-

ಯುರೋಪ್‌ನ ಹಾರ್ಮೋನಿಯಂ ಭಾರತೀಯ ಸಂಗೀತ!

-

ಹಾರ್ಮೋನಿಯಂನ ಮಾದರಿ ನಿರ್ಮಿಸಿದ್ದು ಸಂಗೀತ ತಜ್ಞ ಅಲ್ಲ; ಕೋಪನ್ ಹೇಗನ್ ವಿಶ್ವವಿದ್ಯಾನಿಲಯದ ಭೌತಶಾಸ್ತ್ರಜ್ಞ ಗೊತ್ತಿಲಿಬ್ ಕ್ರಜೆನ್‌ಸ್ಟೀನ್ ಎಂಬ ಕ್ರಿಶ್ಚಿಯನ್. ಒಬ್ಬ ಶಿಕ್ಷಣತಜ್ಞರಾಗಿ, ಮಾನವ ದೇಹದ ಮೇಲೆ ವಿದ್ಯುತ್ತಿನ ಪರಿಣಾಮದ ಬಗ್ಗೆ ಪ್ರಯೋಗ ನಡೆಸಿದರು. ಮೇರೆ ಶೆಲ್ಲಿ, ಇವರ ಈ ಸಂಶೋಧನೆಯಿಂದ ಪ್ರಭಾವಿತರಾಗಿ, ಫ್ರಾಂಕೆನ್‌ಸ್ಟೀನ್ ಎಂಬ ಕಾದಂಬರಿ ರಚಿಸಿದರು. ಈ ಕಾದಂಬರಿಯಲ್ಲಿ ಬರುವ ಕಾಲ್ಪನಿಕ ವಿಜ್ಞಾನಿಯ ಪಾತ್ರಕ್ಕೆ ಕ್ರಜೆನ್‌ಸ್ಟೀನ್ ಸರ್‌ನೇಮ್ ಕೂಡಾ ನೀಡಿದರು.

ಕೆಲವೊಂದು ವಿರೋಧಗಳ ನಡುವೆಯೇ ಭಾರತದಲ್ಲಿ ಹಾರ್ಮೋನಿಯಂ ಎಲ್ಲ ಗ್ರಾಮೀಣ ಜಾನಪದ ಸಂಗೀತದ ಜತೆ ಹಾಸುಹೊಕ್ಕಾಗಿ ಬೆಳೆದವು. ಗಝಲ್, ಕಥಕ್, ಥುಮ್ರಿ, ಖವಾಲಿಗಳಲ್ಲೂ ಇದು ಜನಪ್ರಿಯ ಸಾಧನವಾಯಿತು. ಭಾರತದ ಚಿತ್ರರಂಗ ಕೂಡಾ ಹಾರ್ಮೋನಿಯಂ ಒಪ್ಪಿಕೊಂಡಿತು. ಜನಪ್ರಿಯ ಮನೋರಂಜನೆಯ ಪ್ರಮುಖ ಸಾಧನವಾಗಿ ಇದು ಬೆಳೆಯಿತು.

ಇದು ಸಂಗೀತ ವಾದ್ಯವೊಂದರ ಹುಟ್ಟು, ಸಾವು, ಮರುಹುಟ್ಟಿನ ಕಥೆ. 230 ವರ್ಷ ಅಸ್ತಿತ್ವದಲ್ಲಿದ್ದು, ಕಾಲವಾದ ಈ ವಾದ್ಯಕ್ಕೆ ಪುನರ್ಜನ್ಮದ ಯೋಗ. ಹಾರ್ಮೋನಿಯಂ ಹುಟ್ಟಿದ್ದು ಪಾಶ್ಚಾತ್ಯ ದೇಶದಲ್ಲಿ; ಆದರೆ ಬೆಳೆದದ್ದು ಪೌರಾತ್ಯ ದೇಶಗಳಲ್ಲಿ. ಅದರಲ್ಲೂ ಮುಖ್ಯವಾಗಿ ಭಾರತೀಯ ಉಪಖಂಡದಲ್ಲಿ. ಇದು ಭಾರತೀಯ ಸಂಗೀತ ವಾದ್ಯ ಎಂದು ಹಲವರು ತಪ್ಪಾಗಿ ಅರ್ಥೈಸುವಷ್ಟರ ಮಟ್ಟಿಗೆ ಇದು ಭಾರತೀಯ ಸಂಗೀತ ಕ್ಷೇತ್ರದಲ್ಲಿ ಹಾಸುಹೊಕ್ಕಾಗಿದೆ. ಇತಿಹಾಸದತ್ತ ಇಣುಕು ನೋಟ ಬೀರಿ, ನಿಖರವಾಗಿ ಈ ಸಂಗೀತವಾದ್ಯದ ಉಗಮಸ್ಥಾನ ಗುರುತಿಸುವ ಪ್ರಯತ್ನ ಮಾಡಿದರೆ, ಹಾರ್ಮೋನಿಯಂನ ಮಾದರಿ ನಿರ್ಮಿಸಿದ್ದು ಸಂಗೀತ ತಜ್ಞ ಅಲ್ಲ; ಕೋಪನ್ ಹೇಗನ್ ವಿಶ್ವವಿದ್ಯಾನಿಲಯದ ಭೌತಶಾಸ್ತ್ರಜ್ಞ ಗೊತ್ತಿಲಿಬ್ ಕ್ರಜೆನ್‌ಸ್ಟೀನ್ ಎಂಬ ಕ್ರಿಶ್ಚಿಯನ್. ಒಬ್ಬ ಶಿಕ್ಷಣತಜ್ಞರಾಗಿ, ಮಾನವ ದೇಹದ ಮೇಲೆ ವಿದ್ಯುತ್ತಿನ ಪರಿಣಾಮದ ಬಗ್ಗೆ ಪ್ರಯೋಗ ನಡೆಸಿದರು. ಮೇರೆ ಶೆಲ್ಲಿ, ಇವರ ಈ ಸಂಶೋಧನೆಯಿಂದ ಪ್ರಭಾವಿತರಾಗಿ, ಫ್ರಾಂಕೆನ್‌ಸ್ಟೀನ್ ಎಂಬ ಕಾದಂಬರಿ ರಚಿಸಿದರು. ಈ ಕಾದಂಬರಿಯಲ್ಲಿ ಬರುವ ಕಾಲ್ಪನಿಕ ವಿಜ್ಞಾನಿಯ ಪಾತ್ರಕ್ಕೆ ಕ್ರಜೆನ್‌ಸ್ಟೀನ್ ಸರ್‌ನೇಮ್ ಕೂಡಾ ನೀಡಿದರು.

