-

ಮಹಾನಗರಗಳ ಮ್ಯಾನ್ ಹೋಲ್ ಗಳಲ್ಲಿ 'ಭಾರತ ರತ್ನ' !

-

ಮ್ಯಾನ್‌ಹೋಲ್‌ಗಳಿಗೆ ಇಳಿಯುವುದು ಎಂದರೆ ನರಕಕ್ಕೆ ಇಳಿದಂತೆ ಎಂದು ಕಾರ್ಮಿಕರು ಬಣ್ಣಿಸುತ್ತಾರೆ. ಒಂದು ಬಾರಿ ಕೆಳಕ್ಕೆ ಇಳಿದ ಮೇಲೆ ಎಲ್ಲವೂ ಕತ್ತಲು. ಕಾರ್ಮಿಕರಿಗೆ ಏನೂ ಆಗಬಹುದು. ಮೊಣಕಾಲು ಆಳದ ನೀರಿನಲ್ಲಿ ಜಾರಿ ಬಿದ್ದು ಪ್ರಜ್ಞೆ ಕಳೆದುಕೊಳ್ಳಬಹುದು. ಅಥವಾ ಕೊಳಚೆ ನೀರಲ್ಲಿ ಕೊಚ್ಚಿ ಹೋಗಬಹುದು. ಜತೆಗೆ ವಸ್ತುಗಳು ಕೊಳೆತು ಉತ್ಪತ್ತಿಯಾದ ಮಿಥೇನ್, ನೈಟ್ರೋಜನ್, ಅಮೋನಿಯಾ, ಹೈಡ್ರೋಜನ್ ಸಲ್ಫೇಟ್‌ನಂಥ ವಿಷಾನಿಲಗಳೂ ಇರುತ್ತವೆ. ಇಂಥ ವಿಷಾನಿಲಗಳೇ ಹಲವು ಸಾವುಗಳಿಗೆ ಕಾರಣ.

ಇದು ಇಂಥ ಸ್ವಚ್ಛತಾ ಕಾರ್ಯ ನಿರ್ವಹಿಸುವ ಐವರು ಕಾರ್ಮಿಕರ ಬಗೆಗಿನ ಲೇಖನ. ಮುಂಬೈನ ಪೂರ್ವ ಎಕ್ಸ್ ಪ್ರೆಸ್ ಹೈವೆಯ ಉಷಾನಗರ ಕಲ್ವರ್ಟ್ ಬಳಿ ಮ್ಯಾನ್‌ಹೋಲ್‌ಗಳಿಗೆ ಇಳಿದು 35 ಅಡಿ ಆಳದಿಂದ ಒಂದು ಗೋಣಿ ಚೀಲ ಮೇಲೆತ್ತಿದಾಗ ಏನಾಯಿತು ಎನ್ನುವುದನ್ನು ವಿವರಿಸಿತ್ತು. ಸಮೀರ್, ರಾಜೇಶ್ ಹಾಗೂ ದಾನೇಶ್ವರ್ ಮೊದಲು ಚೇಂಬರ್ ಒಳಕ್ಕೆ ಹಗ್ಗದ ಸಹಾಯದಿಂದ ಇಳಿದರು. ರವೀಂದ್ರ ಮತ್ತು ಪಂಚೋನನ್ ಕೂಡಾ ಅವರನ್ನು ಅನುಸರಿಸಿದರು. ಆದರೆ ಉಸಿರಾಡಲಾಗದೇ ವಾಪಸು ಬಂದರು. ಕೆಲ ಸಮಯ ಬಳಿಕ ಕ್ಷೇತ್ರ ಅಧೀಕ್ಷಕ ಶಿವಾನಂದ ಚವ್ಹಾಣ್ ಅವರನ್ನು ಕರೆದರು. ಆ ವೇಳೆಗೆ ಅಗ್ನಿಶಾಮಕ ಸಿಬ್ಬಂದಿ ಗ್ಯಾಸ್ ಮಾಸ್ಕ್ ನೊಂದಿಗೆ ಚೇಂಬರ್ ಒಳಕ್ಕೆ ಇಳಿದರು. ಮೊದಲು ಇಳಿದ ಮೂರು ಮಂದಿ ಮೃತಪಟ್ಟಿದ್ದರು

ಓಲ್ವೆ ಈ ಹೇಸಿಗೆ ಕೃತ್ಯದ ಬಗ್ಗೆ ಬರೆದರು. ಚೇಂಬರ್, ಉಸಿರಾಟದ ಕಷ್ಟ ಹಾಗೂ ಕನ್ಸರ್ವೆಸಿ ಕಾರ್ಮಿಕ- ಹೀಗೆ ಅವರಿಗೆ ಬಳಸುವ ಎಲ್ಲ ಪದಗಳು ಕೂಡಾ ವಿಶ್ವದ ಅತ್ಯಂತ ಹೇಯ ಕೆಲಸವನ್ನು ಕಾನೂನುಬದ್ಧಗೊಳಿಸುವ ಪ್ರಯತ್ನ ಎಂದು ಬಣ್ಣಿಸಿದರು.

