Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಲೇಖನಗಳು
  4. ಸೋನಮ್ ವಾಂಗ್ಚುಕ್: ಏಕಾಏಕಿ...

ಸೋನಮ್ ವಾಂಗ್ಚುಕ್: ಏಕಾಏಕಿ ‘ದೇಶದ್ರೋಹಿ’ಯಾದ ‘ದೇಶಪ್ರೇಮಿ’

ನಿಖಿಲ್ ಕೋಲ್ಪೆನಿಖಿಲ್ ಕೋಲ್ಪೆ29 Sept 2025 9:05 AM IST
share
ಸೋನಮ್ ವಾಂಗ್ಚುಕ್: ಏಕಾಏಕಿ ‘ದೇಶದ್ರೋಹಿ’ಯಾದ ‘ದೇಶಪ್ರೇಮಿ’

ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯ ಮತ್ತು ವಿಶೇಷ ಸ್ಥಾನಮಾನ ನೀಡಬೇಕೆಂದು ಆಗ್ರಹಿಸಿ ಅಲ್ಲಿ ನಡೆದ ಪ್ರತಿಭಟನೆಯ ವೇಳೆ ಉಂಟಾದ ಹಿಂಸಾಚಾರಕ್ಕೆ ಸಂಬಂಧಿಸಿ, ಸೆಪ್ಟಂಬರ್ 26ರಂದು ರಾಷ್ಟ್ರೀಯ ಭದ್ರತಾ ಕಾಯ್ದೆಯೆಂಬ ಕರಾಳ ಕಾಯ್ದೆಯ ಅಡಿಯಲ್ಲಿ ಬಂಧಿಸಲಾಗಿರುವ ಜನಪ್ರಿಯ ವಿಜ್ಞಾನ ಸಂಶೋಧಕ, ಪರಿಸರ ಹೋರಾಟಗಾರ, ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಸೋನಮ್ ವಾಂಗ್ಚುಕ್ ಯಾರು, ಅವರ ಸಾಧನೆ ಏನು, ಹೋರಾಟ ಏನು ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ- ಎರಡೇ ವರ್ಷಗಳ ಹಿಂದೆ ಕಾಶ್ಮೀರ ಮತ್ತು ಲಡಾಖ್ನಲ್ಲಿ ನರೇಂದ್ರ ಮೋದಿ ಸರಕಾರದ ನಡೆಗಳನ್ನು ಬೆಂಬಲಿಸಿದ್ದ ಮತ್ತು ಬಿಜೆಪಿಯ ಪ್ರಚಾರಾಭಿಯಾನಕ್ಕೆ ಜನಪ್ರಿಯ ಸರಕಾಗಿದ್ದ ಅವರು, ಸರಕಾರವನ್ನು ವಿರೋಧಿಸಿದಾಗ ಮಾತ್ರ ಏಕಾಏಕಿಯಾಗಿ ‘ದೇಶದ್ರೋಹಿ’ಯಾಗಿ ಬದಲಾದದ್ದು ಹೇಗೆ, ಅವರ ಬಂಧನವು ಹುಟ್ಟುಹಾಕಿರುವ ಗಂಭೀರ ಮತ್ತು ಆತಂಕಕಾರಿ ಪ್ರಶ್ನೆಗಳು ಯಾವುವು ಎಂಬುದನ್ನು ಇಲ್ಲಿ ಚುಟುಕಾಗಿ ನೋಡೋಣ.

