Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಮಸ್ಯೆಗಳನ್ನು ಸೃಷ್ಟಿಸುವುದಕ್ಕಾಗಿಯೇ...

ಸಮಸ್ಯೆಗಳನ್ನು ಸೃಷ್ಟಿಸುವುದಕ್ಕಾಗಿಯೇ ಕೋಟ್ಯಂತರ ವೆಚ್ಚ ಮಾಡುತ್ತಿರುವ ಸರಕಾರ

ವಾರ್ತಾಭಾರತಿವಾರ್ತಾಭಾರತಿ3 Feb 2022 12:05 AM IST
share
ಸಮಸ್ಯೆಗಳನ್ನು ಸೃಷ್ಟಿಸುವುದಕ್ಕಾಗಿಯೇ ಕೋಟ್ಯಂತರ ವೆಚ್ಚ ಮಾಡುತ್ತಿರುವ ಸರಕಾರ

ಇದೀಗ ಚುನಾವಣೆಯ ಕಾರಣಕ್ಕಾಗಿ ಸುದ್ದಿಯಲ್ಲಿರುವ ಉತ್ತರ ಪ್ರದೇಶ ಹತ್ತು ಹಲವು ಸಮಸ್ಯೆಗಳಿಗಾಗಿ ಕುಖ್ಯಾತಿ. ಅನಕ್ಷರತೆ, ಬಡತನ ಎರಡರಲ್ಲೂ ಮುಂಚೂಣಿಯಲ್ಲಿರುವ ರಾಜ್ಯ ಇದು. ಕೆಟ್ಟ ಆರೋಗ್ಯ ವ್ಯವಸ್ಥೆಯ ಮೂಲಕ ನೂರಾರು ಮಕ್ಕಳನ್ನು ಬಲಿ ಪಡೆದ ಹೆಮ್ಮೆ ಈ ರಾಜ್ಯಕ್ಕೆ ಸೇರಿದೆ. ಅಪರಾಧ, ಅತ್ಯಾಚಾರಕ್ಕಾಗಿ ಸದಾ ಮುಖಪುಟದಲ್ಲಿ ಸುದ್ದಿಯಾಗುತ್ತಾ ಬಂದಿದೆ. ಹಿಂಸಾ ರಾಜಕೀಯದಿಂದ ಉತ್ತರ ಪ್ರದೇಶ ದಿನದಿಂದ ದಿನಕ್ಕೆ ಸೊರಗುತ್ತಿದೆ. ಇಂತಹ ರಾಜ್ಯ ಇದೀಗ ಇನ್ನೊಂದು ಸಮಸ್ಯೆಯಿಂದ ಬಿಡಿಸಿಕೊಳ್ಳಲು ಒದ್ದಾಡುತ್ತಿದೆ. ವಿಪರ್ಯಾಸವೆಂದರೆ, ಈ ಸಮಸ್ಯೆಗಳನ್ನು ಹುಟ್ಟಿಸಿ ಹಾಕಿದ್ದೇ ಇಲ್ಲಿನ ಸರಕಾರ ಮತ್ತು ಈ ಸಮಸ್ಯೆಯನ್ನು ಹುಟ್ಟಿಸಲೋಸುಗವೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ ಮಾತ್ರವಲ್ಲ, ಈಗಲೂ ಮಾಡುತ್ತಿದೆ. ಮತ್ತು ಇದೀಗ ಆ ಸಮಸ್ಯೆಗೆ ಪರಿಹಾರ ಹುಡುಕಲು ಇನ್ನಷ್ಟು ದುಡ್ಡು ವೆಚ್ಚ ಮಾಡುವ ಸ್ಥಿತಿಗೆ ಬಂದು ನಿಂತಿದೆ. ಉತ್ತರಪ್ರದೇಶದಲ್ಲಿ ಬೀಡಾಡಿ ದನಗಳ ಸಮಸ್ಯೆ ಎಷ್ಟು ತೀವ್ರವಾಗಿದೆಯೆಂದರೆ, ರಾಜ್ಯದ ನೂತನ ಮುಖ್ಯ ಕಾರ್ಯದರ್ಶಿ ತನ್ನ ಮೊದಲ ಪತ್ರಿಕಾಗೋಷ್ಠಿಯಲ್ಲಿ ಎಲ್ಲ ಬೀಡಾಡಿ ದನಗಳನ್ನು ಹಿಡಿಯಲು ಜನವರಿ 1ರಿಂದ 10ರವರೆಗೆ ವಿಶೇಷ ಅಭಿಯಾನವೊಂದನ್ನು ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಉದ್ದೇಶಕ್ಕೆ 10 ದಿನಗಳು ಸಾಕಾಗುವುದಿಲ್ಲ ಎನ್ನುವುದನ್ನು ಮನಗಂಡ ಅವರು ಅವಧಿಯನ್ನು ಇನ್ನೂ ಒಂದು ವಾರ ವಿಸ್ತರಿಸಿದ್ದಾರೆ.

