Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ನಂದಿನಿ ‘ಗೋಶಾಲೆ’ಯ ಪಾಲಾಗದಿರಲಿ

ನಂದಿನಿ ‘ಗೋಶಾಲೆ’ಯ ಪಾಲಾಗದಿರಲಿ

25 Nov 2022 9:39 AM IST
share
ನಂದಿನಿ ‘ಗೋಶಾಲೆ’ಯ ಪಾಲಾಗದಿರಲಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

ಗುರುವಾರಕ್ಕೆ ಅನ್ವಯವಾಗುವಂತೆ ನಂದಿನಿ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಿಸಲಾಗಿದೆ. ಕೊರೋನೋತ್ತರ ದಿನಗಳಲ್ಲಿ ಕರ್ನಾಟಕ ಅಪೌಷ್ಟಿಕತೆಯ ಕಾರಣಕ್ಕಾಗಿ ಸುದ್ದಿ ಮಾಡುತ್ತಿದೆ. ಈ ಅಪೌಷ್ಟಿಕತೆಗೆ ಬಲಿಯಾಗುತ್ತಿರುವವರಲ್ಲಿ 6 ವರ್ಷದೊಳಗಿನ ಮಕ್ಕಳೇ ಅಧಿಕ ಎನ್ನುವುದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈಗಾಗಲೇ ಬಹಿರಂಗಪಡಿಸಿದೆ. 6 ವರ್ಷದೊಳಗಿನ ಮೂರು ಲಕ್ಷಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆಯ ಕಾರಣದಿಂದ ವಿವಿಧ ರೋಗಗಳಿಂದ ನರಳುತ್ತಿದ್ದಾರೆ ಎನ್ನುವುದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ. ಕೊರೋನೋತ್ತರ ದಿನಗಳಲ್ಲಿ ಹೆಚ್ಚಿದ ನಿರುದ್ಯೋಗ, ಬಡತನ ಇತ್ಯಾದಿಗಳ ಕಾರಣದಿಂದಾಗಿ ಈ ಅಪೌಷ್ಟಿಕತೆ ಇನ್ನಷ್ಟು ಹೆಚ್ಚಿದೆ. ಕೊರೋನದ ಗದ್ದಲದಿಂದಾಗಿ ಟಿಬಿಯಂತಹ ಮಾರಕ ಕಾಯಿಲೆ ಹೊಂದಿದ್ದ ರೋಗಿಗಳು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರು. ಕೊರೋನೋತ್ತರ ದಿನಗಳಲ್ಲಿ ಪೌಷ್ಟಿಕ ಆಹಾರಕ್ಕಾಗಿ ಕ್ಷಯ ರೋಗಿಗಳಿಗೆ ಸರಕಾರ ನೀಡುತ್ತಿರುವ ಅನುದಾನಕ್ಕೆ ತಡಯುಂಟಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಪರಿಣಾಮವಾಗಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕ್ಷಯ ರೋಗ ಇನ್ನಷ್ಟು ಬಿಗಡಾಯಿಸುತ್ತಿದೆ. ಕ್ಷಯಕ್ಕೂ ಅಪೌಷ್ಟಿಕತೆಗೂ ನೇರ ಸಂಬಂಧವಿದೆ. ಇಂತಹ ಸಂದರ್ಭದಲ್ಲಿ ಹಾಲಿನ ದರ ಹೆಚ್ಚಾದರೆ ಅದು ರೋಗಿಗಳ ಮೇಲೆ ಬೀರುವ ಪರಿಣಾಮ ಇನ್ನಷ್ಟು ಭೀಕರವಾಗಿರುತ್ತದೆ. ಈಗಾಗಲೇ ಬಡವರು ಹಾಲನ್ನು ಬಳಸುವಂತಹ ಸ್ಥಿತಿಯಲ್ಲಿಲ್ಲ. ಆರೋಗ್ಯ ಕಾರಣಕ್ಕಾಗಿ ಅನಿವಾರ್ಯ ಎನ್ನುವ ಸಂದರ್ಭದಲ್ಲಷ್ಟೇ ಬಡವರು ಹಾಲನ್ನು ಬಳಸುತ್ತಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಅಳಿದುಳಿದ ಬಡ, ಕೆಳ ಮಧ್ಯಮ ವರ್ಗದ ಮಕ್ಕಳು ಹಾಲನ್ನು ಕಣ್ಣಿಂದ ನೋಡುವುದೂ ಕಷ್ಟವಾಗಬಹುದು.