ಫ್ರಾನ್ಸ್ ಸಂಪರ್ಕ

ಪ್ರೊಫೆಸರ್ ಕ್ರಜೆನ್‌ಸ್ಟೀನ್, ದೈತ್ಯಾಕಾರದ ಸಾಧನವನ್ನೇನೂ ತಯಾರಿಸಲಿಲ್ಲ; ಇವರ ಸೃಷ್ಟಿ ಇದಕ್ಕೆ ವಿರುದ್ಧವಾಗಿತ್ತು. ಇವರು ಭೌತಶಾಸ್ತ್ರ ಪ್ರಯೋಗಗಳನ್ನು ನಡೆಸದ ಅವಧಿಯಲ್ಲಿ, ಇವರು ಸಂಗೀತದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಇವರ ಮೇಲೆ ಲಂಬಾಕಾರದ ಪೈಪ್ ಮಾದರಿಯ ಶೆಂಗ್ ಎಂಬ ಚೀನೀ ವಾದ್ಯವೊಂದು ಪ್ರಭಾವ ಬೀರಿತು. ಇದಕ್ಕೂ ಮುನ್ನ ಮಾರ್ಕೊ ಪೋಲೊ ಯೂರೋಪ್‌ಗೆ ಈ ವಾದ್ಯ ಪರಿಚಯಿಸಿದ್ದರು. 1700ನೆ ಇಸವಿ ಸುಮಾರಿಗೆ ಸಾಕಷ್ಟು ಶೆಂಗ್‌ಗಳು ಯೂರೋಪ್‌ಗೆ ಬಂದವು. ಅದು ಕೋಪನ್‌ಹೇಗ್ ಬೀದಿಗೂ, ಕ್ರಜೆನ್‌ಸ್ಟೀನ್ ಮನೆಗೂ ಲಗ್ಗೆ ಇಟ್ಟಿತು. ಈ ಪ್ರೊಫೆಸರ್ ಈ ಜೊಂಡು ವಾದ್ಯದಿಂದ ಸಾಕಷ್ಟು ಪ್ರಭಾವಿತರಾದರು. ಇದರ ಹಿಂದಿನ ಭೌತವಿಜ್ಞಾನದ ಬಗ್ಗೆ ವಿಸ್ಮಯಪಟ್ಟರು. ಅದು ಹೊರಸೂಸುವ ತರಂಗದಲ್ಲಿ ಭೌತಶಾಸ್ತ್ರದ ಜಾಡು ಹಿಡಿದರು. 1779ರಲ್ಲಿ ಸೈಂಟ್ ಪಿಟ್ಸ್‌ಬರ್ಗ್‌ನ ಅಕಾಡಮಿ ಆಫ್ ಸೈನ್ಸ್, ವೋಕ್ಸ್ ಹುವಾನಾ ಮಾದರಿಯ ಸಂಗೀತವಾದ್ಯ ಸ್ವರವನ್ನು ಹೊರಸೂಸುವ ಬಗೆಗಿನ ಪ್ರಬಂಧಕ್ಕೆ ಪ್ರಶಸ್ತಿ ನೀಡಿತು. ಕ್ರಜೆನ್‌ಸ್ಟಿನ್ ಜೊಂಡು ವಾದ್ಯ ಸೇರಿದ, ಗಾಳಿಯಿಂದ ನುಡಿಸುವ ಒಂದು ಸಾಧನ ಅಭಿವೃದ್ಧಿಪಡಿಸಿದರು.

ಇದನ್ನು ಅಕಾಡಮಿಗೆ ನೀಡಿ, ಪ್ರಶಸ್ತಿಗಾಗಿ ಕೋರಿದರು. ಇತರರೂ ಇಂಥದ್ದೇ ಸಾಧನ ತಯಾರಿಸಲು ಆರಂಭಿಸಿದರು. ವಿಯೆನ್ನಾದಲ್ಲಿ, ಆಂಟೋನ್ ಹೆಕೋಲ್ ಎಂಬಾತ ಜೊಂಡು ವಾದ್ಯದಿಂದ ಕೂಡಿದ್ದ ಫಿಶ್ಚಾರ್ಮೋನಿಯಾ ಎಂಬ ಕೀಬೋರ್ಡ್ ಸಾಧನ ಅಭಿವೃದ್ಧಿಪಡಿಸಿದರು. ಜಾನ್ ಗ್ರೀನ್, ಸೆರಪೈನ್ ಎಂಬ ಸಂಗೀತವಾದ್ಯ ಕಂಡುಹುಡುಕಿದರು. ಇದರಲ್ಲಿ ಗಾಳಿಯನ್ನು ಲೋಹದ ಜೊಂಡುವಾದ್ಯದ ಮೂಲಕ ಊದಿದರೆ ಅದು ಸಂಗೀತವನ್ನು ಉತ್ಪಾದಿಸುತ್ತಿತ್ತು. ಇಂಥ ಪರಿಕರಗಳು ಇಂದು ವಸ್ತುಸಂಗ್ರಹಾಲಯಗಳಿಗೆ ಸೀಮಿತವಾಗಿವೆ. ಗ್ಯಾಬ್ರಿಯೆಲ್ ಜೋಸೆಫ್ ಗ್ರೆನಿ ಅಭಿವ್ಯಕ್ತಿ ಸಾಧನವನ್ನು ಸಂಶೋಧಿಸಿದರು. ಇವರ ಜೊಂಡುವಾದ್ಯ ವಿಸ್ತೃತ ಶ್ರೇಣಿಯನ್ನು ಹೊಂದಿತ್ತು. ಇದು ಏರು ಹಾಗೂ ಇಳಿ ಸ್ವರಗಳನ್ನು ಹೊರಡಿಸಲು ಶಕ್ತವಾಗಿತ್ತು. ಫ್ರಾನ್ಸ್‌ನ ಅಲೆಕ್ಸಾಂಡರ್ ಡೆಬಿಯನ್ ಇದನ್ನು ಇನ್ನಷ್ಟು ಅಭಿವೃದ್ಧಿಪಡಿಸಿ 1840ರಲ್ಲಿ ಪೇಟೆಂಟ್ ಪಡೆದು ಹಾರ್ಮೋನಿಯಂ ಎಂದು ಹೆಸರಿಸಿದರು. ಹಾರ್ಮೋನಿಯಂ ಎನ್ನುವುದು ಸಣ್ಣ ಗಾತ್ರದ ಸಂಗೀತ ವಾದ್ಯವಾಗಿದ್ದು, ಪಾದದಿಂದ ಕೆಳಗಿನ ಬದಿಯನ್ನು ಚಾಲನೆ ಮಾಡಿದಾಗ ಒತ್ತಡ ಸಮತೋಲನದ ವಾಯು ಸಂಗ್ರಹಾಗಾರ ಮೂಲಕ ಗಾಳಿಯನ್ನು ಕಳುಹಿಸುತ್ತದೆ. ಇದರಿಂದಾಗಿ ಒಂದು ಬದಿಯನ್ನು ಜೋಡಿಸಲಾದ ಲೋಹದ ಜೊಂಡುಗಳು ಕಂಪಿಸುತ್ತವೆ. ಮೊಣಗಾಲಿನಿಂದ ಚಾಲನೆ ಮಾಡಬಹುದಾದ ವಾಲ್ವ್‌ಗಳ ಸಹಾಯದಿಂದ ಹಲವು ವಿಧಾನಗಳ ಮೂಲಕ ಸ್ವರವನ್ನು ನಿಯಂತ್ರಿಸಲು ಅವಕಾಶವಿತ್ತು. ಕೀಬೋರ್ಡ್ ನ ಮೇಲ್ಭಾಗದಲ್ಲಿ ಇದನ್ನು ನಿಲ್ಲಿಸಲು ಅವಕಾಶವಿತ್ತು.