ಐವತ್ತೊಂಭತ್ತು ವರ್ಷ ಪ್ರಾಯದ ಸೋನಮ್ ವಾಂಗ್ಚುಕ್ ಅವರು, ಭಾರತದ ಜನರಿಗೆ ಪರಿಚಿತರಾಗಿ ಜನಜನಿತರಾದದ್ದು, 2009ರ ಆಮಿರ್ ಖಾನ್ ನಟಿಸಿದ ‘ತ್ರೀ ಈಡಿಯಟ್ಸ್’ ಚಿತ್ರದ- ವಿಶಿಷ್ಟವಾಗಿ ಚಿಂತಿಸುವ, ತನ್ನದೇ ಜೀವನ ದೃಷ್ಟಿಕೋನ ಹೊಂದಿರುವ ಇಂಜಿನಿಯರಿಂಗ್ ವಿದ್ಯಾರ್ಥಿ ‘ರಾಂಚೋ’ ಪಾತ್ರದ ಮೂಲಕ. ಚಿತ್ರದಲ್ಲಿ ಶ್ರೀಮಂತ ಕಾಂಟ್ರಾಕ್ಟರ್ ಒಬ್ಬನ ಮಗ ರಣ್ಚೋಡ್ ದಾಸ್ ಶ್ಯಾಮಲ್ ದಾಸ್ ಚಾಂಚಡ್ ಹೆಸರಿನಲ್ಲಿ ಕಲಿಯುವ ಈ ವ್ಯಕ್ತಿ ನಿಜ ಜೀವನದಲ್ಲಿ ಫುನ್ಸುಕ್ ವಾಂಗ್ಡೂ ಎಂದು ನಂತರ ಗೊತ್ತಾಗುತ್ತದೆ. ಭಿನ್ನ ಚಿಂತನೆ ಮತ್ತು ದೃಷ್ಟಿಕೋನದ, ಅಸಾಂಪ್ರದಾಯಿಕ ಶಿಕ್ಷಣವನ್ನು ಪ್ರತಿಪಾದಿಸುವ ಈ ಪಾತ್ರವು ಬೊಮ್ಮನ್ ಇರಾನಿ ನಿರ್ವಹಿಸಿದ, ಟೊಳ್ಳು ಮೌಲ್ಯ ಮತ್ತು ಪ್ರತಿಷ್ಠೆಗಳ ಖಡಕ್ ಸಾಂಪ್ರದಾಯಿಕ ಶಿಕ್ಷಣದ ಪ್ರತಿಪಾದಕ ಪ್ರಿನ್ಸಿಪಾಲರನ್ನು ಎದುರಿಸಿ, ಪರಿವರ್ತಿಸುವ ಕತೆಯನ್ನು ಹೊಂದಿದೆ. ವಾಸ್ತವದಲ್ಲಿ ಈ ಫುನ್ಸುಕ್ ವಾಂಗ್ಡೂ ಎಂಬುದು ಸೋನಮ್ ವಾಂಗ್ಚುಕ್ ಅವರ ಅಣ್ಣನ (ಫುನ್ಸೋಂಗ್ ವಾಂಗ್ಚುಕ್) ಹೆಸರನ್ನೇ ಆಚೆಈಚೆ ಮಾಡಿ ಬಳಸಿದ್ದಾದರೂ, ಈ ಪಾತ್ರವು ಬಹುತೇಕ ಸೋನಮ್ ವಾಂಗ್ಚುಕ್ ಅವರ ಜೀವನವನ್ನೇ ಸಿನಿಮೀಯ ರಂಜಕತೆಯೊಂದಿಗೆ ಚಿತ್ರಿಸುತ್ತದೆ. ಒಂಭತ್ತು ವರ್ಷಗಳ ತನಕ ಶಾಲೆಗೆ ಹೋಗದ ಅವರು, ತಾಯಿಯಿಂದ ಮಾತೃಭಾಷೆಯಲ್ಲಿಯೇ ಮೂಲಶಿಕ್ಷಣ ಪಡೆದವರು. ನಂತರ ಶ್ರೀನಗರದಲ್ಲಿ ಶಿಕ್ಷಣ ಪಡೆದರೂ, ಭಾಷೆಯ ಕಾರಣದಿಂದ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಗೆ ಹೊಂದಿಕೊಳ್ಳಲು ಒದ್ದಾಡಿದವರು. ಹೀಗಿದ್ದೂ ಅವರು ಮಾಡಿದ ಸಾಧನೆ ಅವರನ್ನು ಲಡಾಖ್ನಲ್ಲಿ ಮನೆಮಾತನ್ನಾಗಿ ಮಾಡಿದ್ದು ಈ ಚಿತ್ರಕ್ಕೆ ಪ್ರೇರಣೆಯಾಯಿತು.

ಸೋನಮ್ ವಾಂಗ್ಚುಕ್ ಅವರು ಲಡಾಖ್ನ ಲೇಹ್ ಜಿಲ್ಲೆಯ ಅಲ್ಚಿ ಎಂಬಲ್ಲಿ 1966ರ ಸೆಪ್ಟಂಬರ್ 1ರಂದು, ತಂದೆ ಸೋನಮ್ ವಾಂಗ್ಯಾಲ್ ಮತ್ತು ತಾಯಿ ತ್ಸೆರಿಂಗ್ ವಾಂಗ್ಮೋ ದಂಪತಿಯ ಮಗನಾಗಿ ಜನಿಸಿದರು. ಆರಂಭದಲ್ಲಿ ಔಪಚಾರಿಕ ಶಿಕ್ಷಣ ಪದ್ಧತಿಗೆ ಹೊಂದಿಕೊಳ್ಳಲು ಪೇಚಾಡಿದ ವಾಂಗ್ಚುಕ್ ನಂತರ ಶ್ರೀನಗರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿ)ಯಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಬಿಟೆಕ್ ಪದವಿ ಪಡೆದರು. ನಂತರ ಫ್ರಾನ್ಸ್ನಲ್ಲಿ ಭೂ ವಾಸ್ತು ವಿಜ್ಞಾನದ ಅಧ್ಯಯನವನ್ನೂ ಮಾಡಿದರು. ಆದರೆ, ಅವರು ಜನಪ್ರಿಯರಾದದ್ದು ಮಾತ್ರ ಜನಸಾಮಾನ್ಯರ ಜೀವನದಲ್ಲಿ ಉಪಯೋಗವಾಗುವ, ಸರಳವಾದ ಆವಿಷ್ಕಾರಗಳಿಂದ. ಅವುಗಳಲ್ಲಿ ಕೆಲವನ್ನಷ್ಟೇ ಇಲ್ಲಿ ಉಲ್ಲೇಖಿಸಿದರೆ ಅವರ ವ್ಯಕ್ತಿತ್ವದ ಒಂದು ಚಿತ್ರಣ ಸಿಗುತ್ತದೆ.

