Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಸಂಸತ್ ಮೇಲೆ ನಡೆದ ಮೊದಲ ದಾಳಿ

ಸಂಸತ್ ಮೇಲೆ ನಡೆದ ಮೊದಲ ದಾಳಿ

ಶುಐಬ್ ದನಿಯಾಲ್ಶುಐಬ್ ದನಿಯಾಲ್4 Sept 2016 12:29 PM IST
share
ಸಂಸತ್ ಮೇಲೆ ನಡೆದ ಮೊದಲ ದಾಳಿ

ಗೋಹತ್ಯೆ ನಿಷೇಧಕ್ಕೆ ಯಾವುದೇ ಕೇಂದ್ರೀಯ ಕಾನೂನನ್ನು ಆಗ್ರಹಿಸದಿದ್ದರೂ, ಕಾಂಗ್ರೆಸ್ ಪಕ್ಷ, ಇದು ಉದ್ದೀಪಿಸಬಹುದಾದ ಧಾರ್ಮಿಕ ಒಲವಿನ ಹಿನ್ನೆಲೆಯಲ್ಲಿ ಜಾಗರೂಕವಾಗಿ, ಹಲವು ರಾಜ್ಯಗಳಲ್ಲಿ ಗೋ ಸಂರಕ್ಷಣಾ ಕಾನೂನುಗಳನ್ನು ಜಾರಿಗೊಳಿಸುತ್ತಾ ಹೋಯಿತು. ಬಳಿಕ ಜನ ಸಂಘದ ಉತ್ತರಾಕಾರಿ ಯಾದ ಭಾರತೀಯ ಜನತಾ ಪಕ್ಷ, ಈ ಕಾನೂನನ್ನು ಹೆಚ್ಚು ಕಟ್ಟುನಿಟ್ಟುಗೊಳಿಸಿತು.

ಲಷ್ಕರೆ ತಯ್ಯಿಬಾ ಹಾಗೂ ಜೈಶೆ ಮುಹಮ್ಮದ್ ಸಂಘಟನೆಗಳ ಒಂಬತ್ತು ಮಂದಿ ಉಗ್ರರು ಭಾರತದ ಪ್ರಜಾಪ್ರಭುತ್ವ ಶಕ್ತಿಕೇಂದ್ರ ಎನಿಸಿದ ಬ್ರಿಟಿಷ್ ನಿರ್ಮಿತ ಸಂಸತ್ ಭವನದ ಮೇಲೆ ದಾಳಿ ನಡೆಸುವ ಪ್ರಯತ್ನ ನಡೆಸಿದಾಗ ಪೊಲೀಸರು ಮತ್ತು ಸಂಸತ್ ಭವನದ ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿ ಉಗ್ರರನ್ನು ಹತ್ಯೆ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.

ಆದರೆ ಬಹುತೇಕ ಮಂದಿಯ ಗಮನಕ್ಕೆ ಬಾರದ ವಿಚಾರವೆಂದರೆ, ಇದು ಭಾರತದ ಸಂಸತ್ತಿನ ಮೇಲೆ ನಡೆದ ಎರಡನೆ ದಾಳಿ ಎನ್ನುವುದು. ಇದಕ್ಕೂ ಮುನ್ನ 1966ರಲ್ಲಿ ಇಂದಿರಾ ಗಾಂ ಪ್ರಧಾನಿಯಾಗಿದ್ದಾಗ, ನಗ್ನ ನಾಗಾ ಸಾಧುಗಳ ನೇತೃತ್ವದ ಒಂದು ದೊಡ್ಡ ಗುಂಪು ಸಂಸತ್ ಭವನದ ಮೇಲೆ ದಾಳಿ ಪ್ರಯತ್ನ ಮಾಡಿತ್ತು. ಕೇಂದ್ರ ಸರಕಾರ ಗೋಹತ್ಯೆ ಮೇಲೆ ರಾಷ್ಟ್ರವ್ಯಾಪಿ ನಿಷೇಧ ಹೇರಬೇಕು ಎಂದು ಆಗ್ರಹಿಸಿ ಈ ದಾಳಿ ಪ್ರಯತ್ನ ನಡೆಸಿದ್ದರು. ಅಲ್ಲೋಲ ಕಲ್ಲೋಲದ ಪರಿಸ್ಥಿತಿ ಸೃಷ್ಟಿಸುವ ಸಲುವಾಗಿ ಒಬ್ಬ ಪೊಲೀಸನನ್ನು ಹತ್ಯೆ ಮಾಡಿದ್ದರು. ಪ್ರತಿಯಾಗಿ ನಡೆದ ಪೊಲೀಸ್ ಗುಂಡಿನ ದಾಳಿಯಲ್ಲಿ ಏಳು ಮಂದಿ ಗೋರಕ್ಷಕರು ಬಲಿಯಾಗಿದ್ದರು. ಆದರೆ ಅಂದು ರಾಜಕೀಯ ಅನನುಭವಿಯಾಗಿದ್ದ ಪ್ರಧಾನಿ ಇಂದಿರಾಗಾಂ ಇದಕ್ಕೆ ಹಿಮ್ಮೆಟ್ಟದೇ, ಗೋಹತ್ಯೆ ನಿಷೇಧಕ್ಕೆ ನಿರಾಕರಿಸಿದ್ದರು.