ನೀವು ನಡೆಯುವ ವೇಳೆ ನಾಯಿಯ ಮಲವನ್ನು ಮೆಟ್ಟಿದರೂ ತಕ್ಷಣ ಮುಖ ಕಿವುಚಿಕೊಂಡು ನಳ್ಳಿ ಬಳಿಗೆ ಹೋಗಿ ಸ್ವಚ್ಛಗೊಳಿಸಿಕೊಳ್ಳುವುದಿಲ್ಲವೇ? ಅಂದರೆ ನಿಮ್ಮ ಬೂಟಿನಿಂದ ಅದನ್ನು ಸ್ಪರ್ಶಿಸಿದರೆ ಕೂಡಾ ನಿಮಗೆ ಹೇಸಿಗೆ ಅನಿಸುತ್ತದೆ.

ಹಾಗಾದರೆ ಬರಿಮೈಯಲ್ಲಿ ಇಂಥ ತ್ಯಾಜದಿಂದಲೇ ತುಂಬಿರುವ ಹೇಸಿಗೆ ಗುಂಡಿಗೆ ಇಳಿಯುವವರ ಸ್ಥಿತಿ ಹೇಗಿರಬೇಡ? ಗಬ್ಬುವಾಸನೆಯ ಕೊಚ್ಚೆ ನಿಮ್ಮ ಚರ್ಮದ ರಂಧ್ರಗಳಿಗೆ ಅಥವಾ ತುಟಿಗಳ ಮಧ್ಯೆ ಪ್ರವೇಶಿಸಿದರೆ ಹೇಗನಿಸುವುದಿಲ್ಲ? ತುಟಿಯನ್ನು ಎಷ್ಟು ಬಿಗಿಹಿಡಿದರೂ, ಮೂಗಿನ ಒಳಕ್ಕೆ, ಮುಚ್ಚಿದ ಕಣ್ಣಿಗೆ, ನಿಮ್ಮ ಕೂದಗಿಗೆ ಅದು ತಗಲುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವೇ?

ಮ್ಯಾನ್‌ಹೋಲ್ ಬದುಕಿನ ದುರದೃಷ್ಟ

ವಾಳ್ವೆ ಅವರ ಬಗೆಗಿನ ಕರುಣೆಯಿಂದ ಅಲ್ಲಿಗೆ ಹೋಗಲಿಲ್ಲ. ಅದು ಅವರ ಅಸ್ತಿತ್ವದ ಪ್ರಶ್ನೆಯಾಗಿತ್ತು. ಮಹಾರಾಷ್ಟ್ರದ ಮಹರ್ ಸಮುದಾಯವು ದಲಿತರಲ್ಲಿ ಉಪಪಂಗಡ. ಸಮೀರ್, ರಾಜೇಶ್ ಹಾಗೂ ಮುಂಬೈನ 38 ಸಾವಿರ ಇಂಥ ಕಾರ್ಮಿಕರ ಸಾಲಿಗೆ ಸೇರುವುದು ವಾಳ್ವೆ ಪಾಲಿಗೆ ತಪ್ಪಿತು. ಆ ಅನುಭವವೇ ಅಪೂರ್ವ.

ನನ್ನ ಸಹೋದರರನ್ನು ತಿಳಿದುಕೊಳ್ಳುವ ಸಲುವಾಗಿ ಹೋದೆ ಎಂದು ವಿವರಿಸುತ್ತಾರೆ. ಮುಂಬೈನಲ್ಲಿ 10 ಸಾವಿರ ಟನ್ ಘನ ತ್ಯಾಜ್ಯದ ಹೊರತಾಗಿ 2,671 ದಶಲಕ್ಷ ಲೀಟರ್ ತ್ಯಾಜ್ಯ ನೀರು ಉತ್ಪಾದನೆ ಯಾಗುತ್ತದೆ. ದಿಲ್ಲಿ ಹೊರತು ಪಡಿಸಿದರೆ, ದೇಶದ ಎರಡನೆ ಅತಿಹೆಚ್ಚು ತ್ಯಾಜ್ಯನೀರು ಉತ್ಪಾದಕ ನಗರ. ವಾಳ್ವೆ ಚಿತ್ರ ಸೆರೆಹಿಡಿದ ಪಶ್ಚಿಮ ಉಪನಗರವೊಂದರಲ್ಲೇ 65 ಕಿಲೋ ಮೀಟರ್‌ನಿಂದ ನಾಲೆಯಲ್ಲಿ ಹರಿದು ಬರುವ ಚರಂಡಿ ನೀರು ಸೇರುತ್ತದೆ. ಜತೆಗೆ 56 ಕಿಲೋಮೀಟರ್ ಸಣ್ಣ ನಾಲೆಗಳಿಂದಲೂ ಬರುವ ನೀರು 52 ಬಾಕ್ಸ್ ಚರಂಡಿಗಳಲ್ಲಿ ಸೇರುತ್ತದೆ. ಈ ಪೈಕಿ ಶೇ.50ನ್ನು ಹಾಗೆಯೇ ಸಮುದ್ರಕ್ಕೆ ಬಿಡಲಾಗುತ್ತದೆ. ಕೆಲ ಚರಂಡಿಗಳು ಮಹಡಿ ಬಸ್‌ನಷ್ಟು ಆಳವೂ ಇರುತ್ತವೆ.

