ಟೈಮ್ಸ್ ನೌ ವರದಿಗಾರ್ತಿಯ ಅವಹೇಳನ ಮಾಡಿದ ಖೇಣಿಗೆ ಅರ್ನಬ್ ವಾಗ್ದಾಳಿ
ಕ್ಷಮೆ ಕೇಳದ ಖೇಣಿ
ಮುಂಬೈ, ಜೂ 7: ಮುಂಬೈ ಹೋಟೆಲ್ ನಲ್ಲಿ ಇತರ ಪಕ್ಷೇತರ ಶಾಸಕರೊಂದಿಗೆ ತಂಗಿರುವ ಶಾಸಕ ಅಶೋಕ್ ಖೇಣಿ ಅವರು ತಮ್ಮನ್ನು ಪದೇ ಪದೇ ಪ್ರಶ್ನಿಸಿದ ಟೈಮ್ಸ್ ನೌ ಪತ್ರಕರ್ತೆಗೆ ಅವಹೇಳನಕಾರಿ ಪದ ಬಳಸಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ತನ್ನ ವಾಹಿನಿಯ ವರದಿಗಾರ್ತಿಗೆ ಇಂತಹ ಪದ ಬಳಸಿದ ಖೇಣಿ ಜೊತೆ ದೂರವಾಣಿಯಲ್ಲಿ ಮಾತನಾಡಿ ಹರಿಹಾಯ್ದಿರುವ ಅರ್ನಬ್ ತಕ್ಷಣ ಕ್ಷಮೆ ಕೇಳದಿದ್ದರೆ ಖೇಣಿಯ ಅವಹೇಳನಕಾರಿ ಮಾತಿರುವ ವೀಡಿಯೋವನ್ನು ತಮ್ಮ ಚಾನಲ್ ನಲ್ಲಿ ಮತ್ತೆ ಮತ್ತೆ ಪ್ರಸಾರ ಮಾಡುವುದಾಗಿ ಹೇಳಿದ್ದಾರೆ. ಆದರೆ ಖೇಣಿ ಮಾತ್ರ ಕ್ಷಮೆ ಕೇಳಿಲ್ಲ.
ವೀಡಿಯೋ ನೋಡಿ :
Next Story