ಗಾಳಿ ಸಂಗ್ರಹಾಲಯಕ್ಕೆ ಬೈಪಾಸ್ ಮೂಲಕ ಗಾಳಿಯನ್ನು ಸರಬರಾಜು ಮಾಡಿ, ಕೆಳಗಿನ ಭಾಗವನ್ನು ಒತ್ತುವ ಬಲದಿಂದ ಇದನ್ನು ನಿಯಂತ್ರಿಸಬಹುದಿತ್ತು. ಯುರೋಪಿಯನ್ನರು ಅಮೆರಿಕಗೆ ವಲಸೆ ಬಂದಾಗ, ಆ ದೇಶಕ್ಕೂ ಹಾರ್ಮೋನಿಯಂ ಪರಿಚಯಿಸಿದರು. ಅಮೆರಿಕದ ಘಟಕಗಳಾದ ಮ್ಯಾಸನ್ ಆ್ಯಂಡ್ ಹ್ಯಾಮ್ಲಿನ್ ಹಾಗೂ ಈಸ್ಟೆ ಆರ್ಗನ್ ಕಂಪೆನಿಗಳು ಈ ಸಾಧನಗಳ ಉತ್ಪಾದನೆಯಲ್ಲಿ ತೊಡಗಿದವು. 19ನೆ ಶತಮಾನದ ಉತ್ತರಾರ್ಧದಲ್ಲಿ ಹಾಗೂ 20ನೆ ಶತಮಾನದ ಪೂರ್ವಾರ್ಧದಲ್ಲಿ ಇದು ಜನಪ್ರಿಯತೆಯ ಉತ್ತುಂಗ ತಲುಪಿತು. ದುಬಾರಿ ಪೈಪ್ ಸಂಗೀತ ಸಾಧನಗಳನ್ನು ಖರೀದಿಸಲಾಗದ ಚರ್ಚ್‌ಗಳು ಹಾಗೂ ಸಭಾಮಂದಿರಗಳು ಈ ಬಗ್ಗೆ ವಿಶೇಷ ಒಲವು ತೋರಿದವು. 150 ವರ್ಷ ಮೊದಲು ನೀವು ಚರ್ಚ್ ಗಳಿಗೆ ಭೇಟಿ ನೀಡಿದ್ದರೆ, ಚರ್ಚ್ ಸಂಗೀತ ಹಾಗೂ ಶಾಸ್ತ್ರೀಯ ಸಂಗೀತವನ್ನು ಹಾರ್ಮೋನಿಯಂ ಮೂಲಕ ನೀವು ಆಸ್ವಾದಿಸಬಹುದಿತ್ತು.

 ಬದಲಾದ ಕೈಗಳು

ಹಾರ್ಮೋನಿಯಂ ಗಾತ್ರದಲ್ಲಿ ಸಣ್ಣ ಹಾಗೂ ಕಡಿಮೆ ತೂಕದ್ದು ಆಗಿರುವ ಕಾರಣದಿಂದ ಸುಲಭವಾಗಿ ಒಯ್ಯಲು ಹಾಗೂ ಸಾಗಣೆ ವೇಳೆ ಹಾಳಾಗದಿರುವ ಕಾರಣದಿಂದ ಬೇಗ ಜನಪ್ರಿಯವಾಯಿತು. ಶ್ರೀಮಂತ ವರ್ಗಗಳ ಹಜಾರವನ್ನೂ ಇವು ಅಲಂಕರಿಸಿದವು. ಅಧಿಕ ಬಿಸಿ ಹಾಗೂ ತೇವಾಂಶಕ್ಕೂ ಇದು ಪಿಯಾನೊದಂತೆ ಹಾಳಾಗುವುದಿಲ್ಲ ಎಂಬ ಕಾರಣದಿಂದ ಪಾಶ್ಚಿಮಾತ್ಯ ಆಳ್ವಿಕೆಗೆ ಒಳಪಟ್ಟಿದ್ದ ಏಷ್ಯಾ, ಆಫ್ರಿಕಾ ಹಾಗೂ ಕೆರಿಬಿಯನ್ ನಾಡಿಗೂ ಲಗ್ಗೆ ಇಟ್ಟವು. ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತಕಾರರು, ಹಾರ್ಮೋನಿಯಂಗಾಗಿಯೇ ನಿರ್ದಿಷ್ಟವಾಗಿ ಹೊಂದುವ ಹಾಡುಗಳ ಗಾಯನ ಆರಂಭಿಸಿದರು. ಇವರಲ್ಲಿ ಬೊಹೆಮಿನ್‌ನ ಆಂಟೊನಿಯನ್ ಡ್ವೋರ್ಕ್, ಜರ್ಮನಿಯ ಸಂಯೋಜಕ ಸಿಗ್‌ಫ್ರೈಡ್ ಕರ್ಗ್ ಎಲೆರ್ಟ್, ಫ್ರಾನ್ಸ್ ಸಂಯೋಜಕ ಲೂಯಿಸ್ ವೆರ್ಣೆ, ರಷ್ಯಾದ ಡ್ಮಿಟ್ರಿ ಶೊಸ್ಟೊಕೊವಿಚ್, ಅಮೆರಿಕದ ವಿಲಿಯಂ ಬೆರ್‌ಸ್ಮಾ ಪ್ರಮುಖರು. ಪ್ರಮುಖ ಸಂಗೀತ ಗುಂಪುಗಳ ಅವಿಭಾಜ್ಯ ಅಂಗವಾಗಿ ಹಾರ್ಮೋನಿಯಂ ಮಾರ್ಪಟ್ಟಿತು. ಅಮೆರಿಕನ್ ಸಂಗೀತ ಸಂಯೋಜಕ ಆರ್ಥರ್ ಬಿರ್ಡ್‌, ಮ್ಯಾಸನ್ ಆ್ಯಂಡ್ ಹ್ಯಾಮ್ಲಿನ್ ಕಂಪೆನಿಯ ಹಾರ್ಮೋನಿಯಂ ಮಾದರಿಗಳನ್ನು ಸಿದ್ಧಪಡಿಸಿ, ಅಮೆರಿಕನ್ ಹಾರ್ಮೋನಿಯಂ ಎಂದು ಇದನ್ನು ಹೆಸರಿಸಿದರು. ಎರಡು ಹಾಗೂ ಮೂರು ಕೀಬೋರ್ಡ್‌ಗಳ ಹಾರ್ಮೋನಿಯಂಗಳು ಕೂಡಾ ಉತ್ಪಾದನೆಯಾದವು. ಇದಕ್ಕೆ ಹೆಚ್ಚಿನ ಪ್ರಮಾಣದ ಪಂಪಿಂಗ್ ಅಗತ್ಯವಾದ ಹಿನ್ನೆಲೆಯಲ್ಲಿ ಸಂಗೀತಗಾರರಿಗೆ ಹಾರ್ಮೋನಿಯಂ ಪೆಡಲ್‌ಗಳನ್ನು ತುಳಿಯಲು ಸಹಾಯಕರನ್ನೂ ನೇಮಿಸಿಕೊಳ್ಳುವ ಪರಿಪಾಠ ಬೆಳೆಯಿತು.