ಕೆಳಕ್ಕೆ ಇಳಿದ ಬಳಿಕ ಎಲ್ಲವೂ ಕತ್ತಲು. ಸಾಮಾನ್ಯವಾಗಿ ಇಂಥ ಕಾರ್ಮಿಕರು ವಿಷಗಾಳಿಯಿಂದ ಅಥವಾ ಕೊಚ್ಚೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಸಾವಿಗೀಡಾದದ್ದೂ ಇದೆ. ಈ ಕಾರ್ಮಿಕರು ಕಬ್ಬಿಣದ ಸರಳು ಹಾಗೂ ಬಿದಿರಿನ ಕಡ್ಡಿಗಳ ಮೂಲವೇ ಇದನ್ನು ಸ್ವಚ್ಛಗೊಳಿಸುತ್ತಾರೆ. ಒಂದು ಬಾರಿ ಅವರು ಕೆಳಕ್ಕೆ ಇಳಿದರೆಂದರೆ, ಮೇಲಿನ ಪ್ರಪಂಚದಿಂದ ಸಂಪರ್ಕ ಕಡಿದುಕೊಳ್ಳುತ್ತಾರೆ ಎಂದು ವಾಳ್ವೆ ಹೇಳುತ್ತಾರೆ.

ಸ್ಪೆಂಟಾ ಮಲ್ಟಿ ಮೀಡಿಯಾ ಹಾಗೂ ಸರ್ ದೋರ್ಬ್ಜಿ ಟಾಟಾ ಟ್ರಸ್ ಸಹಯೋಗದಲ್ಲಿ ಕಳೆದ ವರ್ಷ ಬಿಡುಗಡೆಯಾದ ಅವರ ಚಿತ್ರಪುಸ್ತಕ ಗೌರವ ಹಾಗೂ ನ್ಯಾಯದ ಹುಡುಕಾಟದಲ್ಲಿ- ಕನ್ಸರ್ವೆಸಿ ಕಾರ್ಮಿಕರ ಅಘೋಷಿತ ಕಥೆಯಲ್ಲಿ ಅವರು ಹೀಗೆ ಬರೆದಿದ್ದಾರೆ: ಮ್ಯಾನ್‌ಹೋಲ್‌ಗಳಿಗೆ ಇಳಿಯುವುದು ಎಂದರೆ ನರಕಕ್ಕೆ ಇಳಿದಂತೆ ಎಂದು ಕಾರ್ಮಿಕರು ಬಣ್ಣಿಸುತ್ತಾರೆ. ಒಂದು ಬಾರಿ ಕೆಳಕ್ಕೆ ಇಳಿದ ಮೇಲೆ ಎಲ್ಲವೂ ಕತ್ತಲು. ಕಾರ್ಮಿಕರಿಗೆ ಏನೂ ಆಗಬಹುದು. ಮೊಣಕಾಲು ಆಳದ ನೀರಿನಲ್ಲಿ ಜಾರಿ ಬಿದ್ದು ಪ್ರಜ್ಞೆ ಕಳೆದುಕೊಳ್ಳಬಹುದು. ಅಥವಾ ಕೊಳಚೆ ನೀರಲ್ಲಿ ಕೊಚ್ಚಿ ಹೋಗಬಹುದು. ಜತೆಗೆ ವಸ್ತುಗಳು ಕೊಳೆತು ಉತ್ಪತ್ತಿಯಾದ ಮಿಥೇನ್, ನೈಟ್ರೋಜನ್, ಅಮೋನಿಯಾ, ಹೈಡ್ರೋಜನ್ ಸಲ್ಫೇಟ್‌ನಂಥ ವಿಷಾನಿಲಗಳೂ ಇರುತ್ತವೆ. ಇಂಥ ವಿಷಾನಿಲಗಳೇ ಹಲವು ಸಾವಿಗೆ ಕಾರಣ.

ಇಂಥ ವಿಷಾನಿಲದಿಂದ ರಕ್ಷಿಸಿಕೊಳ್ಳಲು ಕಾರ್ಮಿಕರಿಗೆ ಎರಡು ಮಾರ್ಗಗಳಿವೆ. ಒಂದು ಉರಿಯುವ ಬೆಂಕಿಕಡ್ಡಿಯನ್ನು ರಂಧ್ರಕ್ಕೆ ಎಸೆಯುವುದು. ಅನಿಲಗಳಿದ್ದರೆ ಅದು ಉರಿದ ಬಳಿಕ ಇಳಿಯುವುದು.

ಎರಡನೆಯದು ಸುಲಭವಾಗಿ ಸಾಯದ ಜಿರಳೆಗಳು ಇವೆಯೇ ಎಂದು ಪರೀಕ್ಷಿಸುವುದು. ಅಲ್ಲಿ ಜಿರಳೆಗಳು ಇಲ್ಲದಿದ್ದರೆ, ಇಂಥ ಅನಿಲದಿಂದ ತಪ್ಪಿಸಿಕೊಳ್ಳಲು ಬೆಂಕಿ ಕಡ್ಡಿ ಗೀರಿ ಎಸೆಯಬೇಕು. ಕೆಲವೊಮ್ಮೆ ಎಲ್ಲ ತಂತ್ರಗಳೂ ವಿಫಲವಾಗುತ್ತವೆ ಎನ್ನುವುದನ್ನು ಕಾರ್ಮಿಕರ ಸಾವಿನ ಬಗ್ಗೆ ಬಿಎಂಸಿಯ ಅಂಕಿ ಅಂಶಗಳೇ ಹೇಳುತ್ತವೆ.

ಹೀಗೆ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದರ ಅಧ್ಯಯನಕ್ಕೆ ಒಳಚರಂಡಿ ವಿಭಾಗ, ಕಾರಣಗಳ ಅಧ್ಯಯನಕ್ಕೆ ಮುಂದಾಗಿದೆ.

2007ರ ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಕನಿಷ್ಠ 22,327 ಮಂದಿ ಇಂಥ ನೈರ್ಮಲ್ಯ ಕೆಲಸದ ವೇಲೆ ಸಾಯುತ್ತಾರೆ. ಸಫಾಯಿ ಕರ್ಮಚಾರಿಗಳ ಕುರಿತ ಯೋಜನಾ ಆಯೋಗದ ಉಪಸಮಿತಿಯ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 12 ಲಕ್ಷ ಸಫಾಯಿ ಕರ್ಮಚಾರಿಗಳಿದ್ದು, ಈ ಪೈಕಿ ಪ್ರತಿವರ್ಷ 8,600 ಮಂದಿ ಸಾಯುತ್ತಾರೆ.

ಅವರು ಮ್ಯಾನ್‌ಹೋಲ್‌ಗಳಲ್ಲಿ ಸಾಯದಿದ್ದರೆ, ವಿವಿಧ ರೋಗಗಳ ರೂಪದಲ್ಲಿ ಸಾವು ಕಾಯುತ್ತಿರುತ್ತದೆ. ಇದರಲ್ಲಿ ತೀರಾ ಸಾಮಾನ್ಯ ರೋಗಗಳೆಂದರೆ ಬ್ಯಾಕ್ಟೀರಿಯಾದಿಂದ ಬರುವ ಕಾಮಾಲೆ. ಜತೆಗೆ ಜಠರ ಸಂಬಂಧಿ ಕಾಯಿಲೆಗಳು ಕೂಡಾ ಅಧಿಕವಾಗಿದ್ದು, ಇದಕ್ಕೆ ಮುಖ್ಯಕಾರಣ, ಮ್ಯಾನ್‌ಹೋಲ್‌ಗಳಿಗೆ ಧುಮುಕುವ ಮೊದಲು ಅಗ್ಗದ ಆಲ್ಕೋಹಾಲ್ ಸೇವಿಸುವುದು.

ಈ ಕೆಲಸಕ್ಕೆ ಯಾವ ಕೌಶಲವೂ ಬೇಡ. ಕೇವಲ ಕೈ, ಕಾಲು ಮತ್ತು ನರಕಕ್ಕೆ ಧುಮುಕುವ ಧೈರ್ಯವಿದ್ದರೆ ಸಾಕು.

ಇಲ್ಲದಿದ್ದರೆ ನಿಮ್ಮ ಸರಿಯಾದ ಪ್ರಜ್ಞೆಯಿಂದ ಈ ಕೆಲಸವನ್ನು ಹೇಗೆ ಮಾಡಲು ಸಾಧ್ಯ? ಕೆಳಕ್ಕೆ ಹೋಗಲು ನೀವು ನಿಮ್ಮ ಪ್ರಜ್ಞೆಯನ್ನು ಮಬ್ಬುಗೊಳಿಸಲೇಬೇಕಾಗುತ್ತದೆ ಎಂದು ವಾಳ್ವೆ ಹೇಳುತ್ತಾರೆ.

ಕಾನೂನುಬಾಹಿರ ಇಲ್ಲಿ ಸ್ವೀಕಾರಾರ್ಹ

ಈ ಕೆಲಸ ಕಾನೂನುಬಾಹಿರವಲ್ಲವೇ? ವಾಳ್ವೆಯವರ ಪ್ರಕಾರ, ಇದನ್ನು ನಿಷೇಧಿಸುವ ಕಾನೂನುಗಳು ಕಾಗದಗಳಲ್ಲಷ್ಟೇ ಇವೆ. ಇವು ದಿನನಿತ್ಯ ಇಂಥ ಕೆಲಸದಲ್ಲಿ ತೊಡಗಿರುವ ಕಾರ್ಮಿಕರ ಸಂಕೀರ್ಣ ವಾಸ್ತವದಿಂದ ದೂರ ಇವೆ.

2013ರ ಸಪಾಯಿ ಕರ್ಮಚಾರಿಗಳ ಪುನರ್ವಸತಿ ಕಾಯ್ದೆಯನ್ನೇ ತೆಗೆದುಕೊಂಡರೂ, ಇಂಥ ತ್ಯಾಜ್ಯವನ್ನು ಕೈಯಿಂದ ನಿರ್ವಹಿಸಲು ಕಾರ್ಮಿಕರನ್ನು ಇಂಥ ಕೆಲಸಕ್ಕೆ ನೇಮಿಸಿಕೊಳ್ಳುವಂತಿಲ್ಲ. ಇದು ಸೆಪ್ಟಿಕ್ ಟ್ಯಾಂಕ್, ಒಳಚರಂಡಿ, ರೈಲ್ವೆ ಶೌಚಾಲಯಗಳನ್ನೂ ಒಳಗೊಳ್ಳುತ್ತದೆ. ಆದರೆ ಇಂಥ ಕೆಲಸಗಾರರು ಇಲ್ಲಿ ರ್ಕಾನಿರ್ವಹಿಸುವ ಹಲವು ಚಿತ್ರಗಳನ್ನು ವಾಳ್ವೆ ಸೆರೆ ಹಿಡಿದಿದ್ದಾರೆ.

