀನ್ ಉವೈಸಿ ಅವರ ಪಕ್ಷ ಎಐಎಂಐಎಂನ ಉತ್ತರಾಖಂಡದ ರಾಜ್ಯಾಧ್ಯಕ್ಷ ಡಾ. ನಯ್ಯರ್ ಕಾಝ್ಮಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ಬರೆದ ಪತ್ರದಲ್ಲಿ, ಏಳು ದಶಕಗಳಿಗೂ ಹೆಚ್ಚು ಕಾಲ 4,500ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಮನೆ ತೆರಿಗೆಗಳನ್ನು ಕಟ್ಟಿಕೊಂಡು ಬಂದಿರುವ ಆ ಕುಟುಂಬಗಳಿಗೆ ವಿದ್ಯುತ್ ಸಂಪರ್ಕಗಳು, ಜಲ ಸಂಪರ್ಕಗಳು ಮತ್ತು ಇತರ ವಸತಿ ಸೌಕರ್ಯವನ್ನು ನೀಡಲಾಗಿದೆ. ಅವರನ್ನು ಅಲ್ಲಿಂದ ಬೇರೆ ವ್ಯವಸ್ಥೆ ಮಾಡಿಕೊಡದೆ ಒಕ್ಕಲೆಬ್ಬಿಸಬಾರದು ಎಂದು ಕೇಳಿಕೊಂಡಿದ್ದಾರೆ.

ಜಮಾಅತೆ ಇಸ್ಲಾಮಿ ಹಿಂದ್ ಹೇಳಿಕೆಯ ಪ್ರಕಾರ, ವಿವಾದಿತ ಭೂಮಿ 29 ಎಕರೆ ಮಾತ್ರ. ಆದರೆ 78 ಎಕರೆ ಭೂಮಿಯಲ್ಲಿ ವಾಸಿಸುವ ಜನರಿಗೆ ರೈಲ್ವೆ ತೆರವು ನೋಟಿಸ್ ನೀಡಿದೆ. ಹೈಕೋರ್ಟ್‌ನ ಆದೇಶವು ಈ ಪ್ರದೇಶದಲ್ಲಿ ವಾಸಿಸುವ ಹಲವು ಸಾವಿರ ಮಂದಿಯ ಮೇಲೆ ಪರಿಣಾಮ ಬೀರಲಿದೆ ಎಂಬುದು ಅದರ ವಾದ.

ಪ್ರತಿಭಟನಾನಿರತ ನಿವಾಸಿಗಳಿಗೆ ಬೆಂಬಲವಾಗಿ ವಿರೋಧ ಪಕ್ಷಗಳು ನಿಂತಿವೆ. ಇವರೆಲ್ಲ 70 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಮಸೀದಿ, ದೇವಸ್ಥಾನ, ಓವರ್‌ಹೆಡ್ ನೀರಿನ ಟ್ಯಾಂಕ್, ಪ್ರಾಥಮಿಕ ಆರೋಗ್ಯ ಕೇಂದ್ರ, 1970ರಲ್ಲಿ ಹಾಕಲಾದ ಒಳಚರಂಡಿ ಮಾರ್ಗ, ಎರಡು ಕಾಲೇಜುಗಳು ಮತ್ತು ಪ್ರಾಥಮಿಕ ಶಾಲೆಗಳು ಇವೆ ಎಂದು ಕಾಂಗ್ರೆಸ್ ಹೇಳಿದೆ. ಈ ವಿಷಯದ ಬಗ್ಗೆ ಮಾನವೀಯ ದೃಷ್ಟಿಕೋನದಿಂದ ನಡೆದುಕೊಳ್ಳಬೇಕು. ಇಂತಹ ತೆರವು ನಿಲ್ಲಿಸುವಂತೆ ಪ್ರಧಾನಿ, ರೈಲ್ವೆ ಸಚಿವಾಲಯ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿಯೂ ಪ್ರತಿಪಕ್ಷಗಳು ಹೇಳಿವೆ.