ಗೋ ರಾಜಕೀಯ

ಅದಕ್ಕೂ ಮುನ್ನವೇ ಗೋವು ಭಾರತೀಯ ರಾಜಕೀಯದ ಪ್ರಮುಖ ಅಂಶವಾಗಿತ್ತು. ಮೋಹನದಾಸ್ ಕರಮಚಂದ್ ಗಾಂ ಗೋಸಂರಕ್ಷಣೆಯನ್ನು ತಮ್ಮ ರಾಜಕೀಯದ ಪ್ರಮುಖ ಅಸವಾಗಿ ಪರಿಗಣಿಸಿದ್ದರು. ತಮ್ಮ ‘‘ಹಿಂದ್ ಸ್ವರಾಜ್’’ ಕೃತಿಯಲ್ಲಿ ಗಾಂಧೀಜಿ, ‘‘ದೇಶದ ಕಾರಣಕ್ಕಾಗಿ ಗೋಸಂರಕ್ಷಣೆ ಕಾರ್ಯದಲ್ಲಿ ಕೈಜೋಡಿಸುವಂತೆ ನಾನು ನನ್ನ ಮುಹಮ್ಮದೀಯ ಸಹೋದರನನ್ನು ಒತ್ತಾಯಿಸುತ್ತೇನೆ’’ ಎಂದು ಬಣ್ಣಿಸಿದ್ದರು. 1927ರಲ್ಲಿ ಅವರು, ಗೋಮಾಂಸ ಭಕ್ಷಣೆಯಂಥ ಗಂಭೀರ ತಪ್ಪನ್ನು ತಿದ್ದಿಕೊಳ್ಳುವಂತೆ ದಲಿತರಿಗೆ ಕರೆ ನೀಡಿದ್ದರು. ಏಕೆಂದರೆ ಗೋಸಂರಕ್ಷಣೆ ಹಿಂದುತ್ವದಿಂದ ಆಗ ಬಾಹ್ಯವಾಗಿತ್ತು.

ಗಾಂಧೀಜಿ ಎಂದಿಗೂ ಗೋಹತ್ಯೆ ನಿಷೇಸುವ ಕಾನೂನು ತರುವಂತೆ ಒತ್ತಾಯಿಸದಿದ್ದರೂ, ಅವರು ಈ ವಿಚಾರದಲ್ಲಿ ಜನತೆಯ ಮನಸ್ಸು ಮತ್ತು ಹೃದಯವನ್ನು ಬದಲಿಸುವ ತಂತ್ರ ಅನುಸರಿಸಿದ್ದರು. ರಾಜಕೀಯ ಸಾಧನವಾಗಿ ಗೋಸಂರಕ್ಷಣೆಯನ್ನು ಬಳಸಿಕೊಳ್ಳುವ ದುರದೃಷ್ಟಕರ ಸಂಪ್ರದಾಯಕ್ಕೆ ಗಾಂೀಜಿ ನಾಂದಿ ಹಾಡಿದರು. ಸ್ವಾತಂತ್ರ್ಯಾನಂತರ, ಗೋಸಂರಕ್ಷಣೆಯನ್ನು ಮೂಲಭೂತ ಹಕ್ಕಾಗಿಸಬೇಕು ಎಂದು ಹಲವು ಮಂದಿ ಕಾಂಗ್ರೆಸಿಗರು ಆಗ್ರಹಿಸಿದರು. ಆದರೆ ಅಂಬೇಡ್ಕರ್ ಅವರು ಈ ಆಗ್ರಹವನ್ನು ತೀರಾ ಕೌಶಲಪೂರ್ಣವಾಗಿ ನಿರ್ವಹಿಸಿ, ಗೋಸಂರಕ್ಷಣೆ ಕೇವಲ ನೀತಿ ನಿರ್ದೇಶನಾ ತತ್ವವಾಗಿ ಉಳಿಯುವಂತೆ ನೋಡಿಕೊಂಡರು.