ಅವರು ಲೇಹ್ ಬಳಿ ಸೆಕ್ಮೋಲ್ (SECMOL) ಆಲ್ಟರ್ನೇಟಿವ್ ಸ್ಕೂಲ್ ಕ್ಯಾಂಪಸ್ ಎಂಬ ಸಂಸ್ಥೆಯನ್ನು ತೆರೆದರು. ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವುದೇ ಇಲ್ಲಿ ಪ್ರವೇಶಕ್ಕೆ ಅರ್ಹತೆ! ಇಲ್ಲಿ ಆವಿಷ್ಕಾರಿ, ಪ್ರಾಯೋಗಿಕ ವಿಧಾನಗಳಿಂದಲೇ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಇಲ್ಲಿ ವಾಂಗ್ಚುಕ್ ಮತ್ತು ವಿದ್ಯಾರ್ಥಿಗಳು ಲಡಾಖ್ನ ಕಠಿಣ ಚಳಿಗಾಲದಲ್ಲೂ ಸೌರಶಕ್ತಿಯಿಂದ ಬೆಚ್ಚಗಿರುವ ಮಣ್ಣಿನ ಕಟ್ಟಡಗಳನ್ನು ವಿನ್ಯಾಸ ಮಾಡಿದರು. ಇವರು ಐಸ್ ಸ್ತೂಪ ಎಂದು ಕರೆಯಲ್ಪಡುವ, ಚಳಿಗಾಲದ ತೊರೆಗಳ ನೀರಿನಿಂದ ನಿರ್ಮಿಸಲಾಗುವ ಬೃಹತ್ ಗಾತ್ರದ ಮಂಜುಗಡ್ಡೆಯ ಸ್ತೂಪಗಳ ಮೂಲಕ ಕೃತಕ ‘ಹಿಮ ಸರೋವರ’ಗಳನ್ನು ರಚಿಸಿದರು. ಅವು ಬೇಸಿಗೆಯಲ್ಲಿ ರೈತರಿಗೆ ನೀರಾವರಿಗೆ ಬೇಕಾದ ನೀರನ್ನು ಬಿಡುಗಡೆ ಮಾಡುತ್ತವೆ. ಅವರೀಗ ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್ (HIAL) ಎಂಬ ಸಂಸ್ಥೆಯ ಸ್ಥಾಪನೆಯಲ್ಲಿ ತೊಡಗಿದ್ದರು.

ದೇಶ ಪ್ರೇಮ ಇರುವುದು ಗಡಿಯಲ್ಲಿ ಮಾತ್ರವೇ, ಅದು ದೇಶದ ಉಳಿದೆಡೆ ಇಲ್ಲ ಎಂದು ತಿಳಿದಿರುವ ಭೂಪಟಪ್ರೇಮಿಗಳಿಗೂ ಖುಶಿಯಾಗುವಂತೆ ಇವರು ಸೈನಿಕರಿಗಾಗಿ ನಿರ್ಮಿಸಿದ ಸೋಲಾರ್ ಟೆಂಟ್ ಅವರಿಗೆ ಬಹಳಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತು. ಹಿಂದೆ ಮೈಮರಟ್ಟಿಸುವ ಚಳಿಯಲ್ಲಿ ಸೀಮೆ ಕಾಯುವ ಸೈನಿಕರು ಸೀಮೆ ಎಣ್ಣೆಯಿಂದ ಬಿಸಿಯಾಗುವ ಹೀಟರ್ನಿಂದ ಬೆಚ್ಚಗೆ ಇರಬೇಕಾಗಿತ್ತು. ಇದು ಭಾರವಾಗಿಯೂ, ಖರ್ಚಿನದಾಗಿಯೂ ಇತ್ತು. ಸೀಮೆಎಣ್ಣೆ ದಾಸ್ತಾನು ಇಟ್ಟಿರಲೇಬೇಕಾಗಿತ್ತು. ಸಾಗಾಟವೂ ಬಹಳ ದುಸ್ತರವಾಗಿತ್ತು. ಇವರು ಎರಡು ಚೇಂಬರ್ಗಳಿರುವ, ಕೇವಲ 30 ಕೆ.ಜಿ. ಭಾರವಿರುವ ಪೋರ್ಟೇಬಲ್ ಎಂದರೆ, ಸುಲಭದಲ್ಲಿ ಸಾಗಿಸಬಹುದಾದ ಸೋಲಾರ್ ಟೆಂಟನ್ನು ಮಾಡಿಕೊಟ್ಟರು. ಇದಕ್ಕೆ ನಿರ್ವಹಣಾ ಖರ್ಚೇ ಇಲ್ಲ ಮತ್ತು ಇದು ಬಿಸಿಲು ಇಲ್ಲದಾಗಲೂ ಸೋಲಾರ್ ರೇಡಿಯೇಷನ್ ಮೂಲಕ ಕೆಲಸ ಮಾಡುತ್ತದೆ.

