ಮದುವೆ ಸಂಭ್ರಮಾಚರಣೆಗೆ ಹಾರಿಸಿದ ಗುಂಡಿಗೆ ವರನ ತಂದೆ ಬಲಿ !
ಉಜ್ಜೈನ್ , ಮಾ. 28 : ಮದುವೆಯ ಸಂಭ್ರಮಾಚರಣೆಗೆ ಹಾರಿಸಿದ ಗುಂಡು ವರನ ತಂದೆಯನ್ನೇ ಬಲಿ ಪಡೆದ ದಾರುಣ ಘಟನೆ ಮಧ್ಯ ಪ್ರದೇಶದ ಉಜ್ಜೈನ್ ನ ಬಡ್ನಗರ್ ನಲ್ಲಿ ರವಿವಾರ ನಡೆದಿದೆ. ಆಕಸ್ಮಿಕವಾಗಿ ಗುಂಡು ತಾಗಿದ್ದು , ವರನ ತಂದೆ ತಕ್ಷಣ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಹೆಚ್ಚಿನ ವಿವರ ಇನ್ನಷ್ಟೇ ಬರಬೇಕಾಗಿದೆ.
ಇಂತಹ ಘಟನೆಗಳು ಇದೇ ಹೊಸತಲ್ಲ. ಇತ್ತೀಚಿಗಷ್ಟೇ ಇಂತಹ ಎರಡು ಘಟನೆಗಳು ಉತ್ತರ ಪ್ರದೇಶದಲ್ಲಿ ನಡೆದಿದ್ದು ಒಬ್ಬ ವ್ಯಕ್ತಿ ಮೃತಪಟ್ಟಿದ್ದು , ಓರ್ವ ಬಾಲಕಿ ಗಾಯಗೊಂಡಿದ್ದಳು. ಫೆಬ್ರವರಿಯಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ನಡೆಸಿದ ಸಂಭ್ರಮಾಚರಣೆಯಲ್ಲಿ 8 ವರ್ಷದ ಬಾಲಕನೊಬ್ಬ ಜೀವ ಕಳೆದುಕೊಂಡಿದ್ದ.
ವೀಡಿಯೋ ನೋಡಿ :
WATCH (27/03/16): Groom's father killed in celebratory firing during a wedding procession in Badnagar (Ujjain, MP)https://t.co/xNOtYSAbEa
— ANI (@ANI_news) March 28, 2016
courtesy : Indian Express
Next Story