ಹಾಲಿನ ದರವನ್ನು ಹೆಚ್ಚಿಸಿರುವುದೇನೋ ಸರಿ. ಆದರೆ ಇದೇ ಸಂದರ್ಭದಲ್ಲಿ ಕ್ಷಯ ಪೀಡಿತರಿಗೆ, ಅಪೌಷ್ಟಿಕತೆಯ ಕಾಯಿಲೆಗಾಗಿ ಗುರುತಿಸಲ್ಪಟ್ಟಿರುವ ಜಿಲ್ಲೆಗಳಲ್ಲಿರುವ ಮಕ್ಕಳಿಗೆ ಮತ್ತು ತಾಯಂದಿರಿಗೆ ಉಚಿತವಾಗಿ ಹಾಲನ್ನು ತಲುಪಿಸುವ ದಾರಿಯೊಂದನ್ನು ಸರಕಾರ ಕಂಡುಕೊಳ್ಳಲೇ ಬೇಕು. ದೊರಕಿದ  ಹೆಚ್ಚುವರಿ ದರವನ್ನು ಹೈನೋದ್ಯಮದಲ್ಲಿ ತೊಡಗಿಕೊಂಡಿರುವ ರೈತರಿಗೆ ಸಿಗುವಂತೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದೂ ಸರಕಾರ ಹೇಳಿದೆ. ನಿಜ. ಹೈನೋದ್ಯಮ ದಿನದಿಂದ ದಿನಕ್ಕೆ ನಷ್ಟದಾಯಕವಾಗುತ್ತಿದೆ. ಸಾಕಣೆಯ ವೆಚ್ಚ ಇದ್ದಕ್ಕಿದ್ದಂತೆಯೇ ಹೆಚ್ಚಾಗಿರುವುದರಿಂದ ಹೈನೋದ್ಯಮ ಲಾಭದಾಯಕವಾಗುತ್ತಿಲ್ಲ ಎನ್ನುವುದು ರೈತರ ಅಳಲು. ಆದರೆ ಇದಕ್ಕೆ ಕಾರಣ ಯಾರು ಎನ್ನುವ ಬಗ್ಗೆ ಸರಕಾರ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ‘ಗೋ ಸಾಕಣೆಯ ವೆಚ್ಚ ಅಧಿಕವಾಗಲು ಕಾರಣ’ ಎಂದು ಕೊರೋನ, ಬೆಲೆಯೇರಿಕೆ ಇತ್ಯಾದಿಗಳ ಕಡೆಗೆ ಬೆರಳು ತೋರಿಸಿ ಸರಕಾರ ಸಮರ್ಥನೆ ನೀಡಬಹುದು. ಆದರೆ, ಯಾವಾಗ ಸರಕಾರ ರೈತರ ಜಾನುವಾರು ಮಾರಾಟದ ವಿಷಯದಲ್ಲಿ ಹಸ್ತಕ್ಷೇಪ ಮಾಡಿತೋ, ಅಲ್ಲಿಂದ ಗೋಸಾಕಣೆಯ ವೆಚ್ಚ ಏಕಾಏಕಿ ಅಧಿಕವಾಯಿತು. ಅನುಪಯುಕ್ತ ದನಗಳು ಹಾಲುಕೊಡದೇ ಇರಬಹುದು. ಆದರೆ ಅದು ರೈತರ ಆರ್ಥಿಕ ಮೂಲಗಳಲ್ಲಿ ಒಂದಾಗಿತ್ತು. ಅವುಗಳನ್ನು ಮಾರಾಟ ಮಾಡಿ, ಇರುವ ದನಗಳಿಗೆ ಆಹಾರವನ್ನು ಒದಗಿಸುವುದಕ್ಕೆ ರೈತರಿಗೆ ಅವಕಾಶವಿತ್ತು. ಸರಕಾರ ರೈತರ ಆ ಆರ್ಥಿಕ ಮೂಲವನ್ನು ಕಿತ್ತುಕೊಳ್ಳುವ ಮೂಲಕ, ಹೈನೋದ್ಯಮವನ್ನು ರೈತರ ಪಾಲಿಗೆ ನಷ್ಟದಾಯಕವನ್ನಾಗಿಸಿತು. ಜೊತೆಗೆ ಜಾನುವಾರು ನಕಲಿ ಗೋರಕ್ಷಕರ ಬೆದರಿಕೆ. ಈ ಕಾರಣದಿಂದ ಹೈನೋದ್ಯಮದಿಂದಲೇ ಅವರು ದೂರ ಸರಿಯುತ್ತಿದ್ದಾರೆ. ಇದೇ ಹೊತ್ತಿಗೆ ಗೋವುಗಳಿಗೆ ಸಾಂಕ್ರಾಮಿಕ ಕಾಯಿಲೆಗಳು ಹರಡುತ್ತಿದ್ದು, ರೈತರ ಬದುಕನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ರೈತರು ಬೀದಿಗೆ ಬಿಟ್ಟ ದನಗಳೇ ಇಂದು ಆರೈಕೆಯಿಲ್ಲದೆ ಸಾಂಕ್ರಾಮಿಕ ರೋಗಗಳನ್ನು ಹರಡುತ್ತಿವೆ. ಪರಿಣಾಮವಾಗಿ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಈವರೆಗೆ ಲಕ್ಷಾಂತರ ಗೋವುಗಳು ಸಾವಿಗೀಡಾಗಿವೆ.

