Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಲೇಖನಗಳು
  4. ಈಶಾನ್ಯ ವಲಯದ ಬಂಡುಕೋರರು ಮತ್ತು ...

ಈಶಾನ್ಯ ವಲಯದ ಬಂಡುಕೋರರು ಮತ್ತು ಬೆಂಕಿ ಹೊತ್ತಿ ಉರಿಯುತ್ತಿರುವ ಮಣಿಪುರ ರಾಜ್ಯ

ವಾರ್ತಾಭಾರತಿವಾರ್ತಾಭಾರತಿ4 July 2023 12:13 AM IST
share
ಈಶಾನ್ಯ ವಲಯದ ಬಂಡುಕೋರರು ಮತ್ತು    ಬೆಂಕಿ ಹೊತ್ತಿ ಉರಿಯುತ್ತಿರುವ ಮಣಿಪುರ ರಾಜ್ಯ

ಡಾ.ಎಂ.ವೆಂಕಟಸ್ವಾಮಿ

ಭಾರತ ಈಶಾನ್ಯ ವಲಯ 1950ರ ದಶಕದಿಂದ 1990ರ ಶಕದವರೆಗೂ ಬಂಡುಕೋರರು ಮತ್ತು ಮಿಲಿಟರಿ ಮಧ್ಯೆ ನಲುಗಿಹೋಗಿತ್ತು. ಪ್ರಸಕ್ತ ಕುಕಿನಾಗಾ-ಜೋ ಬುಡಕಟ್ಟುಗಳು ಮತ್ತು ಮಣಿಪುರದ ಹಿಂದೂ ಮೈತೈ (ಹಿಂದೂ-ವೈಷ್ಣವರು) ಗುಂಪುಗಳ ನಡುವೆ ಮೀಸಲಾತಿ ಸಂಘರ್ಷ ಶುರುವಾಗಿದೆ. ಆದರೆ ಈ ಎರಡೂ ಗುಂಪುಗಳ ನಡುವಿನ ಸಂಘರ್ಷ ಬಹಳ ಹಿಂದಿನದಾಗಿದೆ. ಈಶಾನ್ಯ ರಾಜ್ಯಗಳು ಒಂದು ಕಾಲದಲ್ಲಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದವು. ಕಳೆದ ಎರಡು/ಎರಡೂವರೆ ದಶಕದಿಂದ ಸಂಪೂರ್ಣವಾಗಿ ತಣ್ಣಗಾಗಿತ್ತು. ಆದರೆ ಅದು ಈಗ ಮತ್ತೊಮ್ಮೆ ದಿಢೀರನೆ ಭುಗಿಲೆದ್ದಿದೆ. ಈಶಾನ್ಯ ವಲಯದಲ್ಲಿ ಒಮ್ಮೆ ಬೆಂಕಿ ಹೊತ್ತಿಕೊಂಡರೆ ಅದು ಅಷ್ಟು ಸುಲಭವಾಗಿ ಆರುವುದಿಲ್ಲ. ಈಶಾನ್ಯ ವಲಯ ಭೌಗೋಳಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕವಾಗಿ ದೇಶದ ಪ್ರತ್ಯೇಕ ಭಾಗವಾಗಿದೆ. ಭಾರತ ಸ್ವಾತಂತ್ರ ಪಡೆದುಕೊಳ್ಳುವ ಮುಂಚೆಯೇ ನಾಗಾ ಬಂಡುಕೋರ ಜಾಪು ಫಿಜೊ ಎಂಬಾತ ಗಾಂಧೀಜಿಯನ್ನು ಸಂಧಿಸಿ ಪ್ರತ್ಯೇಕ ದೇಶಕ್ಕೆ ಭಾಷೆ ತೆಗೆದುಕೊಂಡಿದ್ದನಂತೆ.

ಇದರ ಬಗ್ಗೆ ಸ್ವಲ್ಪಹಿಂದಕ್ಕೆ ಹೋದರೆ, ನಾಗಾಲ್ಯಾಂಡ್‌ನ 26 ನಾಗಾ ಬುಡಕಟ್ಟುಗಳಿಗೆ ಚತುರ, ಶಕ್ತಿಶಾಲಿ ಮತ್ತು ಸಿಂಹ ಹೃದಯಿಗಳು ಎನ್ನುವ ಖ್ಯಾತಿ ಇದೆ. ಬ್ರಿಟಿಷ್ ಭಾರತದಲ್ಲಿ ಇಡೀ ದೇಶ ಬ್ರಿಟಿಷರ ಕ್ರೂರತೆಗೆ ನಲುಗುತ್ತಿದ್ದಾಗ 1878ರಲ್ಲಿ ಪೂರ್ವ ಹಿಮಾಲಯದ ನಾಗಾಲ್ಯಾಂಡ್ ರಾಜಾಧಾನಿ ಕೊಹಿಮಾ ಕಣಿವೆಗಳಲ್ಲಿ ಬ್ರಿಟಿಷ್ ಬ್ಯಾರಕ್‌ಗಳಿಗೆ ನುಗ್ಗಿ 500 ಬ್ರಿಟಿಷರ ರುಂಡಗಳನ್ನು ಚೆಂಡಾಡಿ ಭೀಕರತೆ ಮೆರೆದಿದ್ದರು. ಬ್ರಿಟಿಷ್ ಮುಖ್ಯಸ್ಥರ ರುಂಡಗಳನ್ನು ತೆಗೆದುಕೊಂಡು ಹೋಗಿ ತಮ್ಮ ಮನೆ ಗೋಡೆಗಳಿಗೆ ನೇತಾಕಿಕೊಂಡಿದ್ದರು. ((Detailed Report on the Naga Hills Expedition of 1878-80', Capt. P.J. Maitland)) ಇಡೀ ಭಾರತದಲ್ಲಿ ಬ್ರಿಟಿಷರು ಭಾರತೀಯರಿಗೆ ಸಿಂಹಸ್ವಪ್ನವಾಗಿದ್ದರೆ, ಇಲ್ಲಿ ನಾಗಾಗಳು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು. ಇದೇ ಕಾಲದಲ್ಲಿ ಬ್ರಿಟಿಷರು ತಮ್ಮ ಕುಟಿಲ ರಾಜಕೀಯದಿಂದ ಮಣಿಪುರದ ಹಿಂದೂ ರಾಜರ ಸಹಾಯ ಪಡೆದುಕೊಂಡು ನಾಗಾಗಳನ್ನು ಸೋಲಿಸಿ ನಾಗಾರಾಜ್ಯವನ್ನು ವಶಪಡಿಸಿಕೊಂಡರು. ಇಡೀ ಈಶಾನ್ಯ ವಲಯ ಪೂರ್ವ ಹಿಮಾಲಯದ ಕಣಿವೆ ಪರ್ವತಗಳಿಂದ ಕೂಡಿದ್ದರೆ ಅಸ್ಸಾಮಿನಲ್ಲಿ ಹರಿಯುವ ಬ್ರಹ್ಮಪುತ್ರಾ ನದಿಯ ಇಕ್ಕೆಲಗಳು, ಬರಾಕ್ ಕಣಿವೆ, ನಾಗಾಲ್ಯಾಂಡಿನ ದೊಡ್ಡ ಪಟ್ಟಣ ದಿಮಾಪುರ (ಹಿಡಿಂಭಾಪುರ), ಮಣಿಪುರದ ಲೋಕ್‌ಟಕ್ ಸರೋವರದ ಕಣಿವೆ ಮತ್ತು ತ್ರಿಪುರಾ ಮಾತ್ರ ಬಯಲು ಪ್ರದೇಶಗಳಾಗಿವೆ. ಲೋಕ್‌ಟಕ್ ಸರೋವರದ ಸುತ್ತಲೂ ಮಣಿಪುರಿಗಳಿದ್ದರೆ ಸುತ್ತಮುತ್ತಲಿನ ಬೆಟ್ಟಕಾಡು ಕಣಿವೆಗಳಲ್ಲಿ ಕುಕಿನಾಗಾಗಳು ಸುತ್ತುವರಿದಿದ್ದಾರೆ.

