ಬಿಎಸ್ಎನ್ಎಲ್ಗೆ 1,250 ಕೋ.ರೂ. ಸಬ್ಸಿಡಿ
ಹೊಸದಿಲ್ಲಿ,ಸೆ.21: 2002,ಎ.1ಕ್ಕೆ ಮೊದಲಿನ ಗ್ರಾಮೀಣ ಸ್ಥಿರ ದೂರವಾಣಿ ಸಂಪರ್ಕಗಳಿಗೆ ಸಂಬಂಧಿಸಿದಂತೆ ಬಿಎಸ್ಎನ್ಎಲ್ಗೆ ಸುದೀರ್ಘ ಸಮಯದಿಂದ ಬಾಕಿ ಉಳಿದಿರುವ 1,250 ಕೋ.ರೂ.ಗಳ ನಷ್ಟ ಪರಿಹಾರವನ್ನು ಪಾವತಿಸಲು ಕೇಂದ್ರ ಸಂಪುಟವು ಬುಧವಾರ ಒಪ್ಪಿಗೆ ನೀಡಿದೆ. ಸಾರ್ವತ್ರಿಕ ಸೇವಾ ಬಾಧ್ಯತೆ ನಿಧಿಯಿಂದ ಈ ಪಾವತಿಯನ್ನು ಮಾಡಲಾಗುವುದು ಎಂದು ಸರಕಾರದ ಪ್ರಧಾನ ವಕ್ತಾರ ಫ್ರಾಂಕ್ ನೊರೋನಾ ಟ್ವೀಟಿಸಿದ್ದಾರೆ.
ಗ್ರಾಮೀಣ ಸ್ಥಿರ ದೂರವಾಣಿ ಸಂಪರ್ಕಗಳನ್ನು ಬೆಂಬಲಿಸಲು 2,000ಕೋ.ರೂ.ಗಳನ್ನು ಒದಗಿಸುವಂತೆ ಬಿಎಸ್ಎನ್ಎಲ್ ಸರಕಾರವನ್ನು ಕೇಳಿತ್ತು.
Next Story