ಉಡುಪಿ: ಜೂನ್ 18ರಂದು ಉದ್ಯೋಗ ಮೇಳ
ಉಡುಪಿ, ಜೂ.15: ಎಸ್ಬಿಐ ಲೈಫ್ ಇನ್ಸೂರೆನ್ಸ್ ಪ್ರೈ.ಲಿ, ಬಾಳಿಗ ಫಿಶ್ನೆಟ್ ಪ್ರೈ.ಲಿ, ಪ್ರಕಾಶ ರಿಟೈಲ್ ಪ್ರೈ.ಲಿ ಮತ್ತು ಮೆಡ್ಪ್ಲಸ್ ಪ್ರೈ.ಲಿ ಕಂಪೆನಿ ಗಳ ವತಿಯಿಂದ ಜೂನ್ 18ರಂದು ಬೆಳಗ್ಗೆ 10:30ರಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಛೇರಿಯಲ್ಲಿ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಎಸೆಸೆಲ್ಸಿ, ಪಿಯುಸಿ, ಪದವಿ, ಬಿಸಿಎ, ಬಿಸಿಎಸ್, ಎಂಸಿಎ, ಬಿಕಾಂ ಬಿಎಸ್ಸಿ, ಎಂಎಸ್ಸಿ, ಡಿಪ್ಲೋಮ ಇನ್ ಕಂಪ್ಯೂಟರ್ ಸೈನ್ಸ್, ಡಿಪ್ಲೋಮಾ ಇನ್ ಮೆಕ್ಯಾನಿಕಲ್, ಬಿ.ಇ ಇಂಜಿನಿಯರಿಂಗ್, ಡಿ.ಫಾರ್ಮ ಮತ್ತು ಬಿ.ಫಾರ್ಮ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಅಂಕಪಟ್ಟಿ, ಸ್ವ-ವಿವರವುಳ್ಳ ರೆಸ್ಯೂಮ್ ಹಾಗೂ ಆಧಾರ್ ಕಾರ್ಡ್ಪ್ರತಿಯೊಂದಿಗೆ ನೇರ ಸಂದರ್ಶನದಲ್ಲಿ ಭಾಗವಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಮೊ.ಸಂಖ್ಯೆ, 8105618291, 8197440155, 9945856670ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.