ಇವರಿಗೆ ರೇಮೋನ್ ಮ್ಯಾಗ್ಸೆಸೆ, ಯುನೆಸ್ಕೋ, ರೋಲೆಕ್ಸ್ ಸಹಿತ ಹಲವಾರು ಪ್ರತಿಷ್ಠಿತ ಅಂತರ್ರಾಷ್ಟ್ರೀಯ ಪ್ರಶಸ್ತಿಗಳು ಸಿಕ್ಕಿವೆ. ಆತ್ಮನಿರ್ಭರ್, ಮೇಕ್ ಇನ್ ಇಂಡಿಯಾ ಮುಂತಾದ ಗಿಲೀಟಿನ ಘೋಷಣೆಗಳ ನಡುವೆ ಸರಕಾರ ಅವರಿಗೆ ಎಲ್ಲಾ ರೀತಿಯ ಪ್ರೋತ್ಸಾಹಗಳನ್ನು ಕೊಡಬೇಕಿತ್ತು, ಅವರ ಪ್ರತಿಭೆಯನ್ನು ದೇಶದ ಕಾರ್ಯಗಳಿಗೆ ಬಳಸಿಕೊಳ್ಳಬೇಕಿತ್ತು, ಅವರ ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸಿ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಿತ್ತು. ಆದರೆ, ಇವು ಯಾವುವನ್ನೂ ಮಾಡದ ಮೋದಿ ಸರಕಾರ ಅವರಿಗೆ ಕೊಟ್ಟದ್ದು ‘ದೇಶ ದ್ರೋಹಿ’ ಎಂಬ ಪಟ್ಟವನ್ನು! ಇದಕ್ಕೆ ಕಾರಣವಾದುದು ಏನು?

ಲಡಾಖ್ನಲ್ಲಿ ಅವರು ಕಾಶ್ಮೀರದ ವಿಭಜನೆ, ಪ್ರತ್ಯೇಕ ಲಡಾಖ್ ಇತ್ಯಾದಿಯಾಗಿ ಮೋದಿ ಸರಕಾರದ ನಿಲುವುಗಳನ್ನು ಬೆಂಬಲಿಸಿದವರೇ; ಮೋದಿ ಚೀನಾದ ವಸ್ತುಗಳನ್ನು ಬಹಿಷ್ಕರಿಸಲು ಕರೆ ನೀಡಿದಾಗ ಅವರು ಅದನ್ನು ಬೆಂಬಲಿಸಿದ್ದರು. (ಸುಲಭದಲ್ಲಿ ಭಾರತದಲ್ಲಿಯೇ ತಯಾರಾಗಬಹುದಾದ ವಸ್ತುಗಳನ್ನು ಚೀನಾದಿಂದ ಏಕೆ ಖರೀದಿಸಬೇಕು ಎಂಬುದು ಅವರ ನಿಲುವಾಗಿತ್ತು.) ಇದಕ್ಕಾಗಿ ಅವರು ಸರಕಾರದ ಮೆಚ್ಚುಗೆ, ಗೌರವಗಳಿಗೆ ಪಾತ್ರರಾದವರೇ. ಹೀಗಿರುವಾಗ ಅವರು ಒಮ್ಮಿಂದೊಮ್ಮೆಲೇ ದೇಶದ್ರೋಹಿ ಯಾಕಾದರು? ಯಾಕಾದರು ಎಂದರೆ, ಬಿಜೆಪಿಯು ಹಿಂದೆ ಭಾರತೀಯ ಸಂವಿಧಾನದ ಅನುಚ್ಛೇದ 6ರಂತೆ ಲಡಾಖ್ಗೆ ವಿಶೇಷ ಸ್ಥಾನಮಾನ ಕೊಡುವುದಕ್ಕೆ ಪರವೆಂದು ತೋರಿಸಿಕೊಂಡಿತ್ತು; ಆದರೀಗ ರಾಜ್ಯದ ಸ್ಥಾನಮಾನ ಮತ್ತು ವಿಶೇಷ ಸ್ಥಾನಮಾನದ ಎರಡೂ ಬೇಡಿಕೆಗಳಿಂದ ಹಿಂದೆ ಸರಿದುದರಿಂದ ಭ್ರಮನಿರಸನ ಹೊಂದಿದ ಅವರು, ಹೋರಾಟಕ್ಕೆ ಕರೆನೀಡಿದ್ದರಲ್ಲದೆ, ಸ್ವತಃ ಉಪವಾಸ ಸತ್ಯಾಗ್ರಹವನ್ನೂ ಆರಂಭಿಸಿದ್ದರು. ಅಲ್ಲಿ ನಡೆದ ಗಲಭೆಗಳು- ಲಡಾಖ್ನ ಬೇಡಿಕೆಗಳನ್ನು ಮೂಲದಲ್ಲೇ ಮಟ್ಟಹಾಕಲು ಸರಕಾರಕ್ಕೊಂದು ನೆಪ ಒದಗಿಸಿದವು. ಮೇಲಾಗಿ, ಲಡಾಖ್ಗೆ ವಿಶೇಷ ಶಿಕ್ಷಣ ವ್ಯವಸ್ಥೆ ಮತ್ತು ಅಲ್ಲಿನ ಹದಗೆಡುತ್ತಿರುವ ಹವಾಮಾನ ಮತ್ತು ಪರಿಸರ ಹಾನಿಯ ಬಗ್ಗೆ ಅವರು ಧ್ವನಿಯೆತ್ತುತ್ತಾ ಹೋರಾಟ ಮಾಡುತ್ತಲೇ ಬಂದಿದ್ದರು. ಇದು ದೇಶದಾದ್ಯಂತ ಏಕರೂಪದ ಶಿಕ್ಷಣ ಮತ್ತು ಇತರ ನೀತಿಗಳನ್ನು ಹೇರಬಯಸುವ ಕೇಂದ್ರೀಕರಣವಾದಿ ಸರಕಾರಕ್ಕೆ ಇಷ್ಟವಾಗಿರಲಿಲ್ಲ.

