ಸಿಖ್ ಮತ್ತು ಮುಸ್ಲಿಮ್ ವಿದ್ಯಾರ್ಥಿಗಳ ಸಹೋದರತೆ ನೋಡಿ ನೀವೂ ಸಲಾಮ್ ಹೊಡೆಯಿರಿ!
.jpg)
ಪಂಜಾಬ್‌ಯುನಿವರ್ಸಿಟಿಯಲ್ಲಿ ಮುಹಮ್ಮದ್ ಅಮ್ಮಾರ್ ಮತ್ತು ದಿಲ್‌ರಾಜ್ ಸಿಂಗ್ ಒಂದೇ ಬೆಡ್‌ನಲ್ಲಿ ನಮಾಝ್ ಮತ್ತು ರಹ್ರಾಸ್ ಪಠಣ ನಿರ್ವಹಿಸುತ್ತಿದ್ದಾರೆ !
ಪಾಟಿಯಾಲ: ಪಂಜಾಬ್ ಯುನಿವರ್ಸಿಟಿಯಯ ಛಾವಣಿ ಕೆಳಗೆ ಏಳುಧರ್ಮಗಳನ್ನು ಅನುಸರಿಸುವ ವಿದ್ಯಾರ್ಥಿಗಳು ವ್ಯಾಸಂಗ ನಡೆಯುತ್ತದೆ. ಯುನಿವರ್ಸಿಟಿ ಹಾಸ್ಟೆಲ್‌ನಲ್ಲಿರುತ್ತಾ ಬೇರೆ ಬೇರೆ ಧರ್ಮಗಳ ವಿದ್ಯಾರ್ಥಿಗಳು ಒಂದೇ ಸಮಯದಲ್ಲಿ ತಮ್ಮತಮ್ಮ ಆರಾಧನೆ ನಡೆಸುತ್ತಾರೆ.
ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿದ್ಯಾರ್ಥಿಯೊಬ್ಬ ತಮ್ಮ ಮುಸ್ಲಿಮ್ ಮತ್ತು ಸಿಖ್ ಮಿತ್ರರನ್ನು ಭೇಟಿಮಾಡಲು ಹಾಸ್ಟೆಲ್‌ಗೆ ಬಂದಾಗ ತನ್ನಿಬ್ಬರು ಗೆಳೆಯರು ಅವರವರ ಧರ್ಮದ ಅನುಸಾರ ಪ್ರಾರ್ಥನೆಯಲ್ಲಿ ನಿರತರಾಗಿರುವುದು ಕಂಡು ಬಂದಿತ್ತು. ಆತ ಅದನ್ನು ಫೋಟೊ ತೆಗೆದು ಫೇಸ್‌ಬುಕ್‌ಗೆ ಹಾಕಿದ್ದಾನೆ. ಅದೀಗ ಲಕ್ಷಾಂತರ ಮಂದಿಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಸೌಹಾರ್ದದ ಉದಾತ್ತ ಉದಾಹರಣೆಯಾಗಿ ಪರಿಗಣನೆಗೊಳಗಾಗಿದೆ.
ಮುಸ್ಲಿಮ್ ವಿದ್ಯಾರ್ಥಿ ಸೂರ್ಯಾಸ್ತ ಮಾನದ ಮಗ್ರಿಬ್(ನಿಶಾ) ನಮಾಝ್ ಮಾಡುತ್ತಿದ್ದರೆ, ಸಿಖ್‌ವಿದ್ಯಾರ್ಥಿ ರಹ್ರಾಸ್ ಓದುತ್ತಿದ್ದ. ಒಂದೇ ಕೋಣೆಯ ಒಂದೇ ಬೆಡ್‌ನಲ್ಲಿ ಇವೆರಡೂ ನಡೆಯುತ್ತಿತ್ತು. ತಡಮಾಡದೆ ಫೋಟೊ ಕ್ಲಿಕ್ಕಿಸಿ ಫೇಸ್ ಬುಕ್ ಹಾಕಿದಾಗ ಎಲ್ಲೆಡೆ ವೈರಲ್ ಆಗಿತ್ತು. ಇದನ್ನು ನೋಡಿ ರಾತ್ರಿ ಹಗಲೂ ಲಕ್ಷಾಂತರ ಮಂದಿ ಕಮೆಂಟ್ ಮಾಡುತ್ತಿದ್ದಾರೆ.
ವರದಿಯಾಗಿರುವಂತೆ ನೌರಾಜ್ ದಿಲ್‌ರಾಜ್ ಸಿಂಗ್ ಮತ್ತು ಮುಹಮ್ಮದ್ ಅಮ್ಮಾರ್ ಖಾನ್ ಪಂಜಾಬ್ ಯುನಿವರ್ಸಿಟಿಯಲ್ಲಿ ಪತ್ರಿಕೋದ್ಯಮದಲ್ಲಿ ಎಂಎ ವ್ಯಾಸಂಗ ಮಾಡುತ್ತಿದ್ದಾರೆ. ತಮ್ಮ ತಮ್ಮ ಧರ್ಮದವನ್ನು ಬಹಳ ಅನುಸರಿಸುತ್ತಿದ್ದಾರೆ. ಒಬ್ಬರು ಇನ್ನೊಬ್ಬರನ್ನು ಬಹಳ ಪ್ರಿತಿಯಿಂದ ಗೌರವಿಸುತ್ತಿದ್ದಾರೆ. ಇವರಿಬ್ಬರು ಕಳೆದ ಒಂದೂವರೆ ವರ್ಷಗಳಿಂದ ಶಹೀದ್ ಭಗತ್ ಸಿಂಗ್ ಹಾಸ್ಟೆಲ್‌ನ ಒಂದೇ ಕೋಣೆಯಲ್ಲಿ ಉಳಿದುಕೊಂಡಿದ್ದಾರೆ.







