Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಉಡುಪಿಯಲ್ಲಿ ನಾಳೆ ಕೃಷ್ಣ ಜನ್ಮಾಷ್ಟಮಿ...

ಉಡುಪಿಯಲ್ಲಿ ನಾಳೆ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

ವಾರ್ತಾಭಾರತಿವಾರ್ತಾಭಾರತಿ18 Aug 2022 11:49 PM IST
share
ಉಡುಪಿಯಲ್ಲಿ ನಾಳೆ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಉಡುಪಿ, ಆ.22: ಕರಾವಳಿ ಭಾಗದಲ್ಲಿ ನಾಡಹಬ್ಬದಂತೆ ಆಚರಿಸಲ್ಪಡುವ ಉಡುಪಿಯ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಶ್ರೀಕೃಷ್ಣ ಲೀಲೋತ್ಸವ (ವಿಟ್ಲಪಿಂಡಿ) ಗಳಿಗೆ ಉಡುಪಿ ಸಜ್ಜಾಗಿದೆ. ಕಳೆದೆರಡು ವರ್ಷಗಳಿಂದ ಕೊರೋನ ಕಾರಣದಿಂದ ಸಾರ್ವಜನಿಕರ ಹೆಚ್ಚಿನ ಭಾಗವಹಿಸುವಿಕೆಯಿಲ್ಲದೇ ಸರಳವಾಗಿ ನಡೆದ ಈ ಹಬ್ಬಗಳು ಈ ಬಾರಿ ಮತ್ತೆ ಮುಕ್ತವಾಗಿ ಸಾರ್ವಜನಿಕರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ನಡೆಯುತ್ತಿದೆ.

ಉಡುಪಿಯ ಪರ್ಯಾಯ ಕೃಷ್ಣಾಪುರ ಮಠದ ವತಿಯಿಂದ ನಡೆಯುವ ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ಆ.19 ಮತ್ತು 20ರಂದು ನಡೆಯಲಿದೆ. ನಾಳೆ ಸಾಂಪ್ರದಾಯಿಕ ಶ್ರೀಕೃಷ್ಣಜನ್ಮಾಷ್ಟಮಿ ಆಚರಣೆ ನಡೆದು, ರಾತ್ರಿ ಶ್ರೀಗಳು ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರೆ ಮತ್ತು ಶನಿವಾರ ಹಗಲು ಶ್ರೀಕೃಷ್ಣ ಲೀಲೋತ್ಸವಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ.

ವಿಟ್ಲಪಿಂಡಿಯಂದು ರಥಬೀದಿಯಲ್ಲಿ ಗೊಲ್ಲರು ಒಡೆಯುವ ಮೊಸರು ಕುಡಿಕೆಗಳನ್ನು ನೇತು ಹಾಕಲು ಗುರ್ಜಿಗಳನ್ನು ಈಗಾಗಲೇ ನೆಡಲಾಗಿದೆ. ಮಠ, ಗರ್ಭಗುಡಿ ಹಾಗೂ ರಥಬೀದಿಯಲ್ಲಿ ವಿವಿಧ ಬಗೆಯ ಆಲಂಕಾರ ಮಾಡಲಾಗಿದೆ. ಶ್ರೀಕೃಷ್ಣಾಜನ್ಮಾಷ್ಠಮಿ ಪ್ರಯುಕ್ತ ಮಠದಲ್ಲಿ ವಿವಿಧ ಸ್ಪರ್ಧೆಗಳನ್ನು ಕಳೆದ ಕೆಲವು ದಿನಗಳಿದ ನಡೆಯುತ್ತಿವೆ. ಎರಡು ದಿನಗಳ ಕಾಲ ನಗರದ ಬೀದಿ ಬೀದಿಗಳಲ್ಲಿ ಜನರನ್ನು ಸಮ್ಮೋಹನಗೊಳಿಸಲು ಹುಲಿ ವೇಷಗಳು ಬಣ್ಣ ಹಚ್ಚಿಕೊಂಡು ಸಿದ್ಧವಾಗುತ್ತಿವೆ.

