ಎಂಎಸ್ಎಂಇ, ಸ್ಟಾರ್ಟ್-ಅಪ್; ನರಸಿಂಹ ನಾಯಕ್ ಸದಸ್ಯರಾಗಿ ನಾಮನಿರ್ದೇಶನ
ನರಸಿಂಹ ನಾಯಕ್
ಉಡುಪಿ, ಮೇ ೨೭: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿಯ ೨೦೨೨-೨೩ನೇ ಸಾಲಿನ ಎಂಎಸ್ಎಂಇ ಮತ್ತು ಸ್ಟಾರ್ಟ್-ಅಪ್ಗಳ ಸಮಿತಿಗೆ ಸದಸ್ಯರಾಗಿ ಸಿಎ ನರಸಿಂಹ ನಾಯಕ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ಅವರು ೨೦೧೯-೨೦ನೇ ಸಾಲಿಗೆ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ, ಉಡುಪಿ ಶಾಖೆ ಅಧ್ಯಕ್ಷರಾಗಿದ್ದರು. ಕರ್ನಾಟಕ ಸರಕಾರದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ೫ ವರ್ಷಗಳ ಸೇವೆ ಸಲ್ಲಿಸಿ, ಸೇವೆಯನ್ನು ತೊರೆದು, ಪ್ರಸ್ತುತ ಮೆ| ನಾಯಕ್ ಅಸೋಸಿಯೇಟ್ಸ್, ಉಡುಪಿ ಇದರ ಪಾಲುದಾರರಾಗಿ ದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story