ವಿಜೇಂದರ್ ಹಾಗು ಫ್ರೆಂಚ್ ಪ್ರತಿಸ್ಪರ್ಧಿಯ ನಡುವೆ ಹಣಾಹಣಿಗೆ ಮೊದಲೇ ಫೈಟ್
ಹೆಣಗಾಡಿದ ಅಧಿಕಾರಿಗಳು
ಲಂಡನ್, ಎ. 30 :ರವಿವಾರದಂದು ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಹಾಗೂ ಅವರ ಫ್ರೆಂಚ್ ಎದುರಾಳಿ ಮಾಟಿಯೌರ್ ರೋಯರ್ ನಡುವೆ ನಡೆಯುವ ಕಾದಾಟಕ್ಕೆ ಅಣಿಯಾಗಲು ಶುಕ್ರವಾರ ಸ್ಪರ್ಧಿಗಳು ದೇಹ ತೂಕ ತಪಾಸಣೆ ಸ್ಟ್ರೇಟ್ಫಾರ್ಡ್ನ ಕೋಪ್ಪರ್ ಬಾಕ್ಸ್ ಅರೀನಾದಲ್ಲಿ ನಡೆಯುವ ಸಂದರ್ಭದಲ್ಲಿ ಇಬ್ಬರು ಸ್ಪರ್ಧಿಗಳೂ ಫೈಟ್ ನಡೆಸಲು ಸಜ್ಜಾಗಿರುವಂತೆ ಕಂಡು ಬಂದಿದ್ದು ಪರಿಸ್ಥಿತಿಯನ್ನು ತಿಳಿಗೊಳಿಸಲು ಅಧಿಕಾರಿಗಳು ವಸ್ತುಶಃ ಹೆಣಗಾಡಿದ್ದಾರೆ.
ವಿಜೇಂದರ್ ಇನ್ನೊಂದು ನಾಕೌಟ್ ಶೋ ನೀಡುವುದಾಗಿ ಹೇಳಿಕೊಂಡಿದ್ದರೂ ಅವರು ಅನುಭವೀ ಫ್ರೆಂಚ್ ಸ್ಪರ್ಧಿ ರೋಯರ್ ಎದುರು ಕಠಿಣ ಸವಾಲೆದುರಿಸುವ ಸಾಧ್ಯತೆಯಿದೆ.
ಶುಕ್ರವಾರದಂದು ಫ್ರಾನ್ಸಿನ ನೀಳ ಕಾಯದ ಬಾಕ್ಸರ್ ವಿಜೇಂದರ್ ಅವರೊಂದಿಗೆ ಕೈಕೈ ಮಿಸಲಾಯಿಸುವ ಹಂತಕ್ಕೇ ಹೋಗಿದ್ದರಲ್ಲದೆ ಅಧಿಕಾರಿಗಳು ಅವರಿಬ್ಬರನ್ನು ಬಲವಂತವಾಗಿ ದೂರ ಮಾಡಬೇಕಾಯಿತು.
ರೋಯರ್ 44 ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರೆ, 14 ವಿಜಯಗಳನ್ನು ನಾಕೌಟ್ ಮೂಲಕ ಪಡೆದಿದ್ದರು.
‘‘ನಾನು ಆತನನ್ನು ಬಗ್ಗು ಬಡಿಯುತ್ತೇನೆ. ಈಗಾಗಲೇ ಆತನ ಕಣ್ಣುಗಳಲ್ಲಿ ಭಯವನ್ನು ನಾನು ಗಮನಿಸಿದ್ದೇನೆ. ಆತನಿಗೆ ಆತನ ಸ್ಥಾನವನ್ನು ತೋರಿಸಲು ನಾನು ಕಾತುರನಾಗಿದ್ದೇನೆ.’’ಎಂದು ಹೇಳಿದ್ದಾರೆ ರೋಯರ್.
ನಾಳೆಯ ಸ್ಪರ್ಧೆಯಲ್ಲಿ ವಿಜೇಂದರ್ ನಾಕೌಟ್ ವಿಜಯ ದಾಖಲಿಸಿದ್ದೇ ಆದಲ್ಲಿ ಮುಂದೆ ಅವರು ಬ್ರಿಟಿಷ್ ಬಾಕ್ಸರ್ ಅಮೀರ್ ಖಾನ್ ಅವರನ್ನು ಎದುರಿಸಲಿದ್ದಾರೆ. ಎರಡು ಬಾರಿಯ ವಿಶ್ವ ಚಾಂಪಿಯನ್ ಆಗಿರುವ ಖಾನ್ ತಮ್ಮ ಬಾಕ್ಸಿಂಗ್ ವೃತ್ತಿಯಲ್ಲಿ 31 ವಿಜಯಗಳು, ಮೂರು ಸೋಲು ಹಾಗೂ 19 ನಾಕೌಟ್ ದಾಖಲಿಸಿದ್ದಾರೆ.