ಇದರ ಪ್ರಕಾರ, ಎಲ್ಲ ಪ್ರಾಧಿಕಾರಗಳು, ಕಂಟೋನ್ಮೆಂಟ್ ಬೋರ್ಡ್ ಹಾಗೂ ರೈಲ್ವೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಇಂಥ ಶೌಚಾಲಯಗಳನ್ನು ಪತ್ತೆ ಮಾಡಿ ಸಪಾಯಿ ಕರ್ಮಚಾರಿಗಳನ್ನು ಗುರುತಿಸುವಂತೆ ಸೂಚಿಸುತ್ತದೆ. ಇಂಥ ಶೌಚಾಲಯಗಳನ್ನು ನವೀಕರಿಸುವುದು ಮಾಲೀಕರ ಹೊಣೆ.

ಈ ಕಾಯ್ದೆಯ ಪ್ರಕಾರ, ಈಗ ಕಾರ್ಯನಿರ್ವಹಿಸುತ್ತಿರುವ ಇಂಥ ಕೆಲಸಗಾರರಿಗೆ ಅದೇ ವೇತನಕ್ಕೆ ಬೇರೆ ಉದ್ಯೋಗಕ್ಕೆ ನಿಯೋಜಿಸಬೇಕು. ಆದರೆ ಇದರ ಸವಾಲು ಎಂದರೆ, 15 ಸಾವಿರ ವೇತನದ ಕೆಲಸವನ್ನು ಅವರಿಗೆ ಹುಡುಕುವುದು.

ಇದರ ಜತೆಗೆ ಅವರಿಗೆ ಜೀವನಾಧಾರ ಕೌಶಲ ತರಬೇತಿ, ರಿಯಾಯಿತಿ ಸಾಲ, ವಾಸಯೋಗ್ಯ ನಿವೇಶನ, ಮನೆಕಟ್ಟಲು ಸಹಾಯ ನೀಡಬೇಕಾಗುತ್ತದೆ. ಇದಕ್ಕೆ ಬದ್ಧವಾಗಿರದಿದ್ದರೆ ಐದು ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ.

ಇದು ಇಂಥ ಅವಮಾನಕಾರಿ ಪದ್ಧತಿ ತಡೆಯಲು ನಡೆದ ಎರಡನೆ ಪ್ರಯತ್ನ. 1993ರಲ್ಲಿ ಮೊದಲ ಕಾಯ್ದೆ ಜಾರಿಗೆ ಬಂದಿತ್ತು. ಆದರೆ ಅದು ಕೂಡಾ ವಾಸ್ತವವಾಗಿ ಅನುಷ್ಠಾನಕ್ಕೆ ಬಂದಿರಲಿಲ್ಲ. ಯಾವ ಕಾಯ್ದೆಗಳು ಕೂಡಾ ಇಂಥ 7.5 ಲಕ್ಷ ಕುಟುಂಬಗಳನ್ನು ಈ ಕೆಲಸದಿಂದ ತಡೆಯಲಾಗಲಿಲ್ಲ.

ಮ್ಯಾನ್‌ಹೋಲ್ ಕಾರ್ಮಿಕರನ್ನೇ ತೆಗೆದುಕೊಂಡರೂ, ಇದರ ನಿಷೇಧ ಸುಲಭವಲ್ಲ. ಇಂಥ ಸ್ವಚ್ಛತೆ ಕೆಲಸ ಹೊರತುಪಡಿಸಿ, ಇವರಿಗೆ ಯಾವ ಕೆಲಸ ನೀಡಲು ಸಾಧ್ಯ? ಇಂಥ ಕೆಲಸಕ್ಕೆ ಮಾನವ ಬಳಕೆಯನ್ನು ನಿಷೇಧಿಸುವ 2013ರ ಕಾಯ್ದೆ ತಮ್ಮ ಜೀವನಾಧಾರಕ್ಕೇ ಕುತ್ತು ತರಬಹುದು ಎಂಬ ಭೀತಿಯೂ ಹಲವರಿಗೆ ಇದೆ. ಚರಂಡಿ ಕಟ್ಟಿಕೊಂಡಾಗ, ಜನರಷ್ಟೇ ಅದನ್ನು ಸ್ವಚ್ಛಗೊಳಿಸಿ ತೆರವು ಮಾಡಲು ಸಾಧ್ಯ. ಇದನ್ನು ಉದ್ದದ ಕೋಲು ಅಥವಾ ಯಂತ್ರಗಳಿಂದ ಮಾಡಲು ಸಾಧ್ಯವಿಲ್ಲ. ಇಂಥ ಕಾನೂನು ಇದ್ದರೆ, ಚರಂಡಿಗಳನ್ನು ಸ್ವಚ್ಛಗೊಳಿಸುವವರು ಯಾರು ಎಂದು ಅಧಿಕಾರಿಗಳು ಪ್ರಶ್ನಿಸುತ್ತಾರೆ.