ಹಳ್ಳಿಗಳಲ್ಲಿರುವ ದನಗಳನ್ನು ಲಕ್ನೊಗೆ ಕೊಂಡೊಯ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರ ನಿವಾಸದಲ್ಲಿ ಕಟ್ಟಿಹಾಕುವಂತೆ ಒತ್ತಾಯಿಸಿ, ಸೋಶಿಯಲಿಸ್ಟ್ ಕಿಸಾನ್ ಸಭಾ ಎನ್ನುವ ರೈತ ಸಂಘಟನೆಯೊಂದು ಒಂದು ವರ್ಷದಿಂದ ಹರ್ದೋಯಿ, ಉನ್ನಾವೊ ಮತ್ತು ಬಾರಾಬಂಕಿ ಜಿಲ್ಲೆಗಳಲ್ಲಿ ಅಭಿಯಾನವೊಂದನ್ನು ನಡೆಸುತ್ತಿದೆ. ಪ್ರತಿ ಬಾರಿ ಗ್ರಾಮಸ್ಥರು ಈ ಜಿಲ್ಲೆಗಳಿಂದ ಲಕ್ನೊಗೆ ಮೆರವಣಿಗೆ ಆರಂಭಿಸಿದಾಗ ಪೊಲೀಸರು ಮತ್ತು ಜಿಲ್ಲಾಡಳಿತ ಮಧ್ಯ ಪ್ರವೇಶಿಸುತ್ತದೆ. ಅಧಿಕಾರಿಗಳು ವಾಹನಗಳನ್ನು ತರಿಸಿ ಅದರಲ್ಲಿ ದನಗಳನ್ನು ಸಮೀಪದ ಗೋಶಾಲೆಗಳಿಗೆ ಸಾಗಿಸುತ್ತಾರೆ. ಈ ಅಭಿಯಾನವು ಕಳೆದ ವರ್ಷದ ಡಿಸೆಂಬರ್ ಕೊನೆಯ ವೇಳೆಗೆ ತೀವ್ರಗೊಂಡಿತು. ಹರ್ದೋಯಿ ಜಿಲ್ಲೆಯ ಭಾರವಾನ್ ವಿಭಾಗದ ಹಲವು ಗ್ರಾಮಗಳ ಗ್ರಾಮಸ್ಥರು 250-300 ದನಗಳೊಂದಿಗೆ ಒಟ್ಟು ಸೇರಿದ್ದರು. ಅವುಗಳನ್ನು ಜಿಲ್ಲಾಡಳಿತವು ತೆಗೆದುಕೊಂಡು ಹೋಗುತ್ತದೆ ಎನ್ನುವುದು ಅವರ ನಿರೀಕ್ಷೆಯಾಗಿತ್ತು. ಜನವರಿ 1, 4 ಮತ್ತು 5ರಂದು ವಿವಿಧ ಗ್ರಾಮಗಳ ಗ್ರಾಮಸ್ಥರು ಮುಖ್ಯಮಂತ್ರಿ ನಿವಾಸದತ್ತ ನಡೆಯಲು ಆರಂಭಿಸಿದರು.