ಅದಾಗ್ಯೂ ಹಲವು ಹಿಂದೂ ಜಾತಿಗಳಿಗೆ ಗೋವು ಭಾವನಾತ್ಮಕ ವಿಷಯ. ಇದರ ಸುತ್ತವೇ ರಾಜಕೀಯ ಬೆಳೆದಿದೆ. ಸ್ವಾತಂತ್ರ್ಯದ ಬಳಿಕ ಗೋಸಂರಕ್ಷಣಾ ಚಳವಳಿಕಾರರ ಒಂದು ಗುಂಪು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಭೇಟಿ ಮಾಡಿದಾಗ, ಅವರು ಕೋಪದಿಂದ ನಾನು ಗೋಮಾಂಸ ಭಕ್ಷಣೆ ಮಾಡುತ್ತೇನೆ ಎಂಬ ಅಪಪ್ರಚಾರ ಏಕೆ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದರು.

1962ರಲ್ಲಿ ಜನಸಂಘದ ಮಧ್ಯಪ್ರದೇಶ ಘಟಕವು ನೆಹರೂ ಖಡ್ಗದಿಂದ ಗೋಹತ್ಯೆ ಮಾಡುತ್ತಿರುವ ರೇಖಾಚಿತ್ರ ಇರುವ ಒಂದು ಕರಪತ್ರವನ್ನು ಹಂಚಿತ್ತು. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಿತು ಎಂದರೆ, ಮಧ್ಯಪ್ರದೇಶದ ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿ ಕೈಲಾಶ್‌ನಾಥ್ ಕಾಟ್ಜು ಅವರು, 1962ರ ವಿಧಾನಸಭಾ ಚುನಾವಣೆಯಲ್ಲಿ ಜನಸಂಘ ಟಿಕೆಟ್‌ನಿಂದ ಸ್ಪರ್ಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯ ಲಕ್ಷ್ಮೀ ನಾರಾಯಣ ಪಾಂಡೆ ವಿರುದ್ಧ ಸೋಲು ಅನುಭವಿಸಬೇಕಾಯಿತು.

ಸಂಸತ್ತಿಗೆ ಮುತ್ತಿಗೆ

1866ರಲ್ಲಿ ಸರ್ವದಲೀಯ ಗೋರಕ್ಷಾ ಮಹಾಭಿಯಾನ ಹೆಸರಿನ ಸಮಿತಿ ನವೆಂಬರ್ 7ರಂದು ಸಾಮೂಹಿಕ ಸತ್ಯಾಗ್ರಹಕ್ಕೆ ಕರೆ ನೀಡಿತು. ಪ್ರಭುದತ್ತ ಬ್ರಹ್ಮಚಾರಿ ಎಂಬವರು ಈ ಸಮಿತಿಯ ಮುಖಂಡ. ಗಾಂ ಅನುಯಾಯಿಯಾಗಿ ರಾಜಕೀಯ ಸೇರಿದ ಈ ಸ್ವಾತಂತ್ರ್ಯ ಹೋರಾಟಗಾರ ಕೊನೆಗೆ ಅಲಹಾಬಾದ್ ಬಳಿ ಆಶ್ರಮ ನಿರ್ಮಿಸಿಕೊಂಡು ಧಾರ್ಮಿಕ ಗುರುವಾಗಿ ರೂಪಾಂತರ ಹೊಂದಿದರು. 1951ರ ಸಾರ್ವತ್ರಿಕ ಚುನಾವಣೆಯಲ್ಲಿ ಆರೆಸ್ಸೆಸ್ ಬೆಂಬಲದೊಂದಿಗೆ ನೆಹರೂ ದತ್ ವಿರುದ್ಧ ಸ್ಪರ್ಸಿದರು. ಹಿಂದೂ ಸಂಹಿತೆ ಮಸೂದೆಗೆ ವಿರೋಧ ಹಾಗೂ ಗೋಸಂರಕ್ಷಣೆ ಇವರ ಪ್ರಮುಖ ನೆಲೆಗಟ್ಟಾಗಿತ್ತು.