ಶ್ರೀಮಂತ ಸಂಸ್ಕೃತಿಯ ಭಾಗವಾಗಿದ್ದ ಹಾರ್ಮೋನಿಯಂ ಬಳಕೆಯನ್ನು ಅಪಲಾಚಿಯಾ ಹಾಗೂ ದಕ್ಷಿಣ ಅಮೆರಿಕದ ಜಾನಪದ ಸಂಗೀತ ತಜ್ಞರು ಕೂಡಾ ಆರಂಭಿಸಿದರು. ವ್ಯಾಪಕವಾಗಿ ಸ್ವೀಕಾರಾರ್ಹವಾಗಿದ್ದ ಇದನ್ನು ದೇಶಭಕ್ತಿ ಸಂಗೀತಕ್ಕೂ ಬಳಸಲಾಯಿತು.
 ಸ್ಕ್ಯಾಂಡಿನೇವಿಯನ್ ದೇಶಗಳ, ಅದರಲ್ಲೂ ಮುಖ್ಯವಾಗಿ ಫಿನ್ಲೆಂಡ್‌ನ ಪ್ರಮುಖ ಸಂಗೀತ ಪರಿಕರವಾಗಿ ಇದು ರೂಪುಗೊಂಡಿತು. 1890ರಲ್ಲಂತೂ ಎಲ್ಲ ಪ್ರಮುಖ ಬ್ಯಾಂಡ್ ಹಾಗೂ ಶಾಲಾ ಸಂಗೀತ ತಂಡಗಳಿಗೂ ಇದು ಅನಿವಾರ್ಯವಾಯಿತು. ಫಿನ್ಲೆಂಡಿನ ಸಂಯೋಜಕ ಮಿಲ್ಲಾ ವಿಲ್ಜಮಾ ಹಾಗೂ ಟಿಮೊ ಅಲಕೋಟಿಲಾ ಇದನ್ನು ವ್ಯಾಪಕವಾಗಿ ಬಳಸಿದರು. 20ನೆ ಶತಮಾನದಲ್ಲಿ ಇದರ ಜನಪ್ರಿಯತೆ ನಿಧಾನವಾಗಿ ಕುಸಿಯತೊಡಗಿತು. ಬದಲಾದ ಅಭಿರುಚಿ ಇದಕ್ಕೆ ಮುಖ್ಯ ಕಾರಣ. ಇದಕ್ಕೆ ಅಮೆರಿಕದ ಪೇಟೆಂಟ್ ಕಾನೂನುಗಳು ಕೂಡಾ ಕಾರಣವಾದವು. ಎಂಐಡಿಐ ಶಬ್ದ ವ್ಯವಸ್ಥೆ ಹೊಂದಿದ ಆಧುನಿಕ ಎಲೆಕ್ಟ್ರಾನಿಕ್ ಕೀಬೋರ್ಡ್‌ಗಳು ಅಸ್ತಿತ್ವಕ್ಕೆ ಬಂದ ಬಳಿಕ, ಹಾರ್ಮೋನಿಯಂ ಇತಿಹಾಸ ಸೇರಿತು.

ಅಪಸ್ವರ

ಬಂಗಾಳವನ್ನು 1905ರಲ್ಲಿ ಪೂರ್ವ ಹಾಗೂ ಪಶ್ಚಿಮ ಬಂಗಾಳ ಎಂದು ಬ್ರಿಟಿಷರು ವಿಭಜಿಸಿದ್ದು, ರಾಷ್ಟ್ರೀಯವಾದಿ ಸ್ವದೇಶಿ ಚಳವಳಿ ರೂಪುಗೊಳ್ಳಲು ಕಾರಣವಾಯಿತು. ಇದರಲ್ಲಿ ಬ್ರಿಟಿಷರ ಉತ್ಪನ್ನಗಳನ್ನು ತಿರಸ್ಕರಿಸುವುದು ಧ್ಯೇಯವಾಗಿತ್ತು. ಹಾರ್ಮೋನಿಯಂ ಇದಕ್ಕೆ ಗುರಿಯಾಯಿತು. ಹಾರ್ಮೋನಿಯಂ ಪೂರ್ವ ಯುಗದಲ್ಲಿ ಭಾರತೀಯ ಸಂಗೀತ ಗಾಯಕರಿಗೆ ಸಹ ಸಂಗೀತ ಕಲಾವಿದರು ಸಾರಂಗಿ ನುಡಿಸುತ್ತಿದ್ದರು. ಇದು ಮಾನವ ಸ್ವರವನ್ನು ಅನುಕರಿಸುವಂತಿದ್ದರೂ, ಇದರಲ್ಲಿ ಪರಿಣತಿ ಸಾಧಿಸುವುದು ಕಷ್ಟಸಾಧ್ಯವಾಗಿತ್ತು.

ಪ್ರತಿ ರಾಗಕ್ಕೆ ಹೊಂದಿಸಿಕೊಳ್ಳುವುದು ಕಷ್ಟಕರವಾಗಿತ್ತು. ಇದರಿಂದ ಸಹಜವಾಗಿಯೇ ಸಾರಂಗಿ ಸ್ಥಾನವನ್ನು ಹಾರ್ಮೋನಿಯಂ ಆಕ್ರಮಿಸಿಕೊಂಡಿತು. ಆದರೆ ರಾಜಕೀಯ ಕಾರಣ ಹಾಗೂ ಹಾರ್ಮೋನಿಯಂ ವಿದೇಶಿ ವಾದ್ಯ ಎಂದು ಪರಿಗಣಿಸಿದ್ದರಿಂದ ಮತ್ತೆ ಸಾರಂಗಿ ಕಡೆಗೆ ಒಲವು ಹೆಚ್ಚಿತು. ಹಾರ್ಮೋನಿಯಂಗೆ ಕೆಲ ಇತಿಮಿತಿಗಳೂ ಇದ್ದವು. ಭಾರತೀಯ ಸಂಗೀತದಲ್ಲಿ 12 ಉಪ ಸ್ವರಗಳಿದ್ದು, ಪಾಶ್ಚಿಮಾತ್ಯ ಸಂಗೀತದಷ್ಟೇ ಆದರೂ ಎರಡೂ ಪ್ರಕಾರದಲ್ಲಿ ಭಿನ್ನತೆ ಇತ್ತು. ಭಾರತದ ಸ್ವರ ಪರಿಕಲ್ಪನೆ ನಿರ್ದಿಷ್ಟ ಪಿಚ್‌ಪಾಯಿಂಟ್ ಗಳಿಗೆ ಅನುಗುಣವಾದುದಲ್ಲ. ಇದು ವೈವಿಧ್ಯಮಯ ಸಾಧ್ಯತೆಗಳಿಗೆ ಅವಕಾಶ ನೀಡುವಂಥದ್ದಾಗಿತ್ತು. ಯಾವ ಕೀಬೋರ್ಡ್ ಸಾಧನಗಳು ಕೂಡಾ ಈ ಸ್ವರದ ಪರಿಕಲ್ಪನೆಗೆ ಸರಿ ಹೊಂದುವಂತಿರಲಿಲ್ಲ.