ಇಂತಹ ಸಂದರ್ಭದಲ್ಲಿ ಗೋವುಗಳನ್ನು ಸಾಕುವ ನಿಜವಾದ ರೈತರಿಗೆ ಸರಕಾರ ಸಹಾಯ ಧನವನ್ನು ನೀಡಬೇಕು. ಆದರೆ ಅನುಪಯುಕ್ತ ದನಗಳನ್ನು ಸಾಕುವ ‘ಗೋಶಾಲೆ’ಗಳೆಂಬ ಅಕ್ರಮಗಳಿಗೆ ಸರಕಾರ ಜನಸಾಮಾನ್ಯರ ದುಡ್ಡನ್ನು ಸುರಿಯುತ್ತಿದೆ. ಈ ಹಣ, ಗೋಸಾಕಣೆ ಮಾಡುತ್ತಿರುವ ರೈತರಿಗೆ ತಲುಪಿದ್ದಿದ್ದರೆ ನಷ್ಟದಲ್ಲಿರುವ ರೈತರ ಬದುಕು ಚೇತರಿಸಿಕೊಳ್ಳುತ್ತಿತ್ತು. ಆತುರಾತುರದಲ್ಲಿ ಹಾಲಿನ ದರವನ್ನು ಏರಿಸುವ ಅಗತ್ಯವೂ ಬೀಳುತ್ತಿರಲಿಲ್ಲ. ಸಹಾಯಧನ ನೀಡುವುದು ಪಕ್ಕಕ್ಕಿರಲಿ, ಸಾಕಿದ ಅನುಪಯುಕ್ತ ಜಾನುವಾರುಗಳನ್ನು ಮಾರಾಟ ಮಾಡುವ ಹಕ್ಕನ್ನು  ರೈತರಿಗೆ ಮರಳಿಸಿದರೂ ಸಾಕು, ತಮ್ಮ ನಷ್ಟವನ್ನು ತಾವೇ ಭರಿಸಿಕೊಳ್ಳುವ ತಾಕತ್ತನ್ನು ರೈತರು ತಮ್ಮದಾಗಿಸಿಕೊಳ್ಳುತ್ತಾರೆ. ತಲೆಬುಡವಿಲ್ಲದ ಕಾನೂನನ್ನು ಜಾರಿಗೊಳಿಸಿ, ಗೋಸಾಕಣೆಯ ವೆಚ್ಚ ಅಧಿಕವಾಗುವಂತೆ ಮಾಡಿದ ಸರಕಾರವೇ ರೈತರ ಪರವಾಗಿ ಮೊಸಳೆ ಕಣ್ಣೀರು ಸುರಿಸಿ ಹಾಲಿನ ದರವನ್ನು ಹೆಚ್ಚಿಸಿರುವುದು ವಿಪರ್ಯಾಸವಾಗಿದೆ.

‘ನಂದಿನಿ’ ಸಂಸ್ಥೆ ಗ್ರಾಮೀಣ ಪ್ರದೇಶದಲ್ಲಿ ರೈತರನ್ನು ಸಂಘಟಿಸಿ, ಆರ್ಥಿಕವಾಗಿ ಅವರನ್ನು ಸ್ವಾವಲಂಬಿಯಾಗಿಸಿರುವುದು ಮಾತ್ರವಲ್ಲ, ಅತ್ಯಂತ ಗುಣಮಟ್ಟದ ಹಾಲು, ಮೊಸರು, ತುಪ್ಪ ಜನ ಸಾಮಾನ್ಯರಿಗೆ ದೊರಕುವುದಕ್ಕೇ ಕಾರಣವಾಗಿದೆ. ಇಂತಹ ಸಂಸ್ಥೆಯ ಮೇಲೆ ಪರೋಕ್ಷ ದಾಳಿ ನಡೆಸಿ ಅದನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ. ಜಾನುವಾರು ಮಾರಾಟ ಕಾಯ್ದೆ, ಗೋವುಗಳಿಗೆ ಬಂದಿರುವ ಸಾಂಕ್ರಾಮಿಕ ರೋಗ ಇವೆಲ್ಲ ದರ ಜೊತೆಗೆ, ಕಾರ್ಪೊರೇಟ್ ಸಂಸ್ಥೆಗಳ ವಕ್ರದೃಷ್ಟಿಯೂ ಈ ಸಂಸ್ಥೆಯ ಮೇಲೆ ಬಿದ್ದಿದೆ. ಒಂದೆಡೆ ಗುಜರಾತ್‌ನ ಅಮುಲ್ ಸೇರಿದಂತೆ ಐದು ಸಹಕಾರಿ ಸಂಸ್ಥೆಗಳ ಜೊತೆಗೆ ಕೆಎಂಎಫ್‌ನ್ನು ವಿಲೀನಗೊಳಿಸುವ ವದಂತಿಗಳು ಹರಡಿವೆ. ನಂದಿನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಅಮುಲ್ ಪ್ರಯತ್ನಿಸುತ್ತಿದೆ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ. ಜೊತೆಗೆ ಪತಂಜಲಿಯಂತಹ ಸಂಸ್ಥೆಗಳು ಒಳಗಿಂದೊಳಗೆ ನಂದಿನಿಯನ್ನು ನಾಶ ಮಾಡಲು ಯೋಜನೆ ರೂಪಿಸಿದೆ ಎಂಬ ವದಂತಿಗಳಿವೆ. ಇವಕ್ಕೆಲ್ಲ ಪುಷ್ಟಿ ನೀಡುವಂತೆ ಇತ್ತೀಚೆಗೆ ನಂದಿನಿ ಉತ್ಪನ್ನಗಳ ಬಗ್ಗೆ ಹತ್ತು ಹಲವು ಕುಂದುಕೊರತೆಗಳನ್ನು ಗ್ರಾಹಕರು ಹೊರ ಹಾಕುತ್ತಿದ್ದಾರೆ. ನಂದಿನಿ ಉತ್ಪನ್ನಗಳು ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ ಎನ್ನುವ ಟೀಕೆ ಒಂದೆಡೆಯಾದರೆ, ಉತ್ಪನ್ನಗಳ ಗುಣಮಟ್ಟ ಹಿಂದಿನಂತಿಲ್ಲ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಬೇರೆ ಖಾಸಗಿ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಹಾಲನ್ನು ಕೊಂಡು ತಮ್ಮದೇ ಬ್ರಾಂಡಿನಲ್ಲಿ ಅವುಗಳನ್ನು ಮಾರುಕಟ್ಟೆಗೆ ಇಳಿಸುತ್ತಿದ್ದಾರೆ ಎನ್ನುವುದು ಇನ್ನೊಂದು ದೂರು. ಹೀಗೆ ಹೊರ ಒಳಗಿನಿಂದ ನಂದಿನಿಯ ಮೇಲೆ ದಾಳಿ ನಡೆಯುತ್ತಿದೆ. ಕರ್ನಾಟಕದ ಅಸ್ಮಿತೆಯಾಗಿರುವ ನಂದಿನಿಯನ್ನು ಉಳಿಸಿ ಬೆಳೆಸುವುದು ಸರಕಾರದ ಕರ್ತವ್ಯವಾಗಿದೆ. ನಂದಿನಿ ಎಂದಿಗೂ ಸರಕಾರದ ಗೋಶಾಲೆಯನ್ನು ಸೇರುವಂತಾಗಬಾರದು. ಆರೈಕೆಯಿಲ್ಲದೆ, ಆಹಾರವಿಲ್ಲದೆ ಗೋಶಾಲೆಗಳಲ್ಲಿ ನರಳಿ ಸಾಯುತ್ತಿರುವ ಗೋವುಗಳ ಸ್ಥಿತಿಗತಿಗಳು ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತವೆ. ಈ ಗೋಶಾಲೆಯ ಗೋವುಗಳ ಸ್ಥಿತಿ ಕರ್ನಾಟಕದ ಹೆಮ್ಮೆಯಾಗಿರುವ ‘ನಂದಿನಿ’ಗೆ ಬರದಂತೆ ನೋಡಿಕೊಳ್ಳುವುದು ಸರಕಾರದ ಹೊಣೆಗಾರಿಕೆಯಾಗಿದೆ.

share
Next Story
X