ಈ ಸಮಸ್ಯೆ ಬಗ್ಗೆ ನಾವು ತಡವಾಗಿ ಎಚ್ಚೆತ್ತುಕೊಂಡಿದ್ದೇವೆ. ಬಹುತೇಕ ಮೆಟ್ರೊಗಳಲ್ಲಿ ಹಾಲಿ ಇರುವ ಚರಂಡಿ ವ್ಯವಸ್ಥೆ 100 ವರ್ಷ ಹಳೆಯದು. ಕಾರ್ಮಿಕರೇ ಅದನ್ನು ಇಳಿದು ಸ್ವಚ್ಛಗೊಳಿಸಲು ಅನುವಾಗುವಂತೆ ನಿರ್ಮಿಸಿದ್ದು. ಇದನ್ನು ಬದಲಿಸಬೇಕಾದರೆ ದೊಡ್ಡ ಮೊತ್ತದ ಬಂಡವಾಳ ಬೇಕು ಎಂದು ಪಶ್ಚಿಮಬಂಗಾಳದಿಂದ ಆಯ್ಕೆಯಾಗಿರುವ ರಾಜ್ಯಸಬಾ ಸದಸ್ಯ ವಿವೇಕ್ ಗುಪ್ತಾ ಹೇಳುತ್ತಾರೆ. ಇವರು 2013ರ ಕಾಯ್ದೆ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು.

ಇದರ ಅನುಷ್ಠಾನಕ್ಕೆ ತಕ್ಷಣ ಅಥವಾ ಸಾಧ್ಯವಾದಷ್ಟು ಬೇಗ ರಾಜ್ಯ ಸರಕಾರಗಳು ಕ್ರಮ ಕೈಗೊಳ್ಳಲೇಬೇಕು ಎಂದು ಅವರು ಹೇಳುತ್ತಾರೆ.

ಹೊರಬರುವುದು ಸುಲಭವಲ್ಲ

ಒಂದು ಮುಂಜಾನೆ ವಾಳ್ವೆ ದಕ್ಷಿಣ ಮುಂಬೈನ ಅಂಟೋಪ್ ಹಿಲ್ ಪ್ತದೇಶದ ಇಂಥ ಕನ್ಸರ್ವೆನ್ಸಿ ಕಾರ್ಮಿಕರ ಕುಟುಂಬವನ್ನು ಭೇಟಿ ಮಾಡಲು ಮುಂದಾದರು. ದೊಡ್ಡ ಹೂಳು ರಾಶಿಯ ಮುಂದೆ ಜನ ಸೇರಿದ್ದನ್ನು ನೋಡಿದರು. ಕೆಲವರು ಪೊಲೀಸರಿಗೆ ಮಾಹಿತಿ ನೀಡಿದರು. ಗದ್ದಲದ ವಾತಾವರಣ ಇತ್ತು. ವಾಳ್ವೆ, ಗುಂಪನ್ನು ತಳ್ಳಿಕೊಂಡು ಈ ಗಬ್ಬುವಾಸನೆಯ ರಾಶಿಯತ್ತ ಬಂದರು.

ಅವರು ಅಲ್ಲಿ ನೋಡಿದ ದೃಶ್ಯ ಹಲವು ತಿಂಗಳ ವರೆಗೆ ಅವರನ್ನು ಕಾಡುತ್ತಿತ್ತು. ಅದೊಂದು ಸತ್ತ ಮಗು. ಚಿಂದಿ ಬಟ್ಟೆಯಂತೆ ಕಸದ ಗುಂಡಿಗೆ ಎಸೆಯಲಾಗಿತ್ತು. ಅದು ಹೆಣ್ಣುಶಿಶು. ಆದರೆ ನವಜಾತ ಆರೋಗ್ಯವಂತ ಮಗುವಿನಂತಿತ್ತು. ಬಹುಶಃ ಕೆಲ ನಿಮಿಷದ ಹಿಂದೆ ಎಸೆಯಲಾಗಿತ್ತು. ಪೊಲೀಸರು ತಕ್ಷಣ ಬಂದು ಮಗುವಿನ ಶವ ಒಯ್ದರು. ಆಸ್ಪತ್ರೆಯಲ್ಲಿ ಮಗುವಿನ ಸಾವನ್ನು ಖಚಿತಪಡಿಸಲಾಯಿತು.

ಆ ಚಿತ್ರ ಹಾಗೂ ಸಫಾಯಿ ಕರ್ಮಚಾರಿಗಳು ಕೆಲಸ ಮಾಡುವ ಹಲವು ಚಿತ್ರಗಳು ಅವರಿಗೆ ನ್ಯಾಷನಲ್ ಜಿಯಾಗ್ರಫಿಕ್ ನೀಡುವ ಆಲ್ ರೋಡ್ಸ್ ಫೋಟೋಗ್ರಾಫರ್ಸ್‌ ಪ್ರಶಸ್ತಿಯನ್ನು 2005ರಲ್ಲಿ ಗೆದ್ದವು.

ವಾಳ್ವೆ ಅಮೆರಿಕಕ್ಕೆ ಈ ಪ್ರಶಸ್ತಿ ಸ್ವೀಕರಿಸಲು ಹೋಗುವ ಮುನ್ನ ಅದನ್ನು ಸ್ವೀಕರಿಸಲು ಹಿಂಜರಿಕೆ ಆಗಿತ್ತು. ಈ ಚಿತ್ರ ವಿಶ್ವದಲ್ಲಿ ಭಾರತದ ನಾಚಿಕೆಗೇಡನ್ನು ಬಿಂಬಿಸುವುದಿಲ್ಲವೇ? ಆ ಅವರ ಹಿರಿಯ ಛಾಯಾಗ್ರಾಹಕ ಮಿತ್ರ ಅವರಿಗೆ ಸಲಹೆ ನೀಡಿ, ನೀವು ಮೊದಲು ಈ ಕನ್ಸರ್ವೆನ್ಸಿ ಕಾರ್ಮಿಕರ ರಾಯಭಾರಿ; ನಂತರ ದೇಶದ ರಾಯಭಾರಿ ಎಂದು ನೆನಪಿಸಿದರು.