2021ರಲ್ಲಿ, ಸೋಶಿಯಲಿಸ್ಟ್ ಕಿಸಾನ್ ಸಭಾ ಬೀಡಾಡಿ ದನಗಳ ಕುರಿತ ಅಭಿಯಾನ ಆರಂಭಿಸಿದ ಬಳಿಕ, ಏಳು ಗ್ರಾಮ ಪಂಚಾಯತ್‌ಗಳಲ್ಲಿ ಖಾಯಂ ಗೋಶಾಲೆಗಳನ್ನು ಆರಂಭಿಸುವ ನಿರ್ಧಾರವನ್ನು ಸಂದಿಲ ತಾಲೂಕಿನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ತೆಗೆದುಕೊಂಡರು. ಆ ಗ್ರಾಮಗಳೆಂದರೆ ಸಯ್ಯಾಪುರ್, ಮಹುವದಂಡ, ದಂಡ, ಜಾಜುಪುರ್, ಬಹೇರಿಯ, ಸಾಗರ್ ಗದಿ ಮತ್ತು ಜಗ್ಸಾರ. ಆದರೆ, ಈ ವಿಷಯದಲ್ಲಿ ಆ ಗ್ರಾಮಗಳ ಗ್ರಾಮ ಪ್ರಧಾನರು ಉತ್ಸುಕರಾಗಿರಲಿಲ್ಲ. ಹಾಗಾಗಿ, ಇದಕ್ಕೆ ಸಂಬಂಧಿಸಿದ ನಿರ್ಣಯವನ್ನು ಅನುಮೋದಿಸಲು ಈ ಗ್ರಾಮಗಳ ಜಮೀನು ನಿರ್ವಹಣಾ ಸಮಿತಿಗಳು ನಿರಾಕರಿಸಿದವು. ಯಾಕೆಂದರೆ, ತಮ್ಮ ಗ್ರಾಮಗಳಲ್ಲಿ ಖಾಯಂ ಗೋಶಾಲೆಗಳನ್ನು ಸ್ಥಾಪಿಸಿದರೂ, ಅವುಗಳ ನಿರ್ವಹಣೆಗೆ ಜಿಲ್ಲಾಡಳಿತದಿಂದ ಹಣ ಬರುವ ಬಗ್ಗೆ ಈ ಗ್ರಾಮ ಪಂಚಾಯತ್‌ಗಳಿಗೆ ವಿಶ್ವಾಸವಿಲ್ಲ.
ವಾಸ್ತವ ಸಂಗತಿಯೆಂದರೆ, ರೈತನೊಬ್ಬ ತನ್ನ ನಿರುಪಯುಕ್ತ ದನವನ್ನು ಗೋಶಾಲೆಯೊಂದಕ್ಕೆ ತೆಗೆದುಕೊಂಡು ಹೋದರೆ ಅಲ್ಲಿ ಅದನ್ನು ಸೇರ್ಪಡೆ ಮಾಡಿಕೊಳ್ಳಲು 200ರಿಂದ 500 ರೂಪಾಯಿ ಲಂಚ ನೀಡಬೇಕಾದ ಪರಿಸ್ಥಿತಿಯಿದೆ. ಈ ಗೋಶಾಲೆಗಳಲ್ಲಿ ಉಸ್ತುವಾರಿಗಳಾಗಿ ನೇಮಕಗೊಂಡವರಿಗೆ ಅವರ ಗೌರವ ಧನವನ್ನು ನಿಯಮಿತವಾಗಿ ನೀಡಲಾಗುತ್ತಿಲ್ಲ. ಹಾಗಾಗಿ, ತಾವು ಬದುಕಲು ಬೇಕಾದ ವರಮಾನವನ್ನು ಸಂಪಾದಿಸಲು ಸ್ವಲ್ಪ ಸಮಯದ ಬಳಿಕ ದನಗಳನ್ನು ಬಿಟ್ಟು ಬಿಡುವುದಲ್ಲದೆ ಬೇರೆ ಆಯ್ಕೆ ಅವರಿಗಿಲ್ಲ. ಈ ಗೋವುಗಳು ಬಳಿಕ ರೈತರ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ತಿನ್ನುತ್ತವೆ. ಇಲ್ಲಿ ರೈತರು ಸಂಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುತ್ತಾರೆ. ತಮ್ಮ ಬೆಳೆಗಳನ್ನು ರಕ್ಷಿಸಲು ಅವರು ಇಡೀ ರಾತ್ರಿ ಎಚ್ಚರದಿಂದಿರಬೇಕಾಗುತ್ತದೆ. ಕೆಲವು ರೈತರು ತಮ್ಮ ಹೊಲಗಳ ಸುತ್ತ ಬ್ಲೇಡ್‌ಗಳನ್ನೊಳಗೊಂಡ ತಂತಿಯ ಬೇಲಿ ಹಾಕಿದ್ದಾರೆ. ಆದರೆ, ಇದನ್ನು ಉತ್ತರಪ್ರದೇಶ ರಾಜ್ಯ ಸರಕಾರ ನಿಷೇಧಿಸಿದೆ. ಯೋಗಿ ಸರಕಾರವು ಪ್ರತೀಕಾರಾತ್ಮಕ ನೀತಿಗಳಿಗೆ ಪ್ರಸಿದ್ಧವಾಗಿದೆ. ಬೀಡಾಡಿ ದನಗಳ ಸಮಸ್ಯೆಯನ್ನು ಪರಿಹರಿಸುವ ಬದಲು ಅವರು ಬ್ಲೇಡ್‌ಯುಕ್ತ ತಂತಿ ಬೇಲಿ ಹಾಕಿರುವುದಕ್ಕಾಗಿ ರೈತರನ್ನು ಶಿಕ್ಷಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ರೈತರಿಗೆ ದಂಡ ವಿಧಿಸಲಾಗುತ್ತದೆ.

ಯೋಗಿ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ, ದನಗಳನ್ನು ರಕ್ಷಿಸುವ ತನ್ನ ಉದ್ದೇಶವನ್ನು ಘೋಷಿಸಿತು. ಇದರಿಂದ ಉತ್ತೇಜನಗೊಂಡ ‘ಗೋರಕ್ಷಕರು’ ದನಗಳೊಂದಿಗೆ ಹೋಗುವ ಎಲ್ಲರಿಗೂ ಥಳಿಸಲಾರಂಭಿಸಿದರು. ಅವರೆಲ್ಲರೂ ದನಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದಾರೆನ್ನುವುದು ಅವರ ಭಾವನೆಯಾಗಿತ್ತು. ಇದರಿಂದಾಗಿ ಜಾನುವಾರು ವ್ಯಾಪಾರ ಒಮ್ಮೆಲೆ ಕೊನೆಗೊಂಡಿತು ಹಾಗೂ ಬೀಡಾಡಿ ದನಗಳು 2017ರಲ್ಲೇ ರೈತರಿಗೆ ಹೊರೆಯಾದವು. ಇದು ಹಲವು ರೀತಿಯಲ್ಲಿ ಗ್ರಾಮೀಣ ಹೈನೋದ್ಯಮಗಳ ಮೇಲೆ ಪರಿಣಾಮಗಳನ್ನು ಬೀರಿದೆ. ಇದರಿಂದಾಗಿ ಅನುಪಯುಕ್ತ ಗೋವುಗಳನ್ನು ಮಾರುವ ಹಕ್ಕುಗಳನ್ನು ರೈತರು ಕಳೆದುಕೊಂಡರು. ಅವರಿಗೆ ಸಿಗುವ ಆದಾಯದ ಮೂಲವೊಂದಕ್ಕೆ ಸಂಚಾಕಾರವಾಯಿತು. ಜೊತೆಗೆ ಆ ಗೋವುಗಳನ್ನು ಸಾಕುವ ಅಧಿಕ ವೆಚ್ಚವೂ ಅವರದಾಯಿತು. ಗೋವುಗಳನ್ನು ಜನರು ಪೂಜಿಸುವುದಕ್ಕೆ ಸಾಕುವುದಿಲ್ಲ, ಗೋ ಸಾಕಣೆ ಅರ್ಥಶಾಸ್ತ್ರದ ಭಾಗ ಎನ್ನುವುದನ್ನು ಅರಿಯದ ಸರಕಾರವೊಂದರ ಎಡಬಿಡಂಗಿ ನೀತಿಯಿಂದಾಗಿ ಗೋಸಾಕಣೆ ಆಪತ್ತಿನಲ್ಲಿದೆ ಮಾತ್ರವಲ್ಲ, ಅನುಪಯುಕ್ತ ಗೋವುಗಳು ಬೀಡಾಡಿಗಳಾಗಿ ಜನರಿಗೆ ಸಮಸ್ಯೆ ತಂದೊಡ್ಡುತ್ತಿದೆ. ಅಥವಾ ಅದನ್ನು ಕಂಡವರು ಅಕ್ರಮವಾಗಿ ಮಾಂಸ ಸಂಸ್ಕರಣಾ ಘಟಕಗಳಿಗೆ ಸಾಗಿಸಿ ದುಡ್ಡು ಮಾಡುತ್ತಿದ್ದಾರೆ. ಇದು ಕೇವಲ ಉತ್ತರ ಪ್ರದೇಶದ ಸಮಸ್ಯೆ ಮಾತ್ರವಲ್ಲ. ಈಗಾಗಲೇ ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು, ಗೋವುಗಳನ್ನು ಮಾರುವ ರೈತರ ಹಕ್ಕನ್ನು ಕಿತ್ತುಕೊಂಡು, ಗೋಶಾಲೆಗಳಿಗಾಗಿ ಹಣವನ್ನು ದುಂದು ವೆಚ್ಚ ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಈ ಗೋಶಾಲೆಗಳೇ ಸರಕಾರದ ಪಾಲಿಗೆ ಬಹುದೊಡ್ಡ ಹೊರೆಯಾಗಲಿದೆ ಮತ್ತು ಗ್ರಾಮೀಣ ಹೈನೋದ್ಯಮ ಸಂಪೂರ್ಣ ನಾಶವಾಗಿ, ಆ ಜಾಗದಲ್ಲಿ ಕಾರ್ಪೊರೇಟ್ ಬೃಹತ್ ಡೈರಿಗಳು ಸ್ಥಾಪನೆಯಾದರೆ ಅದರಲ್ಲಿ ಅಚ್ಚರಿಯಿಲ್ಲ. ಅನುಪಯುಕ್ತ ಗೋವುಗಳನ್ನು ಈ ಕಾರ್ಪೊರೇಟ್ ಸಂಸ್ಥೆಗಳು, ಮಾಂಸವಾಗಿಸಿ ನೇರವಾಗಿ ವಿದೇಶಕ್ಕೆ ರವಾನಿಸುವುದರಿಂದ, ಅವು ಎರಡೂ ಕೈಗಳಲ್ಲಿ ಲಾಭಗಳನ್ನು ಬಾಚಲಿವೆ. ಗ್ರಾಮೀಣ ರೈತರು ತಮ್ಮ ಹಟ್ಟಿಗಳನ್ನು ಮುಚ್ಚಿ ಈ ಕಾರ್ಪೊರೇಟ್ ಹಟ್ಟಿಗಳಲ್ಲಿ ಸೆಗಣಿ ಬಾಚುವ ಸ್ಥಿತಿ ನಿರ್ಮಾಣವಾಗಲಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X