ಜನಸಂಘದ ಅಕೃತ ಬೆಂಬಲದೊಂದಿಗೆ ಹಾಗೂ ಕೆಲ ಕಾಂಗ್ರೆಸ್ ಮುಖಂಡರ ವೈಯಕ್ತಿಕ ಸಾಮರ್ಥ್ಯದೊಂದಿಗೆ ನವೆಂಬರ್ 7ರ ಸತ್ಯಾಗ್ರಹದಲ್ಲಿ ಅಭೂತಪೂರ್ವ ಜನಸಾಗರ ಪಾಲ್ಗೊಂಡಿತ್ತು. ಅಂದಾಜು ಏಳು ಲಕ್ಷ ಮಂದಿ ಈ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು ಎಂದು ಕೆಲವರು ಹೇಳುತ್ತಾರೆ.

ಸಂಸತ್ ಭವನದ ಹೊರಗೆ ಜಮಾವಣೆಗೊಂಡ ಭರ್ಚಿ ಹಾಗೂ ತ್ರಿಶೂಲಧಾರಿ ಸಾಧುಗಳು, ಸಂಸತ್ ಭವನ ಸಂಕೀರ್ಣಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರು. ಆದರೆ ದಿಲ್ಲಿ ಪೊಲೀಸರು ಇದಕ್ಕೆ ತಡೆ ಒಡ್ಡಿದರು.

ಬೆಲೆ ತೆತ್ತ ಕಾಂಗ್ರೆಸ್

ಬಳಿಕ ಅಂದಿನ ಗೃಹಸಚಿವರಾಗಿದ್ದ ಗುಲ್ಜಾರಿಲಾಲ್ ನಂದಾ ಅವರನ್ನು ಪ್ರಧಾನಿ ಇಂದಿರಾಗಾಂ ತರಾಟೆಗೆ ತೆಗೆದುಕೊಂಡು, ಸಾಧುಗಳನ್ನು ಸಂಸತ್ ಸಂಕೀರ್ಣಕ್ಕೆ ಬರಲು ಅವಕಾಶ ಮಾಡಿಕೊಟ್ಟ ಕ್ರಮವನ್ನು ಪ್ರಶ್ನಿಸಿದ್ದರು. ನಂದಾ ಗೋಹತ್ಯೆ ನಿಷೇಧಕ್ಕೆ ಮೊದಲು ಬೆಂಬಲ ಸೂಚಿಸಿದ್ದ ಹಿನ್ನೆಲೆಯಲ್ಲಿ ನಂದಾ ಪಾತ್ರದ ಬಗ್ಗೆಯೇ ಅನುಮಾನ ಹುಟ್ಟಿಕೊಂಡಿತ್ತು.