ಮೃತ ಶಿಶುಗಳು, ಕೊಳೆತ ಬೀದಿನಾಯಿಗಳು, ರಸ್ತೆಯಲ್ಲಿ ಸತ್ತವರು, ರಕ್ತಸಿಕ್ತ ನ್ಯಾಪ್‌ಕಿನ್, ಗಾಜಿನ ಚೂರು, ಚುಚ್ಚುಮದ್ದಿನ ಸೂಜಿ, ವೈದ್ಯಕೀಯ ತ್ಯಾಜ್ಯ ಹೀಗೆ ಬರಿಗೈಯಲ್ಲಿ ಈ ಕೆಲಸಗಾರರು ಮುಟ್ಟದ ವಸ್ತುಗಳಿಲ್ಲ. ಇವುಗಳನ್ನು ತೆರವುಗೊಳಿಸುವ ಕಾರ್ಮಿಕರ ಬಗೆಗಿನ ಇಂಥ ಹಲವು ಚಿತ್ರಗಳು ವಾಳ್ವೆಯವರಿಗೆ ಪ್ರಶಸ್ತಿ ತಂದುಕೊಟ್ಟವು.

ಕಂಠಮಟ್ಟದ ಕೊಳಚೆನೀರಿನಿಂದ ಒಂದು ಸತ್ತ ನಾಯಿಯನ್ನು ಹೊರತೆಗೆಯುವ ಚಿತ್ರದಿಂದ ಹಿಡಿದು, ಪುಟ್ಟ ಗುಡಿಸಲಲ್ಲಿ ವಾಸವಾಗಿರುವ ಒಂದು ಕನ್ಸರ್ವೆನ್ಸಿ ಕುಟುಂಬದ ಇಬ್ಬರು ಮಕ್ಕಳನ್ನು ಬೆಳೆಸುತ್ತಿರುವವರೆಗಿನ ಚಿತ್ರಗಳಿಗೆ ವಾಳ್ವೆ ವೃತ್ತಿಪರ ದೃಷ್ಟಿಕೋನಗಳನ್ನು ನೀಡಿದ್ದಾರೆ.

ಅದನ್ನು ಏಕೆ ಮಾಡುತ್ತಾರೆ?

ಉತ್ತರ ಸರಳ. ಈ ದೇಶದಲ್ಲಿ ಬೇರೆ ಆಯ್ಕೆ ಇಲ್ಲ. ನಿಮಗೆ ನೀಡಿದ ಕೆಲಸವನ್ನು ನೀವು ಮಾಡಬೇಕು. ಜಾತಿಪದ್ಧತಿಯನ್ನು ವಿಸರ್ಜಿಸಲು ಒಂದು ವಿಧಾನವನ್ನು ಬಾಬಾಸಾಹೇಬ್ ಅಂಬೇಡ್ಕರ್ ವಿವರಿಸಿದ್ದರು. ಅದೆಂದರೆ ದಲಿತರು ದೂರ ಓಡಿಹೋಗಬೇಕು. ಅಂತರ್ಜಾತಿ ವಿವಾಹವಾಗಿ ಬೇರೆ ಕೆಲಸವನ್ನು ವಿಭಿನ್ನ ಕ್ಷೇತ್ರಗಳಲ್ಲಿ ಪಡೆಯಬೇಕು. ಆಗ ಮಾತ್ರ ದಲಿತರು ತಮ್ಮ ಜಾತಿಯ ಹೊರೆ ಕಳಚಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದರು.

ಮಾನವ ಮಲ ಸ್ವಚ್ಛಗೊಳಿಸುವ ಕೊಂಕಣದ ಮಹರ್ ಜನಾಂಗದವರು ಮುಂಬೈಗೆ ಉದ್ಯೋಗ ಅರಸಿ ಬರುವ ಸಾಹಸ ಮಾಡಿದಾಗ, ನಗರದ ಚರಂಡಿಗಳು ಅವರನ್ನು ತಬ್ಬಿಕೊಂಡವು. ದೇಶದ ಎಲ್ಲೆಡೆ ಈ ಕೆಲಸ ಪರಿಶಿಷ್ಟ ಜಾತಿಯವರಿಗೆ ಮೀಸಲು. ಮುಂಬೈನಲ್ಲಿ ಮಹರ್ ಸಮುದಾಯದಂಥ ಪರಿಶಿಷ್ಟರಿಗೆ ಶೇ.100 ಮೀಸಲಾತಿ. ಈ ಕೆಲಸ ಗಂಡನಿಂದ ಹೆಂಡತಿಗೆ, ಮಗುವಿಗೆ, ತಲೆಮಾರಿಗೆ ಬಳುವಳಿ.

