ಕರ್ನಾಟಕ ಪ್ರಾಂತೀಯ ಕುಟುಂಬ ಆಯೋಗದ ಪ್ರಧಾನ ಕಾರ್ಯದರ್ಶಿಯಾಗಿ ಲೆಸ್ಲಿ ಅರೋಜ
ಉಡುಪಿ, ಅ.5: ಬೆಂಗಳೂರು ಮಹಾಧರ್ಮಪ್ರಾಂತ್ಯದ ಮಹಾಧರ್ಮಾಧ್ಯಕ್ಷ ಅತಿ ವಂ.ಪೀಟರ್ ಮಚಾದೊ ಉಡುಪಿಯ ಲೆಸ್ಲಿ ಅರೋಜಾ ಅವರನ್ನು ಕರ್ನಾಟಕ ಪ್ರಾಂತೀಯ ಕುಟುಂಬ ಆಯೋಗದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಆಯೋಗದ ಪ್ರಾಂತೀಯ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಇವರು, ೨೦೧೪ರಿಂದ ಉಡುಪಿ ಧರ್ಮಪ್ರಾಂತ್ಯದ ಕುಟುಂಬ ಅಯೋಗದ ನಿರ್ದೇಶಕರಾಗಿ ಮತ್ತು ೨೦೨೦ರಿಂದ ಪಾಲನಾ ಮಂಡಳಿಯ ಕಾರ್ಯುದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೂಲತಃ ತೊಟ್ಟಂ ಪರಿಸರದವರಾದ ಲೆಸ್ಲಿ ಅರೋಜ ಆಪ್ತಸಮಾಲೋಚನೆ ಮತ್ತು ಸೈಕೊಥೆರಪಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಜಿವಿತ್ ಕೌನ್ಸೆಲಿಂಗ್ ಕೇಂದ್ರದಲ್ಲಿ ಕೌಟುಂಬಿಕ ಆಪ್ತ ಸಮಾ ಲೋಚನೆಯ ಸೇವೆಯನ್ನು ನೀಡುತ್ತಿದ್ದಾರೆ. ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮತ್ತು ವೃತ್ತಿಪರ ಕಾರ್ಯನಿರ್ವಾಹಕರಾಗಿ ಅಪಾರ ಜನಮನ್ನಣೆ ಗಳಿಸಿದ್ದಾರೆ.
ಅ.1ರಂದು ಉಡುಪಿ ಧರ್ಮಾಧ್ಯಕ್ಷರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಡುಪಿಯ ಧರ್ಮಾಧ್ಯಕ್ಷ ಅತಿ ವಂ.ಜೆರಾಲ್ಡ್ ಲೋಬೊ, ಲೆಸ್ಲಿ ಅರೋಜ ಅವರನ್ನು ಸನ್ಮಾನಿಸಿ ಶುಭ ಹಾರೈಸಿದರು.