ಇದು ಕೇವಲ ಒಂದು ಅಥವಾ ಇನ್ನೊಂದನ್ನಷ್ಟೇ ನುಡಿಸಲು ಶಕ್ತವಾಗಿರುತ್ತಿದ್ದವು. ಆಲಾಪ ಹಾಗೂ ಗಮಕವನ್ನು ಸೃಷ್ಟಿಸುವಂತಿರಲಿಲ್ಲ. ಆದರೆ ವೀಣೆ, ಸಿತಾರ್ ಇದನ್ನು ಸೃಷ್ಟಿಸುತ್ತಿತ್ತು. ಆದ್ದರಿಂದ ಹಾರ್ಮೋನಿಯಂಗಳು, ಭಾರತದ ಶಾಸ್ತ್ರೀಯ ಸಂಗೀತಕ್ಕೇ ಸೀಮಿತವಾಗಿದ್ದ ರೋಚಕ ಎನಿಸುವ ಅಲಂಕಾರಗಳನ್ನು ಸೃಷ್ಟಿಸಲು ವಿಫಲವಾದವು. ಎರಡು ವಿಭಿನ್ನ ರಾಗಗಳ ಸ್ವರಗಳು ಭಿನ್ನತೆಯ ಪ್ರತೀಕವಾಗಿದ್ದು, ಹಾರ್ಮೋನಿಯಂ ಇವುಗಳನ್ನು ಸೃಷ್ಟಿಸಲಾರದು ಎಂಬ ಅಭಿಪ್ರಾಯಕ್ಕೆ ಸಂಗೀತಗಾರರು ಬಂದರು. ಹಾರ್ಮೋನಿಯಂ ವಿರೋಧಿ ಪಡೆ ಇವೆಲ್ಲ ಅಸ್ತ್ರಗಳನ್ನೂ ಸಮರ್ಥವಾಗಿ ಬಳಸಿಕೊಂಡಿತು. ಈ ಸಾಧನದ ಹೆಸರೇ ಸೂಚಿಸುವಂತೆ ಇದು ವಿಭಿನ್ನ ಸ್ವರಗಳನ್ನು ರಸದೂತ ಹೊರಡಿಸುವಂಥದ್ದು. ಎರಡು ಕೀಗಳನ್ನು ಒಮ್ಮೆಲೇ ಅದುಮಿದರೆ, ಸ್ವರಮೇಳ ಹಾಗೂ ನಾದವನ್ನು ಹೊರಡಿಸುವಂಥದ್ದು. ಇದು ಭಾರತೀಯ ಸಂಗೀತಕ್ಕೆ ಮಾರಕ ಎಂಬ ಅಭಿಪ್ರಾಯ ಬಲಗೊಂಡಿತು. 1940ರಿಂದ 1971ರವರೆಗೂ ಆಕಾಶವಾಣಿ ಇದನ್ನು ನಿಷೇಧಿಸಿತು. ಆದರೆ ಈಗ ಇದಕ್ಕೆ ಅವಕಾಶ ನೀಡಿದೆ.

 ಹೆಚ್ಚಿನ ಸ್ವೀಕಾರಾರ್ಹತೆ

ಈ ಸಾಧನ ರವೀಂದ್ರನಾಥ ಟಾಗೋರರಿಗೆ ಆರಂಭದಲ್ಲಿ ಅಚ್ಚುಮೆಚ್ಚು. ತಮ್ಮ ಹಲವು ಹಾಡುಗಳನ್ನು ಸಂಯೋಜಿಸಲು ಇದನ್ನು ಬಳಸಿದರು. ಇದರ ಸಂಗೀತಾತ್ಮಕ ಇತಿಮಿತಿ ಕಾರಣದಿಂದ ಇದರಿಂದ ವಿಮುಖರಾಗಿ, ಶಾಂತಿನಿಕೇತನದಲ್ಲಿ ಇದನ್ನು ನಿಷೇಧಿಸಿದರು. ಆದರೆ ಇದರ ಪ್ರತಿಪಾದಕರಿಗೂ ಕೊರತೆ ಇರಲಿಲ್ಲ. ಭಾರತೀಯ ಶಾಸ್ತ್ರೀಯ ಸಂಗೀತದ ದಿಗ್ಗಜರಾದ ಪಂಡಿತ್ ಭೀಮಸೇನ ಜೋಶಿ, ಉಸ್ತಾದ್ ಬಡೇ ಗುಲಾಂ ಅಲಿ ಖಾನ್ ಹಾಗು ಬೇಗಂ ಅಖ್ತರ್ ಹಾರ್ಮೋನಿಯಂ ವಾದ್ಯವನ್ನು ಆದ್ಯತೆ ಮೇರೆಗೆ ಬಳಸಿಕೊಂಡರು. ಸಂಗೀತಗಾರನ ಸ್ವರ ಹಾಗೂ ಲಯಕ್ಕೆ ತಕ್ಕಂತೆ ಇದನ್ನು ಹೊಂದಿಸಿಕೊಳ್ಳಲು ಅವಕಾಶವಿದೆ ಎಂದು ಕಂಡುಕೊಂಡರು. ಇದರಿಂದ ಹಾರ್ಮೋನಿಯಂ ಬೆಳೆಯಲು ಸರಿಯಾದ ವಾತಾವರಣ ಸೃಷ್ಟಿಯಾಯಿತು. ಇದರಲ್ಲಿ ಹಲವು ಅನುಕೂಲಕರ ಅಂಶಗಳೂ ಇದ್ದವು. ಇದರಲ್ಲಿ ಪರಿಣತಿ ಸಾಧಿಸಲು ಸಾರಂಗಿ ಅಥವಾ ವಯಲಿನ್‌ನಷ್ಟು ಶ್ರಮ ಪಡಬೇಕಿರಲಿಲ್ಲ.

