Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಮಹಾರಾಷ್ಟ್ರದಲ್ಲೊಂದು ಅಜ್ಜಿಯಂದಿರ ಶಾಲೆ!

ಮಹಾರಾಷ್ಟ್ರದಲ್ಲೊಂದು ಅಜ್ಜಿಯಂದಿರ ಶಾಲೆ!

ದಾನಿಶ್ ಸಿದ್ದೀಕಿದಾನಿಶ್ ಸಿದ್ದೀಕಿ11 March 2017 7:32 PM IST
share
ಮಹಾರಾಷ್ಟ್ರದಲ್ಲೊಂದು ಅಜ್ಜಿಯಂದಿರ ಶಾಲೆ!

ಒಂದು ಕೊಠಡಿಯ ಆಜಿಬೈಚಿ ಶಾಲೆಯಲ್ಲಿ ವಾರಕ್ಕೆ ಆರು ದಿನ ತಲಾ ಎರಡು ಗಂಟೆಯಂತೆ ಮಧ್ಯಾಹ್ನದ ಬಳಿಕ ತರಗತಿಗಳು ನಡೆಯುತ್ತವೆ. ಮಹಿಳೆಯರು ತಮ್ಮ ದೈನಂದಿನ ಮನೆಗೆಲಸ, ಹೊಲದ ಕೆಲಸ ಎಲ್ಲವನ್ನೂ ಮುಗಿಸಿ ಬಂದು ತರಗತಿಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಈ ಸಮಯ ನಿಗದಿಪಡಿಸಲಾಗಿದೆ.

ಮಹಾರಾಷ್ಟ್ರದ ಥಾಣೆ ಜಿಲ್ಲೆ ಪಂಗಾನ್ ಗ್ರಾಮದ ಆಜಿಬೈಚಿ ಶಾಲೆ ಭಾರತದ ಇತರ ಮಾಮೂಲಿ ಶಾಲೆಗಳಂತಲ್ಲ. ಈ ಅಜ್ಜಿಯಂದಿರ ಶಾಲೆಯ ವಿದ್ಯಾರ್ಥಿಗಳು, ಓದಲು, ಕಲಿಯಲು ಅವಕಾಶ ಸಿಕ್ಕದ ಹಿರಿಯ ಮಹಿಳೆಯರು. ‘‘ಶಾಲೆಗೆ ಹೋಗುವುದು ನನಗೆ ಇಷ್ಟ’’ ಎಂದು ಮುಂಬೈನಿಂದ 120 ಕಿ.ಮೀ. ಪೂರ್ವದ ಗ್ರಾಮದಲ್ಲಿನ ತಮ್ಮ ಮನೆಯ ಹೊರಗೆ ಬಟ್ಟೆ ತೊಳೆಯುತ್ತಿದ್ದ ಕಮಲ್ ಕೇಶವ್ ತುಪಾಂಗೆ (60) ಹೇಳಿದರು.

2011ರ ಜನಗಣತಿ ಪ್ರಕಾರ ಭಾರತದ ಸಾಕ್ಷರತೆ ಪ್ರಮಾಣ ಶೇ.74ಕ್ಕೇರಿದೆ. ಆದರೆ ಪುರುಷರಿಗೆ ಹೋಲಿಸಿದರೆ ಮಹಿಳಾ ಸಾಕ್ಷರತೆ ಪ್ರಮಾಣ ಇನ್ನೂ ಕಡಿಮೆ. ಭಾರತದಲ್ಲಿ ಶೇ.65ರಷ್ಟು ಮಹಿಳೆಯರು ಮಾತ್ರ ಅಕ್ಷರಸ್ಥರು. 2011ರ ಜನಗಣತಿ ವರದಿ ಪ್ರಕಾರ ಸಾಕ್ಷರ ಪುರುಷರ ಪ್ರಮಾಣ ಶೇ.82.

ಸಮಾಜದಲ್ಲಿ ಮಹಿಳೆಯರ ಬಗೆಗಿನ ದೃಷ್ಟಿಕೋನ ಇದಕ್ಕೆ ಮುಖ್ಯ ಕಾರಣ ಎನ್ನುವುದು ಶಿಕ್ಷಣ ತಜ್ಞರು ಹಾಗೂ ಸಂಶೋಧಕರ ಅಭಿಮತ. ಹೆಣ್ಣುಮಕ್ಕಳಿಗಿಂತ ಗಂಡುಮಕ್ಕಳ ಮೇಲೆ ಪ್ರೀತಿ ಹಾಗೂ ಬಾಲ್ಯವಿವಾಹ ಮಹಿಳಾ ಸಾಕ್ಷರತೆ ಕುಂಠಿತಗೊಳ್ಳಲು ಮುಖ್ಯ ಕಾರಣ.

ಒಂದು ಕೊಠಡಿಯ ಆಜಿಬೈಚಿ ಶಾಲೆಯಲ್ಲಿ ವಾರಕ್ಕೆ ಆರು ದಿನ ತಲಾ ಎರಡು ಗಂಟೆಯಂತೆ ಮಧ್ಯಾಹ್ನದ ಬಳಿಕ ತರಗತಿಗಳು ನಡೆಯುತ್ತವೆ. ಮಹಿಳೆಯರು ತಮ್ಮ ದೈನಂದಿನ ಮನೆಗೆಲಸ, ಹೊಲದ ಕೆಲಸ ಎಲ್ಲವನ್ನೂ ಮುಗಿಸಿ ಬಂದು ತರಗತಿಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಈ ಸಮಯ ನಿಗದಿಪಡಿಸಲಾಗಿದೆ. ಶಾಲೆಯಲ್ಲಿ ಶೀತಲ್ ಪ್ರಕಾಶ್ ಮೋರೆ (30) ಎಂಬ ಶಿಕ್ಷಕಿ 74 ವರ್ಷದ ಜನಾಬಾಯಿ ಕೇದಾರ್ ಅವರಿಗೆ ಬಳಪದ ಮೇಲೆ ಬರೆಯಲು ಸಹಾಯ ಮಾಡುತ್ತಿದ್ದರು. ಈ ಶಾಲೆಯಲ್ಲಿ ಸೇರಲು ಅರ್ಹತೆ ಎಂದರೆ ಕನಿಷ್ಠ ವಯೋಮಿತಿ 60 ವರ್ಷಗಳು.

