ಉಡುಪಿ: ದಿನದಲ್ಲಿ ಐವರು ಕೋವಿಡ್ಗೆ ಪಾಸಿಟಿವ್
ಉಡುಪಿ: ಬುಧವಾರ ಜಿಲ್ಲೆಯ ಒಟ್ಟು ಐದುಮಂದಿ ಕೋವಿಡ್ಗೆ ಪಾಸಿಟಿವ್ ಬಂದಿದ್ದು, ಈ ಮೂಲಕ ಜಿಲ್ಲೆಯಲ್ಲಿ ರುವ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 29ಕ್ಕೇರಿದೆ. ಇಂದು ಇಬ್ಬರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ನಿನ್ನೆ ಜಿಲ್ಲೆಯಲ್ಲಿ 17 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತಾದರೆ, ಇಂದು ಪರೀಕ್ಷೆಗೊಳಗಾದ ೨೬೯ ಮಂದಿಯಲ್ಲಿ ಐವರು ಕೋವಿಡ್ಗೆ ಪಾಸಿಟಿವ್ ಬಂದಿದ್ದಾರೆ.ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದೆ.
ಸೋಂಕು ಪತ್ತೆಯಾದವರಲ್ಲಿ ಮೂವರು ಉಡುಪಿ ತಾಲೂಕಿನವರಾದರೆ ಒಬ್ಬರು ಕುಂದಾಪುರದವರು. ಇನ್ನೊಬ್ಬರು ಹೊರ ಜಿಲ್ಲೆಯಿಂದ ಚಿಕಿತ್ಸೆಗೆಂದು ಬಂದಿದ್ದು, ಇಲ್ಲಿ ಪಾಸಿಟಿವ್ ಬಂದಿದ್ದಾರೆ. ಐವರು ಸಹ ಅವರವರ ಮನೆಯಲ್ಲಿದ್ದು ಚಿಕಿತ್ಸೆ ಪಡೆಯುತಿದ್ದಾರೆ.
ಜಿಲ್ಲೆಯಲ್ಲಿ ಇಂದು ಒಟ್ಟು ೨೬೯ ಮಂದಿಯನ್ನು ಕೋವಿಡ್ ಪರೀಕ್ಷೆ ಗೊಳಪಡಿಸಲಾಗಿದ್ದು, ಉಡುಪಿ ತಾಲೂಕಿನ ೧೯೭ ಮಂದಿಯಲ್ಲಿ ೩ ಮಂದಿ ಪಾಸಿಟಿವ್ ಬಂದಿದ್ದರೆ, ಕುಂದಾಪುರ ತಾಲೂಕಿನ ೩೬ ಮಂದಿಯಲ್ಲಿ ಒಬ್ಬರು ಹಾಗೂ ಕಾರ್ಕಳ ತಾಲೂಕಿನ ೩೬ ಮಂದಿಯಲ್ಲಿ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ.