ಸಾನಿಯಾಗೆ ಸೇವಾ ತೆರಿಗೆ ಇಲಾಖೆ ನೊಟೀಸ್
ಹೈದರಾಬಾದ್, ಫೆ.9: ಸೇವಾ ತೆರಿಗೆ ಪಾವತಿಸದ ಕಾರಣಕ್ಕಾಗಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಝಾ ಅವರಿಗೆ ಸೇವಾ ತೆರಿಗೆ ಇಲಾಖೆ ನೊಟೀಸ್ ಜಾರಿ ಮಾಡಿದೆ.
ಫೆಬ್ರವರಿ 16ರೊಳಗೆ ಖುದ್ದಾಗಿ ಅಥವಾ ಸಂಬಂಧಪಟ್ಟ ಏಜೆಂಟರ್ ಇಲಾಖೆಯ ಮುಂದೆ ಹಾಜರಾಗುವಂತೆ ಸಾನಿಯಾ ಮಿರ್ಝಾ ಅವರಿಗೆ ಸೇವಾ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತ ಅವರು ಫೆ.6ರಂದು ಸಮನ್ಸ್ ಜಾರಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅಗತ್ಯಪಟ್ಟ ದಾಖಲೆಗಳನ್ನು ಕೂಡ ಸಲ್ಲಿಸಬೇಕು ಎಂದು ನೊಟೀಸ್ ನಲ್ಲಿ ತಿಳಿಸಲಾಗಿದೆ.
Next Story