ಮಠದ ಭೋಜನ ಶಾಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ವಿವಿಧ ಬಗೆಯ ಲಾಡುಗಳನ್ನು ಹಾಗೂ ವಿವಿಧ ಗಾತ್ರದ ಚಕ್ಕುಲಿಗಳನ್ನು ಸಾವಿರಾರು ಸಂಖ್ಯೆಯಲ್ಲಿ ತಯಾರಿಸುವ ಕೆಲಸ ನಡೆಯುತ್ತಿದೆ. ಇದನ್ನು ಭಕ್ತರಿಗೆ ಚಿಣ್ಣರ ಸಂತರ್ಪಣೆಯ ಶಾಲೆಯ ಮಕ್ಕಳಿಗೆ ವಿತರಿಸಲು ಸಣ್ಣ ಬಟ್ಟೆಯ ಚೀಲಗಳಲ್ಲಿ ಪ್ಯಾಕ್ ಮಾಡಲಾಗುತ್ತಿದೆ.

ನಾಳೆ ಬೆಳಗ್ಗೆ ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು ರಾತ್ರಿ ದೇವರ ಸಮರ್ಪಣೆಗಾಗಿ ಉಂಡೆ ಕಟ್ಟಲು ಮುಹೂರ್ತ ನಡೆಸಲಿದ್ದಾರೆ. ರಾತ್ರಿ 7:00ರಿಂದ ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಲಿದೆ. ದಿನವಿಡೀ ಮಠದ ವಿವಿಧ ಕಡೆಗಳಲ್ಲಿ ವಿವಿಧ ಸ್ಪರ್ಧೆಗಳು, ಭಜನಾ ತಂಡಗಳಿಂದ ನಿರಂತರ ಭಜನೆ ನಡೆಯಲಿವೆ. ಹಗಲಿಡೀ ಉಪವಾಸ ವ್ರತದಲ್ಲಿರುವ ಪರ್ಯಾಯಶ್ರೀಗಳು ರಾತ್ರಿ 11:30ಕ್ಕೆ ವಿಶೇಷ ಮಹಾಪೂಜೆ ನಡೆಸಲಿದ್ದು, ಆ ಬಳಿಕ ಮಧ್ಯರಾತ್ರಿ 12:21ಕ್ಕೆ ಶ್ರೀಕೃಷ್ಣ ಮಠದ ತುಳಸೀಕಟ್ಟೆಯಲ್ಲಿ ಶ್ರೀಕೃಷ್ಣ ಜನಿಸಿದ, ಚಂದ್ರೋದಯವಾದ ಕ್ಷಣದಲ್ಲಿ ಅರ್ಘ್ಯ ಪ್ರದಾನ ಮಾಡುವರು.

ಈ ಸಂದರ್ಭದಲ್ಲಿ ಪರ್ಯಾಯ ಶ್ರೀಗಳಿಗೆ ಉಡುಪಿಯಲ್ಲಿ ಚಾರ್ತುಮಾಸ್ಯ ಕುಳಿತಿರುವ ಉಳಿದ ಮಠಾಧೀಶರು ಜೊತೆಯಾಗುವರು. ಅನಂತರ ಈ ಕ್ಷಣಕ್ಕಾಗಿ ಕಾದಿದ್ದ ನೂರಾರು ಮಂದಿ ಭಕ್ತರು ಸರದಿ ಸಾಲಿನಲ್ಲಿ ನಿಂತು ಅರ್ಘ್ಯ ಪ್ರದಾನ ಮಾಡುವರು.