ನಾಗಾಗಳ ಹಳ್ಳಿಗಳು ಯಾವಾಗಲೂ ಬೆಟ್ಟಗಳ ತುತ್ತ ತುದಿಯಲ್ಲಿದ್ದರೆ ಕಣಿವೆಗಳಲ್ಲಿ ಜೂಮ್ ಕೃಷಿ ಮಾಡುತ್ತಾರೆ. ಈಶಾನ್ಯ ವಲಯದ ಎಂಟು ರಾಜ್ಯಗಳ ಒಟ್ಟು ಭೂಪ್ರದೇಶ 2.62 ದಶಲಕ್ಷ ಚ.ಕಿ.ಮೀ.ಗಳು. ಮಣಿಪುರದ ಒಟ್ಟು ಭೂಪ್ರದೇಶ 22,327 ಚ.ಕಿ.ಮೀ.ಗಳಲ್ಲಿ ಲೋಕ್‌ಟಕ್ ಸರೋವರದ ಸುತ್ತಳತೆ ಕೇವಲ 236 ಚ.ಕಿ.ಮೀ. ಈ ಸರೋವರದ ಸುತ್ತಲಿನ ರಾಜ್ಯದ ಶೇ. 10 ಭೂಪ್ರದೇಶದಲ್ಲಿ ಮಣಿಪುರದ ಮೈತೈ ಸಮುದಾಯದ ಜನರಿದ್ದಾರೆ. ಈಶಾನ್ಯ ವಲಯದಲ್ಲಿ 280 ಬುಡಕಟ್ಟು ಭಾಷೆಗಳಿದ್ದು ಅವೆಲ್ಲಾ ಈಗ ಅಳಿವಿನ ಹಾದಿಯಲ್ಲಿವೆ. ಅಸ್ಸಾಮ್ ಮತ್ತು ಮಣಿಪುರಿ ಭಾಷೆಗಳಿಗೆ ಬೆಂಗಾಲಿ ಲಿಪಿಯನ್ನು ಅಳವಡಿಸಲಾಗಿದ್ದು, ಉಳಿದ ಕೆಲವು ಮುಖ್ಯ ಭಾಷೆಗಳಿಗೆ ರೋಮನ್ ಲಿಪಿಯನ್ನು ಅಳವಡಿಸಲಾಗಿದೆ. ಹೆಚ್ಚು ಭಾಷೆಗಳಿಗೆ ಲಿಪಿಯೇ ಇಲ್ಲ, ಎಲ್ಲವೂ ಮೌಖಿಕ ಉಪಭಾಷೆಗಳಾಗಿವೆ. ಈ ವಲಯದಲ್ಲಿ ಮೂಲವಾಗಿ ಕಾಕಸಿಕ್ (ಅಸ್ಸಾಮಿನ ಮೂಲ ಬುಡಕಟ್ಟುಗಳು!) ಮಂಗೋಲಾಯ್ಡಾ ಜನಾಂಗಗಳು ಇದ್ದವು. ಅದಕ್ಕೂ ಮುಂಚೆ ಆಸ್ಟ್ರೋಲಾಯ್ಡೋ ಜನರು ಇದ್ದರು ಎನ್ನಲಾಗಿದೆ. ಕ್ರಿ.ಶ. 1230ರ ಕಾಲದಲ್ಲಿ ಬರ್ಮಾದ ಆಓಮ್ಸ್ ಜನರು ಚಿಂದ್‌ವಾಡ್ ನದಿ ಕಣಿವೆಯ ಮೂಲಕ ಬರುವುದರೊಂದಿಗೆ ಇಲ್ಲಿನ ಜನಾಂಗಗಳ ಚರಿತ್ರೆ ತೆರೆದುಕೊಳ್ಳುತ್ತದೆ. ಈಶಾನ್ಯ ಚೀನಾದ ಹೋಹಾಂಗ್ ಮತ್ತು ಯಾಂಗ್-ಟೆಝ್ ಕಿಯಾಂಗ್ ನದಿ ಮುಖಜಗಳಿಂದ ವಲಸೆ ಬಂದ ಮಂಗೋಲಾಯ್ಡೆ ಜನರು ಇಲ್ಲಿನ ಜನರ ಮೂಲಸ್ಥರು ಎನ್ನಲಾಗಿದೆ. ಇಂದಿನ ಮಣಿಪುರ 18ನೇ ಶತಮಾನದಲ್ಲಿ ಬಂಗಾಳಿಗಳ ಪ್ರಭಾವದಿಂದ ಹಿಂದೂ ರಾಜರ ಒಡತನದಲ್ಲಿತ್ತು. ಮೈತೈ (ಸಿನೋ-ಟಿಬೆಟಿಯನ್) ಭಾಷೆ ಮಾತನಾಡುವ ಮಣಿಪುರ ಭಾಷೆಗೆ ಬೆಂಗಾಲಿ ಲಿಪಿಯನ್ನು ಅಳವಡಿಸಲಾಗಿದೆ. ಮಣಿಪುರಿಗಳ ಮೂಲ ಇನ್ನೂ ನಿಗೂಢವಾಗಿಯೆ ಇದೆ. ಒಂದು ಕಲ್ಪನೆಯಂತೆ ಇವರು ಚೀನಾದ ಟಾಂಗ್-ಶಾಂಗ್ ಡೈನಾಸ್ಟಿ ಮೂಲದ ಇಂಡೋ-ಚೀನಿ ಬುಡಕಟ್ಟಿಗೆ ಸೇರಿದ ಜನರು ಎನ್ನಲಾಗಿದೆ. ಮಣಿಪುರದಲ್ಲಿ ಶೇ. 53 ಮೈತೈಗಳ ಜೊತೆಗೆ ಶೇ. 24 ನಾಗಾಗಳು ಮತ್ತು ಶೇ. 16 ಕುಕಿ-ಮಿರೊ ಜನರಿದ್ದಾರೆ. 1961ರ ಜನಗಣತಿಯಿಂದ 2011ರ ಜನಗಣತಿಯ ವೇಳೆಗೆ ಶೇ. 62 ಹಿಂದೂಗಳ ಸಂಖ್ಯೆ ಶೇ. 41ಕ್ಕೆ ಇಳಿದರೆ, ಶೇ. 19 ಇದ್ದ ಕ್ರೈಸ್ತರ ಜನಸಂಖ್ಯೆ ಶೇ. 41ಕ್ಕೆ ಏರಿದೆ. ಮೇಘಾಲಯ, ಮಿಜೋರಾಂ ಮತ್ತು ನಾಗಾಲ್ಯಾಂಡ್‌ನಲ್ಲಿ ಸುಮಾರು ಶೇ. 90 ಕ್ರೈಸ್ತರಿದ್ದರೆ, ತ್ರಿಪುರಾ, ಅಸ್ಸಾಮ್ ಮತ್ತು ಸಿಕ್ಕಿಂನಲ್ಲಿ ಶೇ.60-80 ಹಿಂದೂಗಳಿದ್ದಾರೆ. ಸಿಕ್ಕಿಂ (ವಜ್ರಯಾನ) ಮತ್ತು ಅರುಣಾಚಲ ಪ್ರದೇಶದಲ್ಲಿ (ತೇರವಾಡ) ಶೇ.20-30 ಬೌದ್ಧರಿದ್ದಾರೆ. ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ಹೊರಗಿನವರು ನೆಲವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ರಾಜಸ್ಥಾನಿ, ಗುಜರಾತಿಗಳು ಸಂಪೂರ್ಣವಾಗಿ ವ್ಯಪಾರದ ಹಿಡಿತವನ್ನು ಇಟ್ಟುಕೊಂಡಿದ್ದರೆ, ಯು.ಪಿ., ಬಿಹಾರಿಗಳು ಎಲ್ಲಾ ರೀತಿಯ ಕೂಲಿ ಕೆಲಸಗಳನ್ನು ಮಾಡುತ್ತಾರೆ.