ಚೆನ್ನೈನಲ್ಲಿ 10 ಸಾವಿರಕ್ಕೂ ಅಧಿಕ ಕನ್ಸರ್ವೆನ್ಸಿ ಉದ್ಯೋಗಗಳಲ್ಲಿ ಶೇ.95 ಮಂದಿ ಅರುಂಧತಿಯಾರ್ ಎಂಬ ದಲಿತ ಸಮುದಾಯಕ್ಕೆ ಮೀಸಲು. ಇವರು ಪ್ರತಿದಿನ ಐದು ಸಾವಿರ ಟನ್ ಘನ ತ್ಯಾಜ್ಯ ವಿಲೇವಾರಿ ಮಾಡುತ್ತಾರೆ. ದಿಲ್ಲಿ, ಬೆಂಗಳೂರಿನಂಥ ಮಹಾನಗರಗಳಲ್ಲೂ ಇದೇ ಸ್ಥಿತಿ.

ವಾಳ್ವೆಯವರ ಕೃತಿಯಲ್ಲಿ ಟಾಟಾ ಇನ್‌ಸ್ಟಿಟ್ಯೂಟ್ ಆಪ್ ಸೋಷಿಯಲ್ ಸೈನ್ ್ಸ ನ ಸಹಾಯಕ ಪ್ರಾಧ್ಯಾಪಕ ಡಾ.ಶೈಲೇಶ್ ಕುಮಾರ್ ದಾರೋಕರ್ ಹೇಳಿದಂತೆ, ನಾವು ನಮ್ಮ ಹಳೆಯದನ್ನು ಬಿಟ್ಟಿಲ್ಲ; ಬದಲಾಗಿ ಮರುಶೋಧಿಸಿದ್ದೇವೆ. ಇಂದಿಗೂ ಸಾರ್ವಜನಿಕ ವಲಯದಲ್ಲೂ ಜಾತಿ ಆಧರಿತ ವೃತ್ತಿಯ ಮೂಲಕ ನಾವು ಜಾತಿವ್ಯವಸ್ಥೆಯ ಶ್ರೇಣೀಕರಣವನ್ನು ಮತ್ತಷ್ಟು ಬಲಗೊಳಿಸುತ್ತಿದ್ದೇವೆ

ಆನಂದ್ ಪಟವರ್ಧನ್ ಅವರ ಜೈಭೀಮ್ ಕಾಮ್ರೇಡ್ ಕೃತಿಯಲ್ಲಿ, ಒಬ್ಬ ಸಫಾಯಿ ಕರ್ಮಚಾರಿ ಡಂಪಿಂಗ್‌ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದಾಗ, ಚೂಪಾದ ಕೋಲು ಚುಚ್ಚಿ ಕಣ್ಣುಗಳನ್ನು ಕಳೆದುಕೊಂಡದ್ದನ್ನು ವಿವರಿಸಿದ್ದಾರೆ. ಇದಕ್ಕೆ ಪರಿಹಾರ ಬಿಡಿ; ಅಂಥವರಿಗೆ ರಕ್ಷಣೆಗೆ ಒಂದು ಟೊಪ್ಪಿಯನ್ನೂ ನೀಡುತ್ತಿಲ್ಲ.

ವಾಳ್ವೆಯವರು ತಮ್ಮ ಫೋಟೊಗಳ ಮೂಲಕ ಹೇಗೆ ನಗರಗಳಲ್ಲಿ ಕೂಡಾ ಇಂಥ ದಯನೀಯ ಸ್ಥಿತಿಯನ್ನು ಹೇಗೆ ಸ್ವೀಕರಿಸಲಾಗುತ್ತಿದೆ ಎನ್ನುವುದನ್ನು ನಿಮಗೆ ಮನವರಿಕೆ ಮಾಡಿದ್ದಾರೆ. ಮಾನವಹಕ್ಕುಗಳ ಬೆಲೆ ತೆತ್ತು ನಗರಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ ಎಂಬ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ.

1948ರಲ್ಲಿ ವಿಶ್ವಸಂಸ್ಥೆ ಜಾರಿಗೊಳಿಸಿದ ಸಾಮೂಹಿಕ ಹತ್ಯೆಗಳ ತಡೆ ಮತ್ತು ಶಿಕ್ಷೆ ಒಪ್ಪಂದಕ್ಕೆ ಭಾರತವೂ ಸಹಿ ಮಾಡಿದೆ. ಇದು ಹತ್ಯಾಕಾಂಡವನ್ನು ಹೀಗೆ ವಿವರಿಸಿದೆ. ಒಂದು ಗುಂಪಿನ ಸದಸ್ಯರನ್ನು ಹತ್ಯೆ ಮಾಡುವುದು, ದೈಹಿಕ ಅಥವಾ ಮಾನಸಿಕವಾಗಿ ಘಾಸಿಗೊಳಿಸುವುದು. ಅವರ ಜೀವನವನ್ನು ಉದ್ದೇಶಪೂರ್ವಕವಾಗಿ ಹಾಳುಮಾಡುವಂಥ ಕೃತ್ಯಗಳನ್ನು ಒಂದು ಜಾತಿ, ವರ್ಣ, ಧಾರ್ಮಿಕ ಗುಂಪು, ರಾಷ್ಟ್ರೀಯತೆಯ ಮೇಲೆ ಎಸಗುವುದು

ಇದು ಸ್ವಚ್ಛಭಾರತದ ಹೆಸರಿನಲ್ಲಿ ನಾವೆಲ್ಲರೂ ಅವಕಾಶ ನಿಡಿದ ಸಾಮೂಹಿಕ ಹತ್ಯೆಯಲ್ಲವೇ?

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top