ಮರುದಿನ ಆ.20ರಂದು ವಿಟ್ಲಪಿಂಡಿ ನಡೆಯಲಿದೆ. ಉಡುಪಿ ನಗರವಿಡೀ ಜನರಿಂದ ತುಂಬಿ ತುಳುಕಲಿದೆ. ವಿವಿಧ ವೇಷಗಳು ನಗರವಿಡೀ ಸಂಚರಿಸಲಿವೆ. ಇದರಲ್ಲಿ ಹುಲಿವೇಷಕ್ಕೆ ವಿಶೇಷ ಪ್ರಾಧಾನ್ಯತೆ. ಶನಿವಾರ ಬೆಳಗ್ಗೆ 11 ಗಂಟೆ ಯಿಂದಲೇ ರಾಜಾಂಗಣದಲ್ಲಿ ಸಾವಿರಾರು ಮಂದಿ ಭಕ್ತರಿಗೆ ಕೃಷ್ಣ ಪ್ರಸಾದದ ಭೋಜನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಹೂಮಾರಾಟಗಾರರಿಗೆ ನಿರಾಶೆ: ಕೃಷ್ಣ ಜನ್ಮಾಷ್ಟಮಿ ಎಂಬುದು ಉಡುಪಿಯ ಮಟ್ಟಿಗೆ ಅತೀ ದೊಡ್ಡ ಹಬ್ಬ. ಜನರು ಖುಷಿ, ಸಂಭ್ರಮದಿಂದ ಭಾಗವಹಿಸುವ ಉತ್ಸವ. ಇದಕ್ಕಾಗಿ ಮೂರು ದಿನಗಳ ಮೊದಲೇ ದೂರದ ಹಾಸನ ಹಾಗೂ ಇತರ ಜಿಲ್ಲೆಗಳಿಂದ ಬಣ್ಣಬಣ್ಣದ, ವೈವಿಧ್ಯಮಯ ಹೂವುಗಳ ಮಾರಾಟಗಾರರು ಉಡುಪಿಗೆ ಬಂದಿಳಿದಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಹೂವಿನ ಮಾರಾಟ ದಲ್ಲಾದ ನಿರಾಶೆಯನ್ನು ಈ ಬಾರಿ ನೀಗಿಸಿಕೊಳ್ಳುವ ನಿರೀಕ್ಷೆ ಅವರದು.

ಆದರೆ ಈ ಬಾರಿ ಇದುವರೆಗೆ ಆಶಾದಾಯಕವಾದ ಹೂವಿನ ಮಾರಾಟ ನಡೆದಿಲ್ಲ ಎಂದು ಹೆಚ್ಚಿನ ಮಾರಾಟಗಾರರು ನಿರಾಶೆಯ ಸ್ವರದಲ್ಲಿ ಹೇಳುತ್ತಾರೆ. ಹಾಸನ ಜಿಲ್ಲೆಯೊಂದರಿಂದೇ 60ಕ್ಕೂ ಅಧಿಕ ಹೂವಿನ ಮಾರಾಟಗಾರರು ಬಂದಿದ್ದಾರೆ. 40,000ರೂ. ಮೌಲ್ಯದ ಹೂವಿನೊಂದಿಗೆ ಉಡುಪಿಗೆ ಬಂದಿರುವ ಗೊರೂರಿನ ಶಾಂತಮ್ಮ, ಹಬ್ಬದ ಎರಡು ದಿನ ಒಳ್ಳೆಯ ವ್ಯಾಪಾರವಾಗಲಿ ಎಂದು ಹಾರೈಸುತಿದ್ದಾರೆ.

ತಾಯಿಯೊಂದಿಗೆ ಸಕಲೇಶಪುರದಿಂದ ಬಂದಿರುವ ಹೇಮಂತ ಕುಮಾರ್‌ಗೆ 30,000ರೂ. ಮೌಲ್ಯದ ಹೂವು ಮಾರಾಟಗೊಂಡು ಈ ಸಲವಾದರೂ ಸ್ವಲ್ಪ ಲಾಭ ಬರಲಿ ಎಂಬ ಆಶಾವಾದದಲ್ಲಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X