ಶಾಲೆ, ಆಸ್ಪತ್ರೆಗಳಲ್ಲಿ ಹೆಚ್ಚು ಮಲಯಾಳಿಗಳು ಕೆಲಸ ಮಾಡುತ್ತಿದ್ದರು. ಆದರೆ ಪ್ರಸಕ್ತ ಅದೆಲ್ಲ ಒಂದಷ್ಟು ಬದಲಾಗಿದೆ. ಇನ್ನು ಬಂಡುಕೋರರ ವಿಷಯಕ್ಕೆ ಬಂದಾಗ ಅಸ್ಸಾಮ್, ಮಣಿಪುರ, ನಾಗಾಲ್ಯಾಂಡ್ ಮತ್ತು ತ್ರಿಪುರಾದಲ್ಲಿ ಹೆಚ್ಚುಕಡಿಮೆ ಸಣ್ಣ ಪ್ರಮಾಣದ ಯುದ್ಧಗಳೇ ನಡೆಯುತ್ತಿದ್ದವು. ಆರಂಭದಿಂದಲೂ ಈ ಪ್ರದೇಶ ದಿಲ್ಲಿಯ ಆಡಳಿತದ ಹಿಡಿತಕ್ಕೆ ಬರಲೇ ಇಲ್ಲ. ನಾಗಾಲ್ಯಾಂಡಿನ ಅಂಗಾಮಿ ಬುಡಕಟ್ಟಿನ ಜಾಪು ಫಿಜೊ ನಮಗೆ ಪ್ರತ್ಯೇಕ ದೇಶ ಕೊಡಲಿಲ್ಲ ಎಂದು ನಾಗಾ ನ್ಯಾಷನಲ್ ಕೌನ್ಸಿಲ್(ಎನ್‌ಎನ್‌ಸಿ) ಸ್ಥಾಪಿಸಿದ ನಂತರ ಅದರಿಂದ ಎನ್‌ಎಸ್‌ಸಿಎನ್ ಎಂಬ ಇನ್ನೊಂದು ಬಿಳಲು ಹುಟ್ಟಿಕೊಂಡಿತು. ಜೊತೆಗೆ ಅಸ್ಸಾಮಿನ ಯುಎಲ್‌ಎಫ್‌ಎ, ಬಿಡಿಎಸ್‌ಎಫ್(ಬೋಡೋ), ಕೆಎಲ್‌ಒ ಮತ್ತು ಮೇಘಾಲಯದ ಎಚ್‌ಎಲ್‌ಎನ್‌ಸಿ ಹುಟ್ಟಿಕೊಂಡವು.

1990ರ ಅಂತ್ಯಕ್ಕೆ ಅಸ್ಸಾಮ್ ರಾಜ್ಯ ಒಂದರಲ್ಲೇ 10,000ಕ್ಕಿಂತ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು. ಇದರಲ್ಲಿ ಮಿಲಿಟಿರಿಯವರು, ನಾಗರಿಕರು ಮತ್ತು ಬಂಡುಕೋರರು ಸೇರಿದ್ದರು. ಆಯುಧಗಳ ಕಳ್ಳಸಾಗಣೆ, ಹಣ ಸುಲಿಗೆ, ರಸ್ತೆ/ರೈಲು ತಡೆ ಬಂದ್‌ಗಳು ನಿರಂತರವಾಗಿ ನಡೆದಿದ್ದವು. ಬಂಗಾಳ ಮತ್ತು ಬರ್ಮಾ ಗಡಿಗಳು ಉಗ್ರವಾದಿಗಳ ತಾಣಗಳಾಗಿದ್ದವು. ಅಸ್ಸಾಮಿನಲ್ಲಿ ಇಂಧನ ಅನಿಲ ದೊರಕುತ್ತಿದ್ದು ಅದೀಗ ಖಾಲಿಯಾಗುವ ಹಂತಕ್ಕೆ ಬಂದಿದೆ. ಅರಣ್ಯ ಸಂಪತ್ತನ್ನು ಸಾಕಷ್ಟು ಕೊಳ್ಳೆ ಹೊಡೆಲಾಯಿತು. ಮೇಘಾಲಯದಲ್ಲಿ ಒಂದಷ್ಟು ಕಡಿಮೆ ದರ್ಜೆಯ ಬುಟಮಿನಸ್ ಇದ್ದಲನ್ನು