ಇಲ್ಲಿ ಸೋನಮ್ ವಾಂಗ್ಚುಕ್ ಅವರ ರಾಜಕೀಯ ಎನ್ನಬಹುದಾದ ನಡೆಗಳನ್ನು ಚುಟುಕಾಗಿ ಹೇಳಬೇಕು. 2013ರಲ್ಲಿ ಅವರು ಪರಿಸರವಾದಿ ಗ್ರೀನ್ ಪಾರ್ಟಿ ಮಾದರಿಯ ನ್ಯೂ ಲಡಾಖ್ ಮೂವ್ಮೆಂಟ್ (ಎನ್ಎಲ್ಎಂ) ಎಂಬ ವಿದ್ಯಾರ್ಥಿಗಳ ನೇತೃತ್ವದ ಸಂಘಟನೆಯನ್ನು ಕಟ್ಟಲು ನೆರವಾದರು. ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರದ ಘೋಷಣೆಯಡಿ ಎಲ್ಲಾ ಪಕ್ಷಗಳ ನಾಯಕರನ್ನು ಜೊತೆಗೆ ತರುವುದು ಅದರ ಉದ್ದೇಶವಾಗಿತ್ತು.

2020ರಲ್ಲಿ ಭಾರತ-ಚೀನಾ ಗಡಿ ಘರ್ಷಣೆಯ ವೇಳೆ ಅವರು ಭಾರತೀಯರು ‘ವಾಲೆಟ್ ಪವರ್’ (ಪರ್ಸಿನ ಶಕ್ತಿ- ಖರೀದಿ ಶಕ್ತಿ) ಬಳಸಿ, ಚೀನಾದ ವಸ್ತುಗಳನ್ನು ಬಹಿಷ್ಕರಿಸಲು ಕರೆ ನೀಡಿದ್ದರು. ಇದನ್ನು ಮಾಧ್ಯಮಗಳೂ, ಸೆಲೆಬ್ರಿಟಿಗಳೂ ಕೊಂಡಾಡಿದ್ದರು ಮತ್ತು ಸರಕಾರಕ್ಕೂ ಇದು ಅಪ್ಯಾಯಮಾನವಾಗಿತ್ತು.

ಆದರೆ, ಸರಕಾರದ ವಚನ ಭ್ರಷ್ಟತೆಯಿಂದ ವಿಚಲಿತರಾದ ಅವರು 2023ರ ಜನವರಿ 26ರಂದು ಹವಾಮಾನ ಬದಲಾವಣೆ, ಲಡಾಖ್ನ ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳು ಮತ್ತು ಅದನ್ನು ಸಂವಿಧಾನದ ಅನುಚ್ಛೇದ 6ರ ಅಡಿಯಲ್ಲಿ ರಕ್ಷಿಸಬೇಕೆಂಬ ಬೇಡಿಕೆಯ ಕುರಿತು ಗಮನ ಸೆಳೆಯಲು ಖಾರ್ದುಂಗ್ಲಾ ಪಾಸ್ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ಯತ್ನಿಸಿದರು. ಆದರೆ, ಅಲ್ಲಿ ಮೈನಸ್ 40 ಡಿಗ್ರಿ ಸೆಲ್ಸಿಯಸ್ ಚಳಿ ಇದೆಯೆಂದು ನೆಪ ಹೇಳಿ, ಅವರನ್ನು ಗೃಹಬಂಧನದಲ್ಲಿ ಇರಿಸಲಾಯಿತು; ಅವರ ಬೆಂಬಲಿಗ ವಿದ್ಯಾರ್ಥಿಗಳನ್ನು ಬಂಧಿಸಲಾಯಿತು.

ಮಾರ್ಚ್ 2024ರಲ್ಲಿ ಅವರು ಲಡಾಖ್ಗೆ ಸಂವಿಧಾನದ 6ನೇ ಪರಿಚ್ಛೇದದ ಅಡಿಯಲ್ಲಿ ಕೈಗಾರಿಕಾ ಮತ್ತು ಗಣಿಗಾರಿಕೆ ಚಟುವಟಿಕೆಗಳಿಂದ ರಕ್ಷಣೆ ಕೋರಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದರು. ನಂತರ ಅದೇ ಅನುಚ್ಛೇದದ ಅಡಿಯಲ್ಲಿ ಲಡಾಖ್ಗೆ ರಾಜ್ಯ ಸ್ಥಾನಮಾನ ಕೊಡಬೇಕೆಂದು 21 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರು. ಬಿಹಾರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಎಕರೆ ಜಮೀನನ್ನು ಎಕರೆಗೆ ವರ್ಷಕ್ಕೆ ಒಂದು ರೂ. ಗುತ್ತಿಗೆಯಲ್ಲಿ ಅದಾನಿ ಸಂಸ್ಥೆಗೆ ಗಣಿಗಾರಿಕೆಗಾಗಿ ನೀಡಿ ಹತ್ತು ಲಕ್ಷ ಮರಗಳ ಮಾರಣ ಹೋಮಕ್ಕೆ ಕಾರಣವಾದ ಸರಕಾರಕ್ಕೆ ಅವರ ಗಣಿಗಾರಿಕೆ ವಿರೋಧಿ ನೀತಿ ಅರಗೀತೆ ಎಂದು ಯೋಚಿಸಿ. 2024ರ ಸಪ್ಟೆಂಬರ್ 30ರಂದು ಲಡಾಖ್ನಿಂದ ದಿಲ್ಲಿಗೆ ಬಂದು ಪ್ರಧಾನಿ, ರಾಷ್ಟ್ರಪತಿ ಅಥವಾ ಗೃಹಮಂತ್ರಿಯ ಭೇಟಿಯ ಬೇಡಿಕೆ ಇಟ್ಟಾಗ ಸರಕಾರ ಅವರನ್ನು ಮಾತನಾಡಿಸದೇ ಉಡಾಫೆಯಿಂದ ಬಂಧಿಸಿತು.

ಇದೀಗ ಸಪ್ಟೆಂಬರ್ 26, 2025ರಂದು ಅವರನ್ನು ವಿಚಾರಣೆ ಇಲ್ಲದೆ ಜಾಮೀನು ರಹಿತವಾಗಿ ಜೈಲಲ್ಲಿ ಇಡಬಹುದಾದ ರಾಷ್ಟ್ರೀಯ ಭದ್ರತಾ ಕಾಯ್ದೆಯೆಂಬ ಕರಾಳ ಕಾಯ್ದೆಯ ಅಡಿಯಲ್ಲಿ ಬಂಧಿಸಿ, ಜನರ ಪ್ರತಿಭಟನೆಗೆ ಬೆದರಿ, ರಾಜಸ್ಥಾನದ ಜೋಧ್ಪುರ ಜೈಲಿನಲ್ಲಿ ಇರಿಸಿದೆ. ಸರಕಾರದ ಎದುರು ಧ್ವನಿಯೆತ್ತಿದ್ದಕ್ಕಾಗಿ ದೇಶದ್ರೋಹದ ಆರೋಪ ಹೊತ್ತು, ಅನ್ಯಾಯವಾಗಿ ಜೈಲುಪಾಲಾದ ದೇಶಪ್ರೇಮಿಗಳ ಹೆಸರುಗಳಿಗೆ ಇನ್ನೊಂದು ಸೇರ್ಪಡೆಯಾಗಿದೆ.

ಸೋನಮ್ ವಾಂಗ್ಚುಕ್ ಅವರು ಹಿಂದೆ ಮೋದಿಯ ನಿಲುವುಗಳನ್ನು ಬೆಂಬಲಿಸಿದ್ದರು ಎಂಬ ಏಕಮಾತ್ರ ಕಾರಣದಿಂದ ಅವರನ್ನು ದೂರ ಇಡುವ ಒಂದು ಬುದ್ಧಿಜೀವಿ ವರ್ಗ ಕಂಡುಬರುತ್ತಿದೆ. ಇದು ನೇರವಾಗಿ ಸರಕಾರದ ಸಂಚಿನ ಬಲೆಗೆ ಬೀಳುವ ನಡೆ. ಅವರು ಬೆಂಬಲಿಗರಾಗಿದ್ದುದನ್ನೂ, ಅವರನ್ನು ಹಿಂದೆ ಹೊಗಳಿ ಬಳಸಿಕೊಂಡದ್ದನ್ನೂ ಮರೆತು ಅವರನ್ನೇ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿಯಲ್ಲಿ ಬಂಧಿಸುತ್ತಾರೆ ಎಂದರೆ, ಮೊದಲಿನಿಂದಲೂ ವಿರೋಧಿಸುತ್ತಾ ಬಂದಿರುವವರ ಪಾಡೇನು ಎಂದು ಯೋಚಿಸಬೇಕು.

