ಗಾಂಜಾ ಸೇವನೆ ಆರೋಪ : ಇಬ್ಬರು ವಶಕ್ಕೆ
ಉಡುಪಿ, ಸೆ.18: ಗಾಂಜಾ ಸೇವನೆಗೆ ಸಂಬಂಧಿಸಿ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಂಗಡಿ ಗ್ರಾಮದ ಕೆಪಿಸಿ ಮೈದಾನದ ಬಳಿ ಸೆ.18ರಂದು ಮುಹಮ್ಮದ್ ಸುಹೈಲ್(25) ಹಾಗೂ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ತೆಕ್ಕಟ್ಟೆ ಗ್ರಾಮದ ಕನ್ನುಕೆರೆ ಜಂಕ್ಷನ್ ಎಂಬಲ್ಲಿ ಸೆ.16ರಂದು ಇಲ್ಯಾಸ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story