‘‘ನನ್ನ ಮೊಣಕಾಲಿಗೆ ಗಾಯವಾಗಿದೆ. ಆದ್ದರಿಂದ ನೆಲದ ಮೇಲೆ ದೀರ್ಘಕಾಲ ಕೂರುವಂತಿಲ್ಲ. ಅದೊಂದೇ ಸಮಸ್ಯೆ. ಇಷ್ಟಾಗಿಯೂ ನಾನು ಪ್ರತಿದಿನ ಶಾಲೆಗೆ ಹೋಗುತ್ತೇನೆ’’ ಎಂದು ಕೇಶವ್ ತುಪಾಂಗೆ ವಿವರಿಸಿದರು.

ತಿಳಿಗುಲಾಬಿ ಬಣ್ಣದ ಸೀರೆ ಈ ಶಾಲೆಯಲ್ಲಿ ಸಮವಸ್ತ್ರ. ಮಹಿಳೆಯರು ಗ್ರಾಮದ ಧೂಳಿನ ರಸ್ತೆಯಲ್ಲಿ ನಡೆದುಕೊಂಡೇ ಪ್ರತಿದಿನ ಶಾಲೆಗೆ ತೆರಳುತ್ತಾರೆ.

‘‘ಮೊದಲು ನನ್ನ ಎಲ್ಲ ಮನೆಗೆಲಸ ಮುಗಿಸಿ, ಬಳಿಕ ಶಾಲೆಗೆ ಹೋಗುತ್ತೇನೆ. ನಮ್ಮ ಗ್ರಾಮದಲ್ಲಿ ಈ ವ್ಯವಸ್ಥೆ ಇರುವುದು ನಮ್ಮ ಪುಣ್ಯ’’ ಎಂದು ದ್ರುಪದಾ ಪಾಂಡುರಂಗ ಕೇದಾರ್ (70) ಬಣ್ಣಿಸುತ್ತಾರೆ. ಪಂಗಾನ್‌ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅವರ ಎಂಟು ವರ್ಷದ ಮೊಮ್ಮಗಳು ಓದುತ್ತಿದ್ದಾಳೆ.

ಮೊದಲು ಪ್ರಾರ್ಥನೆ ಮಾಡಿದ ಬಳಿಕ ಮಹಿಳೆಯರು ಓದು ಹಾಗೂ ಬರಹ ಅಭ್ಯಾಸ ಮಾಡುತ್ತಾರೆ. ಟೈಲ್ಸ್ ಮೇಲೆ ಚಿತ್ರಿಸಿದ ಅಕ್ಷರಗಳನ್ನು ಇಲ್ಲಿ ಪಾಠೋಪಕರಣವಾಗಿ ಬಳಸಲಾಗುತ್ತದೆ. ದೃಷ್ಟಿ ಮಂದವಾದ ವಿದ್ಯಾರ್ಥಿಗಳೂ ಓದಲು ಅನುಕೂಲವಾಗುವಂತೆ ಈ ವ್ಯವಸ್ಥೆ ಮಾಡಲಾಗಿದೆ. ಬಹುತೇಕ ಇಂತಹ ಪಾಠೋಪಕರಣಗಳನ್ನು ವಿದ್ಯಾರ್ಥಿಗಳೇ ಸಿದ್ಧಪಡಿಸಿರುವುದು ವಿಶೇಷ.

‘‘ಇತರ ಹಳ್ಳಿಗಳಲ್ಲೂ ಇಂಥದ್ದೇ ವ್ಯವಸ್ಥೆಯನ್ನು ಅನಕ್ಷರಸ್ಥ ಹಿರಿಯ ಮಹಿಳೆಯರಿಗೆ ಕಲ್ಪಿಸಲಾಗಿದೆ ಎಂದು ಶಿಕ್ಷಕಿ ಶೀತಲ್ ಪ್ರಕಾಶ್ ಮೋರೆ ವಿವರಿಸಿದರು. ಇತರ ಎಲ್ಲ ಶಿಕ್ಷಕಿಯರು ಮಕ್ಕಳಿಗೆ ಪಾಠ ಮಾಡುತ್ತಾರೆ. ಆದರೆ ಹಿರಿಯ ಮಹಿಳೆಯರಿಗೆ ಪಾಠ ಮಾಡುವ ಅವಕಾಶ ನನಗೆ ಮಾತ್ರ ಸಿಕ್ಕಿದೆ. ಇದೊಂದು ಅಪೂರ್ವ ಅವಕಾಶ; ಅಂಥವರಿಗೆ ಪಾಠ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ’’ ಎಂದು ಅವರು ಹೇಳುತ್ತಾರೆ.

share
ದಾನಿಶ್ ಸಿದ್ದೀಕಿ
ದಾನಿಶ್ ಸಿದ್ದೀಕಿ
Next Story
X