ಸಮೂಹಗಾನಕ್ಕೆ ಹೇಳಿ ಮಾಡಿಸಿದಂಥ ವಾದ್ಯ. ಇಡೀ ಸಂಗೀತ ಸಭಾಗೃಹಕ್ಕೆ ಕೇಳಿಸುವಷ್ಟು ಜೋರಾಗಿ ನುಡಿಸಲು ಅವಕಾಶವಿತ್ತು. ಸಂಗೀತದ ಲಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಕೂಡಾ ಇದು ಉತ್ತಮ ಸಾಧನವಾಗಿತ್ತು. ಹಿಂದೂ ಹಾಗೂ ಸಿಖ್ ಸಮುದಾಯಗಳು ತಮ್ಮ ಭಜನೆ, ಕೀರ್ತನೆ, ಧುನ್, ಶಬಾದ್‌ಗಳಿಗೆ ಇದನ್ನು ಬಹುಬೇಗ ಅಳವಡಿಸಿಕೊಂಡರು. ಕ್ರಿಶ್ಚಿಯನ್ನರೂ ಈ ವಿಚಾರದಲ್ಲಿ ಹಿಂದೆ ಬೀಳಲಿಲ್ಲ. ಭಾರತೀಯ ಭಾಷೆಯಲ್ಲಿ ಹೈಮ್‌ಗಳನ್ನು ಹಾಡಲು ಹಾಗೂ ಚರ್ಚ್ ಸಂಗೀತಗಳಿಗೆ ಇದನ್ನು ಬಳಸಿಕೊಂಡರು. ಇಸ್ಲಾಮಿನ ಸೂಫಿ ಸಂತರ ಖವ್ವಾಲಿಯಲ್ಲೂ ಹಾರ್ಮೋನಿಯಂ ಪ್ರಧಾನ ಪರಿಕರವಾಯಿತು. ಈಗಂತೂ ಭಕ್ತಿಸಂಗೀತ ಹಾಗೂ ಭಾರತೀಯ ಉಪಖಂಡದ ನಾಲ್ಕು ಧಾರ್ಮಿಕ ಪಂಥಗಳಿಗೂ ಪ್ರಮುಖ ಸಾಧನವಾಗಿದೆ. ಕರ್ನಾಟಕ ಸಂಗೀತದ ದಿಗ್ಗಜರು ಈ ಬಗ್ಗೆ ಚಂಚಲತೆ ಹೊಂದಿದ್ದರು. ಪೆರೂರು ಸುಬ್ರಹ್ಮಣ್ಯ ದೀಕ್ಷಿತರ್ ಅವರಂಥ ಸಂಗೀತಗಾರರು ಈ ಬಗ್ಗೆ ಅಪಾರ ಒಲವು ಹೊಂದಿದ್ದರೂ, ಹಲವರು ಇದಕ್ಕೆ ಅಪಸ್ವರ ಎತ್ತಿದರು. ಮತ್ತೊಬ್ಬ ವಿದ್ವಾಂಸ ಪಲ್ಲದಂ ವೆಂಕಟರಮಣ ರಾವ್, ಇದು ಅತ್ಯುತ್ತಮ ಪರಿಕರ. ಇದರಲ್ಲಿ ಗಮಕ ಹೊರಡಿಸುವುದು ಸಾಧ್ಯವಿಲ್ಲವಾದರೂ, ಗಮಕ ಮಾತ್ರ ಸಂಗೀತವಲ್ಲ ಎಂದು ಪ್ರತಿಪಾದಿಸಿದರು. ಇಷ್ಟಾಗಿಯೂ ಚೆನ್ನೈ ಸಂಗೀತ ಸಮ್ಮೇಳನದಲ್ಲಿ ಹಾರ್ಮೋನಿಯಂ ವಾದನ ಕಚೇರಿಗಳು ಅಪರೂಪ. ಕೆಲವೊಂದು ವಿರೋಧಗಳ ನಡುವೆಯೇ ಭಾರತದಲ್ಲಿ ಹಾರ್ಮೋನಿಯಂ ಎಲ್ಲ ಗ್ರಾಮೀಣ ಜಾನಪದ ಸಂಗೀತದ ಜತೆ ಹಾಸುಹೊಕ್ಕಾಗಿ ಬೆಳೆದವು. ಗಝಲ್, ಕಥಕ್, ಥುಮ್ರಿ, ಖವಾಲಿಗಳಲ್ಲೂ ಇದು ಜನಪ್ರಿಯ ಸಾಧನವಾಯಿತು. ಭಾರತದ ಚಿತ್ರರಂಗ ಕೂಡಾ ಹಾರ್ಮೋನಿಯಂ ಒಪ್ಪಿಕೊಂಡಿತು. ಜನಪ್ರಿಯ ಮನೋರಂಜನೆಯ ಪ್ರಮುಖ ಸಾಧನವಾಗಿ ಇದು ಬೆಳೆಯಿತು.

 ಜಾಗತಿಕ ಮರುಹುಟ್ಟು

ಎಲ್ಲ ಪ್ರಾಯೋಗಿಕ ಉದ್ದೇಶಗಳಿಗೆ ಯೂರೋಪಿಯನ್ ಹಾರ್ಮೋನಿಯಂ ಅಸ್ತಿತ್ವ ಕಳೆದುಕೊಂಡಿದೆ. ಇದು ಕೇವಲ ಪ್ರಾಚ್ಯವಸ್ತು ಮಳಿಗೆ ಹಾಗೂ ವಸ್ತುಸಂಗ್ರಹಾಲಯಗಳಿಗೆ ಸೀಮಿತವಾಗಿದೆ. ಸಂಗೀತ ಪರಿಕರಗಳ ದಾಸ್ತಾನು ಇರುವ ಮನೆಗಳಲ್ಲೂ ಕೆಲವೆಡೆ ಕಂಡುಬರುತ್ತದೆ. ಯೂರೋಪಿಯನ್ನರು ಅಮೆರಿಕಕ್ಕೆ ವಲಸೆ ಬರುವಾಗ ಈ ವಾದ್ಯವನ್ನು ಆ ನಾಡಿಗೆ ಪರಿಚಯಿಸಿದಂತೆ ಭಾರತೀಯ ಹಾರ್ಮೋನಿಯಂ ಕೂಡಾ ಅಮೆರಿಕ ದೇಶಕ್ಕೆ 20ನೆ ಶತಮಾನದ ಮೊದಲಾರ್ಧದಲ್ಲಿ ಲಗ್ಗೆ ಇಟ್ಟಿತು. 1950- 60ರ ದಶಕದಲ್ಲಿ ಏಷ್ಯನ್ ವಲಸೆ ಹೆಚ್ಚಿದಂತೆಲ್ಲ ಇದು ಅಮೆರಿಕದಲ್ಲಿ ಜನಪ್ರಿಯವಾಯಿತು. ಇದು ಅಮೆರಿಕದಲ್ಲಿ ಪ್ರತಿಸಂಸ್ಕೃತಿ ಬೆಳೆದ ಕಾಲಘಟ್ಟ. ಆಡಳಿತ ವಿರೋಧಿ ಸಾಂಸ್ಕೃತಿಕ ಚಳವಳಿ, ಮಹಿಳಾ ಹಕ್ಕು, ಜನಾಂಗೀಯ ಸಂಬಂಧ ಹಾಗೂ ವಿಯೆಟ್ನಾಂ ಯುದ್ಧ ಕೂಡಾ ಪರಿಣಾಮ ಬೀರಿತು. ಇಸ್ಕಾನ್ ಸಂಸ್ಥಾಪಕ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಅವರಿಗೆ ಬೀಟ್‌ನಿಕ್ಸ್‌ನ ಅಲೆನ್ ಗೀನ್ಸ್‌ಬರ್ಗ್ ಅವರಂಥವರು ಸಹಕರಿಸಿದರು. ಹಾರ್ಮೋನಿಯಂ ಆಗಲೇ ಭಕ್ತಿಸಂಗೀತದ ವಾಹಕವಾಗಿ ರೂಪುಗೊಂಡ ಹಿನ್ನೆಲೆಯಲ್ಲಿ, ಇಸ್ಕಾನ್ ಸದಸ್ಯರು ಬಹುವಾಗಿ ಇದನ್ನು ಬಳಸಿದರು. ಬಿಟ್ನಿಕ್ ಹಾಗೂ ಹಿಪ್ಪಿಗಳು ಕೂಡಾ ಈ ಬಗ್ಗೆ ಒಲವು ತೋರಿದರು.