ಆದರೆ, ಹೀಗೆ ನಿರಾಶ್ರಿತರಾಗುವ ಆತಂಕದಲ್ಲೇ ನಿಂತಿರುವ ಸಾವಿರಾರು ಕುಟುಂಬಗಳ ಪಾಲಿಗೆ ದೊರೆಯುವ ಪರ್ಯಾಯ ವ್ಯವಸ್ಥೆಯೇನು? ಅಲ್ಲಿ ಇವರಿಗೆ ಸಿಗಬಹುದಾದ ಮನೆಗಳ ಸ್ಥಿತಿ ಹೇಗಿರುತ್ತದೆ? ನೀರು, ವಿದ್ಯುತ್ ಎಲ್ಲವೂ ದೊರಕುವುದೆ? ಮಕ್ಕಳು ಶಾಲೆಗಳಿಗೆ ಹೋಗುವುದು ಹೇಗೆ? ಇಂತಹ ಹಲವು ಪ್ರಶ್ನೆಗಳು ಎದ್ದಿವೆ. ಕಣ್ಣೆದುರಿಗೆ ಬುಲ್ಡೋಜರಿನ ದೈತ್ಯ ಸ್ವರೂಪವೇ ಕಾಣಿಸುತ್ತ ಅವರನ್ನೆಲ್ಲ ಕಂಗೆಡಿಸುತ್ತಿದೆ. ಭಾರತೀಯ ರೈಲ್ವೆ ಹಾಗೂ ರಕ್ಷಣಾ ಇಲಾಖೆ ಬಿಟ್ಟರೆ ದೇಶದಲ್ಲಿ ಅತಿಹೆಚ್ಚು ಭೂಮಿಯ ಒಡೆತನ ಇರುವುದು ವಕ್ಫ್ ಮಂಡಳಿಗಳ ಕೈಯಲ್ಲಿ. ಆದರೆ ಅದು ಹೆಸರಿಗೆ ಮಾತ್ರ ವಕ್ಫ್ ಕೈಯಲ್ಲಿದೆ.

ಕೋಟಿಗಟ್ಟಲೆ ಬೆಲೆಬಾಳುವ ವಕ್ಫ್ ಭೂಮಿಯಲ್ಲಿ ಚಿಲ್ಲರೆ ಬಾಡಿಗೆ ಕೊಟ್ಟು ದಶಕಗಳಿಂದ ಅದರ ಮೇಲೆ ಹಕ್ಕು ಸಾಧಿಸಿಕೊಂಡು ಬೇರು ಬಿಟ್ಟು ನಿಂತಿರುವ ಅದೆಷ್ಟೋ ವಿಲಾಸಿ ಹೊಟೇಲ್‌ಗಳು, ಕಂಪೆನಿಗಳು, ಇನ್ನಿತರ ಖಾಸಗಿ ಸಂಸ್ಥೆಗಳು ದೇಶಾದ್ಯಂತ ಇವೆ. ಅಲ್ಲೇ ಅವು ಕೋಟಿಗಟ್ಟಲೆ ಆದಾಯವನ್ನೂ ಗಳಿಸುತ್ತಿವೆ. ಆ ಮಹಾ ಅಕ್ರಮವನ್ನು ತಡೆದು ಅವುಗಳನ್ನು ಒಂದಿಷ್ಟೂ ಅಲ್ಲಾಡಿಸಲು ಈವರೆಗೆ ಯಾರಿಗೂ ಆಗಿಲ್ಲ. ಹಾಗೆಯೇ ಸರಕಾರದ ಇತರ ಇಲಾಖೆಗಳ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅದರಿಂದ ಆದಾಯ ಗಳಿಸುತ್ತಿರುವ ಅದೆಷ್ಟೋ ಕೋಟ್ಯಧೀಶರು ನಮ್ಮ ನಡುವೆಯೇ ಇದ್ದಾರೆ. ಅವರನ್ನೂ ಯಾರೂ ಮುಟ್ಟುವುದಿಲ್ಲ. ಆದರೆ ದಶಕಗಳಿಂದ ತಲೆ ಮೇಲೊಂದು ಸೂರು ಕಟ್ಟಿಕೊಂಡು ಬದುಕುತ್ತಿರುವ ಈ ಅಮಾಯಕರು ಈಗ ಬೀದಿ ಪಾಲಾಗುತ್ತಿದ್ದಾರೆ. ಇದು ನಮ್ಮ ವಿಪರ್ಯಾಸ.

share
ವಿನಯ್ ಕೆ.
ವಿನಯ್ ಕೆ.
Next Story
X