ಯಾವುದೇ ನೇರ ಆಧಾರವಿಲ್ಲದೇ ಅವರನ್ನು ಕೇವಲ ಸಂಶಯದ ಮೇಲೆ ಬಂಧಿಸುವುದಿದ್ದರೂ, ಸಾಮಾನ್ಯ ಕಾಯ್ದೆಯ ಅಡಿಯಲ್ಲಿ ಬಂಧಿಸಬಹುದಿತ್ತು. ಆರೋಪಗಳ ತನಿಖೆ ನಡೆಸಬಹುದಿತ್ತು. ಈಗ ಬಿಜೆಪಿಯ ಅಪಪ್ರಚಾರ ಬ್ರಿಗೇಡ್ ಅವರ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಿದೆ. ಅವರು ಲಡಾಖ್ ಗಲಭೆಗೆ ಪ್ರಚೋದನೆ ನೀಡಿದ, ಬಾಂಗ್ಲಾ ಮತ್ತು ಪಾಕಿಸ್ತಾನದ ಜೊತೆಗೆ, ಬಂಧಿತನಾದ ಪಾಕ್ ಗುಪ್ತಚರನ ಜೊತೆಗೆ ನಂಟು ಹೊಂದಿರುವ ಸಂಶಯವಿದೆ, ಅವರು ನೇಪಾಳದ ಸಹಿತ ವಿದೇಶಗಳಲ್ಲಿ ನಡೆದಿರುವ ಆಂದೋಲನಗಳ ಕುರಿತು ಮಾತನಾಡಿದ್ದಾರೆ,

ಈ ಕುರಿತು ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಲಡಾಖ್ ಪೊಲೀಸ್ ಎಸ್.ಡಿ.ಸಿಂಗ್ ಜಾಮ್ವಾಲ್ ಹೇಳಿದ್ದಾರೆ. ಜೊತೆಗೆ ಅವರಿಗೆ ವಿದೇಶದಿಂದ ಹಣಬರುತ್ತಿದೆ ಎಂಬ ಕುರಿತೂ ತನಿಖೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಇದು ತನ್ನ ಸಂಸ್ಥೆ ನೀಡಿದ ತಾಂತ್ರಿಕ ಸಲಹಾ ಸೇವೆಗಳಿಗೆ ಸಿಕ್ಕ ಹಣವೆಂದೂ, ಅದರ ಲೆಕ್ಕ ನೀಡಿ, ತೆರಿಗೆಯನ್ನೂ ಭರಿಸಲಾಗಿದೆ ಎಂದೂ ವಾಂಗ್ಚುಕ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ವಾಂಗ್ಚುಕ್ ಅವರ ಮಾತುಗಳೇ ಗಲಭೆಗಳನ್ನು ಪ್ರಚೋದಿಸಿದವು ಎಂಬುದಕ್ಕೆ ಯಾವ ಆಧಾರವಿದೆ? ಅಂದರೆ, ಪೊಲೀಸರು ಯಾವುದನ್ನೂ ಖಚಿತಪಡಿಸದೇ, ಕೇವಲ ಸಂಶಯದ ಆಧಾರದಲ್ಲಷ್ಟೇ ಈ ಕರಾಳ ಕಾಯ್ದೆ ಹೇರಿದ್ದಾರೆ ಎಂದರೆ, ದೇಶದಲ್ಲಿ ಸಂವಿಧಾನ ಖಾತರಿಪಡಿಸಿದ ವಾಕ್, ಚಲನೆ, ಪ್ರತಿಭಟನೆ ಮತ್ತು ಸ್ವಾತಂತ್ರ್ಯದ ಹಕ್ಕುಗಳ ಗತಿ ಏನಾಗುತ್ತಿದೆ ಎಂದು ಊಹಿಸಬಹುದು. ಗಲಭೆ ಪ್ರಚೋದಕರ ವಿರುದ್ಧ ‘ಬಲವಂತದ ಕ್ರಮ ಬೇಡ’ ಎಂಬ ನ್ಯಾಯಾಲಯದ ಆದೇಶಗಳು ಮನೆಮಾತಾಗಿರುವಾಗ, ಈ ಅವಸರದ ಕ್ರಮ ಎಷ್ಟು ಸರಿ?