ಆದರೆ ಹಾರ್ಮೋನಿಯಂ ರೂಪುಗೊಳ್ಳುವಿಕೆ ಇನ್ನೂ ಚಾಲನೆಯಲ್ಲೇ ಇದೆ. ಇದನ್ನು ಭಾರತೀಯ ಸಂಗೀತಕ್ಕೆ ಪೂರಕವಾಗುವಂತೆ ಇನ್ನಷ್ಟು ಬದಲಾವಣೆಗಳನ್ನು ತರುವ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ. ಕ್ರಜೆನ್‌ಸ್ಟೀನ್ ಅವರ ಆರಂಭಿಕ ಹೆಜ್ಜೆಗುರುತನ್ನು ಅನುಸರಿಸಿ, ಡಾ.ವಿದ್ಯಾಧರ್ ಓಕ್ ಎಂಬ ಔಷಧಶಾಸ್ತ್ರಜ್ಞ ತಮ್ಮ ವೃತ್ತಿಗೆ ರಾಜೀನಾಮೆ ನೀಡಿ ಸಂಗೀತದಲ್ಲಿ ಒಲವು ಬೆಳೆಸಿಕೊಂಡು, ಭಾರತೀಯ ಸಂಗೀತಕ್ಕೆ ಅಗತ್ಯ ಎನಿಸಿದ 22 ಶ್ರುತಿಗಳನ್ನು ನುಡಿಸಬಹುದಾದ ಹಾರ್ಮೋನಿಯಂ ಸಿದ್ಧಪಡಿಸಿದ್ದಾರೆ. ಪಾಶ್ಚಿಮಾತ್ಯ ಸಂಗೀತ ಎ, ಬಿ, ಸಿ, ಡಿಯಂಥ ಸ್ವರಗಳ ಆಧರಿತವಾಗಿ ದೋ, ರೇ, ಮಿ, ಫಾ, ಸೋ ಲಾ ಟಿ ಸ್ವರಗಳನ್ನು ಹೊಮ್ಮಿಸುವಂತಿದ್ದರೆ, ಭಾರತೀಯ ಸಂಗೀತ, ಸ, ರಿ, ಗ, ಮ, ಪ ದ, ನಿ ಎಂಬ ಸಪ್ತಸ್ವರ ಆಧರಿತವಾಗಿದೆ. ಇದರ ಜತೆಗೆ ಉಪ ಶ್ರುತಿಗಳೂ ಇವೆ. ಓಕ್ ಅವರು 75 ವರ್ಷಗಳಿಂದ ಹಾರ್ಮೋನಿಯಂ ಉತ್ಪಾದಿಸುತ್ತಿರುವ ಕಂಪೆನಿಯ ಕುಶಲಕರ್ಮಿಗಳನ್ನು ನಿಯೋಜಿಸಿಕೊಂಡು, ಇಂಥ ಮೈಕ್ರೊಟೋನ್‌ಗಳನ್ನು ಸೃಷ್ಟಿಸಬಲ್ಲ ಹಾರ್ಮೋನಿಯಂ ಸಿದ್ಧಪಡಿಸಿದ್ದಾರೆ.

ಇದಕ್ಕಾಗಿ ಕೀಗಳ ಕೆಳಗೆ ನಾಬ್‌ಗಳನ್ನು ಅಳವಡಿಸಲಾಗಿದೆ. ಬಹುಶಃ ಈ ಕೊರತೆ ಕಂಡಿದ್ದ ಟ್ಯಾಗೋರ್ ಈಗ ಸಮಾಧಿಯಿಂದಲೇ ನಗಬಹುದು. ಮತ್ತೊಬ್ಬ ಅನುಶೋಧಕ ಪಂಡಿತ್ ಭೀಷ್ಮದೇವ್ ವೇದಿ ಅವರು ಹಾರ್ಮೋನಿಯಂ ಹಾಗೂ ಸ್ವರಮಂಡಲವನ್ನು ಕ್ರೋಡೀಕರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಅವರ ಶಿಷ್ಯರು ವಿನ್ಯಾಸವನ್ನು ಅಭಿವೃದ್ಧಿಪಡಿಸಿದ್ದಾರೆ. ಪಂಡಿತ್ ಮನೋಹರ ಚಿಮೋಟೆ ತಮ್ಮ ಹೊಸ ಸಾಧನಕ್ಕೆ ಸಾಮವಾದಿನಿ ಎಂದು ಹೆಸರಿಸಿದ್ದಾರೆ. ಯಾವುದು ನಿಂತ ನೀರಾಗಿರುತ್ತದೋ ಅದು ಕ್ರಮೇಣ ಸಾಯುತ್ತದೆ. ಯಾವುದು ಸದಾ ರೂಪುಗೊಳ್ಳುತ್ತಾ ಮುನ್ನಡೆಯುತ್ತದೋ ಅದು ಉಳಿಯುತ್ತದೆ. ಹೊಸ ರೂಪಾಂತರಗಳೊಂದಿಗೆ ಹಾರ್ಮೋನಿಯಂ 21ನೆ ಶತಮಾನದಲ್ಲೂ ಮುಂದುವರಿಯುವ ಭರವಸೆ ಮೂಡಿಸಿದೆ.