ಕಳ್ಳತನ ಮಾಡಿ ತೆಗೆಯಲಾಗುತ್ತಿದೆ. ಅದನ್ನು ಬಿಟ್ಟರೆ ಈಶಾನ್ಯ ವಲಯದಲ್ಲಿ ಯಾವುದೇ ಉದ್ಯೋಗಗಳು ಸೃಷ್ಟಿಯಾಗುವ ಸಂಪನ್ಮೂಲಗಳಿಲ್ಲ. ಕಳೆದ ಎರಡು ದಶಕಗಳಲ್ಲಿ ಇಲ್ಲಿನ ವಿದ್ಯಾವಂತ ಯುವಜನಾಂಗ ದೇಶದ ನಾನಾಕಡೆಗೆ ವಲಸೆಹೋಗಿ ಹೆಚ್ಚಾಗಿ ಖಾಸಗಿ ಉದ್ಯೋಗಳಲ್ಲಿ ತೊಡಗಿಕೊಂಡಿದೆ. ಸಣ್ಣಪುಟ್ಟ ಅಂಗಡಿಗಳನ್ನು ತೆರೆದುಕೊಂಡಿದ್ದಾರೆ. ಹೊಟೇಲು-ಪಬ್ಬು, ಸೆಕ್ಯೂರಿಟಿ, ಬ್ಯೂಟಿ ಪಾರ್ಲರ್(ಯುವತಿಯರು), ಮನೆ ಕೆಲಸ ಇತ್ಯಾದಿಗಳಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಮಣಿಪುರ ಹೊತ್ತಿಕೊಂಡಿರುವ ಸಮಸ್ಯೆ ರಾಜಕೀಯ ಹಿನ್ನೆಲೆಯಿಂದ ಕೂಡಿದೆ. ಮೇ 3ರಂದು ಇಂಪಾಲ ಕಣಿವೆಯ ಬಹುಸಂಖ್ಯಾತ ಮೈತೈ ಮತ್ತು ಸುತ್ತಲಿನ ಬೆಟ್ಟಗಳಲ್ಲಿ ವಾಸಿಸುವ ಕುಕಿನಾಗಾ-ರೆ ಬುಡಕಟ್ಟುಗಳ ನಡುವೆ ಜನಾಂಗೀಯ ಘರ್ಷಣೆ ಹೊತ್ತಿಕೊಂಡು ಹಿಂಸಾಚಾರಕ್ಕೆ ತಿರುಗಿಕೊಂಡಿತು. ಇದುವರೆಗೂ ನೂರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡು 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೈತೈ ಜನರು ಬಹಳ ವರ್ಷಗಳಿಂದಲೂ ಪರಿಶಿಷ್ಟ ಪಂಗಡದ ಕೆಳಗೆ ಮೀಸಲಾತಿಗೆ ಬೇಡಿಕೆಯನ್ನು ಇಟ್ಟಿದ್ದಾರೆ. ಇದು ಬುಡಕಟ್ಟು ಸಮುದಾಯಗಳಿಗೆ ಹೋಲಿಸುವ ಸವಲತ್ತಾಗಿದೆ. ಪ್ರಸಕ್ತ ಬಿಜೆಪಿ ಸರಕಾರ ಇರುವ ಮಣಿಪುರದಲ್ಲಿ ಹೈಕೋರ್ಟ್‌ನಲ್ಲಿರುವ ಮೀಸಲಾತಿ ವಿಷಯದ ಬಗ್ಗೆ ನಾಲ್ಕು ವಾರಗಳಲ್ಲಿ ತೀರ್ಮಾನ ತೆಗೆದುಕೊಳ್ಳುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿತು.