ಜತೆಗೆ ಗೋದಿ ಮೀಡಿಯಾ ಮತ್ತು ಸಂಬಿತ್ ಪಾತ್ರ ರೀತಿಯ ಬಿಜೆಪಿ ಕೂಗುಮಾರಿಗಳು ವಾಂಗ್ಚುಕ್ ಅವರನ್ನು ವಿಚಾರಣೆಗೆ ಮೊದಲೇ ದೇಶದ್ರೋಹಿ ಎಂದು ತೀರ್ಮಾನಿಸಿ ಅಪಪ್ರಚಾರದಲ್ಲಿ ತೊಡಗಿವೆ. ಕನ್ನಡ ಪತ್ರಿಕೆಯೊಂದು ತನ್ನ ಕಡಿಮೆ ಪ್ರಾಶಸ್ತ್ಯದ ಮೂಲೆ ಸುದ್ದಿಯ ತಲೆಬರಹದಲ್ಲಿ ‘ಲಡಾಖ್ ಗಲಭೆಯ ಸೂತ್ರಧಾರನಿಗೆ ಪಾಕ್, ಬಾಂಗ್ಲಾದೇಶಿ ನಂಟು?’ ಎಂಬ ಅನೈತಿಕ ತೀರ್ಮಾನವನ್ನೇ ನೀಡಿದೆ. ಸಂಬಿತ್ ಪಾತ್ರ ಬಿಡುಗಡೆ ಮಾಡಿರುವ ವಾಂಗ್ಚುಕ್ ಬಾಂಗ್ಲಾದ ಮುಹಮ್ಮದ್ ಯೂನಿಸ್ ಅವರೊಂದಿಗೆ ಇರುವ ಹಳೆಯ ಚಿತ್ರವು ಸ್ವತಃ ವಾಂಗ್ಚುಕ್ ಅವರೇ ತನ್ನ ಸಾಮಾಜಿಕ ಜಾಲದಲ್ಲಿ ಹಾಕಿರುವಂತಹದ್ದು. ಅದರಲ್ಲಿ ಗುಟ್ಟೇನಿದೆ? ಅದು ಯೂನಿಸ್ ಬಾಂಗ್ಲಾದ ನಾಯಕರಾಗುವುದಕ್ಕೂ ಹಿಂದಿನದು. ಅದರಲ್ಲೇನು ತಪ್ಪು? ವಾಂಗ್ಚುಕ್ ಪಾಕಿಸ್ತಾನದ ಅತ್ಯಂತ ಹಳೆಯ ಪತ್ರಿಕೆ ‘ಡಾನ್’ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೂ ತಪ್ಪು ಎಂದು ಬಿಂಬಿಸಲಾಗುತ್ತಿದೆ. ದೇಶವೊಂದರ ಸರಕಾರದ ಮುಖ್ಯಸ್ಥನೊಬ್ಬ ಬೇರೆ ದೇಶದಿಂದ ಹಿಂದಿರುಗುವಾಗ ಏಕಾಏಕಿ ವಿಮಾನ ತಿರುಗಿಸಿ, ಕರೆಯದೇ ಪಾಕಿಸ್ತಾನಕ್ಕೆ ಹೋಗಿ ಬಿರಿಯಾನಿ ತಿಂದು ಗಿಫ್ಟ್ ಕೊಟ್ಟುಬಂದರೆ ಅದು ಮುತ್ಸದ್ದಿತನವಾಗುತ್ತದೆ! ನಾಚಿಗೆಗೇಡಾಗಲೀ, ದೇಶದ್ರೋಹವಾಗಲೀ ಆಗುವುದಿಲ್ಲ, ಅಲ್ಲವೇ? ಜೋಧ್ಪುರದಲ್ಲಿ ವಾಂಕ್ಚುಕ್ ಅವರನ್ನು ಜೈಲಿಗೆ ಹಾಕುವಾಗ ಪ್ರತಿಭಟಿಸಿದ ಒಂಟಿ ವ್ಯಕ್ತಿಯನ್ನೂ ಬಂಧಿಸಲಾಗಿದೆ ಎಂದರೆ, ಈ ಸರಕಾರಕ್ಕೆ ಪ್ರತಿಭಟನೆ ಎಂದರೆ ಎಷ್ಟೊಂದು ಭಯ!?

ಒಟ್ಟಿನಲ್ಲಿ ಸರಕಾರದ ವಿರುದ್ಧ ಮಾತನಾಡುವುದು, ಪ್ರತಿಭಟಿಸುವುದು ದೇಶದ್ರೋಹವಲ್ಲ ಎಂದು ನ್ಯಾಯಾಲಯವೇ ಹೇಳಿರುವ ಸಂದರ್ಭದಲ್ಲಿ, ‘‘ಇಲ್ಲ; ಮೋದಿಯ ವಿರುದ್ಧ ಮಾತೆತ್ತಿದರೆ, ನ್ಯಾಯಯುತ ಬೇಡಿಕೆಗಾಗಿ ಹೋರಾಡಿದರೆ ಅದು ದೇಶದ ಭದ್ರತೆಗೆ ಅಪಾಯ, ಅದು ದೇಶದ್ರೋಹ’’ ಎಂಬ ಬೆದರಿಕೆಯ ಸಂದೇಶವನ್ನು ಈ ಮೂಲಕ ಎಲ್ಲಾ ಹೋರಾಟಗಾರರಿಗೆ ಮತ್ತು ಪ್ರತಿಪಕ್ಷಗಳಿಗೆ ನೀಡಲು ಸರ್ವಾಧಿಕಾರದತ್ತ ಹೆಜ್ಜೆ ಇಡುತ್ತಿರುವ ಸರಕಾರ ಹವಣಿಸಿದೆ.

share
ನಿಖಿಲ್ ಕೋಲ್ಪೆ
ನಿಖಿಲ್ ಕೋಲ್ಪೆ
Next Story
X