ಪುನರ್ ವಸತಿಯಲ್ಲಿದ್ದ ಬಾಲಕ ನಾಪತ್ತೆ
ಉಡುಪಿ : ಉಡುಪಿ ಮಿಷನ್ ಕಂಪೌಂಡಿನಲ್ಲಿರುವ ಸಿಎಸ್ಐ ಬಾಯ್ಸ್ ಬೋರ್ಡಿಂಗ್ನಲ್ಲಿ ಪುನರ್ ವಸತಿಯಲ್ಲಿದ್ದ ಬಾಲಕ ನಾಪತ್ತೆಯಾಗಿರುವ ಘಟನೆ ನ.3ರಂದು ಸಂಜೆ ವೇಳೆ ನಡೆದಿದೆ.
ನಾಪತ್ತೆಯಾದ ಬಾಲಕನನ್ನು ಝಾಹಿದ್ (15) ಎಂದು ಗುರುತಿಸಲಾಗಿದೆ.
ಈತ ನ.3ರಂದು ಸಂಜೆ 5 ಗಂಟೆಗೆ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದು ಉಡುಪಿ ಚೈಲ್ಡ್ ಹೆಲ್ಪ್ಲೈನ್ ಮೂಲಕ ಆತನನ್ನು ಸಿಎಸ್ಐ ಬಾಯ್ಸ್ ಬೋರ್ಡಿಂಗ್ನಲ್ಲಿ ಪುನರ್ ವಸತಿ ಕಲ್ಪಿಸಲಾಗಿತ್ತು. ಆದರೆ ಆತ ಅದೇ ದಿನ ಸಂಜೆ 7 ಗಂಟೆ ಸ್ನಾನ ಮಾಡಿಕೊಂಡು ಬರುವುದಾಗಿ ಹೇಳಿ ಹೋದವನು ನಾಪತ್ತೆಯಾಗಿದ್ದಾನೆ.
ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖ ಲಾಗಿದೆ.
Next Story