ಈ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲದಲ್ಲಿ ಕಾಂಗ್ರೆಸ್ನಿಂದ ಅಧ್ಯಕ್ಷರು !
ಪತ್ತನಂತಿಟ್ಟ,ಫೆ. 16: ನಾರಂಙಾನಂ ಗ್ರಾಮಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಬೆಂಬಲದಲ್ಲಿ ಕಾಂಗ್ರೆಸ್ನ ಶ್ರೀಕಾಂತ್ ಕಳರಿಕ್ಕಲ್ ಅಧ್ಯಕ್ಷರಾಗಿಆಯ್ಕೆಯಾಗಿದ್ದಾರೆ. 14 ಸದಸ್ಯಬಲದ ಪಂಚಾಯತ್ನಲ್ಲಿ ಬಿಜೆಪಿ,ಕಾಂಗ್ರೆಸ್ಗಳಿಗೆ ತಲಾ 4 ಸದಸ್ಯರು ಮತ್ತು ಸಿಪಿಎಂಗೆಆರು ಸದಸ್ಯರಿದ್ದಾರೆ. ಶ್ರೀಕಾಂತ್ಗೆ ಏಳು ಮತ್ತು ಎಡಪಕ್ಷದ ಅಭ್ಯರ್ಥಿಗೆ ಆರು ವೋಟುಗಳು ಲಭಿಸಿವೆ.
ಓರ್ವ ಬಿಜೆಪಿ ಸದಸ್ಯ ಮತದಾನದಲ್ಲಿ ಭಾಗವಹಿಸಿಲ್ಲ. ಎಡಪಕ್ಷದ ಆಳ್ವಿಕೆ ವಿರುದ್ಧ ಕಾಂಗ್ರೆಸ್ ತಂದ ಅವಿಶ್ವಾಸ ನಿರ್ಣಯ ಬಿಜೆಪಿಯ ಬೆಂಬಲದಲ್ಲಿ ಪಾಸಾದ ಹಿನ್ನೆಲೆಯಲ್ಲಿ ಚುನಾವಣೆ ನಡೆದಿತ್ತು. ಶ್ರೀಕಾಂತ್ ಕಳರಿಕ್ಕಲ್ರನ್ನು ಕೆಪಿಸಿಸಿ ಅಧ್ಯಕ್ಷ ವಿಎಂ ಸುಧೀರನ್ ಸೂಚನೆ ಪ್ರಕಾರ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರುವರ್ಷಕ್ಕೆ ತೆಗೆದು ಹಾಕಲಾಗಿದೆ ಎಂದು ಡಿಸಿಸಿ ಅಧ್ಯಕ್ಷ ಬಾಬು ಜಾರ್ಜ್ ತಿಳಿಸಿದರೆಂದು ವರದಿಯಾಗಿದೆ.
Next Story