ಮಣಿಪುರದ ಎಲ್ಲಾ ಬುಡಕಟ್ಟು ವಿದ್ಯಾರ್ಥಿಗಳ ಯೂನಿಯನ್‌ಗಳು ಎಲ್ಲಾ ಗುಡ್ಡಗಾಡು ಜಿಲ್ಲೆಗಳಲ್ಲಿ ಮೈತೈ ಜನರ ಮೀಸಲಾತಿ ಬೇಡಿಕೆಯನ್ನು ಪ್ರತಿಭಟಿಸಿತೊಡಗಿದವು. ಮೈತೈ ಮತ್ತು ಬುಡಕಟ್ಟುಗಳ ನಡುವೆ ದಿಢೀರನೆ ತೀವ್ರ ಘರ್ಷಣೆಗಳು ಹುಟ್ಟಿಕೊಂಡಿವೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು 10,000 ಸೈನಿಕರು ಮತ್ತು ಅರೆಸೈನಿಕ ಪಡೆಗಳು ಮಣಿಪುರ ತಲುಪಿವೆ. ಅಂತರ್ಜಾಲವನ್ನು ಕಡಿತಗೊಳಿಸಲಾಯಿತು. ಸೆಕ್ಷನ್ 144 ಮತ್ತು ತುರ್ತು ಪರಿಸ್ಥಿತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಮಣಿಪುರದ ಸಾವಿರಾರು ಮಹಿಳೆಯರು ಮಕ್ಕಳು, ವೃದ್ಧರು ಮೇಘಾಲಯದ ಗಡಿಯೊಳಕ್ಕೆ ವಲಸೆ ಬಂದಿದ್ದಾರೆ. ಮಣಿಪುರ ರಾಜ್ಯದ ಒಟ್ಟು ಜನಸಂಖ್ಯೆ 35 ಲಕ್ಷ. ಅದರಲ್ಲಿ ಶೇ. 40 ಕುಕಿ ನಾಗಾಗಳು ಕ್ರೈಸ್ತರಾಗಿದ್ದಾರೆ. ಇವರು ರಾಜ್ಯದ 90 ಭಾಗದ ರಕ್ಷಿತ ಅರಣ್ಯ ಬೆಟ್ಟಗುಡ್ಡಗಳಲ್ಲಿ ವಾಸ ಮಾಡುತ್ತಿದ್ದರೆ ಲೋಕ್‌ಟಕ್ ಸರೋವರದ ಸುತ್ತಲಿನ ಬಯಲು ಪ್ರದೇಶದಲ್ಲಿ ಮೈತೈ ಜನರಿದ್ದಾರೆ. ಮೈತೈಗಳು ರಾಜಕೀಯದಲ್ಲಿ ಪ್ರಾಬಲ್ಯ ಪಡೆದಿದ್ದು 60 ವಿಧಾನಸಭಾ ಸ್ಥಾನಗಳಲ್ಲಿ 41 ಸ್ಥಾನಗಳನ್ನು ಪಡೆದಿದ್ದರೆ ಕುಕಿ ನಾಗಾಗಳು ಕೇವಲ 19 ಸ್ಥಾನಗಳಲ್ಲಿ ಮಾತ್ರ ಮೀಸಲಾತಿ ಪಡೆದಿದ್ದಾರೆ. ಇದರಿಂದ ಮೈತೈಗಳು ಪ್ರಾಬಲ್ಯ ಹೊಂದಿದ್ದಾರೆ ಎನ್ನುವುದು ಕುಕಿ ನಾಗಾ ಸಮುದಾಯಗಳ ದೂರು. ಇಲ್ಲಿನ ಸಮಸ್ಯೆ ಎಂದರೆ ಯಾವುದೇ ಘರ್ಷಣೆಗಳು ಪ್ರಾರಂಭವಾದರೂ ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಸಾರ್ವಜನಿಕರು ತೀವ್ರವಾಗಿ ಪಾಲ್ಗೊಳ್ಳುತ್ತಾರೆ. ಜೊತೆಗೆ ತಣ್ಣಗಿರುವ ಬಂಡುಕೋರರು ಹಿನ್ನೆಲೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಈ ಘರ್ಷಣೆಯನ್ನು ಸಮಾಧಾನವಾಗಿ ಉಪಶಮನಗೊಳಿಸಬೇಕಿದೆ. ಇಲ್ಲವೆಂದರೆ ಭುಗಿಲೆದ್ದಿರುವ ಬೆಂಕಿ ಆರುವುದು ಅಷ್ಟು ಸುಲಭವಲ್ಲ. ಒಂದೆರಡು ದಶಕಗಳಿಂದ ತಣ್ಣಗಾಗಿದ್ದ ಈಶಾನ್ಯ ವಲಯ ಮತ್ತೆ ಪ್ರಕ್ಷುಬ್ದತೆಗೆ ತಿರುಗಿಕೊಳ್ಳುವ ಸಾಧ್ಯತೆ ಇದೆ.

(ಲೇಖಕರು 1988-92 ಮತ್ತು 2006-10ರವರೆಗೂ ಈಶಾನ್ಯ ವಲಯದಲ್ಲಿ ಉದ್ಯೋಗ ಮಾಡಿದ್ದಾರೆ)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X