24 ಗಂಟೆಗಳಲ್ಲಿ 571 ಜನರಿಗೆ ಕಟಿಂಗ್
ಗಿನ್ನೆಸ್ ದಾಖಲೆ ಮಾಡಿದ ಸೂರತ್ನ ಮಹಿಳೆ - ವೀಡಿಯೊ ನೋಡಿ
ಸೂರತ್,ಡಿ.12: ಗುಜರಾತ್ನ ಸೂರತ್ ನಿವಾಸಿ ಶೀತಲ್ ಕಲ್ಪೇಶ್ ನಿರಂತರವಾಗಿ 24 ಗಂಟೆಗಳ ಕಾಲ 571 ಜನರಿಗೆ ಕಟಿಂಗ್ ಮಾಡಿ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಪಾರ್ಲರ್ ಮಾಲಕಿಯಾಗಿರುವ ಶೀತಲ್ ಶನಿವಾರ ಬೆಳಿಗ್ಗೆ 9:14 ಗಂಟೆಗೆ ಕಟಿಂಗ್ ಮಾಡಲು ಆರಂಭಿಸಿದ್ದು,24 ಗಂಟೆಗಳ ಬಳಿಕ ರವಿವಾರ ಬೆಳಿಗ್ಗೆ 9:14ಕ್ಕೆ ನಿಲ್ಲಿಸಿದ್ದರು.
Next Story