ಮಲ್ಪೆ: ಬೀಚ್ ನಲ್ಲಿ ಮುಳುಗುತ್ತಿದ್ದ ಇಬ್ಬರ ರಕ್ಷಣೆ
ಸಾಂದರ್ಭಿಕ ಚಿತ್ರ
ಮಲ್ಪೆ: ಮಲ್ಪೆ ಬೀಚ್ ನಲ್ಲಿ ಮುಳುಗುತ್ತಿದ್ದ ಇಬ್ಬರನ್ನು ರಕ್ಷಣೆ ಮಾಡಿರುವ ಘಟನೆ ಇಂದು ಸಂಜೆ ನಡೆದಿದೆ.
ಇಬ್ಬರು ಪ್ರವಾಸಿಗರು ಮೈಸೂರಿನಿಂದ ಬೀಚಿಗೆ ಬಂದಿದ್ದು, ಮೊದಲ ಪ್ರಕರಣದಲ್ಲಿ ತೌಸೀಫ್ ಎಂಬವರು ಈಜಲೆಂದು ನೀರಿಗಿಳಿದಿದ್ದರು. ಇವರು ಅಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಸಂದರ್ಭ ರಕ್ಷಿಸಲಾಯಿತು.
ಇನ್ನೊಂದು ಪ್ರಕರಣದಲ್ಲಿ ಮೈಸೂರಿನಿಂದ ಬಂದಿದ್ದ ಅಬ್ರಾರ್ ಅಹ್ಮದ್ ಎಂಬವರು ಇದೇ ರೀತಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದಾಗ ರಕ್ಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ತೀವ್ರವಾಗಿ ಅಸ್ವಸ್ಥಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Next Story