ಮುಂದೆ ಇದಕ್ಕಾಗಿ ಕಾಂಗ್ರೆಸ್ ಪಕ್ಷ ಬೆಲೆ ತೆರಬೇಕಾಯಿತು. 1966ರ ಸಂಸತ್ ದಾಳಿಯನ್ನು ಜನಸಂಘ, ಚುನಾವಣಾ ಸಂದೇಶವಾಗಿ ಬಳಸಿಕೊಂಡಿತು. ಕಾಂಗ್ರೆಸ್ ಪಕ್ಷ ಗೋಹತ್ಯೆ ನಿಷೇಧಕ್ಕೆ ವಿರುದ್ಧವಾಗಿರುವುದಲ್ಲದೇ, ಗೋರಕ್ಷಕರ ಮೇಲೆ ಗುಂಡು ಹಾರಿಸಿತು ಎಂದು ಪ್ರಚಾರ ಮಾಡಿತು. ಇದರಿಂದ 1967ರಲ್ಲಿ ಜನಸಂಘದ ಬಲ ಎರಡೂವರೆ ಪಟ್ಟು ಹೆಚ್ಚಿ, ಸಂಸತ್ತಿನಲ್ಲಿ ಜನಸಂಘದ ಸದಸ್ಯಬಲ 14 ರಿಂದ 35ಕ್ಕೆ ಏರಿತು.

ಗೋಹತ್ಯೆ ನಿಷೇಧಕ್ಕೆ ಯಾವುದೇ ಕೇಂದ್ರೀಯ ಕಾನೂನನ್ನು ಆಗ್ರಹಿಸದಿದ್ದರೂ, ಕಾಂಗ್ರೆಸ್ ಪಕ್ಷ, ಇದು ಉದ್ದೀಪಿಸಬಹುದಾದ ಧಾರ್ಮಿಕ ಒಲವಿನ ಹಿನ್ನೆಲೆಯಲ್ಲಿ ಜಾಗರೂಕವಾಗಿ, ಹಲವು ರಾಜ್ಯಗಳಲ್ಲಿ ಗೋ ಸಂರಕ್ಷಣಾ ಕಾನೂನುಗಳನ್ನು ಜಾರಿಗೊಳಿಸುತ್ತಾ ಹೋಯಿತು. ಬಳಿಕ ಜನಸಂಘದ ಉತ್ತರಾಕಾರಿಯಾದ ಭಾರತೀಯ ಜನತಾ ಪಕ್ಷ, ಈ ಕಾನೂನನ್ನು ಹೆಚ್ಚು ಕಟ್ಟುನಿಟ್ಟುಗೊಳಿಸಿತು.

ಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರ ಆಂಗೀಕರಿಸಿದ ಕಾನೂನು ಎಷ್ಟರಮಟ್ಟಿಗೆ ಕ್ರೂರವಾಗಿದೆಯೆಂದರೆ, ಈ ಕಾಯ್ದೆಯಡಿ ಆರೋಪಕ್ಕೆ ಒಳಗಾದವರು ಅಮಾಯಕರು ಎಂದು ಸಾಬೀತಾಗುವವರೆಗೂ ಅವರನ್ನು ಅಪರಾಗಳು ಎಂದೇ ಪರಿಗಣಿಸಲಾಗುತ್ತದೆ. ಇದು ಅಪರಾಧ ಕಾನೂನಿನ ಮೂಲತತ್ವವನ್ನೇ ಬುಡಮೇಲು ಮಾಡುವಂಥದ್ದು. ಅಂತಿಮವಾಗಿ 2014ರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ, ಪ್ರಧಾನಿಯಾಗಲು ಸಜ್ಜಾಗಿದ್ದ ಮೋದಿ, ಸ್ವತಃ ಗೋಸಂರಕ್ಷಣೆ ತಳಹದಿಯಲ್ಲಿ ಪ್ರಚಾರ ಕಾರ್ಯ ಕೈಗೊಂಡರು. ಕಾಂಗ್ರೆಸ್ ಪಕ್ಷ ದೇಶದಲ್ಲಿ ಪಿಂಕ್ ರೆವಲ್ಯೂಶನ್‌ಗೆ ಮುಂದಾಗಿದೆ ಎಂದು ಕಿಡಿ ಕಾರಿದ್ದರು. ಲಾಭಕ್ಕಾಗಿ ದೇಶದ ಹಸುಗಳನ್ನೇ ಹತ್ಯೆ ಮಾಡುವ ಗುಪ್ತ ಯೋಜನೆ ಹೊಂದಿದೆ ಎಂದು ಜರೆದಿದ್ದರು.

share
ಶುಐಬ್ ದನಿಯಾಲ್
ಶುಐಬ್ ದನಿಯಾಲ್
Next Story
X