ಭಾರತದಲ್ಲಿ ಮರುಹುಟ್ಟು

ಹಾರ್ಮೋನಿಯಂ ಕಥೆ ಮುಗಿಯಿತು ಎಂದುಕೊಳ್ಳುತ್ತಿದ್ದಾಗಲೇ ವಿಶ್ವದ ವಿರುದ್ಧ ದಿಕ್ಕಿನಲ್ಲಿ ಹೊಸ ಹಾರ್ಮೋನಿಯಂ ಕಥೆ ಹುಟ್ಟಿಕೊಂಡಿತು. ಸಾಗಣೆೆಗೆ ಸುಲಭವಾಗಿದ್ದರಿಂದ ಹಾಗೂ ಉಷ್ಣ ನಿರೋಧಕವಾಗಿದ್ದರಿಂದ ಬ್ರಿಟಿಷರು ತಮ್ಮ ಕಾಲನಿಗಳ ಮನೆಗಳು ಹಾಗೂ ಚರ್ಚ್ ಗಳಿಗೆ ರಫ್ತು ಮಾಡಲಾರಂಭಿಸಿದರು. ಹಲವು ಯೂರೋಪಿಯನ್ ಹಾರ್ಮೋನಿಯಂಗಳು ಭಾರತಕ್ಕೆ ಲಗ್ಗೆ ಇಟ್ಟವು. ಭಾರತದ ಸಂಗೀತಗಾರರು ಇದನ್ನು ಒಪ್ಪಿಕೊಂಡರು. ಅಂಥ ಒಬ್ಬ ಸಂಗೀತಗಾರ ದ್ವಾರಕಾನಾಥ್ ಘೋಷ್. ಅವರ ದ್ವಾರ್ಕಿನ್ ಆ್ಯಂಡ್ ಸನ್ಸ್ ಕಂಪೆನಿ ಕೊಲ್ಕತ್ತಾದಲ್ಲಿ ಸಂಗೀತ ಪರಿಕರ ತಯಾರಿಸುತ್ತಿದ್ದ ಅಗ್ರಗಣ್ಯ ಕಂಪೆನಿಯಾಗಿತ್ತು.

1875ರಲ್ಲಿ ಅವರು ಭಾರತೀಯ ಅವತರಣಿಕೆಯ ಕೈಯಿಂದ ನುಡಿಸುವ ಹಾರ್ಮೋನಿಯಂ ಪರಿಚಯಿಸಿದರು. ಇದು ಯುರೋಪಿಯನ್ ಹಾರ್ಮೋನಿಯಂಗಳ ಅರ್ಧದಷ್ಟು ಗಾತ್ರದ್ದಾಗಿತ್ತು. ಈ ಹೊಸ ರೂಪಾಂತರದ ಹಾರ್ಮೋನಿಯಂ ಹೆಚ್ಚಿನ ಬಾಳಿಕೆಯೂ ಬರುತ್ತಿತ್ತು. ಮಿತ ವೆಚ್ಚದಾಯಕ ಹಾಗೂ ಸುಲಭ ನಿರ್ವಹಣೆ ಹಾಗೂ ದುರಸ್ತಿಗೂ ಇದು ಹೆಸರಾಗಿತ್ತು. ಇದರ ಆಂತರಿಕ ವ್ಯವಸ್ಥೆಯನ್ನು ಘೋಷ್ ಮತ್ತಷ್ಟು ಸರಳಗೊಳಿಸಿದರು. ಜತೆಗೆ ಇದನ್ನು ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಅನುಕೂಲವಾಗುವಂತೆ, ಡ್ರೋನ್ ಸ್ಟಾಪ್‌ಗಳನ್ನು ಅಳವಡಿಸಿದರು. ಇತರ ಗತಿ ಬದಲಿಸುವ ವ್ಯವಸ್ಥೆಯನ್ನು ಬಳಿಕ ಆರಂಭಿಸಲಾಯಿತು. ಭಾರತೀಯ ಸಂಗೀತಗಾರರು ನೆಲದಲ್ಲಿ ಕುಳಿತು ಕಾರ್ಯಕ್ರಮ ನೀಡುವ ಕಾರಣದಿಂದ, ಸುಧಾರಿತ ಹಾರ್ಮೋನಿಯಂಗಳನ್ನು ನೆಲದಲ್ಲೇ ಇಟ್ಟುಕೊಂಡು ನುಡಿಸಬಹುದಾಗಿತ್ತು.

ಈ ಬದಲಾವಣೆಗಳ ಮೂಲವೆಂದರೆ ಪಾಶ್ಚಿಮಾತ್ಯ ಸಂಗೀತ ಹಾರ್ಮೋನಿಯಂ ಆಧರಿತವಾಗಿದ್ದರೆ, ಭಾರತೀಯ ಸಂಗೀತ ಇಂಪನ್ನು ಆಧರಿಸಿರುವಂಥದ್ದು. ಆದ್ದರಿಂದ ಒಂದು ಕೈಯಲ್ಲಿ ಹಾರ್ಮೋನಿಯಂ ನುಡಿಸಿ ಮತ್ತೊಂದು ಕೈಯಿಂದ ಶ್ರುತಿಯನ್ನು ನಿರ್ವಹಿಸಲು ಅವಕಾಶವಿತ್ತು. ಕೀಬೋರ್ಡ್‌ನಲ್ಲಿ ಎರಡೂ ಕೈಗಳನ್ನು ಇಡುವ ಅಗತ್ಯವಿಲ್ಲ. 1915ರ ಸುಮಾರಿಗೆ ಇದು ವಿಶ್ವದ ಅಗ್ರಗಣ್ಯ ಸಂಗೀತ ಪರಿಕರಗಳ ತಯಾರಿಕಾ ಸಂಸ್ಥೆಯಾಗಿ ಬೆಳೆಯಿತು. ಆರಂಭದಲ್ಲಿ ಭಾರತೀಯ ಸಂಗೀತಗಾರರು ಇದನ್ನು ಅನುಮಾನದಿಂದಲೇ ಸ್ವೀಕರಿಸಿದರು. ಆದರೆ ಖ್ಯಾತ ಸಂಗೀತಗಾರರಾಗಿದ್ದ ಗಣಪತ್‌ರಾವ್, ಗೋವಿಂದರಾವ್ ತಾಂಬೇ ಅವರಂಥ ದಿಗ್ಗಜರು ಇದನ್ನು ಸಂಗೀತ ಕಚೇರಿಗಳಿಗೆ ಹಾಗೂ ಮರಾಠಿ ಒಪೇರಾಗಳಿಗೆ ಬಳಸಿಕೊಳ್ಳಲು ಆರಂಭಿಸಿದ ಬಳಿಕ ಇದು ಗೌರವದ ಸ್ಥಾನ ಪಡೆಯಿತು. ಆದರೆ ಬಳಿಕ ರಾಜಕೀಯ ಇದರ ಸ್ವೀಕಾರಾರ್ಹತೆಯನ್ನು ಹಳಿ ತಪ್ಪಿಸಿತು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top