ಉಡುಪಿ: 'ಮೀಫ್' ವತಿಯಿಂದ ಮೊಂಟೆಸ್ಸರಿ ಶಿಕ್ಷಕರ ತರಬೇತಿ ಶಿಬಿರ

ಉಡುಪಿ: ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಉಡುಪಿ ( MEIF) ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಉಡುಪಿ ಜಿಲ್ಲೆಯ ಮೊಂಟೆಸ್ಸರಿ(KG) ಶಿಕ್ಷಕರಿಗೆ ಒಂದು ದಿನದ ತರಬೇತಿ ಕಾರ್ಯಾಗಾರವು ಇಂದು (ಶನಿವಾರ) ಕಾಪು ಚಂದ್ರ ನಗರದ ಕ್ರೆಸೆಂಟ್ ಇಂಟರ್ ನ್ಯಾಷನಲ್ ಸ್ಕೂಲ್ (CBSE) ನಲ್ಲಿ ಜರುಗಿತು.
ಕಾರ್ಯಗಾರವನ್ನು ಉಡುಪಿ ವಿಭಾಗದ ಒಕ್ಕೂಟದ ಉಪಾಧ್ಯಕ್ಷ ಶಬಿ ಅಹ್ಮದ್ ಖಾಝಿ ಉದ್ಘಾಟಿಸಿದರು. ಮೀಫ್ (MEIF ) ಒಕ್ಕೂಟದ ಅಧ್ಯಕ್ಷ ಮೂಸಬ್ಬ. ಪಿ.ಬ್ಯಾರಿ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕ್ರೆಸೆಂಟ್ ಇಂಟರ್ ನ್ಯಾಷನಲ್ ಸ್ಕೂಲ್ (CIS) ಈ ತರಬೇತಿ ಕಾರ್ಯಗಾರವನ್ನು ಪ್ರಾಯೋಜಿಸಿದ್ದು, ಮಂಗಳೂರಿನ ಯೇನಪೋಯ ವಿದ್ಯಾಸಂಸ್ಥೆಯ ಅಕ್ಷರ ಹೌಸ್ ಆಫ್ ಚಿಲ್ಡ್ರನ್ ವಿಭಾಗದ ತರಬೇತುದಾರರು ತರಬೇತಿಯನ್ನು ಕೈಗೊಂಡರು. ಉಡುಪಿ, ಕುಂದಾಪುರ, ಕಾರ್ಕಳ, ಕಾಪು,ಬ್ರಹ್ಮಾವರ ತಾಲೂಕುಗಳ MEIF ವಿದ್ಯಾಸಂಸ್ಥೆಗಳ ವಿವಿಧ ಶಾಲೆಗಳಿಂದ ಶಿಕ್ಷಕರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಕ್ರೆಸೆಂಟ್ ಇಂಟರ್ ನ್ಯಾಷನಲ್ ಸಂಸ್ಥೆಯ ಅಧ್ಯಕ್ಷರಾದ ಮಿ.ಶಂಶುದ್ದಿನ್ ಯೂಸುಫ್ ಸಾಹಿಬ್, ಆಡಳಿತಾಧಿಕಾರಿ ಜಿ.ಎಸ್ ನವಾಬ್ ಹಸನ್ ಗುತ್ತೇದಾರ್. ಸಂಘಟಕರಾದ ಮೌಲಾನ ಮುಸ್ತಫಾ ಸಅದಿ ಮೂಳೂರು, ಅಬ್ದುಲ್ ರಹಿಮಾನ್ ಮಣಿಪಾಲ ಹಾಗೂ ಯೇನಪೋಯ ಸಂಸ್ಥೆಯ ಸಂಯೋಜಕರಾದ ಇವೆಟ್ ಪೆರೇರಾ ಹಾಜರಿದ್ದರು.
ಒಂದು ದಿನದ ಈ ಕಾರ್ಯಾಗಾರವು ಸಮಸ್ತರ ಸಮ್ಮುಖದಲ್ಲಿ ಯಶಸ್ಸನ್ನು ಕಂಡಿತು.







.jpeg)


