ಡಿಜಿಟಲ್ ಪಾವತಿ ಯೋಜನೆ : 8 ಲಕ್ಷಕ್ಕೂ ಹೆಚ್ಚು ಮಂದಿಗೆ ಪುರಸ್ಕಾರ
ಹೊಸದಿಲ್ಲಿ, ಫೆ.12: ಡಿಜಿಟಲ್ ಪಾವತಿ ಯೋಜನೆಯನ್ನು ಉತ್ತೇಜಿಸಲು ನೀತಿ ಆಯೋಗ ಅನುಷ್ಠಾನಗೊಳಿಸಿರುವ ಪುರಸ್ಕಾರ ಯೋಜನೆಯಡಿ, ಕಳೆದ ಐವತ್ತು ದಿನಗಳಲ್ಲಿ 8 ಲಕ್ಷಕ್ಕೂ ಹೆಚ್ಚು ಮಂದಿಗೆ ಒಟ್ಟು 133 ಕೋಟಿ ರೂ. ಪುರಸ್ಕಾರ ನೀಡಲಾಗಿದೆ.
ಡಿಜಿ ಧನ್ ಮೇಳಕ್ಕೆ ಐವತ್ತು ದಿನ ತುಂಬಿದೆ ಮತ್ತು ಈ ಯೋಜನೆಯಡಿ 8 ಲಕ್ಷಕ್ಕೂ ಹೆಚ್ಚಿನ ಮಂದಿ ಒಟ್ಟು 133 ಕೋಟಿ ರೂ. ಪುರಸ್ಕಾರ ಪಡೆದಿದ್ದಾರೆ ಎಂದು ನೀತಿ ಆಯೋಗ ಟ್ವೀಟ್ ಮಾಡಿದೆ.
ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಡಿ.25ರಂದು ಸರಕಾರ ಲಕ್ಕೀ ಗ್ರಾಹಕ ಯೋಜನೆ ಮತ್ತು ಡಿಜಿ-ಧನ್ ವ್ಯಾಪಾರ ಯೋಜನೆ ಎಂಬ ಎರಡು ಯೋಜನೆಗಳನ್ನು ಆರಂಭಿಸಿತ್ತು. ಎಪ್ರಿಲ್ 14ರವರೆಗೆ ಈ ಯೋಜನೆಗಳು ಜಾರಿಯಲ್ಲಿರುತ್ತವೆ.
Next Story